Balakrishna-Venu Swamy: "ಬಾಲಯ್ಯ ಪುತ್ರ ಈಗಲೇ ಚಿತ್ರರಂಗಕ್ಕೆ ಬರಲ್ಲ" ಜ್ಯೋತಿಷಿ ಭವಿಷ್ಯಕ್ಕೆ ಫ್ಯಾನ್ಸ್ ಟೆನ್ಷನ್!
ಟಾಲಿವುಡ್ 'ಲೆಜೆಂಡ್' ಬಾಲಕೃಷ್ಣ ಪುತ್ರ ಮೋಕ್ಷಜ್ಞನನ್ನು ಚಿತ್ರರಂಗಕ್ಕೆ ಎಂಟ್ರಿ ಕೊಡಿಸೋಕೆ ಹರಸಾಹಸ ನಡೆಯುತ್ತಿದೆ. ಕಳೆದ ಐದಾರು ವರ್ಷಗಳಿಂದ ಬಾಲಯ್ಯನ ಪುತ್ರ ಮೋಕ್ಷಜ್ಞ ತೇಜ ಟಾಲಿವುಡ್‌ಗೆ ಎಂಟ್ರಿ ಕೊಟ್ಟೇ ಬಿಡುತ್ತಾರೆ ಫ್ಯಾನ್ಸ್ ಎದುರು ನೋಡುತ್ತಲೇ ಇದ್ದರು.
ಆದರೆ, ಬಾಲಯ್ಯ ಅಭಿಮಾನಿಗಳಿಗೆ ಪ್ರತಿ ಬಾರಿಯೂ ನಿರಾಸೆಯೇ ಎದುರಾಗಿದೆ. ಬಾಲಕೃಷ್ಣ ಪುತ್ರನ ಸಿನಿಮಾರಂಗಕ್ಕೆ ಎಂಟ್ರಿ ಕೊಡುವುದು ತಡವಾಗುತ್ತಲೇ ಇದೆ. ಎಷ್ಟೇ ಪ್ರಯತ್ನ ಪಟ್ಟರೂ ಮುಹೂರ್ತ ಕೂಡಿ ಬರುತ್ತಲೇ ಇಲ್ಲ. ಕಳೆದ ಐದಾರು ವರ್ಷದಿಂದ ಅಭಿಮಾನಿಗಳಿಗೆ ನಿರಾಸೆಯಾಗುತ್ತಲೇ ಇದೆ.

ಇದೇ ವೇಳೆ ಟಾಲಿವುಡ್ ಸೆಲೆಬ್ರಿಟಿಗಳ ನೆಚ್ವಿನ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ. ಬಾಲಯ್ಯ ಪುತ್ರ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಡಲ್ಲ ಅಂತ ಹೇಳಿದ್ದಾರೆ. ಈ ಸಂದರ್ಶನ ಸೋಶಿಯಲ್ ಮೀಡಿಯಾದಲ್ಲಿ ವೈಲರ್ ಆಗಿದೆ. ಅಷ್ಟಕ್ಕೂ ವೇಣು ಸ್ವಾಮಿ ಸಿಡಿಸಿದ ಬಾಂಬ್ ಏನು? ಫ್ಯಾನ್ಸ್ ಬೇಸರಕ್ಕೆ ಕಾರಣವೇನು?
ಲೆಜೆಂಡ್ ಉತ್ತರಾಧಿಕಾರಿ ಎಂಟ್ರಿ ಯಾವಾಗ?
ಜೂ.ಎನ್‌ಟಿಆರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಬಾಲಕೃಷ್ಣ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗಿತ್ತು. ಜೂ.ಎನ್‌ಟಿಆರ್ ಈಗ ಗ್ಲೋಬಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ, ಕೆಲವು ವರ್ಷಗಳಿಂದ ಬಾಲಯ್ಯನ ಪುತ್ರ ಮೋಕ್ಷಜ್ಞ ತೇಜನನ್ನು ಸಿನಿಮಾದಲ್ಲಿ ನೋಡಬೇಕು ಅಂತ ಅಭಿಮಾನಿಗಳು ಆಸೆ ಪಟ್ಟಿದ್ದರು. ಬಾಲಯ್ಯ ಕೂಡ ಅಭಿಮಾನಿಗಳ ಆಸೆಗೆ ಪುಷ್ಠಿ ನೀಡಿದ್ದರು. ಆದರೆ, ಫ್ಯಾನ್ಸ್ ಕನಸು ಇದೂವರೆಗೂ ಈಡೇರಲೇ ಇಲ್ಲ. ಈ ವೇಳೆ ವೇಣು ಸ್ವಾಮಿ ಭವಿಷ್ಯ ಅಭಿಮಾನಿಗಳ ನಿದ್ದೆ ಕೆಡಸಿದೆ.

ವೇಣು ಸ್ವಾಮಿ ಭವಿಷ್ಯವೇನು?
ಬಾಲಯ್ಯ ಪುತ್ರ ಮೋಕ್ಷಜ್ಞ ತೇಜ ಟಾಲಿವುಡ್‌ಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಆದರೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಟಾಲಿವುಡ್ ಸೆಲೆಬ್ರಿಟಿಗಳ ನೆಚ್ಚಿನ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ಬಾಲಯ್ಯ ಅಭಿಮಾನಿಗಳನ್ನು ಮತ್ತಷ್ಟು ನಿರಾಸೆಗೊಳಿಸಿದೆ. " ಮೋಕ್ಷಜ್ಞ ತೇಜ ಸಿನಿಮಾರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಇನ್ನೂ ಎರಡು ಮೂರು ವರ್ಷ ಬೇಕಾಗಬಹುದು. ಟಾಲಿವುಡ್‌ಗೆ ಎಂಟ್ರಿ ಕೊಡುವುದಕ್ಕೆ ಇನ್ನೂ ಸಮಯವಿದೆ." ಎಂದು ಹೇಳುವ ಮೂಲಕ ಬಾಲಯ್ಯನ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದಾರೆ.
ಸಿನಿಮಾ, ರಾಜಕೀಯ, ಯಶಸ್ಸು ಎಲ್ಲಿ?
ವೇಣು ಸ್ವಾಮಿ ಹೇಳಿದ ಭವಿಷ್ಯದಿಂದ ಅಭಿಮಾನಿಗಳು ಕೊಂಚ ನಿರಾಳವಾಗಿದ್ದಾರೆ. ಅಖಂಡ ಸಿನಿಮಾ ವೇಳೆ ಬಾಲಯ್ಯರನ್ನು ವೇಣು ಸ್ವಾಮಿ ಭೇಟಿ ಮಾಡಿದ್ದರು. ಈ ವೇಳೆ ಮಗನ ಜಾತಕ ನೋಡಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. " ಬಾಲಯ್ಯ ಪುತ್ರನಿಗೆ ಉತ್ತಮ ಭವಿಷ್ಯವಿದೆ. ಸಿನಿಮಾರಂಗದಲ್ಲಿ ಒಳ್ಳೆಯ ಯಶಸ್ಸು ಸಿಗುತ್ತೆ. ಆದರೆ, ರಾಜಕೀಯದಲ್ಲಿ ಅಲ್ಲ" ಎಂದು ವೇಣು ಗೋಪಾಲ ಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಸಮಂತಾ-ನಾಗಚೈತನ್ಯ ಭವಿಷ್ಯ ಹೇಳಿದ್ರು
ಟಾಲಿವುಡ್ ಜ್ಯೋತಿಷಿ ವೇಣು ಸ್ವಾಮಿ ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಜನಪ್ರಿಯ. ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ವಿಚ್ಛೇದನ ಪಡೆಯುತ್ತಾರೆ ಎಂದು ಮೊದಲ ಭವಿಷ್ಯ ನುಡಿದಿದ್ದರು. ಅಲ್ಲಿಂದ ವೇಣುಸ್ವಾಮಿ ಭವಿಷ್ಯ ಸಿಕ್ಕಾಪಟ್ಟೆ ಜನಪ್ರಿಯರವಾಗಿತ್ತು. ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ಮಂದಿ ಸೆಲೆಬ್ರಿಟಿಗಳು ವೇಣು ಸ್ವಾಮಿ ಭವಿಷ್ಯವನ್ನು ತುಂಬಾನೇ ನಂಬುತ್ತಾರೆ.


Click it and Unblock the Notifications











