ಕನ್ನಡತಿ ಜೊತೆ ಸಪ್ತಪದಿ ತುಳಿದ ತೆಲುಗು ನಟ ನಾಗಶೌರ್ಯ: ಇಲ್ಲಿವೆ ಮದುವೆ ಫೋಟೊಗಳು!

ಟಾಲಿವುಡ್‌ನ ಯುವ ನಟ ನಾಗಶೌರ್ಯ ಬಹುದಿನದ ಗೆಳತಿ ಅನುಷಾ ಶೆಟ್ಟಿಯೊಂದಿಗೆ ಬೆಂಗಳೂರಿನಲ್ಲಿ ಸಪ್ತಪದಿ ತುಳಿಸಿದ್ದಾರೆ. ಹಲವು ದಿನಗಳಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು. ಕೊನೆಗೂ ತಮ್ಮ ಪೋಷಕರನ್ನು ಒಪ್ಪಿಸಿ ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಕೆಲವು ದಿನಗಳಿಂದ ನಾಗಶೌರ್ಯ ಹಾಗೂ ಅನುಷಾ ಶೆಟ್ಟಿ ವಿವಾಹ ಚರ್ಚೆಯಲ್ಲಿತ್ತು. ಮದುವೆ ಕೇವಲ 5 ದಿನಗಳು ಇರುವಾಗಲೇ ನಾಗಶೌರ್ಯ ಶೂಟಿಂಗ್ ಸೆಟ್ಟಿನಲ್ಲಿ ತಲೆ ಸುದ್ದಿ ಬಿದ್ದಿದ್ದರು. ಆಗ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು.

ಗುರು-ಹಿರಿಯರು ನಿಶ್ಚಯಿಸಿದಂತೆ ನವೆಂಬರ್ 20ರಂದು ನಾಗಶೌರ್ಯ ಹಾಗೂ ಅನುಷಾ ಶೆಟ್ಟಿ ಮದುವೆ ನೆರವೇರಿದೆ. ಈ ಸಂದರ್ಭದಲ್ಲಿ ನಾಗಶೌರ್ಯ ಹಾಗೂ ಅನುಷಾ ಶೆಟ್ಟಿ ಕುಟುಂಬಸ್ಥರು ಹಾಗೂ ಆಪ್ತರು ನವ ಜೋಡಿಗೆ ಹರಸಿದ್ದಾರೆ.

ಅನುಷಾ ಶೆಟ್ಟಿ ಜೊತೆ ಸಪ್ತಪದಿ ತುಳಿದ ತೆಲುಗು ನಟ

ಅನುಷಾ ಶೆಟ್ಟಿ ಜೊತೆ ಸಪ್ತಪದಿ ತುಳಿದ ತೆಲುಗು ನಟ

ನಾಗ ಶೌರ್ಯ ತೆಲುಗು ಚಿತ್ರರಂಗದ ಉದಯೋನ್ಮುಖ ನಟ. ಈಗಾಗಲೇ 'ಚಲೋ', ''ಊಹಲು ಗುಸಗುಸಲಾಡೆ' ಅಂತ ಗಮನ ಸೆಳೆಯುವ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹಳ ದಿನಗಳಿಂದ ನಾಗಶೌರ್ಯ ಹಾಗೂ ಕುಂದಾಪುರದ ಹುಡುಗಿ ಅನುಷಾ ಶೆಟ್ಟಿ ಪ್ರೀತಿಯಲ್ಲಿ ಬಿದ್ದಿದ್ದರು. ಈಗ ತಂದೆ-ತಾಯಿ ಹಾಗೂ ಆಪ್ತರ ಸಮ್ಮುಖದಲ್ಲಿ ಬೆಂಗಳೂರಿನ ಜೆಡ್ಯೂ ಮ್ಯಾರಿಯೇಟ್‌ ಹೊಟೇಲ್‌ನಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನುಷಾ ಕೆಂಪು ಸೀರೆಯುಟ್ಟು, ನವ ವಿನ್ಯಾಸದ ಬಂಗಾರದ ಒಡವೆಗಳನ್ನು ಧರಿಸಿದ್ದರು. ಇತ್ತ ನಾಗಶೌರ್ಯ ಹೊಳೆಯುವ ಬಿಳಿ ರೇಷ್ಮೆ ಪಂಚೆ ಹಾಗೂ ಶರ್ಟ್ ಅನ್ನು ಧರಿಸಿ ಮಿಂಚಿದ್ದರು. ಇವರ ಮದುವೆ ಫೋಟೊಗಳು ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಹೈದರಾಬಾದ್‌ನಲ್ಲಿ ಅದ್ಧೂರಿ ಆರತಕ್ಷತೆ

ಹೈದರಾಬಾದ್‌ನಲ್ಲಿ ಅದ್ಧೂರಿ ಆರತಕ್ಷತೆ

ನಾಗಶೌರ್ಯ ಹಾಗೂ ಅನುಷಾ ಶೆಟ್ಟಿ ಪಕ್ಕಾ ದಕ್ಷಿಣ ಭಾರತ ಶೈಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬೆನ್ನಲ್ಲೇ ಇಬ್ಬರೂ ಕೆಲಸದಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ಮೆಹಂದಿ ಹಾಗೂಮದುವೆ ನಡೆದಿದೆ. ಈ ಕಾರಣಕ್ಕೆ ಟಾಲಿವುಡ್‌ ಮಂದಿಗಾಗಿ ಹೈದರಾಬಾದ್‌ನಲ್ಲಿ ನಾಗ ಶೌರ್ಯ ಹಾಗೂ ಅನುಷಾ ಶೆಟ್ಟಿ ಅದ್ದೂರಿ ಆರತಕ್ಷತೆಯನ್ನು ಹಮ್ಮಿಕೊಳ್ಳಲಿದ್ದಾರೆ. ಇಡೀ ಟಾಲಿವುಡ್ ಮಂದಿ ಆರಕ್ಷತೆಗೆ ಆಗಮಿಸುವ ಸಾಧ್ಯೆತೆಯಿದೆ.

ಅನುಷಾ ಶೆಟ್ಟಿಯ ಹಿನ್ನೆಲೆ ಏನು?

ಅನುಷಾ ಶೆಟ್ಟಿಯ ಹಿನ್ನೆಲೆ ಏನು?

ಅನುಷಾ ಶೆಟ್ಟಿ ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್. ಬೆಂಗಳೂರಿನ ಉದ್ಯಮಿಯ ಪುತ್ರಿ. ಅನುಷಾ ನ್ಯೂಯಾರ್ಕ್ ಸ್ಕೂಲ್ ಆಫ್ ಇಂಟೀರಿಯರ್ ಡಿಸೈನ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ಇವರದ್ದೇ ಅನುಷಾ ಶೆಟ್ಟಿ ಡಿಸೈನ್ಸ್ ಓಪಿಸಿ ಪ್ರೈವೆಟ್ ಲಿಮಿಟೆಡ್ ಅನ್ನೋ ಖಾಸಗಿ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಅನುಷಾ ಶೆಟ್ಟಿಗೆ 2019ರಲ್ಲಿ ಡಿಸೈನರ್ ಆಫ್ ದಿ ಇಯರ್ ಪ್ರಶಸ್ತಿ ಕೂಡ ಲಭಿಸಿದೆ. ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಬಿ. ಕಾಂ ಪದವಿಯನ್ನು ಮುಗಿಸಿದ್ದಾರೆ. ಅಲ್ಲದೆ ಪಾಂಡಿಚೇರಿ ಯೂನಿವರ್ಸಿಟಿಯಿಂದ ಎಂಬಿಎ ಪದವಿ ಪಡೆದುಕೊಂಡಿದ್ದಾರೆ. ಭಾರತದ ಯುವ ಮಹಿಳಾ ಉದ್ಯಮಿಗಳಲ್ಲಿ ಅನುಷಾ ಕೂಡ ಒಬ್ಬರು.

ತೆಲುಗು ಸಿನಿಮಾಗಳಲ್ಲಿ ನಾಗ ಶೌರ್ಯ ಬ್ಯುಸಿ

ತೆಲುಗು ಸಿನಿಮಾಗಳಲ್ಲಿ ನಾಗ ಶೌರ್ಯ ಬ್ಯುಸಿ

ಟಾಲಿವುಡ್‌ನ ಯುವ ನಟ ನಾಗ ಶೌರ್ಯ ಉದಯೋನ್ಮುಖ ನಟ. ಇನ್ನೂ ಈ ನಟ ನಟಿಸಿದ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆಗದೇ ಹೋದರೂ, 'ಚಲೋ' ಹಾಗೂ 'ಊಹಲು ಗುಸಗುಸಲಾಡೆ' ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. 'ಕ್ರಿಕೆಟ್ ಗರ್ಲ್ಸ್ & ಬಿಯರ್' ಸಿನಿಮಾ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟ ನಾಗಶೌರ್ಯ ಬಿಗ್ ಹಿಟ್‌ಗಾಗಿ ಎದುರು ನೋಡುತ್ತಿದ್ದಾರೆ. ಸದ್ಯ ಕೈಯಲ್ಲಿ ಎರಡು ಸಿನಿಮಾಗಳಿವೆ. ಇವುಗಳ ಶೂಟಿಂಗ್ ನಡೆಯುತ್ತಿದ್ದು, ಮುಂದಿನ ವರ್ಷ ಸಿನಿಮಾ ಬಿಡುಗಡೆಯಾಗುತ್ತಿದೆ.

More from Filmibeat

English summary
Telugu Movie Actor Naga Shaurya And Anusha Shetty Got Married In Bengaluru, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X