ಸೆಲೆಬ್ರೆಟಿ ಜ್ಯೋತಿಷಿ ವೇಣು ಸ್ವಾಮಿ ವಿರುದ್ಧ ತಿರುಗಿಬಿದ್ದ ತೆಲುಗು ನಟಿ ಪ್ರಗತಿ

ಟಾಲಿವುಡ್ ನಟಿ ಪ್ರಗತಿ ತೆಲುಗು ಮಂದಿಗೆ ಪರಿಚಿತರು. ನಾಯಕಿಯಾಗಿ ವೃತ್ತಿ ಆರಂಭಿಸಿ ನಂತರ ತಾಯಿ, ಅಕ್ಕ ಹೀಗೆ ಪೋಷಕ ಪಾತ್ರಗಳಲ್ಲಿ ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇವರಿಗೆ ಸಿನಿಮಾಗಳಷ್ಟೇ ಅಲ್ಲದೆ ಫಿಟ್‌ನೆಸ್ ಹಾಗೂ ಕಠಿಣ ವರ್ಕೌಟ್‌ಗಳಲ್ಲೂ ಹೆಚ್ಚು ಆಸಕ್ತಿಯಿದೆ. ಫಿಟ್‌ನೆಟ್‌ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಇವರು ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ.

ಜಿಮ್, ವೇಟ್ ಲಿಫ್ಟಿಂಗ್ ಅಂತ ವೀಡಿಯೊಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸದಾ ಸುದ್ದಿಯಲ್ಲಿರುತ್ತಾರೆ. ಇವರ ವರ್ಕ್‌ಔಟ್, ವೇಟ್‌ಲಿಫ್ಟಿಂಗ್‌ ಬಗ್ಗೆ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಇತ್ತೀಚೆಗೆ ಕಮೆಂಟ್ ಮಾಡಿದ್ದರು. ಅದಕ್ಕೆ ತೆಲುಗು ನಟಿ ಪ್ರಗತಿ ಸಿಕ್ಕಾಪಟ್ಟೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Telugu movie actress Pragathi take lift right to the astrologer Venu Swamy for his comments

ಸಂದರ್ಶನವೊಂದರಲ್ಲಿ ವೇಣು ಸ್ವಾಮಿ ನಿರೂಪಕಿಯೊಬ್ಬರು ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ನಡೆಸಿದ ಪೂಜೆಗಳಿಂದಲೇ ನಿಮಗೆ ವೇಟ್ ಲಿಫ್ಟಿಂಗ್‌ನಲ್ಲಿ ಪದಕ ಸಿಕ್ಕಿದ್ದಾ? ಎಂದು ಪ್ರಶ್ನೆ ಮಾಡಿದ್ದರು. ನಿರೂಪಕಿ ಕೇಳಿದ ಈ ಪ್ರಶ್ನೆಗಳಿಗೆ ನಟಿ ಪ್ರಗತಿ ಕೊಟ್ಟ ಉತ್ತರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಮೂಲಕ ಮತ್ತೆ ವೇಣುಸ್ವಾಮಿ ತೆಲುಗು ರಾಜ್ಯಗಳಲ್ಲಿ ಚರ್ಚೆಯಾಗುತ್ತಿದ್ದಾರೆ. ಅಷ್ಟಕ್ಕೂ ಏನು ಹೇಳಿದ್ದಾರೆಂದು ನೋಡುವುದಾರೇ,

ನಿರೂಪಕಿಯ ಪ್ರಶ್ನೆಗಳಿಗೆ ನಟಿ ಪ್ರಗತಿ ಹೀಗಂದಿದ್ದಾರೆ. "ಎರಡು ವರ್ಷಗಳ ಹಿಂದೆ ನನಗೆ ಬಹಳಷ್ಟು ಕಷ್ಟಗಳು ಎದುರಾಗಿದ್ದವು. ಆಗ ದೇವರು, ದೆವ್ವಗಳು, ದಾರ, ರಾಶಿ ಎಲ್ಲವನ್ನೂ ನಂಬಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಆ ಸಮಯದಲ್ಲಿ ಕೆಲವರು ವೇಣು ಸ್ವಾಮಿ ಬಗ್ಗೆ ತಿಳಿಸಿದರು. ಅವರ ಬಳಿ ಹೋದಾಗ ಅವರು ಪೂಜೆಯನ್ನು ನಡೆಸಿದ್ದರು. ಆದರೆ, ಅದರಿಂದ ನಮಗೆ ಏನೂ ಪ್ರಯೋಜನ ಆಗಲಿಲ್ಲ" ಎಂದು ನಟಿ ಪ್ರಗತಿ ಹೇಳಿದ್ದಾರೆ.

ಇಷ್ಟೇ ನಿಲ್ಲಿಸಲಿಲ್ಲ.. "ವೇಣುಸ್ವಾಮಿ ಪೂಜೆಗಳಿಂದಲೇ ನನಗೆ ಪದಕ ಬಂದಿದೆ ಎನ್ನುವುದು ತಪ್ಪು ಕಲ್ಪನೆ. ಆ ಕ್ರೆಡಿಟ್ ಅನ್ನು ನಾನು ಯಾರಿಗೂ ಕೊಡಲಾರೆ. ಯಾರೂ ಆ ಕ್ರೆಡಿಟ್ ಅನ್ನು ತೆಗೆದುಕೊಳ್ಳಬಾರದು. ನಾನು ಕಷ್ಟಪಟ್ಟು, ಬೆವರು ಹರಿಸಿ, ದೇಹ ದಂಡಿಸಿ ಗಳಿಸಿದ ಸಂಪಾದಿಸಿದ್ದೇನೆ. ನನ್ನ ಶ್ರಮಕ್ಕೆ ಮೊದಲು ಬೆಲೆ ಕೊಡಿ. ಇದರಲ್ಲಿ ಬೇರೆ ಯಾರಿಗೂ ಹಕ್ಕಿಲ್ಲವೆಂದು" ಎಂದು ನಟಿ ಪ್ರಗತಿ ಭಾವುಕರಾಗಿದ್ದಾರೆ.

ತೆಲುಗು ನಟಿ ಪ್ರಗತಿ ತನ್ನ ಶ್ರಮಕ್ಕೆ ಸಿಕ್ಕಿದ ಯಶಸ್ಸನ್ನು ಜ್ಯೋತಿಷಿ ವೇಣುಸ್ವಾಮಿಗೆ ಕೊಡುವುದಿಲ್ಲ. ಆ ಕ್ರೆಡಿಟ್ ಅನ್ನು ತೆಗೆದುಕೊಳ್ಳಲು ಯತ್ನಿಸಿದರೆ ಅದು ಸರಿಯಲ್ಲ ಎಂದು ಎಚ್ಚರಿಸಿದ್ದಾರೆ. ಹಾಗೇ ನಿರೂಪಕಿ ನೀವು "ಇಂತಹ ಪೂಜೆ, ನಂಬಿಕೆಗಳನ್ನು ನಂಬುತ್ತೀರಾ?" ಎಂಬ ಪ್ರಶ್ನೆ ಮಾಡಿದ್ದರು. ಅದಕ್ಕೆ "ಕೆಲವೊಮ್ಮೆ ನಮಗೆ ಕೆಟ್ಟ ಸಮಯಗಳು ಬರುತ್ತವೆ. ಆ ಸಂದರ್ಭದಲ್ಲಿ ನಂಬುವುದು ನಮಗೆ ಅನಿವಾರ್ಯ. ಆ ಪರಿಸ್ಥಿತಿಗಳು ನಮ್ಮಿಂದ ಅಂತಹ ಕೆಲಸ ಮಾಡಿಸುತ್ತವೆ" ಎಂದು ಪ್ರಗತಿ ಓಪನ್ ಆಗಿ ಹೇಳಿದ್ದಾರೆ.

ವೇಣು ಸ್ವಾಮಿ ಸೂಚಿಸಿದಂತೆ ನಟಿ ಪ್ರಗತಿ ಹಲವು ಪೂಜೆಗಳನ್ನು ನಡೆಸಿದ್ದರು. ಆದರೂ, ಅದರಿಂದ ಯಾವುದೇ ರೀತಿಯ ಫಲಿತಾಂಶ ಸಿಕ್ಕಿಲ್ಲವೆಂದು ಪ್ರಗತಿ ಬಹಿರಂಗಪಡಿಸಿದ್ದಾರೆ. ತೆಲುಗು ನಟಿ ಕೊಟ್ಟ ಈ ಹೇಳಿಕೆಗಳು ಚಿತ್ರರಂಗ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಪ್ರಗತಿ ನೀಡಿದ ಈ ಹೇಳಿಕೆಗಳಿಗೆ ಸೆಲೆಬ್ರೆಟಿ ಜ್ಯೋತಿಷಿ ವೇಣು ಸ್ವಾಮಿ ಇನ್ನೂ ಪ್ರತಿಕ್ರಿಯೆ ನೀಡಬೇಕಿದೆ.

More from Filmibeat

Read more about: actress controversy telugu movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X