'ಪುಷ್ಪ 2' ಬಗ್ಗೆ ಸಖತ್ ಅಪ್‌ಡೇಟ್ ಕೊಟ್ಟ ನಿರ್ದೇಶಕ ಸುಕುಮಾರ್ - ಏನ್ ಹೇಳಿದ್ರು..?
'ಪುಷ್ಪ' ಬ್ಲಾಕ್‌ಬಸ್ಟರ್ ಆದ ಬಳಿಕ ಟಾಲಿವುಡ್ ಮಂದಿಯ ಕಣ್ಣು 'ಪುಷ್ಪ 2' ಮೇಲಿದೆ. ಈ ಪ್ಯಾನ್ ಇಂಡಿಯಾ ಸಿನಿಮಾ ವಿಶ್ವ ಮಟ್ಟದಲ್ಲಿ ಹೇಗೆಲ್ಲ ಸದ್ದು ಮಾಡಬಹುದು? ಅಲ್ಲು ಅರ್ಜುನ್ ಹೇಗೆ ಕಾಣಿಸಿಕೊಳ್ಳಬಹುದು? ಅನ್ನೋ ಕುತೂಹಲವಿದೆ. ಅದಕ್ಕೆ ತಕ್ಕಂತೆ ನಿರ್ದೇಶಕ ಸುಕುಮಾರ್ ಇಂಟ್ರೆಸ್ಟಿಂಗ್ ಅಪ್‌ಡೇಟ್ ಕೊಟ್ಟಿದ್ದಾರೆ.
ಟಾಲಿವುಡ್‌ನ ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ 'ಪುಷ್ಪ 2' ಸಿನಿಮಾ ಮೂಲಕ ನಿರೀಕ್ಷೆಯನ್ನು ಹುಟ್ಟಾಕಿದ್ದಾರೆ. ಈಗಾಗಲೇ ಸಿನಿಮಾ ಶುರುವಾಗಿ ಮುಗಿಯುವ ಹಂತಕ್ಕೆ ಬಂದಿದ್ದರೂ, ಹೆಚ್ಚಿದನ್ನು ಏನನ್ನೂ ಹೇಳಿರಲಿಲ್ಲ. ಇಷ್ಟೊತ್ತಿಗಾಗಲೇ ಸಿನಿಮಾ ರಿಲೀಸ್ ಆಗಬಹುದು ಅಂತ ನಿರೀಕ್ಷೆ ಇಟ್ಟುಕೊಂಡಿದ್ದ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಮಾತ್ರ ನಿರಾಸೆಯಾಗಿದೆ.

ಇದೂವರೆಗೂ ಸಿನಿಮಾದ ಲುಕ್, ಚಿಕ್ಕ ಗ್ಲಿಂಪ್ಸ್ ರಿವೀಲ್ ಮಾಡಿದ್ದು ಬಿಟ್ಟರೆ ಬೇರೆ ಏನೂ ಸುಳಿವು ನೀಡಿಲ್ಲ. ಅದಕ್ಕೆ ಅಲ್ಲು ಅರ್ಜುನ್ ಅಭಿಮಾನಿಗಳಿಗಾಗಿ ನಿರ್ದೇಶಕ ಸುಕುಮಾರ್ ಕುತೂಹಲ ಕೆರಳಿಸುವ ಹೇಳಿಕೆಯನ್ನು ಕೊಟ್ಟಿದ್ದಾರೆ. ಇತ್ತೀಚೆಗೆ ತೆಲುಗು ನ್ಯೂಸ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸುಕುಮಾರ್ 'ಪುಷ್ಪ 2' ಬಗ್ಗೆ ಮಾಹಿತಿ ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ.
'ಪುಷ್ಪ 2' ಸ್ಕೇಲ್ ಬದಲಾಗಿದೆ. ಸಿನಿಮಾದ ಬಜೆಟ್ ದುಪ್ಪಟ್ಟಾಗಿದೆ. 'ಪುಷ್ಪ' ಪಾರ್ಟ್ 1ರಲ್ಲಿ ಅಲ್ಲು ಅರ್ಜುನ್ ಮ್ಯಾನರಿಸಂ ಹೈಲೈಟ್ ಆಗಿತ್ತು. ಅದೇ ನಿರೀಕ್ಷೆ 'ಪುಷ್ಪ 2' ಮೇಲೂ ಇದೆ. ಹೀಗಾಗಿ ನಿರ್ದೇಶಕ ಸುಕುಮಾರ್ ಸ್ಕ್ರಿಪ್ಟ್ ಮೇಲೆ ಮತ್ತೆ ವರ್ಕ್ ಮಾಡಿದ್ದರು. ಆದರೆ, ಸಿನಿಮಾ ಅಂದುಕೊಂಡಿದ್ದಕ್ಕಿಂತ ಹೆಚ್ಚು ದಿನ ಹಿಡಿದಿದೆ. ಹೀಗಾಗಿ 'ಪುಷ್ಪ 2' ನೋಡುವುದಕ್ಕೆ ತೆಲುಗು ಮಂದಿ ಕಾದು ಕೂತಿದ್ದಾರೆ.

ಹೀಗೆ ಕಾದೂ ಕಾದು ಸುಸ್ತಾಗಿರೋ ಅಭಿಮಾನಿಗಳಿಗೆ ಸುಕುಮಾರ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಭರವಸೆಗಳನ್ನು ನೀಡಿದ್ದಾರೆ. ಅದೇನು ಅಂತ ನೋಡುವುದಾದರೆ, 'ಪುಷ್ಪ' ಸಿನಿಮಾಗಿಂತ 'ಪುಷ್ಪ 2' ಅದ್ಧೂರಿಯಾಗಿರುತ್ತೆ ಎಂದು ಭರವಸೆ ನೀಡಿದ್ದಾರೆ. ಅಲ್ಲು ಅರ್ಜುನ್ ಹಾಗೂ ಫಹಾದ್ ಫಾಸಿಲ್ ನಡುವಿನ ಆಕ್ಷನ್ ದೃಶ್ಯಗಳು ಇನ್ನೊಂದು ಲೆವೆಲ್‌ಗೆ ಇರುತ್ತೆ ಎಂದು ಹೇಳಿಕೊಂಡಿದ್ದಾರೆ.
ಇಷ್ಟೇ ಅಲ್ಲದೆ 'ಪುಷ್ಪ 2'ನಲ್ಲಿ ಅಲ್ಲು ಅರ್ಜುನ್ ಎದುರಿಸುವ ಸಮಸ್ಯೆಗಳು, ಅದನ್ನು ನಿಭಾಯಿಸುವ ರೀತಿ ಪ್ರೇಕ್ಷಕರಿಗೆ ಕಿಕ್ ಕೊಡುತ್ತೆ. ಹಾಗೇ 'ಪುಷ್ಪ 2' ಸಿನಿಮ್ಯಾಟೋಗ್ರಫಿ ಬಗ್ಗೆನೂ ನಂಬಿಕೆ ಇಟ್ಟುಕೊಂಡಿದ್ದು, ಪ್ರೇಕ್ಷಕರಿಗೆ ಹೊಸ ಅನುಭವವನ್ನೇ ನೀಡುತ್ತೆ ಎಂದು ಸುಕುಮಾರ್ ಹೇಳಿದ್ದಾರೆ. 'ಪುಪ್ಪ' ಪಾರ್ಟ್ 1ರ ಕ್ಲೈಮ್ಯಾಕ್ಸ್‌ನಲ್ಲಿ ಫಹಾದ್ ಫಾಸಿಲ್ ಪಾತ್ರ ಕಿಕ್ ಕೊಟ್ಟಿತ್ತು. ಹೀಗಾಗಿ ಪಾರ್ಟ್ 2ನಲ್ಲಿ ಇಬ್ಬರು ಫೈಟ್ ಇನ್ನೊಂದು ಲೆವೆಲ್‌ನಲ್ಲಿ ಇರುತ್ತೆ ಎನ್ನಲಾಗಿದೆ.
ಪುಷ್ಪರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದರೆ, ಅತ್ತ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್, ರಾವ್ ರಮೇಶ್, ಸುನಿಲ್ ಸೇರಿದಂತೆ ಹಲವು ಕಲಾವಿದರು 'ಪುಷ್ಪ 2' ಹೈಲೈಟ್. ಪಾರ್ಟ್ 2 ನಲ್ಲೂ ಇವರೆಲ್ಲರ ಪಾತ್ರವೂ ಹೈಲೈಟ್ ಆಗಿರುತ್ತೆ. ಹೀಗಾಗಿ ನಿರೀಕ್ಷೆನೂ ಹಾಗೇ ಇದೆ. ಇದೇ ಆಗಸ್ಟ್ 15ಕ್ಕೆ 'ಪುಷ್ಪ: ದಿ ರೂಲ್' ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಲಿದೆ.


Click it and Unblock the Notifications











