ಎರಡನೇ ಹೆಂಡತಿ ಮಗನಿಗೆ ಮೊದಲ ಪತ್ನಿ ಹೆಸರಿಟ್ಟ ತೆಲುಗು ನಿರ್ಮಾಪಕ!
ಟಾಲಿವುಡ್‌ನಲ್ಲಿ ದುಬಾರಿ ನಿರ್ಮಾಪಕರಿಗೇನು ಕಮ್ಮಿಯಿಲ್ಲ. ದೊಡ್ಡ ದೊಡ್ಡ ಮೊತ್ತದ ಸಿನಿಮಾಗಳನ್ನೇ ಧೈರ್ಯವಾಗಿ ನಿರ್ಮಾಣ ಮಾಡುತ್ತಾರೆ. ಇನ್ನೊಂದು ಕಡಿಮೆ ಹಣ ಹೂಡಿ, ನೂರಾರು ಕೋಟಿ ಹಣ ಎತ್ತುವ ನಿರ್ಮಾಪಕರೂ ಇದ್ದಾರೆ. ಇದು ಟಾಲಿವುಡ್‌ನ ಸ್ಪೆಷಾಲಿಟಿ.
ಇದೇ ಚಿತ್ರರಂಗದಲ್ಲಿ ಕೆಲವು ನಿರ್ಮಾಪಕರು ಹೀರೊಗಳಂತೆ ಮಿಂಚುತ್ತಾರೆ. ಅವರಿಗೂ ಫ್ಯಾನ್ಸ್ ಇರುತ್ತಾರೆ. ಇಂತಹ ಕ್ರೇಜಿ ನಿರ್ಮಾಪಕರಲ್ಲಿ ದಿಲ್ ರಾಜು ಮೊದಲನೇ ಸಾಲಿನಲ್ಲಿ ನಿಲುತ್ತಾರೆ. ಕಡಿಮೆ ಹಣ ಸುರಿದು ನೂರಾರು ಕೋಟಿ ಬಾಚಿಕೊಳ್ಳುವ ನಿರ್ಮಾಪಕ ಇವರೇ.
ಹಾಗಂತ ದಿಲ್ ರಾಜು ಕೇವಲ ಸಿನಿಮಾ ನಿರ್ಮಾಣದಿಂದ ಅಷ್ಟೇ ಅಲ್ಲ. ತನ್ನ 50ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿ ಸುದ್ದಿಯಾಗಿದ್ದರು. ಈಗ ಎರಡನೇ ಹೆಂಡತಿ ಮಗನಿಗೆ ಮೊದಲ ಹೆಂಡ್ತಿ ಹೆಸರಿಟ್ಟು ಸುದ್ದಿಯಾಗಿದ್ದಾರೆ. ಅಸಲಿಗೆ ಎರಡನೇ ಹೆಂಡತಿ ಮಗನಿಗೆ ಮೊದಲ ಪತ್ನಿ ಹೆಸರಿಟ್ಟ ಕಥೆ ಇಲ್ಲಿದೆ ನೋಡಿ.

ದಿಲ್ ರಾಜುಗೆ ಗಂಡು ಮಗು
ಟಾಲಿವುಡ್‌ನ ಬುದ್ಧಿವಂತ ನಿರ್ಮಾಪಕ ದಿಲ್ ರಾಜು ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇತ್ತೀಚೆಗೆ ದಿಲ್ ರಾಜು ಎರಡನೇ ಪತ್ನಿ ವೈಘ ರೆಡ್ಡಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹಾಗೂ ಪತ್ನಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ದಿಲ್ ರಾಜು ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿ ದಿಲ್ ರಾಜು ಮಗ ಹಾಗೂ ಪತ್ನಿಯೊಂದಿಗಿದ್ದ ಫೋಟೊ ವೈರಲ್ ಆಗಿತ್ತು. ಈಗ ಮಗನಿಗೆ ಇಟ್ಟಿರುವ ಹೆಸರು ಬೇಜಾನ್ ಸದ್ದು ಮಾಡುತ್ತಿದೆ.

ಮೊದಲ ಹೆಂಡ್ತಿ ಹೆಸರಿಟ್ಟ ದಿಲ್ ರಾಜು
ತೆಲುಗು ನಿರ್ಮಾಪಕ ದಿಲ್ ರಾಜು ಮೊದಲ ಪತ್ನಿ ಅನಿತಾ 2017ರಲ್ಲಿ ನಿಧನರಾಗಿದ್ದರು. ಮೂರು ವರ್ಷಗಳ ಬಳಿಕ ದಿಲ್ ರಾಜು ವೈಘ ರೆಡ್ಡಿ ಎಂಬುವವರನ್ನು ವಿವಾಹವಾಗಿದ್ದರು. ಈಗ ಇವರಿಗೆ ಗಂಡು ಮಗು ಜನಿಸಿದ್ದು, ಮೊದಲ ಪತ್ನಿಯ ಹೆಸರನ್ನು ಸೇರಿಸಿ ನಾಮಕರಣ ಮಾಡಿದ್ದಾರೆ. ಅಂದ್ಹಾಗೆ ಮೊದಲ ಪತ್ನಿ ಅನಿತಾ ಎಂಬ ಹೆಸರು ಮೊದಲರೆಡು ಅಕ್ಷರ ಹಾಗೂ ಎರಡನೇ ಹೆಂಡ್ತಿಯ ಮೊದಲ ಎರಡು ಅಕ್ಷರವನ್ನು ಸೇರಿಸಿ 'ಅನ್‌ವೈ' ಎಂದು ಹೆಸರಿಟ್ಟಿದ್ದಾರೆ.

ಮೊದಲ ಹೆಂಡ್ತಿಗೆ ಒಬ್ಬಳು ಮಗಳು
2017ರಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದ ಅನಿತಾ ಹಾಗೂ ದಿಲ್ ರಾಜುಗೆ ಹನ್ಶಿತಾ ರೆಡ್ಡಿ ಎಂಬ ಮಗಳು ಇದ್ದಾಳೆ. ಪತ್ನಿ ಸಾವಿನ ಬಳಿಕ ದಿಲ್ ರಾಜು ಮತ್ತೊಂದು ಮದುವೆ ಆಗಲು ಬಯಸಿದ್ದರು. 29 ವರ್ಷದ ವೈಘ ರೆಡ್ಡಿಯನ್ನು 52 ವರ್ಷದ ದಿಲ್ ವಿವಾಹವಾಗಿದ್ದು, ಇಬ್ಬರೂ ಖುಷಿಯಾಗಿದ್ದಾರೆ. ದಿಲ್ ರಾಜು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ದಿಲ್ ರಾಜು ಬಿಗ್ ಬಜೆಟ್ ಸಿನಿಮಾ
ಟಾಲಿವುಡ್ ನಿರ್ಮಾಪಕ ದಿಲ್ ರಾಜು ಬಿಗ್ ಸಿನಿಮಾಗಳಿಗೆ ಕೈ ಹಾಕಿದ್ದಾರೆ. ವಂಶಿ ನಿರ್ದೇಶನದಲ್ಲಿ ತಮಿಳು ನಟ ದಳಪತಿ ವಿಜಯ್ ನಟಿಸುತ್ತಿರುವ ಸಿನಿಮಾ ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಬಜೆಟ್ 100 ಕೋಟಿ ಎಂದು ಹೇಳಾಗುತ್ತಿದೆ. ಇದರೊಂದಿಗೆ ನಾಗಚೈತನ್ಯ ಅಭಿನಯದ 'ಥ್ಯಾಂಕ್ ಯೂ' ದಿಲ್ ನಿರ್ಮಾಣವಿದ್ದು, ಜುಲೈ 22 ರಂದು ಈ ಸಿನಿಮಾ ನಿರ್ಮಾಣ ಆಗಲಿದೆ. ಯಶ್‌ಗೆ 100 ಕೋಟಿ ಸಂಭಾವನೆ ಕೊಟ್ಟು ಸಿನಿಮಾ ಮಾಡಲು ಮುಂದಾಗಿದ್ದಾರೆ ಎಂಬ ಸುದ್ದಿ ಕೂಡ ಹಬ್ಬಿದೆ.


Click it and Unblock the Notifications











