Dil Raju: 'ರಾಧೆಶ್ಯಾಮ್' ಸಿನಿಮಾದಿಂದ ಭಾರೀ ನಷ್ಟ.. ಒಂದೇ ಏಟಿಗೆ ಚೇತರಿಸಿಕೊಂಡ ದಿಲ್ ರಾಜು!

ಟಾಲಿವುಡ್‌ನಲ್ಲಿ ದಿಲ್ ರಾಜ ವಿತರಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ದಿಲ್ ರಾಜು ಮುಟ್ಟಿದ ಸಿನಿಮಾಗಳೆಲ್ಲವೂ ಯಶಸ್ಸು ಕಂಡಿದೆ. ವಿತರಕರಾಗಿದ್ದುಕೊಂಡೇ ನಿರ್ಮಾಪಕನಾಗಿ ಗೆದ್ದ ಕೆಲವರಲ್ಲಿ ದಿಲ್ ರಾಜು ಕೂಡ ಒಬ್ಬರು. ದಿಲ್ ರಾಜು ಸಿನಿಮಾ ನಿರ್ಮಾಣ ಮಾಡಲಿ, ಇಲ್ಲ ವಿತರಣೆ ಮಾಡಲಿ, ಆ ಸಿನಿಮಾಗಳು ಗೆಲ್ಲುತ್ತಾವೆ ಅನ್ನೋದು ಟಾಲಿವುಡ್ ಮಂದಿಯ ನಂಬಿಕೆ. ಆದರೆ, ಪ್ರಭಾಸ್ ನಟಿಸಿದ 'ರಾಧೆ ಶ್ಯಾಮ್' ಅಂತಹ ಸಿನಿಮಾ ವಿತರಣೆ ಮಾಡಿ ದಿಲ್ ರಾಜ್ ಕೈ ಸುಟ್ಟುಕೊಂಡಿದ್ದರು.

ದಿಲ್ ರಾಜುಗೆ ಟಾಲಿವುಡ್‌ನಲ್ಲಿ ಸ್ಟಾರ್ ನಿರ್ಮಾಪಕ ಎನ್ನುವ ಪಟ್ಟವಿದೆ. ಆದರೆ, ಕೆಲವೊಮ್ಮೆ ವಿತರಣೆಯಲ್ಲಿ ಕಹಿ ಅನುಭ ಆಗಿದೆ. ಆಗ ಸ್ಮಾಲ್ ಬಜೆಟ್ ಸಿನಿಮಾ ಮಾಡಿ ದೊಡ್ಡ ಲಾಭ ಮಾಡುತ್ತಿದ್ದ ನಿರ್ಮಾಪಕನಿಗೆ ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್' ದೊಡ್ಡ ಪೆಟ್ಟನ್ನೇ ಕೊಟ್ಟಿತ್ತು. ಈ ನಷ್ಟದಿಂದ ಹೊರಬರಲು ದಿಲ್ ರಾಜ್ RRR ಸಿನಿಮಾದ ಮೊರೆ ಹೋಗಿದ್ದರು. ಅಂದುಕೊಂಡಿದ್ದಕ್ಕಿಂತಲೂ ಮುನ್ನವೇ ನಷ್ಟದಿಂದ ದಿಲ್ ರಾಜು ಚೇತರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅದು ಹೇಗೆ ಎಂದು ತಿಳಿಯಲು ಮುಂದೆ ಓದಿ?

ದೊಡ್ಡ ಮೊತ್ತಕ್ಕೆ 'ರಾಧೆ ಶ್ಯಾಮ್'

ದೊಡ್ಡ ಮೊತ್ತಕ್ಕೆ 'ರಾಧೆ ಶ್ಯಾಮ್'

ದಿಲ್ ರಾಜ್‌ ಖರೀದಿ ಮಾಡುವ ಸಿನಿಮಾಗಳಿಗೊಂದು ಟ್ರ್ಯಾಕ್ ರೆಕಾರ್ಡ್ ಇರುತ್ತೆ. ದಿಲ್ ರಾಜು ಮುಟ್ಟಿದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗಿದ ಉದಾಹರಣೆಗಳು ಸಾಕಷ್ಟಿವೆ. ನಿರ್ಮಾಪಕರಾಗಿ ಹಾಗೂ ವಿತರಕರಾಗಿ ದಿಲ್ ರಾಜ್‌ ಯಶಸ್ಸು ಕಂಡಿದ್ದಾರೆ. ಹೀಗಾಗಿ ಇತ್ತೀಚೆಗೆ ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್' ಸಿನಿಮಾವನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ್ದರು. ತೆಲುಗು ಸಿನಿಮಾಗಳು ಅತೀ ಹೆಚ್ಚು ಬ್ಯುಸಿನೆಸ್ ಮಾಡುವ ಏರಿಯಾ ನಿಜಾಂನಲ್ಲಿ ಬಿಡುಗಡೆ ಮಾಡಿದ್ದರು. ಆದರೆ, ಈ ಬಾರಿ ದಿಲ್ ರಾಜು ಲೆಕ್ಕಾಚಾರ ತಲೆಕೆಳಗಾಗಿತ್ತು.

ದಿಲ್ ರಾಜುಗೆ ಭಾರಿ ನಷ್ಟ

ದಿಲ್ ರಾಜುಗೆ ಭಾರಿ ನಷ್ಟ

ಯುವಿ ಕ್ರಿಯೇಷನ್ಸ್ ನಿರ್ಮಿಸಿ, ಪ್ರಭಾಸ್-ಪೂಜಾ ಹೆಗ್ಡೆ ನಟಿಸಿದ ಸಿನಿಮಾ 'ರಾಧೆ ಶ್ಯಾಮ್'. ಈ ಸಿನಿಮಾ ಬಿಡುಗಡೆಗೂ ಮುನ್ನ ಬೇಜಾನ್ ಸದ್ದು ಮಾಡಿತ್ತು. ಮೊದಲ ವಾರ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿದ್ದರೂ, ನಂತರದ ದಿನಗಳಲ್ಲಿ ಸಿನಿಮಾ ಗೆಲ್ಲಲಿಲ್ಲ. ಆದರೆ, ದಿಲ್ ರಾಜು ಈ ಸಿನಿಮಾ ಗೆದ್ದೇ ಗೆಲ್ಲುತ್ತೆ ಅಂತ ನಿಜಾಂ ಏರಿಯಾದಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿಬಿಡುಗಡೆ ಮಾಡಿದ್ದರು. ಒಂದು ಲೆಕ್ಕಾಚಾರದ ಪ್ರಕಾರ, ದಿಲ್ ರಾಜು ಕಮ್ಮಿ ಅಂದರೂ 15 ಕೋಟಿ ನಷ್ಟ ಆಗಿದೆ ಎನ್ನಲಾಗಿದೆ.

RRR ಸಿನಿಮಾದಿಂದ ಮತ್ತೆ ಗೆದ್ದ ದಿಲ್ ರಾಜು

RRR ಸಿನಿಮಾದಿಂದ ಮತ್ತೆ ಗೆದ್ದ ದಿಲ್ ರಾಜು

'ರಾಧೆ ಶ್ಯಾಮ್' ಸಿನಿಮಾ ದಿಲ್ ರಾಜುಗೆ ಅನಿರೀಕ್ಷಿತ ಹೊಡೆತ ಕೊಟ್ಟಿತ್ತು. ಒಂದೇ ಸಿನಿಮಾದಿಂದ ಭಾರಿ ನಷ್ಟ ಅನುಭವಿಸಿದ್ದ ದಿಲ್ ರಾಜು RRR ಸಿನಿಮಾವನ್ನು ಖರೀದಿ ಮಾಡಿದ್ದರು. ಇದೇ ನಿಜಾಂ ಏರಿಯಾದಲ್ಲೂ ಮತ್ತೆ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದರು. ಇದ ವೇಳೆ ತೆಲಂಗಾಣದಲ್ಲೂ ಚಿತ್ರದ ಟಿಕೆಟ್ ದರ ಏರಿಕೆಯಾಗಿತ್ತು. RRR ಬಿಡುಗಡೆಯಾದ ಆರಂಭದ ದಿನಗಳಲ್ಲಷ್ಟೇ ಅಲ್ಲ, ವೀಕೆಂಡ್‌ನಲ್ಲೂ ಉತ್ತಮ ಗಳಿಕೆ ಕಂಡಿತ್ತು.

ದಿಲ್ ರಾಜುಗೆ ಬಂದ ಲಾಭವೆಷ್ಟು?

ದಿಲ್ ರಾಜುಗೆ ಬಂದ ಲಾಭವೆಷ್ಟು?

'ರಾಧೆ ಶ್ಯಾಮ್' ಚಿತ್ರದಿಂದ ಕೈ ಸುಟ್ಟಿಕೊಂಡಿದ್ದ ದಿಲ್ ರಾಜ್ ಮತ್ತೆ ಲಾಭ ಕಂಡಿದ್ದಾರೆ. ನಿಜಾಂ ಏರಿಯಾದಲ್ಲಿ RRR ಸಿನಿಮಾ ಗೆದ್ದಿದೆ. ದಿಲ್ ರಾಜು ಅನುಭವಿಸಿದ್ದ ನಷ್ಟವನ್ನು ರಿಕವರಿ ಮಾಡಿಕೊಂಡಿದ್ದಾರೆ. ಸುಮಾರು 70 ಕೋಟಿ ಬಂಡವಾಳ ಹೂಡಿ RRR ಸಿನಿಮಾದ ನಿಜಾಮ್ ಹಕ್ಕುಗಳನ್ನು ಖರೀದಿಸಿದ್ದರು. RRR ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸುತ್ತಿದೆ. ನಿಜಾಂ ಏರಿಯಾದಲ್ಲಿ ಇಲ್ಲಿವರೆಗೂ ಸುಮಾರು 90 ಕೋಟಿ ಶೇರ್ ಬಂದಿದೆ ಎನ್ನಲಾಗಿದೆ. ಇದು ಹೀಗೆ ಮುಂದುವರೆದರೆ 100 ಕೋಟಿಯನ್ನು ಸುಲಭವಾಗಿ ಪಡೆಯಲಿದೆ.ಈ ಮೂಲಕ ದಿಲ್ ರಾಜು 25 ರಿಂದ 30 ಕೋಟಿ ಲಾಭ ಗಳಿಸುವ ಸಾಧ್ಯತೆ ಇದೆ.

More from Filmibeat

English summary
Telugu producer Dil Raju recovers Radhe Shyam losses with RRR movie. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X