ಭಾಷಣದ ಮಾಡುವಾಗ ಅಭಿಮಾನಿಗಳ ಮುಂದೆ ಉದುರಿದ ಬಾಲಯ್ಯನ ಮೀಸೆ; ವಿಡಿಯೋ ವೈರಲ್.. ಟ್ರೋಲ್ ಮೇಲೆ ಟ್ರೋಲ್
ಎಲ್ಲಾ ಚಿತ್ರರಂಗದಲ್ಲೂ ಸೂಪರ್‌ಸ್ಟಾರ್‌ಗಳು ತಮ್ಮ ಸೌಂದರ್ಯವನ್ನು ಮರೆಮಾಚುವುದಕ್ಕೆ ನೋಡುತ್ತಾರೆ. ಇವರಲ್ಲಿ ಡಾ.ರಾಜ್‌ಕುಮಾರ್, ರಜನಿಕಾಂತ್ ಅಂತ ಕೆಲವೇ ದಿಗ್ಗಜರು ರಿಯಲ್ ಲೈಫ್‌ನಲ್ಲಿ ಹೇಗಿದ್ದಾರೋ ಹಾಗೇ ಇರುತ್ತಾರೆ. ಸಿನಿಮಾ ಅಂತ ಬಂದಾಗ ಮಾತ್ರ ವಿಗ್‌ಗಳನ್ನು ಧರಿಸಿ, ಸ್ಟೈಲಿಶ್ ಲುಕ್ ಕೊಡುತ್ತಾರೆ. ಮತ್ತೆ ಕೆಲವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗಲೂ ವಿಗ್ ಅನ್ನು ಧರಿಸುತ್ತಾರೆ. ಬಾಲಕೃಷ್ಣ ತನ್ನ ಬರ್ತ್‌ಡೇ ಸಂಭ್ರಮದ ವೇಳೆ ಇದೇ ಅವರು ಅಂಟಿಸಿಕೊಂಡಿದ್ದ ಮೀಸೆ ಭಲೇ ತೊಂದರೆ ಕೊಟ್ಟಿದೆ.
ಟಾಲಿವುಡ್‌ನ ದಿಗ್ಗಜರಲ್ಲಿ ನಂದಮೂರಿ ಬಾಲಕೃಷ್ಣ ಕೂಡ ಒಬ್ಬರು. ವಿಶ್ವದಾದ್ಯಂತ ಇವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಬಾಲಯ್ಯನ ಸ್ಲೀಡ್‌ಗೆ, ಡೈಲಾಗ್ ಡಿಲೇವರಿಗೆ, ಎನರ್ಜಿಗೆ ಫಿದಾ ಆಗಿ ಅಭಿಮಾನಿಗಳು ಆದವರೇ ಹೆಚ್ಚು. ಇತ್ತೀಚೆಗೆ ಬಾಲಕೃಷ್ಣ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳ ಮಧ್ಯೆ ಬರ್ತ್‌ಡೇಯನ್ನು ಆಚರಿಸಿಕೊಂಡಿದ್ದರು. ಈ ವೇಳೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತಾಡುವಾಗ ಅವರ ಮೀಸೆ ಉದುರಿಬಿಟ್ಟಿದೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

ಭಾಷಣ ಸಮಯದಲ್ಲಿ ಉದುರಿದ ಮೀಸೆ
ಬಾಲಕೃಷ್ಣಗೂ ಮೀಸೆಗೂ ಬಿಡಲಾರದ ನಂಟು. ಯಾಕಂದ್ರೆ, ಈ ಮೀಸೆಯಲ್ಲಿಯೇ ಒಂದು ಗತ್ತಿದೆ. ಬಾಲಯ್ಯ ಮೀಸೆ ತಿರುವುತ್ತಾ ಡೈಲಾಗ್ ಬಿಡುವ ಅದೆಷ್ಟೇ ಸನ್ನಿವೇಶಗಳನ್ನು ನೋಡಿದ್ದೇವೆ. ಅದಕ್ಕೆ ಅವರ ಅಭಿಮಾನಿಗಳು ಶಿಳ್ಳೆಗಳನ್ನು ಹಾಕೋದು ಅಷ್ಟೇ ಕಾಮನ್. ಹೀಗಾಗಿ ಬಾಲಯ್ಯ ರಿಯಲ್ ಲೈಫ್‌ನಲ್ಲೂ ಮೀಸೆ ಮೇಲೆ ಕೈ ಇಡುತ್ತಲೇ ಮಾತಾಡುತ್ತಾರೆ. ಈ ಬಾರಿ ಮೀಸೆ ಮೇಲೆ ಕೈ ಇಟ್ಟಿ ಮಾತಾಡುವುದಕ್ಕೆ ಕಾರಣ ಬೇರೆನೇ ಇತ್ತು.
ವೇದಿಕೆ ಮೇಲೆ ಮೀಸೆಗೆ ಗಮ್ ಅಂಟಿಸಿದ ಬಾಲಯ್ಯ
ಬಾಲಯ್ಯ ತನ್ನ ಹುಟ್ಟುಹಬ್ಬದ ಸಂಭ್ರಮದಲ್ಲಿ ಕೇಕ್ ಕತ್ತರಿಸಿ ಮಾತಿಗೆ ಇಳಿದಿದ್ದರು. ಈ ವೇಳೆ ಅವರು ಮೀಸೆ ಉದುರುವುದಕ್ಕೆ ಶುರುವಾಗಿತ್ತು. ಆ ವೇದಿಕೆಯಲ್ಲಿದ್ದ ಪ್ರೇಕ್ಷಕರು ಹಾಗೂ ಅಭಿಮಾನಿಗಳು ಈ ಸನ್ನಿವೇಶವನ್ನು ನೋಡುವುದಕ್ಕೆ ಶುರುಮಾಡಿದ್ದರು. ತಕ್ಷಣ ಬಾಲಯ್ಯ ಚೇತರಿಸಿಕೊಂಡು ಮೀಸೆಯನ್ನು ಕೈಯಲ್ಲಿ ಒತ್ತಿ ಹಿಡಿದು ಮಾತಾಡುವುದಕ್ಕೆ ಶುರು ಮಾಡಿದ್ದರು. ಇದೇ ಗ್ಯಾಪ್‌ನಲ್ಲಿ ತನ್ನ ಸಹಾಯಕರಿಗೆ ಗಮ್ ತರುವಂತೆ ಸೂಚಿಸಿದರು. ವೇದಿಕೆ ಮೇಲೆ ಮೀಸೆಗೆ ಗಮ್ ಹಾಕಿ ಅಂಟಿಸಿ, ಮತ್ತೆ ಮಾತಾಡುವುದಕ್ಕೆ ಶುರು ಮಾಡಿದ್ದರು.
ಬಾಲಯ್ಯ ಟ್ರೋಲ್
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಾಲಯ್ಯ ಟ್ರೋಲ್ ಆಗುತ್ತಿದ್ದಾರೆ. ನೆಟ್ಟಿಗರು ಬಾಲಯ್ಯನ ಮೀಸೆ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಆದರೆ, ಇದಕ್ಕೆ ಬಾಲಯ್ಯ ಅಭಿಮಾನಿಗಳು ಅಖಾಡಕ್ಕೆ ಇಳಿದು ತಿರುಗೇಟು ಕೊಡುತ್ತಿದ್ದಾರೆ. ಈ ಮಧ್ಯೆ ಅಭಿಮಾನಿಗಳ ಮಧ್ಯೆ ಮಾತಿನ ಯುದ್ಧವೇ ನಡೆಯುತ್ತಿದೆ.
ವಿಗ್‌ಗಳಿಗಾಗಿ ಲಕ್ಷ ಲಕ್ಷ ಖರ್ಚು
ಬಾಲಕೃಷ್ಣ ತನ್ನ 65ನೇ ವಯಸ್ಸಿನಲ್ಲೂ ನಾಯಕಿಯರೊಂದಿಗೆ ಬಿಂದಾಸ್ ಆಗಿ ಹೆಜ್ಜೆ ಹಾಕುತ್ತಾರೆ. ಅವರ ಸ್ಪೀಡ್‌ಗೆ ಇಂದಿನ ನಾಯಕಿಯರೇ ಸುಸ್ತು ಹೊಡೆದು ಹೋಗುತ್ತಾರೆ. ಹೀಗಾಗಿ ತೆರೆಮೇಲೆ ಅವರಿಗೆ ಸರಿಸಮನಾಗಿ ಕಾಣುವುದಕ್ಕೆ ಬಾಲಯ್ಯ ದುಬಾರಿ ವಿಗ್‌ಗಳನ್ನು ಖರೀದಿ ಮಾಡುತ್ತಾರೆ. ಮುಂಬೈ ಇಲ್ಲವೇ ಚೆನ್ನೈನಿಂದ ವಿಗ್ ಅನ್ನು ಖರೀದಿ ಮಾಡುತ್ತಾರೆ. ಈಗ ಹೈದರಾಬಾದ್‌ನಲ್ಲಿಯೇ ವಿಗ್ ಖರೀದಿ ಮಾಡುತ್ತಾರೆಂದು ಫಿಲ್ಮಿಬೀಟ್ ತೆಲುಗು ವರದಿ ಮಾಡಿದೆ. ಸದ್ಯ ಬಾಲಕೃಷ್ಣ ಬೋಯಪತಿ ಶ್ರೀನು ನಿರ್ದೇಶನದ ಅಖಂಡ 2 ಚಿತ್ರದ ಶೂಟಿಂಗ್‌ನಲ್ಲಿ ನಟಿಸುತ್ತಿದ್ದು, ಅದು ದಸರಾಗೆ ಬಿಡುಗಡೆಯಾಗಲಿದೆ.


Click it and Unblock the Notifications











