ಮದುಮಗನಂತೆ ಬಂದ ನರೇಶ್ ಕಂಡು "ಪ್ರತಿದಿನಾನೂ ನೀನು ಮದುಮಗ" ಎಂದ ಕಾಲೆಳೆದ ನಟ: ವೇದಿಕೆ ಮೇಲೆ ನಡಿದಿದ್ದೇನು?

ಟಾಲಿವುಡ್‌ನ ವಿವಾದಾತ್ಮಕ ನಟ ನರೇಶ್ ಎಲ್ಲಿಗೇ ಹೋದರೂ, ಅವರ ಮದುವೆ ಬಗ್ಗೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ನರೇಶ್ ಮಾತ್ರ ಪವಿತ್ರಾ ಲೋಕೇಶ್ ಜೊತೆಗಿನ ಮದುವೆ ಬಗ್ಗೆ ಎಲ್ಲೂ ಬಾಯಿಬಿಟ್ಟಿಲ್ಲ.

ಇತ್ತೀಚೆಗೆ ನರೇಶ್ ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದರು. ಇದರಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರು ಮದುವೆಯಾದ ದೃಶ್ಯಗಳಿತ್ತು. ಇವರಿಬ್ಬರೂ ನಿಜವಾಗೂ ಮದುವೆ ಆಗಿದ್ದಾರೋ? ಇಲ್ಲ ಸಿನಿಮಾಗಾಗಿ ಮದುವೆ ಆಗಿದ್ದಾರೋ? ಅನ್ನು ಪ್ರಶ್ನೆಗೆ ನರೇಶ್ ಆಗಲಿ, ಇಲ್ಲ ಪವಿತ್ರಾ ಲೋಕೇಶ್ ಆಗಲಿ ಇನ್ನೂ ಉತ್ತರ ಕೊಟ್ಟಿಲ್ಲ.

Telugu senior actor Rajendra Prasad Comments on VK Naresh Marriage and Nitya Pellikoduku

ಈಗ ಮದುವೆ ವಿಷಯವನ್ನಿಟ್ಟುಕೊಂಡೇ ಹಿರಿಯ ನಟ ರಾಜೇಂದ್ರ ಪ್ರಸಾದ್ ವೇದಿಕೆ ಮೇಲೆ ನರೇಶ್ ಕಾಲೆಳೆದಿದ್ದಾರೆ. ನರೇಶ್ ಮುಂದೇನೆ ರಾಜೇಂದ್ರ ಪ್ರಸಾದ್ ಆಡಿದ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನರೇಶ್ ಬಗ್ಗೆ ರಾಜೇಂದ್ರ ಪ್ರಸಾದ್ ಹೇಳಿದ್ದೇನು?

ನಂದಿನಿ ರೆಡ್ಡಿ ನಿರ್ದೇಶಿಸಿದ 'ಅನ್ನಿ ಮಂಚಿ ಶಕುನಮೂಲೆ' ಸಿನಿಮಾದ ಪ್ರೆಸ್ ಮೀಟ್ ಹಮ್ಮಿಕೊಳ್ಳಲಾಗಿತ್ತು. ಈ ಸಿನಿಮಾದಲ್ಲಿ ನರೇಶ್ ಹಾಗೂ ರಾಜೇಂದ್ರ ಪ್ರಸಾದ್ ಇಬ್ಬರೂ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಂಬಂಧ ಚಿತ್ರತಂಡದ ಜೊತೆ ಪತ್ರಿಕಾಗೋಷ್ಠಿಗೆ ಆಗಮಿಸಿದ್ದರು.

Telugu senior actor Rajendra Prasad Comments on VK Naresh Marriage and Nitya Pellikoduku

ಯುಗಾದಿ ಹಬ್ಬದ ಸಂದರ್ಭ ಆಗಿರುವುದರಿಂದ ನರೇಶ್ ಹಾಗೂ ರಾಜೇಂದ್ರ ಪ್ರಸಾದ್ ಟ್ರೆಡಿಷನಲ್ ಲುಕ್‌ನಲ್ಲಿ ಆಗಮಿಸಿದ್ದರು. ಈ ವೇಳೆ ಮಾತಿಗಿಳಿದ ರಾಜೇಂದ್ರ ಪ್ರಸಾದ್‌ಗೆ ಪತ್ರಕರ್ತರು ಪ್ರಶ್ನೆ ತಮಾಷೆಯಾಗಿ ಪ್ರಶ್ನೆ ಮಾಡಿದ್ದರು. ಆ ಪ್ರಶ್ನೆ ಉತ್ತರ ಕೊಡುವಾಗ, ನರೇಶ್‌ ಮದುವೆ ಮ್ಯಾಟರ್ ಬಗ್ಗೆ ಕಮೆಂಟ್ ಮಾಡಿದ್ದಾರೆ. ಈ ಮಾತುಗಳು ನೆಟ್ಟಿಗರಿಗೆ ಸಿಕ್ಕಾಪಟ್ಟೆ ಮಜಾ ಕೊಡುತ್ತಿದೆ.

ಮದುಮಗನಂತೆ ಕಂಗೊಳಿಸಿದ್ದ ನರೇಶ್

'ಅನ್ನಿ ಮಂಚಿ ಶಕುನಮೂಲೆ' ಸಿನಿಮಾದ ಪತ್ರಿಕಾಗೋಷ್ಠಿಗೆ ನರೇಶ್ ಮದುಮಗನಂತೆ ಡ್ರೆಸ್ ಮಾಡಿಕೊಂಡು ಬಂದಿದ್ದರು. ಅದರಂತೆ, ಮತ್ತೊಬ್ಬ ರಾಜೇಂದ್ರ ಪ್ರಸಾದ್ ಕೂಡ ವೈಟ್ ಅಂಡ್ ವೈಟ್ ಡ್ರೆಸ್‌ ತೊಟ್ಟು ಬಂದಿದ್ದರು. ಆಗ ರಾಜೇಂದ್ರ ಪ್ರಸಾದ್‌ಗೆ ಪತ್ರಕರ್ತರು " ನೀವಿಬ್ಬರೂ ಇಬ್ಬರು ಕತ್ತಿಯಂತಹ ಚಾಲಕಿಗಳು. ಒಂದೇ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದು ಹೇಗೆ?" ಎಂದು ಪ್ರಶ್ನೆ ಮಾಡಿದ್ದರು.

ಪತ್ರಕರ್ತರು ಕೇಳಿದ ಪ್ರಶ್ನೆಗೆ ರಾಜೇಂದ್ರ ಪ್ರಸಾದ್ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದರು. " ನಾನು ಚಾಲಾಕಿಯಲ್ಲ. ಇಲ್ಲಿ ಕೂತಿರೋ ನರೇಶ್ ಚಾಲಾಕಿ. ಇದು ನಿಮಗೂ ಗೊತ್ತು. ಆದರೆ, ಇವನು ಅಂತಿಂಥಾ ಚಾಲಕಿ ಅಲ್ಲ." ಎನ್ನುತ್ತಾ ನರೇಶ್‌ರನ್ನು ವೇದಿಕೆಗೆ ಕರೆತಂದಿದ್ದರು. ಬಳಿಕ ನರೇಶ್ ಕಾಸ್ಟ್ಯೂಮ್ ಅನ್ನು ನೋಡಿ " ನೋಡಿ ಯಾವಾಗಲೂ ಹೊಸ ಮದುಮಗನಂತೆ ಕಾಣುತ್ತಾನೆ" ಎಂದು ಹಾಸ್ಯ ಚಟಾಕಿ ಹಾರಿಸಿದ್ದರು.

'ನೀನು ಪ್ರತಿನಿತ್ಯನೂ ಮದುಮಗ'

ನರೇಶ್ ಮುಂದೇನೆ ಅವರ ಮದುವೆ ಬಗ್ಗೆ ರಾಜೇಂದ್ರ ಪ್ರಸಾದ್ ತಮಾಷೆ ಮಾಡುತ್ತಿದ್ದರು. ಈ ವೇಳೆ ನರೇಶ್ ಕೂಡ ಪ್ರತಿಕ್ರಿಯೆ ನೀಡಿದ್ರು. " ಮದುಮಗನಂತೆ ಕಾಣುತ್ತಿದ್ದಾನೆ ಅಂದ್ರೇನು? ಯಾವಾಗಲೂ ಮದುಮಗನೇ" ಎಂದು ಉತ್ತರ ಕೊಟ್ಟಿದ್ದರು.

ಇನ್ನೇನು ನರೇಶ್ ಪ್ರತಿಕ್ರಿಯೆ ಕೊಟ್ಟು ಹೋಗಬೇಕು ಎನ್ನುವಾಗಲೇ ರಾಜೇಂದ್ರ ಪ್ರಸಾದ್ ಮತ್ತೊಮ್ಮೆ ಕಮೆಂಟ್ ಮಾಡಿದ್ರು. " ಹೌದು, ಒಂದು ಮಾತು ಹೇಳಲು ಮರೆತಿದ್ದೆ. ನೀನು ಪ್ರತಿನಿತ್ಯನೂ ಮದುಮಗನೇ" ಎಂದು ಮತ್ತೊಮ್ಮೆ ಹಾಸ್ಯ ಚಟಾಕಿ ಹಾರಿಸಿದ್ದರು.

ಕಳೆದ ಕೆಲವು ದಿನಗಳಿಂದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮದುವೆ ಮ್ಯಾಟರ್ ವಿವಾದಕ್ಕೆ ಸಿಲುಕಿತ್ತು. ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ವಿಚ್ಛೇದನಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಮದುವೆ ವಿಷಯ ಇನ್ನೂ ವಿವಾದದಲ್ಲೇ ಇದೆ.

More from Filmibeat

English summary
Telugu senior actor Rajendra Prasad Comments on VK Naresh Marriage and 'Nitya Pellikoduku'. VK Naresh Dressedup like groom's attire in 'Anni Manchi Sakunamule' press meet, Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X