ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್ ವಾರ್ನರ್ ನಿಂದಿಸಿದ ಟಾಲಿವುಡ್ ನಟ; ಸ್ಟಾರ್ ಆಟಗಾರನಿಗೆ ಅವಮಾನ

ಟಾಲಿವುಡ್ ಹ್ಯಾಂಡ್ಸಮ್‌ ಹೀರೋ ನಿತಿನ್ 'ರಾಬಿನ್ ಹುಡ್' ಸಿನಿಮಾ ರಿಲೀಸ್ ರೆಡಿಯಾಗಿತ್ತಿದೆ. ಈ ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗುತ್ತಿದ್ದಾರೆ. ಈ ಸಿನಿಮಾವನ್ನು ಸ್ಟಾರ್‌ ನಿರ್ದೇಶಕ ವೆಂಕಿ ಕುಡುಮುಲ ಆಕ್ಷನ್ ಕಟ್ ಹೇಳಿದ್ದು ಮಾರ್ಚ್ 28 ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಇನ್ನೇನು ಸಿನಿಮಾ ರಿಲೀಸ್‌ಗೆ ಕೆಲವೇ ದಿನಗಳ ಬಾಕಿ ಇದೆ ಅನ್ನುವಾಗಲೇ ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಇತ್ತೀಚೆಗಷ್ಟೇ ಸಿನಿಮಾ ತಂಡ ಹೈದರಾಬಾದ್‌ನಲ್ಲಿ ಟ್ರೈಲರ್‌ ಅನ್ನೂ ರಿಲೀಸ್ ಮಾಡಿದೆ.

ಈ ಟ್ರೈಲರ್ ಲಾಂಚ್‌ ಅಭಿಮಾನಿಗಳಿಗೆ ಉತ್ಸಾಹವನ್ನು ದುಪ್ಪಟ್ಟು ಮಾಡಿತ್ತು. ಅದಕ್ಕೆ ಕಾರಣ ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್. 'ರಾಬಿನ್ ಹುಡ್' ಸಿನಿಮಾ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಆಸ್ಟ್ರೇಲಿಯಾದ ಮಾಜಿ ಸ್ಟಾರ್ ಕ್ರಿಕೆಟಿಗ ಎಂಟ್ರಿ ಕೊಡುತ್ತಿದ್ದಂತೆ ಕಾರ್ಯಕ್ರಮ ಮತ್ತಷ್ಟು ಜೋಷ್ ಪಡೆದುಕೊಂಡಿತ್ತು. ಇನ್ನು ಡೇವಿಡ್ ವಾರ್ನರ್ ಕೂಡ ಇದೇ ಜೋಷನ್‌ನಲ್ಲಿ ಸ್ಟೇಜ್‌ಗೆ ಹೆಜ್ಜೆ ಹಾಕುತ್ತಾ ಎಂಟ್ರಿ ಕೊಟ್ಟಿದ್ದರು.

Telugu senior actor Rajendra Prasad scold former Australian cricketer David Warner watch video

ಡೇವಿಡ್ ವಾರ್ನರ್ ಟಾಲಿವುಡ್ ಸಿನಿಮಾದ ಟ್ರೈಲರ್ ಲಾಂಚ್‌ಗೆ ಬರುವುದಕ್ಕೆ ಕಾರಣವೂ ಇದೆ. ಕ್ರಿಕೆಟ್‌ನಿಂದ ಡೇವಿಡ್ ವಾರ್ನರ್ ನಿವೃತ್ತಿ ಪಡೆದ ಬಳಿಕ ಈ ರಾಬಿನ್ ಹುಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗಾಗಿ ಅವರನ್ನು ವಿಶೇಷ ಅತಿಥಿಯಾಗಿ ಕರೆಸಲಾಗಿತ್ತು. ಎಲ್ಲರೂ ಜೋಷ್‌ನಲ್ಲಿ ಇರುವಾಗ ಟಾಲಿವುಡ್‌ನ ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರ ಮಾತುಗಳು ಸಂಚಲನ ಸೃಷ್ಟಿಸಿವೆ.

ಹಿರಿಯ ನಟ ರಾಜೇಂದ್ರ ಪ್ರಸಾದ್ ವೇದಿಕೆ ಮೇಲೆ ಕೆಲವೊಮ್ಮೆ ಫಿಲ್ಟರ್ ಇಲ್ಲದೆ ಮಾತಾಡುತ್ತಾರೆ. ಆದರೆ, 'ರಾಬಿನ್ ಹುಡ್' ಸಿನಿಮಾ ಟ್ರೈಲರ್ ಲಾಂಚ್‌ನಲ್ಲಿ ತಂಡದ ಬಗ್ಗೆ ಹೊಗಳಿಕೆಯ ಮಾತುಗಳನ್ನು ಆಡಿದ್ದರು. ಪ್ರತಿಯೊಬ್ಬ ನಟರ ಬಗ್ಗೆನೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಸಿನಿಮಾದ ಹೀರೋ ನಿತಿನ್ ಹಾಗೂ ನಾಯಕಿ ಶ್ರೀಲೀಲಾ ಅವರ ನಟನೆಯನ್ನು ಹೊಗಳಿದ್ದಾರೆ. ಹಾಗೇ ನಿರ್ದೇಶಕ ವೆಂಕಿ ಕುಡುಮುಲ ಅವರ ಪರಿಶ್ರಮದ ಬಗ್ಗೆನೂ ಮಾತಾಡಿದ್ದಾರೆ. ಹಾಗೇ ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿರುವ ಮಾಜಿ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಬಗ್ಗೆನೂ ಮಾತಾಡಿದ್ದರು.

Telugu senior actor Rajendra Prasad scold former Australian cricketer David Warner watch video

'ರಾಬಿನ್ ಹುಡ್' ಟ್ರೈಲರ್ ಲಾಂಚ್‌ಗೆ ವಿಶೇಷ ಅತಿಥಿಯಾಗಿ ಬಂದಿದ್ದ ಡೇವಿಡ್ ವಾರ್ನರ್ ಅನ್ನು ಟಾಲಿವುಡ್ ಹಿರಿಯ ನಟ ರಾಜೇಂದ್ರ ಪ್ರಸಾದ್ ವೇದಿಕೆ ಮೇಲೆ ಗದರಿಸಿದ್ದಾರೆ. ರಾಜೇಂದ್ರ ಪ್ರಸಾದ್ ಆಡಿದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬೇಸರ ವ್ಯಕ್ತ ಪಡಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಆಟಗಾರನಿಗೆ ಅಸಭ್ಯ ಪದಗಳನ್ನು ಬಳಸಿ ನಿಂದಿಸಿದ್ದಾರೆಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಈ ಸಿನಿಮಾ ವೇದಿಕೆ ಮೇಲೆ "ಹೇ ಡೇವಿಡ್ ವಾರ್ನರ್.. ನೀನು ಕಳ್ಳ. .ನೀನು ನನ್ನ ಮಗನಲ್ಲ" ಎಂದು ರಾಜೇಂದ್ರ ಪ್ರಸಾದ್ ಗದರಿದ್ದರು. ಈ ಮಾತುಗಳನ್ನು ಕೇಳಿ ಅಲ್ಲಿದ್ದವರು ಒಮ್ಮೆ ಅಘಾತಕ್ಕೆ ಒಳಗಾಗಿದ್ದರು. ರಾಜೇಂದ್ರ ಪ್ರಸಾದ್ ಅಂತಹ ಹಿರಿಯ ನಟರು ಹೀಗೆ ಮಾತನಾಡುವುದು ಸೂಕ್ತವಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗ ರಾಜೇಂದ್ರ ಪ್ರಸಾದ್ ಕೊಟ್ಟ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆಯ ವಿಷಯವಾಗಿದೆ.

ಅಂದ್ಹಾಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್ ವಾರ್ನರ್ 'ರಾಬಿನ್ ಹುಡ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ, ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ನಟಿಸಿದ್ದು, ಆಕ್ಷನ್ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಕೂಡ ಅಷ್ಟೇ ವೈರಲ್ ಆಗುತ್ತಿದೆ. ಅಂದ್ಹಾಗೆ ಕೇವಲ ನಾಲ್ಕು ದಿನ ಶೂಟಿಂಗ್‌ಗಾಗಿ ಡೇವಿಡ್ ವಾರ್ನರ್ ಸುಮಾರು 2.4 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. 'ರಾಬಿನ್ ಹುಡ್' ಸಿನಿಮಾ ಸುಮಾರು 60 ಕೋಟಿ ರೂಪಾಯಿ ಬಜೆಟ್ ವೆಚ್ಚದಲ್ಲಿ ನಿರ್ಮಾಣ ಆಗಿದೆ.

More from Filmibeat

English summary
Telugu senior actor Rajendra Prasad scold former Australian cricketer David Warner watch video;
Read more about: tollywood controversy cricketer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X