"ಒಟ್ಟಿಗೆ ಸಮಯ ಕಳೆದ ನಂತರ ಸಮಸ್ಯೆ ಎಲ್ಲಿದೆ?"; ಸಂಚಲನ ಸೃಷ್ಟಿಸಿದ ಹಿರಿಯ ನಟಿ ಅನ್ನಪೂರ್ಣ ಹೇಳಿಕೆ!
ದಕ್ಷಿಣ ಭಾರತೀಯ ಚಿತ್ರರಂಗದ ಹಿರಿಯ ನಟಿ ಅನ್ನಪೂರ್ಣ ತನ್ನ ನೇರ ನುಡಿಗಳಿಗೆ ಫೇಮಸ್. ಅದೆಷ್ಟೇ ಸೂಕ್ಷ್ಮ ವಿಷಯಗಳೇ ಆಗಿರಲಿ. ತನಗೆ ಅನಿಸಿದ್ದನ್ನು ನೇರವಾಗಿ ಹೇಳಿಬಿಡುತ್ತಾರೆ. ಇವರ ನೀಡುವ ಹೇಳಿಕೆಗಳು ಕೆಲವೊಮ್ಮೆ ಸಂಚಲನವನ್ನು ಸೃಷ್ಟಿಸಿದ್ದೂ ಇದೆ. 50 ವರ್ಷಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಅನ್ನಪೂರ್ಣ ಇಂದಿಗೂ ಅಷ್ಟೇ ಆಕ್ಟಿವ್ ಆಗಿದ್ದಾರೆ.
ಹಿರಿಯ ನಟಿ ಅನ್ನಪೂರ್ಣಗೆ ವಯಸ್ಸು 70 ಆಗಿದ್ದರೂ ಇನ್ನೂ ಮನೆಯಲ್ಲಿ ಕೂತಿಲ್ಲ. ರಿಯಾಲಿಟಿ ಶೋಗಳಲ್ಲಿ ತಮ್ಮ ವಿಶಿಷ್ಟ ಮ್ಯಾನರಿಸಂನಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ. ಅವರ ಪಂಚಿಂಗ್ ಡೈಲಾಗ್‌ಗಳು, ಪ್ರಾಸಗಳು ತೆಲುಗು ಮಂದಿಯನ್ನು ನಗೆಗಡಲ್ಲಿ ತೇಲಿಸುತ್ತಿದೆ. ಸದ್ಯಕ್ಕೀಗ ಈ ನಟಿ ಸಂದರ್ಶನವೊಂದರಲ್ಲಿ ಟಾಲಿವುಡ್‌ನಲ್ಲಿ ಇರುವ ಕಮಿಟ್‌ಮೆಂಟ್‌ಗಳ ಬಗ್ಗೆ ಓಪನ್ ಮಾತಾಡಿದ್ದಾರೆ.

ಅನ್ನಪೂರ್ಣ ತೆಲುಗಿನ ರಿಯಾಲಿಟಿ ಶೋ ಡ್ರಾಮಾ ಕಂಪನಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಕಿಸಕ್ ಟಾಕ್ ಶೋನಲ್ಲಿ ಭಾಗಿಯಾಗಿದ್ದರು. ತೆಲುಗು ಜನಪ್ರಿಯರ ರಿಯಾಲಿಟಿ ಶೋ ಜಬರ್ದಸ್ತ್ ನಡೆಸಿಕೊಡುತ್ತಿರುವ ವರ್ಷಾ ಅವರ ಶೋ ಆಗಿದ್ದು, ಇದರಲ್ಲಿ ಕೆಲವು ಸಂಚಲನ ಸೃಷ್ಟಿಸುವಂತಹ ಹೇಳಿಕೆಗಳನ್ನು ಅನ್ನಪೂರ್ಣ ಕೊಟ್ಟಿದ್ದಾರೆ. ಇಂದಿನ ನಟಿಯರು ಕಮಿಟ್‌ಮೆಂಟ್‌ಗಳ ಸುಳಿಯಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅದೇ ರೀತಿ, ಮೀಟೂ ಪ್ರಕರಣದ ಬಗ್ಗೆನೂ ಓಪನ್ ಆಗಿ ಮಾತಾಡಿದ್ದಾರೆ.
ಕಿಸಕ್ ಟಾಕ್ ಶೋನಲ್ಲಿ ಅನ್ನಪೂರ್ಣ ತೆಲುಗು ಚಿತ್ರರಂಗದ ಬಗ್ಗೆ ಓಪನ್ ಮಾತಾಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಇಂದಿನ ನಾಯಕಿಯರು ಕಮಿಟ್‌ಮೆಂಟ್‌ಗಳ ಸುಳಿಗೆ ಸಿಲುಕಿರುವ ಬಗ್ಗೆ ಹೇಳಿಕೆ ಕೊಟ್ಟು ಸಂಚಲನ ಸೃಷ್ಟಿಸಿದ್ದಾರೆ. ಈಗಾಗಲೇ ಕಾಸ್ಟಿಂಗ್ ಕೌಚ್ ಬಗ್ಗೆ ಮೀಟೂ ಅಂತಹ ದೊಡ್ಡ ಅಭಿಯಾನವೇ ನಡೆದಿತ್ತು. ಮಲಯಾಳಂ ಚಿತ್ರರಂಗದಲ್ಲಿರುವ ಕರಾಳತೆ ಬಗ್ಗೆ ಜಸ್ಟಿಸ್ ಹೇಮಾ ಕಮಿಟಿ ವರದಿ ಜನರನ್ನು ಬೆಚ್ಚಿ ಬೀಳಿಸಿತ್ತು. ಈ ಸಂದರ್ಶನದಲ್ಲಿ ಅನ್ನಪೂರ್ಣ ಕೂಡ ನಟಿಯರು ಕಮಿಟ್‌ಮೆಂಟ್‌ಗಳಿಗೆ ಒಪ್ಪಿಕೊಳ್ಳುವ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ನಟಿಯರು ಚಿತ್ರರಂಗದಲ್ಲಿರುವ ಕಮಿಟ್‌ಮೆಂಟ್ ಸಂಸ್ಕೃತಿಯಿಂದ ಹೆಣಗಾಡುತ್ತಿರುವ ವಿಷಯ ನಿಜವೇ ಇರಬಹುದು. ಆದರೆ, ಇಂತಹ ಸಮಸ್ಯೆಯ ಸುಳಿಗೆ ಸಿಲುಕಿರುವವರು ಬಯಸದೇ ಇದ್ದರೆ, ಯಾರೂ ಯಾರಿಗೂ ತೊಂದರೆ ಕೊಡುವ ಪರಿಸ್ಥಿತಿಯೇ ಇರುವುದಿಲ್ಲ. ಇಂತಹದ್ದನ್ನೆಲ್ಲ ಒಪ್ಪಿಕೊಳ್ಳುವುದಿಲ್ಲ ಎಂದು ನೇರವಾಗಿ ಹೇಳಿದರೆ ಮುಗಿದು ಹೋಯ್ತು. ಯಾರಿಂದಲೂ ಏನೂ ಮಾಡುವುದಕ್ಕೆ ಸಾಧ್ಯವಿರುವುದಿಲ್ಲ. ನಟಿಯರು ಇಂತಹದ್ದೊಂದು ನಿರ್ಧಾರ ತೆಗೆದುಕೊಂಡರೆ, ಈ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











