ರಾಬರ್ಟ್ ಗಾಯಕಿ ಬರ್ತ್‌ಡೇ ಪಾರ್ಟಿಯಲ್ಲಿ ವಿದೇಶಿ ಮದ್ಯ, ಗಾಂಜಾ; ಕೊನೆಗೂ ಪ್ರತಿಕ್ರಿಯೆ ಕೊಟ್ಟ ಮಂಗ್ಲಿ
ಟಾಲಿವುಡ್ ಗಾಯಕಿ ಮಂಗ್ಲಿ ಬರ್ತ್ ಡೇ ಪಾರ್ಟಿ ಮಾಡುವುಕ್ಕೆ ಹೋಗಿ ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆ. ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಹಾಡಿರುವ ಈ ಗಾಯಕಿಯ ಬರ್ತ್‌ಡೇ ಪಾರ್ಟಿ ಮೇಲೆ ತೆಲಂಗಾಣದ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಸುಮಾರು 50 ಮಂದಿಯನ್ನು ವಶಕ್ಕೆ ಪಡೆದು, ವೈದ್ಯಕೀಯ ಪರೀಕ್ಷೆಗೆ ಹಾಜರು ಪಡಿಸಲಾಗಿತ್ತು. ಮಂಗ್ಲಿ ಕೊಟ್ಟ ಪಾರ್ಟಿಯಲ್ಲಿ ವಿದೇಶಿ ಮದ್ಯ ಹಾಗೂ ಗಾಂಜಾ ಸರಬರಾಜು ಮಾಡಲಾಗುತ್ತೆಂಬ ಆರೋಪವಿದೆ.
ತೆಲುಗಿನ ಜನಪ್ರಿಯ ಗಾಯಕಿ ಮಂಗ್ಲಿ ಹೈದರಾಬಾದ್ನ ಚೆವೆಲ್ಲಾ ತ್ರಿಪುರಾ ರೆಸಾರ್ಟ್‌ನಲ್ಲಿ ಪಾರ್ಟಿಯನ್ನು ನೀಡಿದ್ದರು. ಈ ಪಾರ್ಟಿಯಲ್ಲಿ ತನ್ನ ತಂದೆ-ತಾಯಿ, ಕುಟುಂಬದ ಕೆಲ ಆಪ್ತರು, ಚಿತ್ರರಂಗದಲ್ಲಿನ ಕೆಲ ಆತ್ಮೀಯರು ಆಹ್ವಾನ ನೀಡಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ, ಈ ಪಾರ್ಟಿಯಲ್ಲಿ ಭಾಗಿಯಾಗಿದ್ದ ಸುಮಾರು 50 ಮಂದಿಯಲ್ಲಿ 9 ಮಂದಿ ಗಾಂಜಾ ಸೇವಿಸಿದ್ದರು ಎಂದು ವರದಿ ಬಂದಿತ್ತು.

ಗಾಯಕಿ ಮಂಗ್ಲಿ ಪಾರ್ಟಿಯಲ್ಲಿ ವಿದೇಶಿ ಮದ್ಯ ಸರಬರಾಜು ಹಾಗೂ ಗಾಂಜಾ ಸೇವನೆ ಆರೋಪ ಮಾಡಲಾಗಿದೆ. ಈ ಸಂಬಂಧ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಯಾರೆಲ್ಲ ಗಾಂಜಾ ಸೇವಿಸಿದ್ದರು? ಎಲ್ಲಿಂದ ಬಂತು? ಅನ್ನೋದನ್ನು ತನಿಖೆ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಮಂಗ್ಲಿ ಒಂದು ವಿಡಿಯೋ ರಿಲೀಸ್ ಮಾಡಿದ್ದು, ಈ ಮೂಲಕ ತಮ್ಮ ಅಭಿಮಾನಿಗಳಿಗೆ ಹಾಗೂ ಮಾಧ್ಯಮಗಳಿಗೆ ಸ್ಪಷನೆಯನ್ನು ಕೊಟ್ಟಿದ್ದಾರೆ.
"ನನ್ನ ಬರ್ತ್‌ಡೇ ಪಾರ್ಟಿಯನ್ನು ನನ್ನ ಅಮ್ಮ ಹಾಗೂ ಅಪ್ಪನ ಕೋರಿಕೆ ಮೇರೆಗೆ ಫ್ಯಾಮಿಲಿಗಾಗಿ ಮಾಡಿದ್ದು. ಇದಕ್ಕಾಗಿ ನನ್ನ ಅಪ್ಪ ಅಮ್ಮ, ಫ್ಯಾಮಿಲಿಯವರು ಹಾಗೂ ಸ್ನೇಹಿತರನ್ನು ಪಾರ್ಟಿಗೆ ಕರೆಯಲಾಗಿತ್ತು. ಅಲ್ಲಿ ನಮ್ಮ ಅಪ್ಪ ಅಮ್ಮ. ಅವರ ಸ್ನೇಹಿತರು, ಕುಟುಂಬ ಹಾಗೂ ಅವರ ಸ್ನೇಹಿತರು, ನನ್ನ ಸ್ನೇಹಿತರು ಮಾತ್ರ ಇದ್ದರು. ಅಲ್ಲಿ ಮದ್ಯ ಹಾಗೂ ಸೌಂಡ್ ಸಿಸ್ಟಮ್ ಇತ್ತು. ಮದ್ಯ ಹಾಗೂ ಸೌಂಡ್ ಸಿಸ್ಟಮ್‌ಗೆ ಅನುಮತಿಯನ್ನು ತೆಗೆದುಕೊಳ್ಳಬೇಕು ಎಂದು ನನಗೆ ಅರಿವೇ ಇರಲಿಲ್ಲ. ಅದು ದಿಢೀರನೇ ಪ್ಲಾನ್ ಮಾಡಿ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು. ನನಗೆ ಇವೆರಡಕ್ಕೂ ಅನುಮತಿ ತೆಗೆದುಕೊಳ್ಳಬೇಕು ಎಂದು ನನಗೆ ಗೊತ್ತಿರಲಿಲ್ಲ. ಇಲ್ಲದೇ ಹೋಗಿದ್ದರೆ ನಾನು ಖಂಡಿತವಾಗಿಯೂ ಅನುಮತಿಯನ್ನು ತೆಗೆದುಕೊಳ್ಳುತ್ತಿದ್ದೆ. ನನಗೆ ಯಾರಾದರೂ ಗೈಡ್ ಮಾಡಿದ್ದರೂ ನಾನು ಅನುಮತಿಯನ್ನು ತೆಗೆದುಕೊಳ್ಳುತ್ತಿದ್ದೆ." ಎಂದಿದ್ದಾರೆ.
ಇದೇ ವಿಡಿಯೋದಲ್ಲಿ ಇದು ತನ್ನಿಂದ ಗೊತ್ತಿಲ್ಲ ಆಗಿರುವ ತಪ್ಪು. ಈಗಾಗಲೇ ಹಬ್ಬಿರುವ ಸುದ್ದಿಯಂತೆ ಯಾವುದೂ ಇಲ್ಲವೆಂದು ಹೇಳಿದ್ದಾರೆ. "ಇದು ಗೊತ್ತಿಲ್ಲದೆ ಆಗಿರುವಂತಹ ತಪ್ಪು. ಅಲ್ಲಿ ಯಾವುದೇ ವಿದೇಶಿ ಮದ್ಯ ಇರಲಿಲ್ಲ. ಕೇವಲ ಲೋಕಲ್ ಲಿಕ್ಕರ್ ಇತ್ತು ಅಷ್ಟೇ. ಅಲ್ಲಿ ಪೊಲೀಸರಿಗೂ ಅದು ಸಿಕ್ಕಿಲ್ಲ. ಯಾರಿಗೆ ಪಾಸಿಟಿವ್ ಬಂದಿದೆ ಎಂದು ಪೊಲೀಸರು ಹೇಳುತ್ತಿದ್ದಾರೋ ಅವರು ಎಲ್ಲೋ ಆ ಮಾದಕ ವಸ್ತುವನ್ನು ತೆಗೆದುಕೊಂಡಿದ್ದಾರೆಂದು ಹೇಳುತ್ತಿದ್ದಾರೆ. ಅದು ತನಿಖೆ ಕೂಡ ನಡೆಯುತ್ತಿದೆ. ನಾನು ಕೂಡ ಪೊಲೀಸರಿಗೆ ಸಹಕಾರ ನೀಡುತ್ತಿದ್ದೇನೆ." ಎಂದು ಮಂಗ್ಲಿ ಹೇಳಿದ್ದಾರೆ.
"ನನಗೆ ಗೊತ್ತಿದ್ದೂ ನಾನು ಯಾಕೆ ಅಂತಹ ಕೆಲಸ ಮಾಡುತ್ತೇನೆ. ನಮ್ಮ ಅಪ್ಪ ಅಮ್ಮನನ್ನು ಮುಂದಿಟ್ಟುಕೊಂಡು ನಾನು ಹಾಗೇ ಮಾಡುವುದಕ್ಕೆ ಸಾಧ್ಯನಾ? ನಾನೊಬ್ಬಳು ರೋಲ್ ಮಾಡಲ್ ಹಾಗೂ ಸ್ಪೂರ್ತಿದಾಯಕ ವ್ಯಕ್ತಿಯಾಗಿರಬೇಕು ಎಂದು ಕೊಂಡಿರುವವಳು ನಾನು. ಹೀಗಿದ್ದೂ ನಾನು ಯಾಕೆ ಇಂತಹ ಕೆಲಸ ಮಾಡುತ್ತೇನೆ. ಮಾಧ್ಯಮಗಳಿಗೆ ಮುಂದೆ ಕೇಳಿಕೊಳ್ಳುವುದು ಏನಂದರೆ, ಆಧಾರವಿಲ್ಲದೆ ಏನೂ ಮಾತಾಡಬೇಡಿ." ಎಂದು ಗಾಯಕಿ ಮಂಗ್ಲಿ ಕೈ ಮುಗಿದು ಕೇಳಿಕೊಂಡಿದ್ದಾರೆ.
ಇನ್ನು ಮಂಗ್ಲಿಯ ವಿಶಿಷ್ಠ ಧ್ವನಿಗೆ ಅಪಾರ ಅಭಿಮಾನಿ ಬಳಗವಿದೆ. ಕೇವಲ ತೆಲುಗು ಸಿನಿಮಾಗಳಿಗಷ್ಟೇ ಅಲ್ಲದೆ. ಕನ್ನಡದಲ್ಲೂ ಹಾಡಿದ್ದಾರೆ. 'ರಾಬರ್ಟ್' ಸಿನಿಮಾದ "ಕಣ್ಣು ಹೊಡೆಯಾಕಾ" ಹಾಡಿನ ತೆಲುಗು ಅವತರಣಿಕೆಗೆ ಮಂಗ್ಲಿ ಧ್ವನಿ ನೀಡಿದ್ದರು. ಹಾಗೇ ಕನ್ನಡದಲ್ಲೂ ಇನ್ನೂ ಕೆಲವು ಸಿನಿಮಾಗಳಿಗೆ ಹಾಡನ್ನು ಹಾಡಿದ್ದಾರೆ. ಇನ್ನು ತೆಲುಗಿನಲ್ಲಿ "ರಾಮುಲೋ ರಾಮುಲಾ", " ಬುಲೆಟ್ ಸಾಂಗ್", "ಸಾರಂಗ ಧರಿಯಾ", "ಭೂಮ್ ಬಾಧಲ್", "ಜಿಂತಾಕ್ ಚಿಂತಾಕ್", "ಲಡ್ಡು ಗಾನಿ ಪೆಳ್ಳಿ" ಅಂತಹ ಸೂಪರ್ ಹಿಟ್ ಹಾಡುಗಳನ್ನು ಮಂಗ್ಲಿ ಹಾಡಿದ್ದಾರೆ.


Click it and Unblock the Notifications











