ಪ್ಯಾನ್ ಇಂಡಿಯಾ ಸಿನಿಮಾಗಾಗಿ ರಾಮ್ ಚರಣ್‌ ಜೊತೆ ಕೈ ಜೋಡಿಸಿದ ದಿ ಕಾಶ್ಮೀರ್ ಫೈಲ್ಸ್ ನಿರ್ಮಾಪಕ!

ಭಾರತೀಯ ಚಿತ್ರರಂಗಕ್ಕೆ 'ದಿ ಕಾಶ್ಮೀರ್ ಫೈಲ್ಸ್' ಅಂತಹ ವಿವಾದಾತ್ಮಕ ಸಿನಿಮಾ ಹಾಗೂ 'ಕಾರ್ತಿಕೇಯಾ 2' ಅಂತಹ ಯಶಸ್ವಿ ಸಿನಿಮಾಗಳನ್ನು ಕೊಟ್ಟಿರೋ ನಿರ್ಮಾಪಕ ಅಭಿಷೇಕ್ ಅಗರ್ವಾಲ್. ಸದ್ಯಕ್ಕೆ ಯಶಸ್ವಿ ನಿರ್ಮಾಪಕ ಎನಿಸಿಕೊಂಡಿರೋ ಇವರು ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.

ಮೆಗಾ ಕುಟುಂಬದ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಜೊತೆ ಅಭಿಷೇಕ್ ಅಗರ್ವಾಲ್ ಜೊತೆಯಾಗಿದ್ದಾರೆ. ರಾಮ್ ಚರಣ್ ನಿರ್ಮಾಣ ಸಂಸ್ಥೆ ಮೆಗಾ ಪಿಕ್ಚರ್ಸ್ ಹಾಗೂ ಅಭಿಷೇಕ್ ಅಗರ್ವಾಲ್ ಆರ್ಟ್ ಜಂಟಿಯಾಗಿ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡುವುದಕ್ಕೆ ಮುಂದಾಗಿದೆ.

The Kashmir Files Producer Abhishek Agarwal and Ram Charan joining for Pan India Movie

ರಾಮ್ ಚರಣ್ ಹೊಸ ಸಾಹಸಕ್ಕೆ ಗೆಳೆಯ ಯುವಿ ಕ್ರಿಯೇಷನ್ ನ ವಿಕ್ರನ್ ರೆಡ್ಡಿ ಸಾಥ್ ಕೊಟ್ಟಿದ್ದಾರೆ. ಈ ಮೂಲಕ ರಾಮ್‌ ಚರಣ್ ಯುವ ಪ್ರತಿಭೆಗಳಿಗೆ ಅವಕಾಶವನ್ನು ನೀಡುವುದಕ್ಕೆ ಮುಂದಾಗಿದ್ದಾರೆ. ಚಿತ್ರರಂಗದಲ್ಲಿ ರಾಮ್ ಚರಣ್ ಇಟ್ಟಿರೋ ಹೊಸ ಹೆಜ್ಜೆ ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಈ ಎರಡು ಸಂಸ್ಥೆಗಳ ಮೂಲಕ ಪ್ಯಾನ್ ಇಂಡಿಯಾ ಚಿತ್ರ ನಿರ್ಮಾಣ ತಯಾರಿ ನಡೆಯುತ್ತಿದೆ. ಅಭಿಷೇಕ್ ಅಗರ್ವಾಲ್ ಆರ್ಟ್ ಬ್ಯಾನರ್ ಹಾಗೂ ವಿ ಮೆಗಾ ಪಿಕ್ಚರ್ಸ್ ಜಂಟಿಯಾಗಿ ಮೂಡಿ ಬರ್ತಿರುವ ಚೊಚ್ಚಲ ಸಿನಿಮಾಗೆ ಯುವ ನಾಯಕ ಹಾಗೂ ಹೊಸ ನಿರ್ದೇಶಕರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಇಬ್ಬರೂ ಶೀಘ್ರದಲ್ಲಿಯೇ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಲಿದ್ದಾರೆ.

ರಾಮ್ ಚರಣ್ ಮತ್ತು ಅಭಿಷೇಕ್ ಜೊತೆಯಾಗಿ ನಿರ್ಮಿಸಲು ಮುಂದಾಗಿರೋದು ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾಗಾಗಿ. ಹೀಗಾಗಿ ಮೇ 28ರಂದು ಹೀರೊ ಯಾರು ಅನ್ನೋದನ್ನು ಅಭಿಷೇಕ್ ಅಗರ್ವಾಲ್ ಆರ್ಟ್ಸ್‌ ಬ್ಯಾನರ್ ಹಾಗೂ ವಿ ಮೆಗಾ ಪಿಕ್ಚರ್ಸ್ ಜಂಟಿಯಾಗಿ ಅನೌನ್ಸ್ ಮಾಡಲಿದೆ. ಈ ಬ್ಯಾನರ್‌ನ ಚೊಚ್ಚಲ ಸಿನಿಮಾ ಹೀರೊ ಯಾರಾಗಬಹುದು ಅನ್ನೋ ಕುತೂಹಲ ಮೂಡಿದೆ.

More from Filmibeat

English summary
The Kashmir Files Producer Abhishek Agarwal and Ram Charan joining for Pan India Movie, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X