'ಸಲಾರ್ 2' ನಿಂತು ಹೋಯ್ತಾ? ಪ್ರಶಾಂತ್ ಪ್ರಭಾಸ್ ಫೋಟೊ ಹಾಕಿ ಕೊಟ್ಟ ಪ್‌ಡೇಟ್ ಏನು?
ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್‌ಗೆ ಸತತ ಸೋಲುಗಳಿಂದ ಬ್ರೇಕ್ ಸಿಕ್ಕಿತ್ತು. ಪ್ರಶಾಂತ್ ನೀಲ್ ನಿರ್ದೇಶಿಸಿದ 'ಸಲಾರ್' ಬಾಕ್ಸಾಫೀಸ್‌ನಲ್ಲಿ ಗೆಲ್ಲುತ್ತಿದ್ದಂತೆ ಮತ್ತೆ ಪ್ರಭಾಸ್ ಕರಿಯರ್‌ನಲ್ಲಿ ಲವಲವಿಕೆ ಬಂದಿದೆ. ಆದರೆ, ಕಳೆದ ಕೆಲವು ದಿನಗಳಿಂದ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ನಡುವೆ ಮನಸ್ತಾಪವಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.
'ಸಲಾರ್' ಪಾರ್ಟ್ 1 ಗೆಲುವಿನ ಬಳಿಕ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಿತ್ತಾಡಿಕೊಂಡಿದ್ದಾರೆ. ಹೀಗಾಗಿ 'ಸಲಾರ್ 2' ಸಿನಿಮಾ ಸ್ಥಗಿತಗೊಂಡಿದೆ ಅಂತ ತೆಲುಗು ಮಾಧ್ಯಮಗಳು ವರದಿ ಮಾಡಿದ್ದವು. ಈ ಬೆನ್ನಲ್ಲೇ ಪ್ರಶಾಂತ್ ನೀಲ್ ಹೊಸ ಸಿನಿಮಾ ಕಡೆ ಮುಖ ಮಾಡಿದ್ದರು. ಜೂ.ಎನ್‌ಟಿಆರ್ ಸಿನಿಮಾ ಕಡೆ ಮುಖ ಮಾಡಿದ್ದರು.

'ಸಲಾರ್ 2' ಸಿನಿಮಾ ನಿಂತಿದೆ ಅನ್ನೋ ಗಾಳಿ ಸುದ್ದಿ ಹರಿದಾಡುತ್ತಿದ್ದಂತೆ 'ಸಲಾರ್' ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಇಬ್ಬರ ಫೋಟೊವನ್ನು ಪೋಸ್ಟ್ ಮಾಡಲಾಗಿದೆ. ಈ ಮೂಲಕ ಇಬ್ಬರ ನಡುವಿನ ಮನಸ್ತಾಪ ಹಾಗೂ 'ಸಲಾರ್ 2' ಸ್ಥಗಿತಗೊಂಡಿದೆ ಎಂಬ ಸುದ್ದಿ ಹಬ್ಬಿಸುತ್ತಿರುವವರಿಗೆ ತಿರುಗೇಟು ಕೊಡಲಾಗಿದೆ.
ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ' ಸಿನಿಮಾ ಬಳಿಕ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಬಳಿಕ 'ಬಾಹುಬಲಿ 2' ಭಾರತದ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆದಿತ್ತು. ಆದರೆ, ಈ ಸಿನಿಮಾ ಬಳಿಕ ತೆರೆಕಂಡ ಮೂರು ಸಿನಿಮಾಗಳು ಹೀನಾಯವಾಗಿ ಸೋತಿದ್ದು ಗೊತ್ತೇ ಇದೆ. ಅಲ್ಲಿಂದ ಮತ್ತೊಂದು ಗೆಲುವು ಕಾಣಲು ಪರದಾಡುತ್ತಿದ್ದ ಪ್ರಭಾಸ್‌ಗೆ 'ಸಲಾರ್' ಮೂಲಕ ಗೆಲುವು ಸಿಕ್ಕಿದೆ.
'ಸಲಾರ್' ಬಾಕ್ಸಾಫೀಸ್‌ನಲ್ಲಿ 700 ಕೋಟಿ ರೂಪಾಯಿ ಗಳಿಕೆ ಕಂಡಿತ್ತು. ಈ ಬೆನ್ನಲ್ಲೇ ಪ್ರಭಾಸ್ ಫ್ಯಾನ್ಸ್ 'ಸಲಾರ್ 2' ಶೂಟಿಂಗ್ ಯಾವಾಗ ಶುರುವಾಗುತ್ತೆ ಅನ್ನೋದನ್ನು ಎದುರು ನೋಡಿತ್ತಿದ್ದರು. ಅಷ್ಟರಲ್ಲೇ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಮಧ್ಯೆ ಮೈಮನಸ್ಸು ಮೂಡಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿದ್ದವು.
ಈ ಸುದ್ದಿ ವೈರಲ್ ಆಗುತ್ತಿದಂತೆ 'ಸಲಾರ್' ಅಧಿಕೃತ ಎಕ್ಸ್ ಪೇಜ್‌ನಿಂದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಸಂದೇಶವನ್ನು ರವಾನಿಸಿದೆ. 'ಸಲಾರ್' ಸೆಟ್ಟಿನಲ್ಲಿ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಸಂದರ್ಭವೊಂದರಲ್ಲಿ ನಗುತ್ತಿರುವ ಫೋಟೊ ಜೊತೆಗೆ "ಅವರು ನಗುವುದನ್ನು ನಿಲ್ಲಿಸಲು ಸಾಧ್ಯವಿಲ್ಲ" ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಎಲ್ಲಾ ವದಂತಿಗಳಿಗೆ ಪರೋಕ್ಷವಾಗಿ ಅಂತ್ಯ ಹಾಡಿದ್ದಾರೆ.
ಈ ಮೂಲಕ 'ಸಲಾರ್ 2' ಸಿನಿಮಾ ಟೇಕಾಫ್ ಆಗುವುದು ಗ್ಯಾರಂಟಿ ಅಂತಾಗಿದೆ. ಇತ್ತ ಪ್ರಭಾಸ್ ಸಿನಿಮಾ 'ಕಲ್ಕಿ 2898 AD'ರಿಲೀಸ್‌ಗೆ ರೆಡಿಯಾಗಿದೆ. ಇನ್ನೊಂದು ಕಡೆ ಜೂ.ಎನ್‌ಟಿಆರ್ ಸಿನಿಮಾ ನಿರ್ದೇಶನ ಮಾಡುವುದಕ್ಕೆ ಪ್ರಶಾಂತ್ ನೀಲ್ ಸಜ್ಜಾಗುತ್ತಿದ್ದಾರೆ. ಸದ್ಯಕ್ಕೆ ವದಂತಿಗಳಿಗೇನೋ ಬ್ರೇಕ್ ಬಿದ್ದಿದೆ. ಆದರೆ, 'ಸಲಾರ್ 2' ಈ ವರ್ಷ ಆರಂಭ ಆಗುವ ಸಾಧ್ಯತೆ ಖಂಡಿತಾ ಇಲ್ಲ.


Click it and Unblock the Notifications











