ಕ್ಷಮೆ ಕೇಳಿ ಟ್ರೈಲರ್ ಬಿಡುಗಡೆ ಮಾಡಿದ 'ಪುಷ್ಪ' ತಂಡ: ಹೈಲೈಟ್ ಏನು?

ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್‌ಗಾಗಿ ಶ್ರಮ ಹಾಕುತ್ತಿದ್ದಾರೆ. ಸಿನಿಮಾ ಬಿಡುಗಡೆಗೆ ಸಮೀಪಿಸುತ್ತಿದೆ ಎನ್ನುವಾಗಲೇ ಒಂದಿಷ್ಟು ಅಡೆಗಳು ಎದುರಾಗುತ್ತಿದೆ. ಆದರೆ, ಅಲ್ಲು ಅರ್ಜುನ್ ಅಭಿಮಾನಿಗಳ ಕಾತುರ ಮಾತ್ರ ಎಂದೂ ಕಡಿಮೆ ಮಾಡಿಲ್ಲ. ಅಂದಹಾಗೆ ಡಿಸೆಂಬರ್ 17 ರಂದು ಬಿಡುಗಡೆಯಾಗಲಿರುವ 'ಪುಷ್ಪ' ಚಿತ್ರದ ಬಹು ನಿರೀಕ್ಷಿತ ಟ್ರೈಲರ್ ಈಗಾಗಲೇ ರಿಲೀಸ್ ಆಗಿ ಚಿಂದಿ ಉಡಾಯಿಸುತ್ತಿದೆ.

Recommended Video

ಕ್ಷಮೆ ಕೇಳಿ ಟ್ರೈಲರ್ ಬಿಡುಗಡೆ ಮಾಡಿದ ಅಲ್ಲು ಅರ್ಜುನ್

'ಪುಷ್ಪ' ಸಿನಿಮಾದ ಟ್ರೈಲರ್ ನಿನ್ನೆ (ಡಿಸೆಂಬರ್ 06) ಸಂಜೆ 6 ಗಂಟೆ 03 ನಿಮಿಷಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಅಂದುಕೊಂಡ ಸಮಯಕ್ಕೆ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಿಲ್ಲ. ತಾಂತ್ರಿಕ ಸಮಸ್ಯೆಗಳಿಂದಾಗಿ ಸಂಜೆ 6 ಗಂಟೆ 03 ನಿಮಿಷಕ್ಕೆ ರಿಲೀಸ್ ಆಗಬೇಕಿದ್ದ 'ಪುಷ್ಪ' ಟ್ರೈಲರ್ ವಿಳಂಬವಾಗುತ್ತಿದ್ದು, ನಾವು ಕ್ಷಮೆಯಾಚಿಸುತ್ತೇವೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಕೊನೆಗೂ ತಡವಾಗಿ ಬಿಡುಗಡೆಯಾದ್ರೂ ಟ್ರೈಲರ್ ಅಭಿಮಾನಿಗಳನ್ನು ರಂಜಿಸುತ್ತಿದೆ.

'ಪುಷ್ಪ' ಮಾಸ್ ಪ್ರಿಯರಿಗೆ ಹಬ್ಬ

'ಪುಷ್ಪ' ಮಾಸ್ ಪ್ರಿಯರಿಗೆ ಹಬ್ಬ

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಿದು. ಸಿನಿಮಾ ಬಿಡುಗಡೆಗೆ ಕೇವಲ ಹತ್ತು ದಿನವಿದೆ ಅನ್ನುವಾಗಲೇ ಮಾಸ್ ಪವರ್‌ಫುಲ್ ಟ್ರೈಲರ್ ಒಂದನ್ನು ರಿಲೀಸ್ ಮಾಡಿದೆ ಚಿತ್ರತಂಡ. ಈ ಟ್ರೈಲರ್ ಮಾಸ್ ಪ್ರಿಯರಿಗೆ ಮೆಗಾಹಬ್ಬದಂತಹ ವಾತಾವರಣ ಸೃಷ್ಟಿಯಾಗಿದೆ. ಸಿನಿಮಾ ಟ್ರೈಲರ್ ಆರಂಭ ಆಗುವುದೇ ವಾಯ್ಸ್ ಓವರ್‌ನಿಂದ. ಆಂಧ್ರದ ಶೇಷಾಚಲಂ ಅರಣ್ಯದಲ್ಲಿ ನಡೆಯುವ ರಕ್ತ ಚಂದನ ಸ್ಮಗಲಿಂಗ್ ಕಥೆಯ ಎಳೆಯನ್ನು ಟ್ರೈಲರ್ ಬಿಟ್ಟುಕೊಟ್ಟಿದೆ. ಪಕ್ಕಾ ರಗಡ್ ಅವತಾರದಲ್ಲಿ ಅಲ್ಲು ಅರ್ಜುನ್ ಮಾಸ್ ಪ್ರಿಯರ ಗಮನ ಸೆಳೆದಿದ್ದಾರೆ.

'ಪುಷ್ಪ' ಅಂದ್ರೆ ಹೂವು ಅಂದ್ಕೊಂಡಿದ್ದೀರಾ.. ಬೆಂಕಿ

'ಪುಷ್ಪ' ಅಂದ್ರೆ ಹೂವು ಅಂದ್ಕೊಂಡಿದ್ದೀರಾ.. ಬೆಂಕಿ

ಟೀಸರ್‌ನಲ್ಲೊಂದು ಪಂಚ್ ಡೈಲಾಗ್.. ಟ್ರೈಲರ್‌ನಲ್ಲೊಂದು ಪಂಚ್ ಡೈಲಾಗ್.. ತಗ್ಗದೆಲೆ ಅಂತ ಡೈಲಾಗ್ ಅಭಿಮಾನಿಗಳ ಮನಗೆದ್ದಿದ್ದ ಅಲ್ಲು ಅರ್ಜುನ್, ಟ್ರೈಲರ್‌ನಲ್ಲೂ ಒಂದು ಡೈಲಾಗ್ ಬಿಟ್ಟಿದ್ದಾರೆ. 'ಪುಷ್ಪ' ಅಂದ್ರೆ ಹೂವು ಅಂದ್ಕೊಂಡಿದ್ದೀರಾ..? ಬೆಂಕಿ ಅನ್ನುವ ಡೈಲಾಗ್ ಅಲ್ಲು ಅಭಿಮಾನಿಗಳಿಗಷ್ಟೇ ಅಲ್ಲ.. ಮಾಸ್ ಪ್ರಿಯರಿಗೆ ಕಿಕ್ ಮೇಲೆ ಕಿಕ್ ಕೊಟ್ಟಿದೆ. ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದ ಅಲ್ಲು ಈ ಬಾರಿ ರಗಡ್ ಅವತಾರವೆತ್ತಿ ಸಿನಿಪ್ರಿಯರ ಮನಗೆಲ್ಲಲು ಸಜ್ಜಾಗುತ್ತಿದ್ದಾರೆ.

ಕನ್ನಡದ ಡಾಲಿ 'ಪುಷ್ಪ' ಮುಂದೆ ಜಾಲಿ

ಕನ್ನಡದ ಡಾಲಿ 'ಪುಷ್ಪ' ಮುಂದೆ ಜಾಲಿ

'ಪುಷ್ಪ' ಸಿನಿಮಾದ ಮತ್ತೊಂದು ಹೈಲೈಟ್ ಅಂದರೆ ಅದು ಡಾಲಿ ಧನಂಜಯ್. ಕನ್ನಡ ಸಿನಿಮಾಗಳಲ್ಲಿ ಡಾಲಿಯಾಗಿ ಕಾಣಿಸಿಕೊಂಡಿದ್ದ ಧನಂಜಯ್ ಐಕಾನ್ ಸ್ಟಾರ್ ಮುಂದೆ 'ಜಾಲಿ' ಅವತಾರವೆತ್ತಿದ್ದಾರೆ. ಶ್ರೀವಲ್ಲಿಯಾಗಿ ನ್ಯಾಷನಲ್ ಕ್ರಷ್‌ ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್‌ಗೆ ಜೋಡಿ. ಮಂಗಲಮ್ ಶ್ರೀನು ಪಾತ್ರದಲ್ಲಿ ಹಾಸ್ಯ ನಟ ಸುನೀಲ್ ವಿಭಿನ್ನ ಗೆಟಪ್ ಕೊಟ್ಟಿದ್ದಾರೆ. ಅನಸೂಯ ಭಾರಧ್ವಾಜ್ ದಾಕ್ಷಾಯಿಣಿ ಅನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮಲಯಾಳಂ ನಟ ಫಾಹದ್ ಫಾಸಿಲ್ ಖಳ ನಾಯಕನಾಗಿ ಕಾಣಿಸಿಕೊಂಡಿರೋದು ವಿಶೇಷ.

'ಪುಪ್ಷ' ಜೊತೆ ನಿಂತಿದೆ ಬಹುದೊಡ್ಡ ತಾರಾಬಳಗ

'ಪುಪ್ಷ' ಜೊತೆ ನಿಂತಿದೆ ಬಹುದೊಡ್ಡ ತಾರಾಬಳಗ

'ಪುಷ್ಪ'ದಲ್ಲಿ ದೊಡ್ಡ ತಾರಾಬಳಗವೇ ಇದೆ. ಟಾಲಿವುಡ್ ವಿಲನ್ ಜಗಪತಿ ಬಾಬು, ಪ್ರಕಾಶ್ ರಾಜ್ ಸೇರಿದಂತೆ ದೊಡ್ಡ ತಂಡವೇ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಇದೇ ಮೊದಲ ಬಾರಿಗೆ ಸಮಂತಾ ಐಟಂ ಸಾಂಗ್‌ವೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್‌ ಬಾಡಿ ಲಾಂಗ್ವೇಜ್ ಅನ್ನು ಕಂಪ್ಲೀಟ್ ಆಗಿ ಬದಲಾಯಿಸಲಾಗಿದೆ. ಎಲ್ಲೂ ಅಲ್ಲು ಅರ್ಜುನ್ ಹಿಂದಿನ ಸಿನಿಮಾದ ಛಾಯೆ ಕಾಣಿಸುವುದಿಲ್ಲ. 'ಪುಷ್ಪ' ಇದೇ ಡಿಸೆಂಬರ್ 17ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ.

More from Filmibeat

English summary
The much awaited theatrical trailer of Pushpa: The Rise is out now. Allu Arjun and Sukumar combo trailer mass feast for all Allu arjuna fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X