Rashmika-Vijay Wedding: ರಶ್ಮಿಕಾ-ವಿಜಯ್ ಈ ಮೂವರು ನಿರ್ದೇಶಕರು ವಿಶೇಷ ಆಹ್ವಾನ ನೀಡಿದ್ದೇಕೆ?
'ಗೀತಾ ಗೋವಿಂದಂ' ಸಿನಿಮಾದಿಂದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ಬಗ್ಗೆ ಸುದ್ದಿಯಾಗುತ್ತಲೇ ಇತ್ತು. ಅದು ಇನ್ನು ಕೆಲವೇ ದಿನಗಳಲ್ಲಿ ನಿಜವಾಗುತ್ತಿದೆ. ಈ ಜೋಡಿ ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸದ್ದಿಲ್ಲದೆ, ಒಂದೇ ಒಂದು ಸುಳಿವನ್ನೂ ನೀಡದೇ ಮದುವೆ ತಯಾರಿ ಮಾಡಿಕೊಂಡಿದ್ದ ಜೋಡಿ ಫೆಬ್ರವರಿ 26ಕ್ಕೆ ಹಸೆಮಣೆ ಏರಲಿದೆ.
ಈಗಾಗಲೇ ಎರಡೂ ಕುಟುಂಬಗಳು ಸಂಬಂಧಿಕರಿಗೆ, ಆತ್ಮೀಯರಿಗೆ ಹಾಗೂ ಚಿತ್ರರಂಗದ ಗಣ್ಯರಿಗೆ ಮದುವೆಯ ಆಮಂತ್ರಣವನ್ನು ನೀಡಲಾಗಿದೆ. ಮದುವೆ ಮುಂದಿಟ್ಟುಕೊಂಡು ಯಾವುದೇ ಪ್ರಚಾರವನ್ನೂ ಬಯಸದೇ ಮದುವೆಗೆ ಗಣ್ಯರನ್ನು ಆಹ್ವಾನಿಸಿದ್ದು ಅಚ್ಚರಿ ಮೂಡಿಸಿದೆ. ಸದ್ಯ ಎರಡೂ ಮನೆಗಳಲ್ಲಿ ತಯಾರಿ ಜೋರಾಗಿ ನಡೆಯುತ್ತಿದೆ.

ಈಗಾಗಲೇ ಹೈದರಾಬಾದ್‌ನಲ್ಲಿರುವ ವಿಜಯ್ ದೇವರಕೊಂಡ ಮನೆ ಸಿಂಗಾರಗೊಂಡಿದೆ. ಬಣ್ಣ ದೀಪಲಾಂಕರಗಳಿಂದ ಕಂಗೊಳಿಸುತ್ತಿದೆ. ಈ ಮಧ್ಯೆ ಟಾಲಿವುಡ್‌ನಲ್ಲೊಂದು ಸದ್ದಿ ಹರಿದಾಡುತ್ತಿದೆ. ವಿಜಯ್ ದೇವರಕೊಂಡ ಮೂವರು ನಿರ್ದೇಶಕರಿಗೆ ವಿಶೇಷವಾಗಿ ಆಹ್ವಾನವನ್ನು ನೀಡಿದ್ದಾರೆ. ಅದ್ಯಾಕೆ ಅನ್ನೋದು ಕೂಡ ಚರ್ಚೆಯಾಗುತ್ತಿದೆ. ಹಾಗಿದ್ದರೆ, ಆ ಮೂವರು ನಿರ್ದೇಶಕರು ಯಾರು? ಕಾರಣವೇನು? ಅಂತ ನೋಡುವುದಾರೇ,
'ಕಲ್ಕಿ' ನಿರ್ದೇಶಕ ನಾಗ ಚೈತನ್ಯ
ಪ್ರಭಾಸ್ ನಟಿಸಿದ 'ಕಲ್ಕಿ 2898 AD' ಸಿನಿಮಾದ ನಿರ್ದೇಶಕ ನಾಗ ಚೈತನ್ಯಗೆ ವಿಜಯ್ ದೇವರಕೊಂಡ ವಿಶೇಷ ಆಹ್ವಾನ ನೀಡಿದ್ದಾರೆಂದು ಪುಕಾರು ಹಬ್ಬಿದೆ. ಕಾರಣ ಏನಂದ್ರೆ, ವಿಜಯ್ ದೇವರಕೊಂಡ ಹಾಗೂ ನಾಗ ಚೈತನ್ಯ ಇಬ್ಬರೂ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನ ಸಿನಿಮಾ ಬಗ್ಗೆ ಒಟ್ಟಿಗೆ ತರಬೇತಿಯನ್ನು ಪಡೆದಿದ್ದರು. ಈ ಕಾರಣಕ್ಕೆ ಇಬ್ಬರೂ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನವೇ ಸ್ನೇಹಿತರು. ಈ ಕಾರಣಕ್ಕೆ ನಾಗ ಚೈತನ್ಯಗೆ ವಿಶೇಷ ಆಹ್ವಾನ ನೀಡಿರುವ ನಿರ್ದೇಶಕರಲ್ಲಿ ಒಬ್ಬರು.

ತರುಣ್ ಭಾಸ್ಕರ್
ವಿಜಯ್ ದೇವರಕೊಂಡ ಸೋಲೋ ಹೀರೋ ಆಗಿ ನಟಿಸಿದ ಮೊದಲ ಸಿನಿಮಾ 'ಪೆಳ್ಳಿ ಚೂಪುಲು'. ಈ ಸಿನಿಮಾದ ನಿರ್ದೇಶಕ ತರುಣ್ ಭಾಸ್ಕರ್‌ಗೂ ವಿಶೇಷ ಆಹ್ವಾನ ನೀಡಲಾಗಿದೆ. ವಿಜಯ್ ದೇವರಕೊಂಡಗೆ ಹೀರೋ ಆಗಿ ಮೊದಲ ಸಕ್ಸಸ್ ಕೊಟ್ಟ ಸಿನಿಮಾ 'ಪೆಳ್ಳಿ ಚೂಪುಲು'. ಅಲ್ಲಿಂದ ಈ ಸಿನಿಮಾದ ನಿರ್ದೇಶಕರೊಂದಿಗೆ ವಿಜಯ್ ಉತ್ತಮ ಸಂಬಂಧವಿದೆ. ಹೀಗಾಗಿ ವಿಶೇಷ ಆಹ್ವಾನ ಹೋಗಿದೆ ಎನ್ನಲಾಗಿದೆ.
ಸಂದೀಪ್ ರೆಡ್ಡಿ ವಂಗಾ
ವಿಜಯ್ ದೇವರಕೊಂಡರನ್ನು ಸ್ಟಾರ್ ಮಾಡಿದ ಸಿನಿಮಾ 'ಅರ್ಜುನ್ ರೆಡ್ಡಿ'. ಈ ಸಿನಿಮಾದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾಗೂ ವಿಶೇಷ ಆಹ್ವಾನ ನೀಡಲಾಗಿದೆ. ವಿಜಯ್ ದೇವರಕೊಂಡ ಈ ಸಿನಿಮಾದ ಮೂಲಕ ಮಾಸ್ ಹೀರೋ ಆಗಿ ಹೊರ ಹೊಮ್ಮಿದ್ದರು. ಅಲ್ಲದೇ ಇಂದು ಟಾಲಿವುಡ್‌ನ ಸ್ಟಾರ್ ನಟರ ಲಿಸ್ಟ್‌ನಲ್ಲಿ ಗುರುತಿಸಿಕೊಂಡಿರುವುದಕ್ಕೂ ಸಂದೀಪ್ ರೆಡ್ಡಿ ವಂಗಾನೇ ಕಾರಣ.
200 ಮಂದಿಗೆ ಆಹ್ವಾನ
ಇನ್ನು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರೂ 200 ಮಂದಿಗೆ ಆಹ್ವಾನ ನೀಡಿದ್ದಾರೆ. ರಾಜಸ್ತಾನದ ಉದಯಪುರದಲ್ಲಿ ನಡೆಯುವ ಮದುವೆಗೆ ರಶ್ಮಿಕಾ ಮಂದಣ್ಣ ಮನೆಯಿಂದ 100 ಮಂದಿ ಹಾಗೂ ವಿಜಯ್ ದೇವರಕೊಂಡ ಮನೆಯಿಂದ 100 ಮಂದಿಗೆ ಆಹ್ವಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇಷ್ಟು ಜನರಿಗೆ ಮಾತ್ರ ಆಹ್ವಾನವಿದ್ದು, ಮೊಬೈಲ್ ಬಳಸುವುದು, ಫೋಟೊ ತೆಗೆಯುವುದನ್ನು ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.


Click it and Unblock the Notifications











