ಪ್ರಭಾಸ್‌ಗೂ ಮುನ್ನ ಶ್ರೀರಾಮನ ಅವತಾರದಲ್ಲಿ ಕಾಣಿಸಿಕೊಂಡ ತೆಲುಗು ಸೂಪರ್‌ಸ್ಟಾರ್‌ಗಳು ಇವರೇ

'ಆದಿಪುರುಷ್' ಸಿನಿಮಾದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಪ್ರಭಾಸ್ ಒಂದು ಮಾತು ಹೇಳಿದ್ದರು. "ಚಿರಂಜೀವಿ ಅವರು ನನಗೆ ಒಂದು ಮಾತು ಹೇಳಿದ್ದರು. ಶ್ರೀರಾಮನ ಪಾತ್ರ ಎಲ್ಲರಿಗೂ ಸಿಗುವುದಿಲ್ಲ. ಯಾರಿಗೆ ಸಿಕ್ಕಿದೆಯೋ ಅವರೇ ಅದೃಷ್ಟವಂತರು ಎಂದಿದ್ದರು" ಈ ಮಾತನ್ನು ಪ್ರಭಾಸ್ ನೆನೆಸಿಕೊಂಡಿದ್ದರು.

'ಆದಿಪುರುಷ್' ಸಿನಿಮಾ ಕೂಡ ತನ್ನ ಪಾಲಿಗೆ ವಿಶೇಷ ಅಂತ ಅದೇ ವೇದಿಕೆ ಮೇಲೆ ಹೇಳಿದ್ದರು. ಈ ಸಿನಿಮಾ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಿದ್ದರೂ, ಗಳಿಕೆಯಲ್ಲಿ ಹೆಚ್ಚೇನು ವ್ಯತ್ಯಾಸ ಕಂಡು ಬಂದಿಲ್ಲ. ಇದೇ ಸಂದರ್ಭದಲ್ಲಿ ಟಾಲಿವುಡ್‌ನಲ್ಲಿ ಪ್ರಭಾಸ್‌ಗೂ ಮುನ್ನ ಶ್ರೀರಾಮ ಅವತಾರದಲ್ಲಿ ಕಾಣಿಸಿಕೊಂಡಿದ್ದ ದಿಗ್ಗಜರನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಇಲ್ಲಿಯವರೆಗೆ ತೆಲುಗು ಚಿತ್ರರಂಗದಲ್ಲಿ ಶ್ರೀರಾಮನ ಅವತಾರದಲ್ಲಿ ಅನೇಕ ನಟರು ಕಾಣಿಸಿಕೊಂಡಿದ್ದಾರೆ. ಅವರು ಯಾರು? ಆ ಸಿನಿಮಾಗಳು ಯಾವುದು ಅನ್ನೋ ಮಾಹಿತಿ ಇಲ್ಲಿದೆ.

These are the Telugu actors who played Sriram before Prabhas in Adipurush

ಐದು ಸಿನಿಮಾಗಳಲ್ಲಿ ಎನ್‌ಟಿಆರ್ ಶ್ರೀರಾಮ

ತೆಲುಗು ಚಿತ್ರರಂಗದಲ್ಲಿ ಶ್ರೀರಾಮ ಎಂದಾಕ್ಷಣ ತೆಲುಗು ಮಂದಿಯ ಕಣ್ಮುಂದೆ ಬರೋದೇ ಸೀನಿಯರ್ ಎನ್‌ಟಿಆರ್. ತೆಲುಗು ಚಿತ್ರರಂಗದ ಈ ದಿಗ್ಗಜರ ಸುಮಾರು 5 ಸಿನಿಮಾಗಳಲ್ಲಿ ಶ್ರೀರಾಮನಾಗಿ ನಟಿಸಿದ್ದಾರೆ. 'ಸಂಪೂರ್ಣ ರಾಮಾಯಣ', 'ಲವಕುಶ' ಸಿನಿಮಾಗಳು ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿದವು. ಇದರೊಂದಿಗೆ 'ಶ್ರೀರಾಮಾಂಜನೇಯ ಯುದ್ಧಂ' ಸೂಪರ್ ಹಿಟ್ ಆಯ್ತು.

ಎನ್‌ಟಿಆರ್ ಶ್ರೀರಾಮ ಪಾತ್ರದಲ್ಲಿ ನಟಿಸಿದರೆ, ಥೇಟ್ ರಾಮನ ಪ್ರತಿರೂಪದಂತೆ ಕಾಣಿಸುತ್ತಿದ್ದರು ಅನ್ನೋದು ತೆಲುಗು ಮಂದಿಯ ಅಭಿಪ್ರಾಯ. ಅಷ್ಟೇ ಅದ್ಭುತವಾಗಿ ಶ್ರೀರಾಮನಾಗಿ ನಟಿಸಿ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿದ್ದಾರೆ.

These are the Telugu actors who played Sriram before Prabhas in Adipurush

ಶೋಭನ್ ಬಾಬು, ಸುಮನ್, ಎಎನ್‌ಆರ್

ಸೀನಿಯರ್ ಎನ್‌ಟಿಆರ್ ಬಳಿಕ ಟಾಲಿವುಡ್‌ನ ಮತ್ತೊಬ್ಬ ದಿಗ್ಗಜ ಶೋಭನ್ ಬಾಬು ಕೂಡ ಬಾಪು ನಿರ್ದೇಶಿಸಿದ 'ಸಂಪೂರ್ಣ ರಾಮಾಯಣಂ' ಸಿನಿಮಾದಲ್ಲಿ ಶ್ರೀರಾಮನಾಗಿ ನಟಿಸಿದ್ದಾರೆ. ಈ ಸಿನಿಮಾ ಟಾಲಿವುಡ್‌ನಲ್ಲಿ ದೊಡ್ಡ ಹಿಟ್ ಆಯ್ತು.

ಶೋಭನ್ ಬಳಿಕ ' ಶ್ರೀರಾಮದಾಸು' ಸಿನಿಮಾದಲ್ಲಿ ಹಿರಿಯ ನಟ ಸುಮನ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟಾಲಿವುಡ್‌ನ ಮತ್ತೊಬ್ಬ ಹಿರಿಯ ನಟ ಎಎನ್‌ಆರ್ 'ಶ್ರೀರಾಮ ಜನನಂ' ಸಿನಿಮಾದಲ್ಲಿ ರಾಮನ ಅವತಾರ ತಾಳಿದ್ದರು.

These are the Telugu actors who played Sriram before Prabhas in Adipurush

ಬಾಲಕೃಷ್ಣ , ಜೂನಿಯರ್ ಎನ್ಟಿಆರ್:

ಇವರೊಂದಿಗೆ 'ಶ್ರೀರಾಮರಾಜ್ಯ' ಸಿನಿಮಾದಲ್ಲಿ ರಾಮನ ಪಾತ್ರವನ್ನು ಲೆಜೆಂಡ್ ಬಾಲಕೃಷ್ಣ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ಬಾಲಯ್ಯಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಳಿಕ ನಾಗೇಶ್ವರ ರಾವ್, ಹರನಾಥ್, ಕಾಂತರಾವ್ ಕೂಡ ರಾಮನಾಗಿಯೂ ನಟಿಸಿದ್ದಾರೆ. ಶ್ರೀಕಾಂತ್ 'ದೇವುಳ್ಳು' ಸಿನಿಮಾದಲ್ಲಿ ರಾಮನಾಗಿ ಕಾಣಿಸಿಕೊಂಡಿದ್ದರು. ಹಾಗೇ ಜೂನಿಯರ್ ಎನ್‌ಟಿಆರ್ ಕೂಡ 2001ರಲ್ಲಿ ಬಾಲ ರಾಮಾಯಣದಲ್ಲಿ ಶ್ರೀರಾಮನಾಗಿ ನಟಿಸಿದ್ದರು. ಈಗ ಪ್ರಭಾಸ್ ಶ್ರೀ ರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
These are the Telugu actors who played Sriram before Prabhas in Adipurush. Who are those heros?, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X