2ನೇ ಮದುವೆಯಾಗ್ತಿರೋ ನಾಗ ಚೈತನ್ಯ ಬಳಿ ಇರುವ ಸಮಂತಾಳ ಏಕೈಕ ಫೋಟೊ ಯಾವುದು? ಆ ಫೋಟೊ ಇಟ್ಟುಕೊಂಡಿದ್ದೇಕೆ?
ಟಾಲಿವುಡ್ ಸ್ಟಾರ್ ನಟ ನಾಗಚೈತನ್ಯ ಎರಡನೇ ಮದುವೆ ಆಗಿದ್ದಾರೆ. ಮೊದಲನೇ ಪತ್ನಿ ಸಮಂತಾಗೆ ವಿಚ್ಛೇದನ ನೀಡಿದ ಬಳಿಕ ಶೋಭಿತಾ ಧುಲಿಪಾಲ ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರೂ ದೇಶ-ವಿದೇಶದಲ್ಲಿ ಸುತ್ತಾಡಿಕೊಂಡಿದ್ದರು. ಸಮಂತಾ ವಿಚ್ಛೇದನದ ಬಳಿಕ ಇಬ್ಬರ ಡೇಟಿಂಗ್ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದರು. ಈ ಸುದ್ದಿ ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ್ದರೂ, ಇಬ್ಬರೂ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ.
ನಾಗ ಚೈತನ್ಯ ಹೆಸರು ಶೋಭಿತಾ ಜೊತೆ ಯಾವಾಗ ತಳುಕು ಹಾಕಿಕೊಳ್ತೋ ಅಲ್ಲಿಂದ ಇಬ್ಬರ ಮದುವೆ ಬಗ್ಗೆ ಚರ್ಚೆ ಶುರುವಾಗಿತ್ತು. ಮದುವೆ ಬಗ್ಗೆನೂ ನಾಗ ಚೈತನ್ಯ ಹಾಗೂ ಶೋಭಿತಾ ತುಟಿ ಬಿಚ್ಚಿರಲಿಲ್ಲ. ನಿಶ್ಚಿತಾರ್ಥ ಮಾಡಿಕೊಂಡು ಫೋಟೊಗಳನ್ನು ಶೇರ್ ಮಾಡಿದಾಗಲೇ ಇಬ್ಬರೂ ರಿಲೇಷನ್‌ಶಿಫ್ ಮದುವೆವರೆಗೂ ಬಂದು ನಿಂತಿರೋದು ಖಾತ್ರಿಯಾಗಿತ್ತು.

ಇಂದು (ಡಿಸೆಂಬರ್ 4) ನಾಗಚೈತನ್ಯ ಹಾಗೂ ಶೋಭಿತಾ ಇಬ್ಬರೂ ಹಿರಿಯ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೇ ವೇಳೆ ನಾಗಚೈತನ್ಯ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಜಿ ಪತ್ನಿ ಸಮಂತಾ ಫೋಟೊವನ್ನು ಇಟ್ಟುಕೊಂಡಿರುವುದ ಹಲ್‌ಚಲ್ ಎಬ್ಬಿಸಿದೆ. ಸಮಂತಾ ಜೊತೆಗಿನ ಎಲ್ಲಾ ಫೋಟೊಗಳನ್ನು ಡಿಲೀಟ್ ಮಾಡಿ ಒಂದೇ ಒಂದು ಫೋಟೊವನ್ನು ಇಟ್ಟುಕೊಂಡಿದ್ದೇಕೆ? ಆ ಏಕೈಕ ಫೋಟೊ ಯಾವುದು? ತಿಳಿಯಲು ಮುಂದೆ ಓದಿ.
ಸಮಂತಾದಿಂದ ದೂರ ಆಗಿ ಹೊಸ ಜೀವನ ಆರಂಭಕ್ಕೆ ಮುಂದಾಗಿರುವ ನಾಗ ಚೈತನ್ಯನ ಇನ್‌ಸ್ಟಾಗ್ರಾಂ ಮೇಲೆ ಕಣ್ಣು ಇಟ್ಟಿದ್ದಾರೆ. ಅವರ ಇನ್‌ಸ್ಟಾಗ್ರಾಂ ಅನ್ನು ಜಾಲಾಡಿದ್ದಾರೆ. ಅಲ್ಲಿ ಇನ್ನೂ ಮಾಜಿ ಪತ್ನಿ ಸಮಂತಾ ಫೋಟೊವನ್ನು ಇಟ್ಟುಕೊಂಡಿದ್ದಾರೆ. ಆ ಫೋಟೊವನ್ನು ನೋಡಿ ಇಬ್ಬರ ಅಭಿಮಾನಿಗಳು ದ್ವಂದ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ನಾಗಚೈತನ್ಯ ಹಾಗೂ ಸಮಂತಾ ರೊಮ್ಯಾಂಟಿಕ್ ಮೂಡ್‌ನಲ್ಲಿ ಇರುವ ಫೋಟೊ. ಇದೇ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ. ಈ ಪೋಟೊ ಇಟ್ಟುಕೊಂಡಿದ್ದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆನೂ ವ್ಯಕ್ತವಾಗುತ್ತಿದೆ.
ಅಂದ್ಹಾಗೆ ನಾಗಚೈತನ್ಯ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಇರುವ ಸಮಂತಾಳ ಏಕೈಕ ಫೋಟೊ 'ಮಜಿಲಿ' ಸಿನಿಮಾದ್ದು. ಇದರಲ್ಲಿ ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾ ಪೋಸ್ಟರ್ ಅನ್ನು ಇನ್ನೂ ತಮ್ಮ ಖಾತೆಯಲ್ಲಿ ಇಟ್ಟುಕೊಂಡಿದ್ದಾರೆ. ಇಬ್ಬರೂ ರೊಮ್ಯಾಂಟಿಕ್ ಮೂಡ್‌ನಲ್ಲಿರುವ ಈ ಫೋಟೊವನ್ನು ಇಟ್ಟುಕೊಂಡಿದ್ದಕ್ಕೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಅಂದ್ಹಾಗೆ 'ಮಜಲಿ' ಸಿನಿಮಾದ ಫೋಟೊಗಳನ್ನು ಇಟ್ಟುಕೊಂಡಿದ್ದಕ್ಕೆ ಕಾರಣ ಬೇರೆ ಇನ್ನೇನೂ ಅಲ್ಲ. ಇಬ್ಬರ ಜೊತೆಯಾಗಿ ನಟಿಸಿದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಕ್ಸಸ್ ಕಂಡಿತ್ತು. ಈ ಸಿನಿಮಾ ಗೆದ್ದ ಬೆನ್ನಲ್ಲೇ ಅದರ ಯಶಸ್ಸಿನ ಸಂಕೇತವಾಗಿ ಈ ಫೋಟೊವನ್ನು ಹಂಚಿಕೊಂಡಿದ್ದರು. ಅದನ್ನು ಹಾಗೆಯೇ ಉಳಿಸಿಕೊಂಡಿದ್ದು, ಉಳಿದ ಎಲ್ಲಾ ಫೋಟೊಗಳನ್ನು ಅವರು ಡಿಲೀಟ್ ಮಾಡಿದ್ದಾರೆ. ಈ ಫೋಟೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.
ಕೆಲವು ನೆಟ್ಟಿಗರು ನಾಗ ಚೈತನ್ಯ ಮೆಚ್ಯೂರಿಟಿ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಇದು ವೃತ್ತಿಪರತೆಯನ್ನು ತೋರಿಸುತ್ತೆ. ಈ ಫೋಟೊ ಅವರ ಪ್ರೊಫೆಷನಲ್ ಮೆಮೋರಿ ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವು ಈ ಪೋಸ್ಟ್ ಅನ್ನು ಡಿಲೀಟ್ ಮಾಡಿ ಹೊಸ ಜೀವನ ನಡೆಸಬೇಕು ಎಂದಿದ್ದಾರೆ. ಮತ್ತೆ ಕೆಲವರು ತಂದೆಯ ನೆರಳಿನಿಂದ ಆಚೆ ಬಾ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಈ ಮದುವೆ ಬೇಡ. ಸಮಂತಾ ಕಡೆಯಿಂದಲೂ ಯೋಚನೆ ಮಾಡು ಅಂತಲೂ ಸಲಹೆಗಳನ್ನು ನೀಡುತ್ತಿದ್ದಾರೆ. ಎರಡನೇ ಮದುವೆ ವೇಳೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸಮಂತಾ ಪೋಟೋ ಇಟ್ಟುಕೊಂಡಿದ್ದು ಸದ್ಯಕ್ಕೆ ವೈರಲ್ ಆಗುತ್ತಿದೆ.


Click it and Unblock the Notifications











