Samantha: 16ರ ಹರೆಯದಲ್ಲಿ ಸಮಂತಾ ಇದ್ದಿದ್ದು ಹೀಗೆ.. ಈ ಫೋಟೊ ಹಿಂದಿನ ಕಥೆಯೇನು?
ಸೆಲೆಬ್ರೆಟಿಗಳು ಬಗ್ಗೆ ಜನರಿಗೆ ಕುತೂಹಲ ಜಾಸ್ತಿ. ಅವರು ಹಾಕೋ ಡ್ರೆಸ್, ಬಳಸೋ ಕಾರು, ಕಾಸ್ಮೆಟಿಕ್ಸ್ ಎಲ್ಲವುಗಳ ಬಗ್ಗೆ ತಿಳಿಕೊಳ್ಳಬೇಕು ಅನ್ನೋ ಆಸೆ. ಅದಕ್ಕೆ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುತ್ತಲೇ ಇರುತ್ತಾರೆ. ಇಂತಹವರಿಗೆ ಆಗಾಗ ಸ್ಟಾರ್‌ಗಳೂ ಸರ್ಪ್ರೈಸ್ ಕೊಡುತ್ತಾರೆ.
ನೀವೇನಾದರೂ ಸಮಂತಾ ಅಭಿಮಾನಿಯಾಗಿದ್ದರೆ ಈಗಾಗಲೇ ಅವರು ನಿಮಗೊಂದು ಸರ್ಪ್ರೈಸ್ ಕೊಟ್ಟಿರುತ್ತಾರೆ. ಹೌದು, ಸಮಂತಾ ಫ್ಯಾನ್ಸ್ ಹದಿ ಹರೆಯದಲ್ಲಿ ಹೇಗಿದ್ದರು? ಅವರ ಸ್ಟೈಲ್ ಹೇಗಿತ್ತು? ಸಿನಿಮಾಗೆ ಬಂದ್ಮೇಲೆ ಹೇಗೆ ಬದಲಾದರು? ಅನ್ನೋದನ್ನು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತೆ. ಅದಕ್ಕೆ ಸಮಂತಾ ಈಗಾಗಲೇ ಒಂದು ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ.

ಸಮಂತಾ ತನ್ನ ಹದಿಹರೆಯಲ್ಲಿದ್ದ ಹೇಗಿದ್ದರು ಅಂತ ಯಾರಾದರೂ ನೋಡಿದ್ದೀರಾ? ಆ ಕುತೂಹಲ ತಣಿಸುವುದಕ್ಕೆ ಅಂತಾನೇ ಈ ಸೌತ್ ಬ್ಯೂಟಿ ಫೋಟೊವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. 16ನೇ ವಯಸ್ಸಿನ ಅವರ ಅಪರೂಪದ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ.
16ನೇ ವಯಸ್ಸಿನಲ್ಲಿ ಹೀಗಿದ್ದರು ಸಮಂತಾ
ಸೌತ್ ಸುಂದರಿ ಸಮಂತಾಗೇನು ಕಮ್ಮಿ ಫಾಲೋವರ್ಸ್ ಇಲ್ಲ. ಇನ್‌ಸ್ಟಾಗ್ರಾಂನಲ್ಲಿ ಈ ನಟಿಗೆ ಸುಮಾರು 26.2 ಮಿಲಿಯನ್ ಮಂದಿ ಫಾಲೋ ಮಾಡುತ್ತಾರೆ. ಹೀಗಾಗಿ ತನ್ನ ಬದುಕಿನ ಕೆಲವು ಸಂಗತಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗಲೂ ಅಷ್ಟೇ ತನ್ನ 16ನೇ ವಯಸ್ಸಿನ ಫೋಟೊವನ್ನು ಅಭಿಮಾನಿಗಳ ಮುಂದೆ ಶೇರ್ ಮಾಡಿಕೊಂಡಿದ್ದಾರೆ.

ಸಮಂತಾ ಇತ್ತೀಚೆಗೆ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತನ್ನ 16ನೇ ವಯಸ್ಸಿನ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊವನ್ನು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಹದಿಹರೆಯದಲ್ಲಿದ್ದ ಸಮಂತಾಗೂ ಈಗಿನ ಸಮಂತಾಗೂ ತುಂಬಾನೇ ವ್ಯತ್ಯಾಸವಿದೆ.
ಮಾಡೆಲಿಂಗ್ ದಿನಗಳ ಫೋಟೊ
ಸಮಂತಾ 16ನೇ ವಯಸ್ಸಿಗೆ ಮಾಡೆಲಿಂಗ್ ಶುರು ಮಾಡಿದ್ದರು. ಆ ದಿನಗಳಲ್ಲಿ ತೆಗೆದ ಫೋಟೊವಿದು. ಬ್ಲ್ಯಾಕ್ ಅಂಡ್ ವೈಟ್ ಫೋಟೊ ಆಗಿರೋದ್ರಿಂದ ಅಂದಿಗೂ ಇಂದಿಗೂ ಹೋಲಿಕೆಯೇ ಕಾಣುತ್ತಿಲ್ಲ. ಅದಕ್ಕೆ ಅಭಿಮಾನಿಗಳು ಈ ಪೋಟೊ ನೋಡಿ ಹೋಲಿಕೆಯೇ ಇಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವು ನಿಜವಾಗಿಯೂ ಮುದ್ದಾಗಿದ್ದೀರಾ ಎಂದು ಹೇಳಿದ್ದಾರೆ.
ಸಿನಿಮಾಗೆ ಎಂಟ್ರಿ ಕೊಡುವುದಕ್ಕೂ ಮುನ್ನವೇ ಸಮಂತಾ ಮಾಡರ್ನ್ ಡ್ರೆಸ್‌ಗಳನ್ನು ಧರಿಸುತ್ತಿದ್ದರು. ಫ್ಲೋರಲ್ ಡ್ರೆಸ್‌ನಲ್ಲಿ ಸ್ಯಾಮ್ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದರು. ಕಾಸ್ಟ್ಯೂಮ್ ಅಷ್ಟೇ ಅಲ್ಲ, ಲುಕ್ ಕೂಡ ಮಾಡರ್ನ್ ಆಗಿದೆ. ಸಮಂತಾ 16ರ ಹರೆಯದ ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಾಡೆಲಿಂಗ್‌ನಿಂದ ಸಿನಿಮಾಗೆ..
ಆರಂಭದಲ್ಲಿ ಮಾಡೆಲಿಂಗ್ ಮಾಡಿಕೊಂಡಿದ್ದ ಸಮಂತಾ ಬಳಿಕ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಮಾಜಿ ಪತಿ ನಾಗಚೈತನ್ಯ ಅಭಿನಯದ 'ಎಂ ಮಾಯ ಚೇಸಾವೇ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಮೊದಲ ಸಿನಿಮಾದಲ್ಲಿ ಯಶಸ್ಸು ಕಂಡ ನಟಿ ಈಕೆ. ವೃತ್ತಿ ಜೀವನದಲ್ಲಿ ಸಕ್ಸಸ್ ಕಂಡಿದ್ದರೂ, ವೈಯಕ್ತಿಕ ಬದುಕಿನಲ್ಲಿ ನೋವುಂಡಿದ್ದಾರೆ.
ಇತ್ತೀಚೆಗೆ 'ಶಾಕುಂತಲಂ' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಸದ್ಯ ವರುಣ್ ಧವನ್ ಜೊತೆ ಸಮಂತಾ 'ಸಿಟಾಡೆಲ್' ವೆಬ್ ಸೀರಿಸ್ ಪ್ರಚಾರ ಮಾಡುತ್ತಿದ್ದಾರೆ. ಮತ್ತೊಂದು ಕಡೆ ವಿಜಯ್ ದೇವರಕೊಂಡ ಜೊತೆ ನಟಿಸುತ್ತಿರುವ 'ಖುಷಿ'ಯ ಮತ್ತೊಂದು ಹಂತದ ಚಿತ್ರೀಕರಣ ನಡೆಯಬೇಕಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಮ್ ಹೊರಬಂದಿದ್ದು, ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











