"ಮೆಗಾ ಕುಟುಂಬದಲ್ಲಿ ಹುಲಿ-ಸಿಂಹಗಳಿವೆ.. ನರಿಗಳಿಗೆ ಪ್ರವೇಶವಿಲ್ಲ"; ಅಲ್ಲು ಅರ್ಜುನ್ ವಿರುದ್ಧ ಮೆಗಾ ಫ್ಯಾನ್ಸ್ ಕಿಡಿ?

ಕಳೆದ ಕೆಲವು ತಿಂಗಳಿನಿಂದ ಟಾಲಿವುಡ್‌ನ ಮೆಗಾ ಸ್ಟಾರ್ ಚಿರಂಜೀವಿ ಫ್ಯಾಮಿಲಿ ಹಾಗೂ ಅಲ್ಲು ಅರ್ಜುನ್ ಕುಟುಂಬದ ಮಧ್ಯೆ ಶೀತಲ ಸಮರ ನಡೆಯುತ್ತಿದೆ. ಇಂತಹದ್ದೊಂದು ಸುದ್ದಿ ಹಲವು ದಿನಗಳಿಂದ ಓಡಾಡುತ್ತಲೇ ಇದೆ. ಈ ಮಧ್ಯೆ ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಡುತ್ತಿದ್ದಾರೆ.

ಇಂದು (ನವೆಂಬರ್ 9) ರಾಮ್ ಚರಣ್ ನಟನೆಯ 'ಗೇಮ್ ಚೇಂಜರ್' ರಿಲೀಸ್‌ಗೆ ರೆಡಿಯಾಗಿದೆ. ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಗೇಮ್ ಚೇಂಜರ್' ಟೀಸರ್ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ರಾಮ್ ಚರಣ್ ಹಾಗೂ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳು ಸೇರಿದ್ದರು. ಈ ವೇಳೆ ಫ್ಯಾನ್ಸ್ ಕೈಯಲ್ಲಿ ಫ್ಲೆಕ್ಸ್ ಹಿಡಿದು ರಾಮ್‌ ಚರಣ್‌ಗೆ ಜೈಕಾರ ಹಾಕಿದ್ದರು.

Tigers Lions in the Mega family foxes are not allowed fans show flexs against Allu Arjun

ಈ ವೇಳೆ ಹೈದರಾಬಾದ್‌ನ ಸುದರ್ಶನ್ ಚಿತ್ರಮಂದಿರದಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಮೆಗಾ ಕುಟುಂಬದ ಅಭಿಮಾನಿಗಳ ಕೈಯಲ್ಲಿ ವಿವಾದಾತ್ಮಕ ಫ್ಲೆಕ್ಸ್ ಅನ್ನು ನೋಡಿ ಸಿನಿಮಾ ತಂಡ ಕೂಡ ಕಂಗಾಲಾಗಿತ್ತು. ಯಾಕಂದ್ರೆ ಆ ಫ್ಲೆಕ್ಸ್‌ನಲ್ಲಿ ಬರೆದ ಸಾಲುಗಳು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಹೇಳಿದಂತೆ ಇತ್ತು. ಈ ಕಾರಣಕ್ಕೆ ಒಂದಷ್ಟು ದಿನ ಉದ್ವಿಘ್ನತೆ ಏರ್ಪಟ್ಟಿತ್ತು.

ಅಲ್ಲು ಅರ್ಜುನ್ ವೇದಿಕೆ ರಾಮ್ ಚರಣ್ ಬಗ್ಗೆ ಮಾತಾಡಿದ್ದಕ್ಕೆ ಇಬ್ಬರ ಫ್ಯಾನ್ಸ್ ಮಧ್ಯೆ ಚಿಕ್ಕದಾಗಿ ಏನೋ ಹಬ್ಬಿತ್ತು. ಅಲ್ಲಿಂದ ಸ್ವಲ್ಪವೇ ಬೆಳೆದು ಬೆಳೆದು ಈಗ ದೊಡ್ಡ ಹೆಮ್ಮರವಾಗಿ ಬೆಳೆದಿದೆ. ಇತ್ತೀಚೆಗೆ ನಡೆದ ಆಂಧ್ರದ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಎದುರಾಳಿಗೆ ಸ್ಪರ್ಧಿಗೆ ಅಲ್ಲು ಅರ್ಜುನ್ ಕ್ಯಾಂಪೇನ್ ಮಾಡಿದ್ದರು. ಇದಾದ ಮೇಲಂತೂ ಅಲ್ಲು ಅರ್ಜುನ್ ವಿರುದ್ಧ ಮೆಗಾ ಕುಟುಂಬ ಫ್ಯಾನ್ಸ್ ಆಕ್ರೋಶ ಹೊರಗೆ ಹಾಕಿದ್ದರು.

ಪವನ್ ಕಲ್ಯಾಣ್ ಆಂಧ್ರದ ಉಪ ಮುಖ್ಯಮಂತ್ರಿ ಆದ ಬಳಿಕ ಇದಕ್ಕೆ ಕರ್ನಾಟಕದಲ್ಲಿ ತಿರುಗೇಟು ಕೊಟ್ಟಿದ್ದರು. ಡಾ. ರಾಜ್‌ಕುಮಾರ್ ನಟಿಸಿದ್ದ 'ಗಂಧದ ಗುಡಿ' ಸಿನಿಮಾವನ್ನು ಉದಾಹರಣೆಯಾಗಿಟ್ಟುಕೊಂಡು ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾಗೆ ಟಾಂಗ್ ಕೊಟ್ಟಿದ್ದರು. ಅಲ್ಲಿಗೆ ಮೆಗಾ ಫ್ಯಾಮಿಲಿ ಹಾಗೂ ಅಲ್ಲು ಅರ್ಜುನ್ ಕುಟುಂಬದ ನಡುವೆ ಎಲ್ಲವೂ ಸರಿಯಲ್ಲ ಅನ್ನೋದು ಗೊತ್ತಾಗಿ ಹೋಗಿತ್ತು.

Tigers Lions in the Mega family foxes are not allowed fans show flexs against Allu Arjun

ಈ ಘಟನೆ ನಡೆದ ಬೆನ್ನಲ್ಲೇ ಕೆಲವು ದಿನಗಳ ಹಿಂದಷ್ಟೇ ಅಲ್ಲು ಅರ್ಜುನ್ ಅಭಿಮಾನಿಗಳು ಫ್ಲೆಕ್ಸ್ ತೋರಿಸಿದ್ದರು. ಅದರಲ್ಲಿ ಮೆಗಾ ಕುಟುಂಬದ ಹೀರೋ ಹಾಗೂ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಅವರನ್ನು ಟಾರ್ಗೆಟ್ ಮಾಡಲಾಗಿತ್ತು. " ಏನೂ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ ಬ್ರದರ್" ಎನ್ನುವ ಫ್ಲೆಕ್ಸ್ ಅಂತೂ ಮೆಗಾ ಫ್ಯಾಮಿಲಿ ಫ್ಯಾನ್ಸ್ ನಿದ್ದೆಯನ್ನು ಕೆಡಿಸಿತ್ತು. ಈಗ ಅದಕ್ಕೆ ರಾಮ್‌ ಚರಣ್ ಅಭಿಮಾನಿಗಳು ಫ್ಲೆಕ್ಸ್ ಹಿಡಿದು ಸೇಡು ತೀರಿಸಿಕೊಂಡಿದ್ದಾರೆ.

ಮೆಗಾ ಫ್ಯಾಮಿಲಿ ಫ್ಯಾನ್ಸ್ ಹಿಡಿದುಕೊಂಡಿದ್ದ ಫ್ಲೆಕ್ಸ್‌ನಲ್ಲಿ "ಮೆಗಾ ಕುಟುಂಬದಲ್ಲಿ ಹುಲಿ-ಸಿಂಹಗಳಿವೆ.. ನರಿಗಳಿಗೆ ಪ್ರವೇಶವಿಲ್ಲ" ಎಂದು ಬರೆಯಲಾಗಿತ್ತು. ಇನ್ನೊಂದು ಫ್ಲೆಕ್ಸ್‌ನಲ್ಲಿ ಅದರಲ್ಲಿ "ಅ**ಲ್ಲು ಕೂಡ ಏನೂ ಮಾಡಲು ಆಗುವುದಿಲ್ಲ ಬ್ರದರ್" ಎಂದು ಬರೆದು ಹಿಡಿದುಕೊಂಡಿದ್ದರು. ಇದು ಥಿಯೇಟರ್‌ ಮುಂದೆ ಬಿಗುವಿನ ವಾತಾವಾರಣ ಸೃಷ್ಟಿ ಮಾಡಿದ್ದರು. ಈ ಮೂಲಕ ಮೆಗಾ ಫ್ಯಾಮಿಲಿ ಹಾಗೂ ಅಲ್ಲು ಕುಟುಂಬದ ಮಧ್ಯೆ ಕಿತ್ತಾಟವಿರುವುದು ಕನ್ಫರ್ಮ್ ಎನ್ನಲಾಗಿದೆ.

More from Filmibeat

English summary
Tigers and Lions in the Mega family foxes are not allowed maga star fans show flexs against Allu Arjun;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X