ತಿರುಪತಿ ಲಡ್ಡು ವಿವಾದ; ತಮಿಳು ನಟ ಕಾರ್ತಿಗೆ "ಹೇಳಿಕೆ ಕೊಡುವುದಕ್ಕೂ ಮುನ್ನ ಎಚ್ಚರ" ಎಂದ ಪವನ್ ಕಲ್ಯಾಣ್.. !
ತಿರುಪತಿಯ ಲಡ್ಡು ವಿವಾದ ದೇಶಾದ್ಯಂತ ದೊಡ್ಡ ಸಂಚಲವನ್ನೇ ಸೃಷ್ಟಿಸಿದೆ. ಕಳೆದ ಕೆಲವು ದಿನಗಳಿಂದ ಈ ವಿವಾದದ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದೆ. ಕೆಲವರು ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಈ ಹಿಂದಿನ ಜಗನ್ ಸರ್ಕಾರದ ಆಡಳಿತಾವಧಿಯಲ್ಲಿ ಕಲಬೆರಕೆ ಮಾಡಿದೆ ಲಡ್ಡುಗಳನ್ನು ಭಕ್ತರಿಗೆ ನೀಡಲಾಗುತ್ತಿತ್ತು ಎನ್ನಲಾಗಿದೆ.
ಈ ಬಗ್ಗೆ ವರದಿ ಬಂದಲ್ಲಿಂದ ಆಂಧ್ರ ಪ್ರದೇಶ ಸರ್ಕಾರ ಲಡ್ಡು ವಿವಾದವನ್ನು ಗಂಭೀರವಾಗಿ ಪರಿಗಣಿಸಿದೆ. ಇದೇ ಬೆನ್ನಲ್ಲೇ ಇತ್ತೀಚೆಗೆ ನಡೆದ ಸಿನಿಮಾ ಸಮಾರಂಭವೊಂದರಲ್ಲಿ ತಮಿಳಿನ ಸ್ಟಾರ್ ನಟ ಕಾರ್ತಿ ಲಡ್ಡು ವಿವಾದದ ಬಗ್ಗೆ ಹೇಳಿಕೆ ಕೊಟ್ಟಿದ್ದರು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ತಮಿಳು ನಟ ಕಾರ್ತಿಗೆ ತಿರುಗೇಟು ಕೊಟ್ಟಿದ್ದಾರೆ.

ಜಗನ್ ನೇತೃತ್ವದ ಸರ್ಕಾರದ ವೇಳೆ ತಿರುಪತಿಯಲ್ಲಿ ಪ್ರಾಣಿಗಳ ಕೊಬ್ಬಿನಿಂದ ಬಳಸಿದ ಎಣ್ಣೆಯನ್ನು ಬಳಸಲಾಗಿದೆ ಎಂಬ ಸುದ್ದ ಹಲ್‌ಚಲ್ ಎಬ್ಬಿಸಿದೆ. ಈ ಸಂಬಂಧ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸರ್ಕಾರದ ಪರವಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಪರವಾಗಿ ವಿಜಯವಾಡದ ಇಂದ್ರಕೀಲಾದ್ರಿ ದೇವಸ್ಥಾನದ ಶುದ್ಧೀಕರಣ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ತಮಿಳು ನಟ ಕಾರ್ತಿ ವಿರುದ್ಧ ಗರಂ ಆಗಿದ್ದರು.
ತಮಿಳು ನಟ ಕಾರ್ತಿ ನಟನೆಯ 'ಸತ್ಯಂ ಸುಂದರಂ' ಸಿನಿಮಾ ಬಿಡುಗಡೆಯಾಗುತ್ತಿದೆ. ಸೆಪ್ಟೆಂಬರ್ 28ರಂದು ರಿಲೀಸ್ ಆಗುತ್ತಿದ್ದರಿಂದ ಕಾರ್ತಿ ಹೈದರಾಬಾದ್‌ನಲ್ಲಿ ಪ್ರಚಾರ ಮಾಡಿದ್ದರು. ಈ ಸಂದರ್ಭದಲ್ಲಿ ನಿರೂಪಕಿ ಕಾರ್ತಿಗೆ "ಲಡ್ಡು ಬೇಕಾ?" ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಕಾರ್ತಿ " ಲಡ್ಡು ಬಗ್ಗೆ ಈಗ ಮಾತಾಡುವುದು ಬೇಡ. ಇದೊಂದು ಸೂಕ್ಷ್ಮ ವಿಷಯ." ಎಂದು ಹೇಳಿದ್ದರು. ಇದು ಅಲ್ಲಿ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿತ್ತು.
ಲಡ್ಡು ಬಗ್ಗೆ ಕಾರ್ತಿ ಕಾಮೆಂಟ್ ಹೊರಬೀಳುತ್ತಿದ್ದಂತೆ ಪವನ್ ಕಲ್ಯಾಣ್ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ. "ನಿನ್ನೆ ಸಿನಿಮಾ ಸಮಾರಂಭದಲ್ಲಿ ಲಡ್ಡು ಸೂಕ್ಷ್ಮ ವಿಷಯವೆಂದು ತಮಾಷೆ ಮಾಡಿದ್ದಾರೆ. ಮತ್ತೆ ಹೀಗೆ ಹೇಳಬಾರದು. ಒಬ್ಬ ಸಿನಿಮಾ ಪ್ರೇಕ್ಷಕರನಾಗಿ ಕಲಾವಿದರ ಬಗ್ಗೆ ಗೌರವವಿದೆ. ಸಂಪ್ರದಾಯವನನ್ನು ಗೌರವಿಸಬೇಕು. ಏನಾದರೂ ಹೇಳುವುದಕ್ಕೂ ಮುನ್ನ ನೂರು ಬಾರಿ ಯೋಚಿಸಿ ಆಮೇಲೆ ಮಾತಾಡಬೇಕು" ಎಂದು ಪವನ್ ಕಲ್ಯಾಣ್ ಗುಡುಗಿದ್ದರು.
ಪವನ್ ಕಲ್ಯಾಣ್ ಗರಂ ಆಗುತ್ತಿದ್ದಂತೆ ಕಾರ್ತಿ ಕೂಡ ಪ್ರತಿಕ್ರಿಯೆ ನೀಡಿ ಕ್ಷಮೆ ಕೇಳಿದ್ದಾರೆ. " ಪ್ರೀತಿಯ ಪವನ್ ಕಲ್ಯಾಣ್ ಅವರೇ ನಿಮ್ಮ ಬಗ್ಗೆ ನನಗೆ ಅತೀವ ಗೌರವವಿದೆ. ಉದ್ದೇಶಪೂರ್ವಕವಲ್ಲದೆ ನಡೆದ ಘಟನೆಗಳಿಗಾಗಿ ಕ್ಷಮೆಯನ್ನು ಕೇಳುತ್ತೇನೆ. ನಾನೂ ಒಬ್ಬ ವೆಂಕಟೇಶ್ವರನ ಭಕ್ತನಾಗಿ ಸಂಪ್ರದಾಯವನ್ನು ಹಿಡಿದಿಟ್ಟುಕೊಳ್ಳುತ್ತೇನೆ" ಎಂದು ತನ್ನ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ಬೆನ್ನಲ್ಲೇ ಅಭಿಮಾನಿಗಳು ಕಾರ್ತಿ ಪರ ನಿಂತಿದ್ದಾರೆ. ನಿಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಇದರಲ್ಲಿ ನಿಮ್ಮದೇನು ತಪ್ಪಿಲ್ಲ. ಇದು ಆಂಕರ್‌ನಿಂದ ಆದ ತಪ್ಪು ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಾರ್ತಿಗೆ ಬೆಂಬಲ ಸೂಚಿಸುತ್ತಿದ್ದಾರೆ.
ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸೇರಿದಂತೆ ಸಮ್ಮಿಶ್ರ ಸರ್ಕಾರ ಲಡ್ಡು ವಿವಾದವನ್ನು ಗಂಭೀರವಾಗಿ ಪರಿಗಣಿಸಿದೆ. ತಿರುಪತಿ ಲಡ್ಡು ಕಲಬೆರಕೆ ಆಗಿದ್ದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಸನಾತನ ಧರ್ಮವನ್ನು ರಕ್ಷಣೆ ಮಾಡಬೇಕು ಎಂದು ಇಂದ್ರಕೀಲಾದ್ರಿ ದೇವಸ್ತಾನವನ್ನು ಶುದ್ಧೀಕರಣ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನು ಪವನ್ ಕಲ್ಯಾಣ್ ನೀಡಿದ್ದರು. ಲಡ್ಡು ಬಗ್ಗೆ ಮಾತಾಡಿದವರೆ ವಿವಾದ ಅನ್ನು ಮಟ್ಟಿಗೆ ಹೋಗಿದ್ದು, ಇದು ಮುಂದಿನ ದಿನಗಳಲ್ಲಿ ಇನ್ನೂ ಯಾವ ರೂಪ ಪಡೆದುಕೊಳ್ಳುತ್ತದೆಯೋ..? ಸದ್ಯ ಆಂಧ್ರ ಪ್ರದೇಶದಲ್ಲಿ ಲಡ್ಡು ವಿವಾದ ಬಿಸಿ ಬಿಸಿಯಾಗಿದೆ.


Click it and Unblock the Notifications











