ಅಮೆರಿಕ ಮೂಲದ ಟೆಕ್ಕಿ ಜೊತೆ ನಟ ಶರ್ವಾನಂದ್ ನಿಶ್ಚಿತಾರ್ಥ ಮುರಿದು ಬಿತ್ತಾ? ಇಲ್ಲಿದೆ ಅಸಲಿ ಸತ್ಯ
ಟಾಲಿವುಡ್‌ನ ಯುವನಟ ಶರ್ವಾನಂದ್ ತಮ್ಮ ಸಿನಿಮಾಗಳಿಂದ ತೆಲುಗು ಜನರ ಮನಗೆದ್ದಿದ್ದಾರೆ. ಇದೇ ನಟ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅಮೆರಿಕ ಮೂಲದ ಟೆಕ್ಕಿ ರಕ್ಷಿತಾ ರೆಡ್ಡಿ ಜೊತೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು.
ಶರ್ವಾನಂದ್ ಹಾಗೂ ರಕ್ಷಿತಾ ರೆಡ್ಡಿ ನಿಶ್ಚಿತಾರ್ಥಕ್ಕೆ ಟಾಲಿವುಡ್ ಸೆಲೆಬ್ರೆಟಿಗಳು ಆಗಮಿಸಿದ್ದರು. ರಾಮ್ ಚರಣ್ ಹಾಗೂ ಪತ್ನಿ ಉಪಾಸನಾ ಕೊನೆಡೆಲಾ, ಅದಿತಿ ರಾವ್ ಹೈದರಿ, ಅಖಿಲ್ ಅಕ್ಕಿನೇನಿ ಸೇರಿದಂತೆ ಟಾಲಿವುಡ್ ತಾರೆಯರು ಬಂದು ಶುಭ ಕೋರಿದ್ದರು.

ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಆದರೆ, ಕಳೆದೆರಡು ದಿನಗಳಿಂದ ಶರ್ವಾನಂದ್ ಹಾಗೂ ರಕ್ಷಿತಾ ರೆಡ್ಡಿ ನಿಶ್ಚಿತಾರ್ಥ ಮುಡಿದು ಬಿದ್ದಿದೆ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ಕೊನೆಗೂ ಶರ್ವಾನಂದ್ ತಂಡದ ಕಡೆಯಿಂದ ಅಧಿಕೃತಿ ಮಾಹಿತಿ ಹೊರಬಿದ್ದಿದೆ. ಅಷ್ಟಕ್ಕೂ ಶರ್ವಾನಂದ್ ಟೀಮ್ ನಿಶ್ಚಿತಾರ್ಥ ಮುರಿದುಬಿದ್ದ ಸುದ್ದಿ ಬಗ್ಗೆ ಹೇಳಿದ್ದೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಶರ್ವಾನಂದ್, ರಕ್ಷಿತಾ ರೆಡ್ಡಿ ನಿಶ್ಚಿತಾರ್ಥ ಮುರಿದು ಬಿತ್ತಾ?
ಶರ್ವಾನಂದ್ ಹಾಗೂ ರಕ್ಷಿತಾ ರೆಡ್ಡಿ ನಿಶ್ಚಿತಾರ್ಥ ಆಗಿ ಸುಮಾರು 5 ತಿಂಗಳುಗಳೇ ಆಗಿವೆ. ಇಬ್ಬರೂ ಎಂಗೇಜ್ ಆಗಿದ್ದಷ್ಟೇ ಬಂತು. ಆದರೆ ಮದುವೆ ಯಾವಾಗ? ಅನ್ನೋದನ್ನು ಮಾತ್ರ ಇನ್ನೂ ರಿವೀಲ್ ಮಾಡಿಲ್ಲ. ಈ ಕಾರಣಕ್ಕೆ ಇಬ್ಬರ ನಿಶ್ಚಿತಾರ್ಥ ಮುರಿದು ಬಿದ್ದಿದೆ ಅನ್ನೋ ಹರಿದಾಡುತ್ತಿದೆ ಎನ್ನಲಾಗಿದೆ. ಈ ಮಟ್ಟಿಗೆ ಸುದ್ದಿ ಹಬ್ಬಿದ್ದರೂ ಶರ್ವಾನಂದ್ ಮಾತ್ರ ಪ್ರತಿಕ್ರಿಯೆ ನೀಡಿರಲಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಈ ಸುದ್ದಿ ಕೇಳಿ ಶರ್ವಾನಂದ್ ಅಭಿಮಾನಿಗಳು ಶಾಕ್ ಆಗಿದ್ದರು. ತಮ್ಮ ನೆಚ್ಚಿನ ನಟನ ಮದುವೆ ಮುರಿದು ಬಿದ್ದಿದೆ ಅನ್ನೋ ಸುದ್ದಿ ತೀವ್ರ ನಿರಾಸೆಯನ್ನು ಉಂಟು ಮಾಡಿತ್ತು. ಆದರೆ, ಸ್ವತ: ಶರ್ವಾನಂದ್ ಈ ಬಗ್ಗೆ ಪ್ರತಿಕ್ರಿಯೆ ನೀಡುವವರೆಗೂ ನಂಬದೇ ಇರಲು ನಿರ್ಧರಿಸಿದ್ದರು. ಕೊನೆಗೂ ಶರ್ವಾನಂದ್ ಟೀಮ್ ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

ಶರ್ವಾನಂದ್ ಟೀಮ್ ಹೇಳಿದ್ದೇನು?
ನಿಶ್ಚಿತಾರ್ಥ ಮುರಿದು ಬಿದ್ದಿದೆ ಎನ್ನುವ ಸುದ್ದಿಗೆ ಶರ್ವಾನಂದ್ ಟೀಮ್ ಪ್ರತಿಕ್ರಿಯೆ ನೀಡಿದೆ. " ಶರ್ವಾನಂದ್ ಹಾಗೂ ರಕ್ಷಿತಾ ರೆಡ್ಡಿ ಮದುವೆ ಮುರಿದು ಬಿದ್ದಿದೆ ಅನ್ನೋದು ಸುಳ್ಳು ಸುದ್ದಿ. ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
"ಶರ್ವಾನಂದ್ ತಮ್ಮ 35ನೇ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀರಾಮ್ ಆದಿತ್ಯ ನಿರ್ದೇಶನ ಮಾಡುತ್ತಿರುವ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಈಗ ತಾನೇ 40 ದಿನಗಳ ಕಾಲ ಲಂಡನ್‌ನಲ್ಲಿ ಶೂಟಿಂಗ್ ಮುಗಿಸಿ ಭಾರತಕ್ಕೆ ಮರಳಿದ್ದಾರೆ. ಮದುವೆಗೂ ಮುನ್ನವೇ ಈ ಸಿನಿಮಾವನ್ನು ಮುಗಿಸಲು ನಿರ್ಧರಿಸಿದ್ದಾರೆ. ಆ ಬಳಿಕ ಮದುವೆ ಬಗ್ಗೆ ಫೋಕಸ್ ಮಾಡುತ್ತಾರೆ" ಎಂದು ಶರ್ವಾನಂದ್ ಟೀಮ್ ಅನೌನ್ಸ್ ಮಾಡಿದೆ.
ಮದುವೆ ಯಾವಾಗ?
ಶರ್ವಾನಂದ್ ಹಾಗೂ ರಕ್ಷಿತಾ ರೆಡ್ಡಿ ಇಬ್ಬರೂ ಖುಷಿಯಾಗಿದ್ದಾರೆ. ಎರಡೂ ಕುಟುಂಬವೂ ಮದುವೆ ಡೇಟ್ ಅನ್ನು ಶೀಘ್ರದಲ್ಲಿಯೇ ಅನೌನ್ಸ್ ಮಾಡಲಾಗುತ್ತೆ" ಎಂದು ಶರ್ವಾನಂದ್ ಟೀಮ್ ಹೇಳಿದೆ. ಮೂಲಗಳ ಪ್ರಕಾರ ಶರ್ವಾನಂದ್ ಹಾಗೂ ರಕ್ಷಿತಾ ರೆಡ್ಡಿ ಮದುವೆ ಜೂನ್ 3ರಂದು ನಡೆಯಲಿದೆ ಎಂದು ವರದಿಯಾಗುತ್ತಿದೆ.
ಶರ್ವಾನಂದ್ ತಮ್ಮ 35ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇವರಿಗೆ ನಾಯಕಿಯಾಗಿ ಕೃತಿ ಶೆಟ್ಟಿ ನಟಿಸುತ್ತಿದ್ದಾರೆ. ಸತತ ಸೋಲುಗಳನ್ನು ಕಂಡಿರೋ ನಟನಿಗೆ ಈ ಸಿನಿಮಾ ಗೆಲ್ಲಲೇ ಬೇಕಿದೆ. ಹೀಗಾಗಿ ಮದುವೆಗೂ ಮುನ್ನ ಸಿನಿಮಾ ರಿಲೀಸ್ ಮಾಡಲು ನಿರ್ಧರಿಸಿದ್ದಾರೆ. ಈ ಸಿನಿಮಾ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.


Click it and Unblock the Notifications











