'ಶಾಕುಂತಲಂ' ರಿಲೀಸ್ ಪೋಸ್ಟ್‌ಪೋನ್: ಸಮಂತಾ ಬಗ್ಗೆ ಫ್ಯಾನ್ಸ್ ಆತಂಕ!
ಸಮಂತಾ ಟಾಲಿವುಡ್‌ನ ಸ್ಟಾರ್ ಹೀರೊಯಿನ್. ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಸಮಂತಾ ಬ್ಯುಸಿಯಾಗಿದ್ದಾರೆ. ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿರೋ ಸಮಂತಾ ನಟಿಸಿದ ಎರಡು ಸಿನಿಮಾಗಳು ಸದ್ದು ಮಾಡುತ್ತಿವೆ.
ಸಮಂತಾಳ 'ಯಶೋದಾ' ಸಿನಿಮಾದ ಟೀಸರ್ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಇನ್ನೊಂದು ಕಡೆ ಪ್ಯಾನ್ ಇಂಡಿಯಾ ಸಿನಿಮಾ 'ಶಾಕುಂತಲ' ರಿಲೀಸ್‌ಗೆ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಈ ಸಿನಮಾ ನವೆಂಬರ್ 4ಕ್ಕೆ ರಿಲೀಸ್ ಆಗುತ್ತೆ ಎಂದು ಅನೌನ್ಸ್ ಮಾಡಲಾಗಿತ್ತು. ಆದ್ರೀಗ ಆ ಡೇಟ್‌ಗೆ ಬಿಡುಗಡೆಯಾಗುತ್ತಿಲ್ಲ ಅನ್ನೋ ಮಾತು ಕೇಳಿಬರುತ್ತಿದೆ.
'ಯಶೋದಾ' ಹಾಗೂ 'ಶಾಕುಂತಲಂ' ಎರಡೂ ಸಿನಿಮಾಗಳೂ ಸಮಂತಾ ವಿಚ್ಛೇದನದ ಬಳಿಕ ರಿಲೀಸ್‌ಗೆ ರೆಡಿಯಾಗಿವೆ. ಆದರೆ, ಇದೇ ಮೊದಲ ಬಾರಿಗೆ ಪೌರಾಣಿಕ ಸಿನಿಮಾದಲ್ಲಿ ನಟಿಸಿರೋ 'ಶಾಕುಂತಲಂ' ಮೇಲೆ ನಿರೀಕ್ಷೆ ಹೆಚ್ಚಿದೆ. ಇನ್ನೇನು ರಿಲೀಸ್ ಆಗೇಬಿಡುತ್ತೆ ಅಂದ್ಕೊಂಡವರಿಗೆ ನಿರಾಸೆಯಾಗಿದೆ.

'ಶಾಕುಂತಲಂ' ನವೆಂಬರ್ ರಿಲೀಸ್ ಇಲ್ಲ
ಸಮಂತಾ ವೃತ್ತಿ ಬದುಕಿನ ವಿಶಿಷ್ಠ ಸಿನಿಮಾಗಳಲ್ಲಿ 'ಶಾಕುಂತಲಂ'ಕೂಡ ಒಂದು. ಈ ಸಿನಿಮಾ ಪ್ಯಾನ್ ಇಂಡಿಯಾ ಅನ್ನುವುದಕ್ಕಿಂತ ಇಂತಹ ಪಾತ್ರದಲ್ಲಿ ಸಮಂತಾಳನ್ನು ಇದೂವರೆಗೂ ಅಭಿಮಾನಿಗಳು ನೋಡಿಲ್ಲ. ಗುಣಶೇಖರ್ ಸಿನಿಮಾವನ್ನು ನಿರ್ದೇಶಿಸಿದ್ದು, ಶೂಟಿಂಗ್ ಕೂಡ ಮುಗಿದಿದೆ. ಇತ್ತೀಚೆಗೆ ಈ ಸಿನಿಮಾ ನವೆಂಬರ್ 4ಕ್ಕೆ ಗ್ರ್ಯಾಂಡ್ ಆಗಿ ಬಿಡುಗಡೆಯಾಗಲಿದೆ ಎಂದು ಪುಕಾರು ಹಬ್ಬಿತ್ತು. ಇದರಿಂದ ಸಮಂತಾ ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದರು.

ಗ್ರಾಫಿಕ್ಸ್, 3ಡಿ ಕೆಲಸ ಬಾಕಿ ಇದೆ.
'ಶಾಕುಂತಲಂ' ಸಿನಿಮಾದ ನಿರ್ಮಾಪಕರು ಸಮಂತಾ ಫ್ಯಾನ್ಸ್ ಬೇಸರದ ಸುದ್ದಿಯನ್ನು ನೀಡಿದ್ದಾರೆ. ನವೆಂಬರ್ 4ಕ್ಕೆ ಈ ಸಿನಿಮಾ ಬಿಡುಗಡೆಯಾಗುತ್ತಿಲ್ಲ ಅಂತ ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದ ಪೋಸ್ಟ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿದೆ. " ಶಾಕುಂತಲಂ ಸಿನಿಮಾಗೆ ಸಂಬಂಧಿಸಿದ ಗ್ರಾಫಿಕ್ಸ್ ಕೆಲಸಗಳು ಇನ್ನೂ ಬಾಕಿ ಇದ್ದು, ನವೆಂಬರ್ 4 ರೊಳಗೆ ಮುಗಿಯುವುದಿಲ್ಲ. ಅಲ್ಲದೇ ಶಾಕುಂತಲಂ ಸಿನಿಮಾ 3Dಯಲ್ಲಿ ಬಿಡುಗಡೆಯಾಗಲಿದೆ. ಅದಕ್ಕಾಗಿಯೇ ಇನ್ನೂ ಸ್ವಲ್ಪ ಸಮಯ ಬೇಕು. ಈ ಕಾರಣಕ್ಕೆ ಸಿನಿಮಾ ರಿಲೀಸ್ ಅನ್ನು ಮುಂದೂಡುತ್ತಿದ್ದೇವೆ." ಎಂದು ಹೇಳಿದ್ದಾರೆ.

ಮೊದಲ ಪೌರಾಣಿಕ ಸಿನಿಮಾ
ಸಮಂತಾ ಹಿಂದೆಂದೂ ಪೌರಾಣಿಕ ಪಾತ್ರದಲ್ಲಿ ನಟಿಸಿರಲಿಲ್ಲ. 'ಶಾಕುಂತಲಂ' ಸಿನಿಮಾದಲ್ಲಿಯೇ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಮಂತಾ ಜೊತೆ ಮಲಯಾಳಂ ನಟ ದೇವ್ ಮೋಹನ್ ದುಶ್ಯಂತನಾಗಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಫಸ್ಟ್ ಲುಕ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಪೋಸ್ಟರ್‌ನಲ್ಲಿ ಸಮಂತಾ ಮತ್ತು ದೇವ್ ಮೋಹನ್ ತುಂಬಾ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.

ದಿಗ್ಗಜರ ಸಮಾಗಮ
ಸಮಂತಾ ಜೊತೆ ಈ ಸಿನಿಮಾದಲ್ಲಿ ಮೋಹನ್ ಬಾಬು, ಪ್ರಕಾಶ್ ರಾಜ್, ಗೌತಮಿ, ಅದಿತಿ ಬಾಲನ್ ಮತ್ತು ಅನನ್ಯ ನಾಗಲ್ಲ ಕಾಣಿಸಿಕೊಂಡಿದ್ದಾರೆ. 'ಶಾಕುಂತಲಂ' ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಚಿಟ್ಟಿ ಭರತು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ಅಲ್ಲು ಅರ್ಹ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗೇ ಈ ಸಿನಿಮಾಗೆ ಮೆಲೋಡಿ ಬ್ರಹ್ಮ ಮಣಿಶರ್ಮ ಸಂಗೀತ ಸಂಯೋಜಿಸಿದ್ದಾರೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಸೇರಿದಂತೆ ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.


Click it and Unblock the Notifications











