"ಬಾ ಜಬರ್ದಸ್ತ್ ಶೋ ಖಾಲಿ ಇದೆ, ಅದೇ ನಿನಗೆ ಸೂಕ್ತ"; ರೋಜಾ ಸೋಲಿಗೆ ಬಂಡ್ಲ ಗಣೇಶ್ ಕಾಮೆಂಟ್

ಇಂದು (ಜೂನ್ 4) ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಲೋಕಸಭೆ ಚುನಾವಣೆಯ ಜೊತೆಗೆ ಆಂಧ್ರ ಪ್ರದೇಶದ ವಿಧಾನ ಸಭೆ ಚುನಾವಣೆ ಕೂಡ ಅಷ್ಟೇ ಕುತೂಹಲ ಕೆರಳಿಸಿತ್ತು. ಒಂದು ತಿಂಗಳಿಂದ ತೆಲುಗು ಮಂದಿ ಆಂಧ್ರ ಪ್ರದೇಶದ ವಿಧಾನ ಸಭೆ ಚುನಾವಣೆಯ ಫಲಿತಾಂಶವನ್ನು ಕುತೂಹಲದಿಂದ ನೋಡುತ್ತಿದ್ದರು.

ಇದೀಗ ಬಹುತೇಕ ಆಂಧ್ರ ಪ್ರದೇಶ ವಿಧಾನ ಸಭೆ ಕ್ಷೇತ್ರದ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಆಂಧ್ರದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಆಘಾತದ ಫಲಿತಾಂಶ ಸಿಕ್ಕಿದೆ. ತೆಲುಗು ದೇಶಂ ಪಕ್ಷ, ಭಾರತೀಯ ಜನತಾ ಪಕ್ಷ ಮತ್ತು ಜನಸೇನಾ ಪಕ್ಷಗಳ ಮೈತ್ರಿಕೂಟ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿದೆ.

Tollywood producer Bandla Ganesh tweet againt YSRCP condidate Roja defeat in AP Assembly election

ಆಂಧ್ರ ಪ್ರದೇಶದ ಮೈತ್ರಿ ಕೂಡ ಸುಮಾರು 160ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಹುಮತ ಪಡೆದ್ದು ಸರ್ಕಾರ ರಚನೆಗೆ ಮುಂದಾಗಿದೆ. ಈ ಬಾರಿ ಆಂಧ್ರ ಪ್ರದೇಶದ ವಿಧಾನ ಸಭೆ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ರೋಜಾ ಸೋಲುಂಡಿದ್ದಾರೆ. ಈ ವಿಷಯ ಹೊರಬೀಳುತ್ತಿದ್ದಂತೆ ರೋಜಾ ವಿರುದ್ಧ ತೆಲುಗು ಖ್ಯಾತ ನಿರ್ಮಾಪಕ ಬಂಡ್ಲ ಗಣೇಶ್ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಆ ಕಾಮೆಂಟ್‌ ಈ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಪರವಾಗಿ ಸ್ಪರ್ಧಿಸಿದ್ದ ಟಾಲಿವುಡ್‌ನ ಹಿರಿಯ ನಾಯಕಿ ರೋಜಾ ಟಿಡಿಪಿ ಅಭ್ಯರ್ಥಿಯ ವಿರುದ್ಧ ಸೋಲುಂಡಿದ್ದಾರೆ. ಆಂಧ್ರ ಪ್ರದೇಶದ ನಗರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ರೋಜಾ ಟಿಡಿಪಿಯ ಗಾಲಿ ಭಾನು ಪ್ರಕಾಶ್ ಭಾರಿ ಎದುರು ಸೋತಿದ್ದಾರೆ. ಈ ಬೆನ್ನಲ್ಲೇ ರೋಜಾ ವಿರುದ್ಧ ಕಾಲೆಳೆದು ಬಂಡ್ಲ ಗಣೇಶ್ ಟ್ವೀಟ್ ಮಾಡಿದ್ದಾರೆ.

ನಿರ್ಮಾಪಕ ಬಂಡ್ಲ ಗಣೇಶ್ ತಮ್ಮ ಎಕ್ಸ್ ಖಾತೆಯಲ್ಲಿ ರೋಜಾ ಅವರ ಫೋಟೊವನ್ನು ಶೇರ್ ಮಾಡಿ, ಟೀಕೆ ಮಾಡಿದ್ದಾರೆ. "ಜಬರ್ದಸ್ತ್ ಕರೆಯುತ್ತಿದೆ ಬಾ ಹೊರಟು ಬಾ" ಎಂದು ನಿರ್ಮಾಪಕ ಬಂಡ್ಲ ಗಣೇಶ್ ತಿರುಗೇಟು ಕೊಟ್ಟಿದ್ದಾರೆ. ಈ ಟ್ವೀಟ್ (ಎಕ್ಸ್) ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ಮೂಲಕ ರಾಜಕೀಯದಿಂದ ಬಿಡುವು ಮಾಡಿಕೊಂಡು ಮತ್ತೆ ಟಿವಿ ಶೋಗಳನ್ನು ಮಾಡುವಂತೆ ಬಂಡ್ಲ ಗಣೇಶ್ ಸಲಹೆ ನೀಡಿದ್ದಾರೆ.

Tollywood producer Bandla Ganesh tweet againt YSRCP condidate Roja defeat in AP Assembly election

ರೋಜಾ ರಾಜಕೀಯಕ್ಕೆ ಬರುವುದಕ್ಕೂ ಮುನ್ನ ತೆಲುಗಿನ ಜನಪ್ರಿಯ ಕಾಮಿಡಿ ಶೋ ಜಬರ್ದಸ್ತ್‌ನಲ್ಲಿ ಜಡ್ಜ್ ಆಗಿ ಭಾಗವಹಿಸುತ್ತಿದ್ದರು. ಎರಡನೇ ಬಾರಿ ಗೆದ್ದ ಮೇಲೆ ಆ ಶೋನಿಂದ ರೋಜಾ ಹೊರ ಬಂದಿದ್ದರು. ಆ ಶೋನಲ್ಲಿ ಶಾಸಕಿಯಾಗಿದ್ದರೂ ರೋಜಾ ಡ್ಯಾನ್ಸ್ ಮಾಡುತ್ತಿದ್ದರು. ವೈಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕಿಯಾದ ಬಳಿಕವೂ ಹೀಗೆ ಶೋಗಳಲ್ಲಿ ಭಾಗವಹಿಸಿದ್ದಕ್ಕೆ ಟೀಕೆಗಳು ವ್ಯಕ್ತವಾಗುತ್ತಿದ್ದವು.

ರೋಜಾಗೆ ಸಚಿವ ಸ್ಥಾನ ಸಿಕ್ಕ ಮೇಲೆ ಜಬರ್ದಸ್ತ್ ಶೋನಿಂದ ರೋಜಾ ಹಿಂದೆ ಸರಿದಿದ್ದರು. ಈ ಹಿನ್ನೆಲೆಯಲ್ಲಿ ನಿರ್ಮಾಪಕ ಬಂಡ್ಲ ಗಣೇಶ್ "ಬಾ ಜಬರ್ದಸ್ತ್ ಶೋ ಖಾಲಿ ಇದೆ. ಅದೇ ನಿನಗೆ ಸೂಕ್ತ" ಎನ್ನುವ ಅರ್ಥದಲ್ಲಿ ಕೌಂಟರ್ ಕೊಟ್ಟಿದ್ದಾರೆ. ಈ ಟ್ವೀಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಜಗನ್ ನೇತೃತ್ವದಲ್ಲಿ ಸಚಿವೆಯಾಗಿದ್ದಾಗ ರೋಜಾ, ಟಿಡಿಪಿ ಹಾಗೂ ಜನಸೇನಾ ಪಕ್ಷದ ಮುಖಂಡರ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ್ದರು.

More from Filmibeat

English summary
Producer Bandla Ganesh tweet against YSRCP Roja defeat in AP Assembly election:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X