ಇಸ್ಪೀಟು ಆಡಿ ಸಂಕಷ್ಟಕ್ಕೆ ಸಿಲುಕಿದ 'ಚಿನ್ನುಡು', 'ಪೆದ್ದುಡು': ಮಹೇಶ್, ವೆಂಕಟೇಶ್ ವಿರುದ್ಧ ಕ್ರಮಕ್ಕೆ ಒತ್ತಡ!

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ವಿಕ್ಟರಿ ವೆಂಕಟೇಶ್ ಇಬ್ಬರು ಹೊಸ ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ತಾವಾಯಿತು ತಮ್ಮ ಸಿನಿಮಾ ಆಯಿತು ಎಂದು ಇರುತ್ತಿದ್ದ ಮಹೇಶ್ ಬಾಬು, ವಿಕ್ಟರಿ ವೆಂಕಟೇಶ್ ವಿವಾದವೊಂದರಲ್ಲಿ ಸಿಕ್ಕಿಕೊಂಡಿದ್ದಾರೆ.

ಟಾಲಿವುಡ್ ಇಬ್ಬರೂ ಸ್ಟಾರ್ ನಟರು ಇಸ್ಟೀಟು ಆಡುತ್ತಿರುವ ಫೋಟೊವನ್ನು ಸೀಕ್ರೆಟ್ ಆಗಿ ಸೆರೆ ಹಿಡಿಯಲಾಗಿದೆ. ಈ ಫೋಟೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಡಲಾಗಿದೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇಬ್ಬರು ನಟರಿಗೆ ಸಂಕಷ್ಟ ಎದುರಾಗಿದೆ.

mahesh-babu-and-venkatesh-playing-cards

ಕಾರ್ಯಕ್ರಮವೊಂದರಲ್ಲಿ ಮಹೇಶ್ ಬಾಬು ಹಾಗೂ ವೆಂಕಟೇಶ್ ಭಾಗವಹಿಸಿದ್ದರು. ಮಹೇಶ್ ಬಾಬು ಆರೇಂಜ್ ಶರ್ಟ್ ಧರಿಸಿ ಟೇಬಲ್ ಮುಂದೆ ಕುಳಿತಿದ್ದರೆ, ವಿಕ್ಟರಿ ವೆಂಕಟೇಶ್ ಔಟ್ ಅಂಡ್ ಔಟ್ ಬ್ಲ್ಯಾಕ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಮಹೇಶ್ ಬಾಬು ಹಾಗೂ ವಿಕ್ಟರಿ ವೆಂಕಟೇಶ್ ಕಾರ್ಡ್ಸ್ ಆಡುತ್ತಿರುವ ಫೋಟೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶಕ್ಕೆ ಒಳಗಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸರಿ ತಪ್ಪುಗಳ ಬಗ್ಗೆ ಚರ್ಚೆ ಆರಂಭ ಆಗಿದೆ. ಇದಕ್ಕೆ ಮಹೇಶ್ ಬಾಬು ಅಭಿಮಾನಿಗಳು ಸಮಜಾಯಿಷಿ ನೀಡುವುದಕ್ಕೆ ಸಜ್ಜಾಗಿದ್ದಾರೆ.

ಅಂದ್ಹಾಗೆ ತೆಲುಗಿನ ಜನಪ್ರಿಯ ಉದ್ಯಮಿಯೊಬ್ಬರ ಕಾರ್ಯಕ್ರಮದಲ್ಲಿ ಮಹೇಶ್ ಬಾಬು ಹಾಗೂ ವಿಕ್ಟರಿ ವೆಂಕಟೇಶ್ ಭಾಗವಹಿಸಿದ್ದರು. ಉದ್ಯಮಿಯ ಕ್ಲಬ್ ಹೌಸ್ ಉದ್ಘಾಟನೆಗೆ ಮಹೇಶ್ ಬಾಬು ಹಾಗೂ ವಿಕ್ಟರಿ ವೆಂಕಟೇಶ್ ಅತಿಥಿಗಳಾಗಿ ಭಾಗವಹಿಸಿದ್ದರು ಎನ್ನಲಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

ಇಸ್ಪೀಟ್ ಟೇಬಲ್ ಮುಂದೆ ಕುಳಿತಿರೋ ಇಬ್ಬರ ನಟರ ಫೋಟೊಗಳನ್ನು ಕಂಡು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಇಬ್ಬರು ನಟರು ಸಮಾಜಕ್ಕೆ ಕೆಟ್ಟ ಸಂದೇಶ ಕೊಡುವ ಕೊಟ್ಟಂತಾಗಿದೆ. ಹೀಗಾಗಿ ಕಾನೂನು ಪ್ರಕಾರ ಇಬ್ಬರಿಗೂ ಶಿಕ್ಷೆ ಕೊಡಿ ಎಂದು ನೆಟ್ಟಿಗರು ಒತ್ತಾಯ ಮಾಡುತ್ತಿದ್ದಾರೆ.

ಮಹೇಶ್ ಬಾಬು ಅಭಿಮಾನಿಗಳು ತಮ್ಮ ನಟನ ಪರವಾಗಿ ನಿಂತಿದ್ದು, ತಮ್ಮ ನಟ ಇಂತಹ ಆಟಗಳನ್ನು ಆಡುವುದಿಲ್ಲ. ಅವರು ಕ್ಲಬ್ ಉದ್ಘಾಟನೆಗೆ ಹೋಗಿದ್ದರು ಅಷ್ಟೇ ಎಂದು ಹೇಳುತ್ತಿದ್ದಾರೆ. ಅಲ್ಲದೆ ಮಹೇಶ್ ಬಾಬು ಈ ಹಿಂದೆ ಇಂತಹ ಯಾವುದೇ ಆಟಗಳಲ್ಲಿ ಕಾಣಿಸಿಕೊಂಡಿಲ್ಲ ಎಂದು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಸದ್ಯ ಇಸ್ಪೀಟ್ ಆಡುತ್ತಿರುವ ಫೋಟೊ ವೈರಲ್ ಆಗುತ್ತಿದ್ದಂತೆ ಮಹೇಶ್ ಬಾಬು ಹಾಗೂ ವೆಂಕಟೇಶ್ ವಿರುದ್ಧ ನೆಟ್ಟಿಗರು ಸಿಟ್ಟಾಗಿರೋದಂತೂ ನಿಜ. ಈ ಬಗ್ಗೆ ಇಬ್ಬರು ಸ್ಟಾರ್ ನಟರು ಯಾವ ರೀತಿಯ ಸಮಜಾಯಿಷಿ ಕೊಡುತ್ತಾರೆ ಅನ್ನೋದು ನೋಡಬೇಕಿದೆ.

ಸದ್ಯ ಮಹೇಶ್ ಬಾಬು 'ಗುಂಟೂರು ಖಾರಂ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆ ರಾಜಮೌಳಿ ನಿರ್ದೇಶಿಸಲಿರೋ ಸಿನಿಮಾಗೆ ಎಂಟ್ರಿ ಕೊಡಲಿದ್ದಾರೆ. ಇತ್ತ ವಿಕ್ಟರಿ ವೆಂಕಟೇಶ್ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಸೈಂಧವ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Tollywood Star Mahesh Babu, Victory Venkatesh playing cards photo creates trouble
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X