ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ 125 ಬಡಮಕ್ಕಳಿಗೆ ಮಹೇಶ್ ಬಾಬು ನೆರವು
ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಿನ್ಸ್ ಕಾಲ್‌ಶೀಟ್‌ಗಾಗಿ ಟಾಲಿವುಡ್ ನಿರ್ಮಾಪಕರು ಕಾದು ಕೂತಿದ್ದಾರೆ. ಮಹೇಶ್ ಬಾಬು ಸಿನಿಮಾಗಳಲ್ಲಿ ಎಷ್ಟು ಬ್ಯುಸಿಯಾಗಿದ್ದಾರೋ ಅಷ್ಟೇ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ತಮ್ಮದೇ 'ಮಹೇಶ್ ಬಾಬು ಫೌಂಡೇಷನ್'ನಿಂದ ಅನೇಕ ಸಮಾಜಮುಖಿ ಕೆಲಸಗಳಲ್ಲಿ ಮಹೇಶ್ ಬಾಬು ತೊಡಗಿಸಿಕೊಂಡಿದ್ದಾರೆ. ಈ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ನೆರೆವು ನೀಡಲು ಮುಂದಾಗಿದ್ದಾರೆ.
ಮಹೇಶ್ ಬಾಬು ಸಿನಿಮಾಗಳಂತೆ, ಅವರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 'ಮಹೇಶ್ ಬಾಬು ಫೌಂಡೇಶನ್' ಹಲವು ವರ್ಷಗಳಿಂದ ಇಂತಹ ಉತ್ತಮ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಬಡವರಿಗೆ ಸಹಾಯ ಹಸ್ತ ಚಾಚವುದಕ್ಕಾಗಿಯೇ 'ಮಹೇಶ್ ಬಾಬು ಫೌಂಡೇಷನ್' ಸ್ಥಾಪನೆಯಾಗಿದ್ದು, ಮತ್ತೊಂದು ಬೃಹತ್ ಕಾರ್ಯಕ್ಕಾಗಿ ಮಹೇಶ್ ಬಾಬು ಮುಂದೆ ಬಂದಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುವ ಬಡ ಮಕ್ಕಳ ಶಸ್ತ್ರ ಚಿಕಿತ್ಸೆ ಮಹೇಶ್ ಬಾಬು ನೆರವಾಗುತ್ತಿದ್ದಾರೆ.

ಬಡಮಕ್ಕಳ ನೆರವಿಗೆ ನಿಂತ ಪ್ರಿನ್ಸ್
ಹೈದರಾಬಾದ್‌ನ ರೇನ್ಬೋ ಚಿಲ್ಡ್ರನ್ಸ್ ಹಾರ್ಟ್ ಇನ್ಸ್ಟಿಟ್ಯೂಟ್ ಜೊತೆ ಮಹೇಶ್ ಬಾಬು ಕೈ ಜೋಡಿಸಿದೆ. ತಮ್ಮ ಮಹೇಶ್ ಫೌಂಡೇಷನ್ ಮೂಲಕ ಬಡ ಮಕ್ಕಳ ಹೃದಯದ ಸಮಸ್ಯೆಗೆ ನೆರವು ನೀಡಲು ನಿರ್ಧರಿಸಿದ್ದಾರೆ. ವಿವಿಧ ಹೃದಯ ಸಮಸ್ಯೆಗಳಿಂದ ಬಳಲುತ್ತಿರುವ ಸುಮಾರು 125 ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಇತ್ತೀಚೆಗೆ ಈ ಕಾರ್ಯಕ್ರಮಕ್ಕೆ ಮಹೇಶ್ ಬಾಬು ಚಾಲನೆ ನೀಡಿದ್ದಾರೆ. ಈ ವೇಳೆ ಮಹೇಶ್ ಬಾಬು " ನನ್ನ ಹೃದಯಕ್ಕೆ ಮಕ್ಕಳು ಯಾವಾಗಲೂ ಹತ್ತಿರವಾಗಿರುತ್ತಾರೆ. ಮಕ್ಕಳ ಹೃದಯಕ್ಕೆ ನಾವು ಹೆಚ್ಚು ಕಾಳಜಿವಹಿಸಬೇಕು. ಈ ಕಾರಣಕ್ಕಾಗಿ ನಾನು ಈ ಕಾರ್ಯಕ್ರಮಕ್ಕೆ ಬೆಂಬಲಿಸಿದ್ದೇನೆ." ಎಂದು ಮಹೇಶ್ ಬಾಬು ಹೇಳಿದ್ದಾರೆ.

ಸಾವಿರ ಮಕ್ಕಳಿಗೆ ಪ್ರಿನ್ಸ್ ನೆರವು
ಮಹೇಶ್ ಬಾಬು ಹೀಗೆ ಮಕ್ಕಳಿಗೆ ನೆರವಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಬಾರಿ ನೆರವನ್ನು ನೀಡಿದ್ದಾರೆ. ಇಲ್ಲಿವರೆಗೂ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಸುಮಾರು ಸಾವಿರಕ್ಕೂ ಅಧಿಕ ಬಡ ಮಕ್ಕಳಿಗೆ ಆರ್ಥಿಕ ನೆರವು ನೀಡಿದ್ದಾರೆ. ಮಕ್ಕಳ ಮೇಲೆ ಮಹೇಶ್ ಬಾಬುಗೆ ವಿಶೇಷ ಕಾಳಜಿ ಇರುವುದು ಹಲವು ಬಾರಿ ಕಣ್ಮುಂದೆ ಇದೆ. ಈ ಬಾರಿ ಕೂಡ ಪ್ರತಿಷ್ಟಿತ ಆಸ್ಪತ್ರೆ ಜೊತೆ ಮಹೇಶ್ ಬಾಬು ಕೈ ಜೋಡಿದ್ದಾರೆ.

ಮಕ್ಕಳ ಚಿಕಿತ್ಸೆಗೆ ಆರ್ಥಿಕ ನೆರವು
ಮಹೇಶ್ ಬಾಬು ಹಾಗೂ ರೇನ್ಬೋ ಚಿಲ್ಡ್ರನ್ಸ್ ಹಾರ್ಟ್ ಇನ್ಸ್ಟಿಟ್ಯೂಟ್ ಇಬ್ಬರೂ ಸೇರಿಕೊಂಡು ಮಕ್ಕಳ ಸಹಾಯಕ್ಕೆ ನಿಂತಿದ್ದಾರೆ. ಈ ಮೂಲಕ ಬಡ ಮಕ್ಕಳ ಹೃದಯ ಸಂಬಂಧಿ ಕಾಯಿಲೆಗೆ ಎಷ್ಟು ಆರ್ಥಿಕ ನೆರವು ಬೇಕೋ ಅನ್ನುವುದನ್ನು ಪ್ರತ್ಯೇಕವಾಗಿ ಗಮನಿಸಿ ನೆರವು ನೀಡಲು ಚಿಂತಿಸಿದ್ದಾರೆ. ಇವರಲ್ಲಿ ಕೆಲವು ಮಕ್ಕಳಿಗೆ ಸಣ್ಣ ನೆರವು ಸಿಕ್ಕರೂ ಆರೋಗ್ಯವಂತರಾಗುತ್ತಾರೆ. ಈ ಕಾರಣಕ್ಕೆ ಇಂತಹದೊಂದು ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ.

'ಸರ್ಕಾರು ವಾರಿ ಪಾಟ' ರಿಲೀಸ್
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ 'ಸರ್ಕಾರು ವಾರಿ ಪಾಟ' ಸಿನಿಮಾ ಬಿಡುಗಡೆ ಬ್ಯುಸಿಯಲ್ಲಿದ್ದಾರೆ. ಮಹೇಶ್ ಬಾಬು ಜೊತೆ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ಈ ಸಿನಿಮಾ ಮೇ 12ರಂದು ರಿಲೀಸ್ ಆಗಲಿದೆ. ಟಾಲಿವುಡ್‌ನ ಎರಡು ನಿರೀಕ್ಷೆಯ ಸಿನಿಮಾ ರಾಧೆ ಶ್ಯಾಮ್ ಹಾಗೂ RRR ಬಿಡುಗಡೆಯಾದ ಬಳಿಕ 'ಸರ್ಕಾರು ವಾರಿ ಪಾಟ' ಚಿತ್ರದ ಪ್ರಚಾರ ಆರಂಭ ಆಗಲಿದೆ. ಈಗಾಗಲೇ ಸಿನಿಮಾದ ಕಲಾವತಿ' ಸಾಂಗ್ ಟಾಲಿವುಡ್‌ನಲ್ಲಿ ಹೊಸ ದಾಖಲೆ ಬರೆದಿದೆ.


Click it and Unblock the Notifications











