ಅಖಿಲ್ ಅಕ್ಕಿನೇನಿ ಸಿನಿಮಾ 'ಏಜೆಂಟ್' ಟ್ರೈಲರ್‌ಗೆ ಭೇಷ್ ಎಂದ ಮಹೇಶ್ ಬಾಬು
ಟಾಲಿವುಡ್ ಹೀರೋ ಅಖಿಲ್ ಅಕ್ಕಿನೇನಿ ನಟಿಸುತ್ತಿರುವ 'ಏಜೆಂಟ್' ರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾವನ್ನು ಸುರೇಂದರ್ ರೆಡ್ಡಿ ನಿರ್ದೇಶಿಸಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾ ಮಾಸ್ ಟ್ರೈಲರ್ ರಿಲೀಸ್ ಆಗಿತ್ತು. ಆ ಸಿನಿಮಾ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಅಕ್ಕಿನೇನಿ ಕುಟುಂಬದ ಅಭಿಮಾನಿಗಳು ಹಾಗೂ ಟಾಲಿವುಡ್ ತಾರೆಯರು ಅಖಿಲ್ ಆಕ್ಷನ್ ಸೀನ್‌ಗಳನ್ನು ಹೊಗಳಿ ಕೊಂಡಾಡಿದ್ದಾರೆ. ವಿಶೇಷ ಅಂದ್ರೆ, ಪ್ರಿನ್ಸ್ ಮಹೇಶ್ ಬಾಬು ಕೂಡ 'ಏಜೆಂಟ್' ಸಿನಿಮಾದ ಟ್ರೈಲರ್ ನೋಡಿ, ಅಖಿಲ್ ಅಕ್ಕಿನೇನಿಯನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ.

ಅಖಿಲ್ ಅಕ್ಕಿನೇನಿ ನಟಿಸುತ್ತಿರುವ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಏಜೆಂಟ್'. ಈ ಸಿನಿಮಾದಲ್ಲಿ ಅಖಿಲ್ ಅಕ್ಕಿನೇನಿ ಜೊತೆ ಸಾಕ್ಷಿ ವೈದ್ಯ ಹೀರೊಯಿನ್ ಆಗಿ ನಟಿಸುತ್ತಿದ್ದಾರೆ. ಸಿನಿಮಾದ ಪೋಸ್ಟರ್, ಟೀಸರ್, ಹಾಡುಗಳು ಪ್ರೇಕ್ಷಕರಿಗೆ ಇಷ್ಟ ಆಗಿದೆ. 'ಏಜೆಂಟ್' ಚಿತ್ರದ ಟ್ರೈಲರ್ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಆಕ್ಷನ್ ದೃಶ್ಯಗಳು ಅದ್ಭುತವಾಗಿವೆ.
ಇನ್ನೊಂದು ವಿಶೇಷ ಅಂದ್ರೆ, ಈ ಸಿನಿಮಾದಲ್ಲಿ ಮಲಯಾಳಂ ಸೂಪರ್‌ಸ್ಟಾರ್ ಹೀರೋ ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೀಸ್ಟ್ ಲುಕ್‌ನಲ್ಲಿ ಕಾಣಿಸಿಕೊಂಡಿರೋ ಅಖಿಲ್ ಸಿನಿಮಾದ ಮೂಲಕ ಗೆಲ್ಲುತ್ತಾರೆ ಎಂಬ ವಿಶ್ವಾಸ ಅವರ ಅಭಿಮಾನಿಗಳಲ್ಲಿದೆ.
ಇತ್ತೀಚೆಗೆ ಪ್ರಿನ್ಸ್ ಮಹೇಶ್ ಬಾಬು ಕೂಡ ಅಖಿಲ್ ಸಿನಿಮಾದ 'ಏಜೆಂಟ್' ಟ್ರೈಲರ್ ಅನ್ನು ನೋಡಿ ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಟ್ರೈಲರ್ ಆಕರ್ಷಕವಾಗಿದೆ. " ಅಖಿಲ್ ಪಾತ್ರಕ್ಕಾಗಿ ಬದಲಾದ ರೀತಿ ಅದ್ಭುತ" ಎಂದು ಮಹೇಶ್ ಟ್ವಿಟರ್ ಮಾಡಿದ್ದಾರೆ. ಮಹೇಶ್ ಬಾಬು ಮಾಡಿರುವ ಈ ಟ್ವೀಟ್ ವೈರಲ್ ಆಗಿದೆ.
'ಏಜೆಂಟ್' ಸಿನಿಮಾ ಇದೇ ಏಪ್ರಿಲ್ 28 ರಂದು ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಈ ಚಿತ್ರದಲ್ಲಿ ಮಮ್ಮುಟ್ಟಿ ಮತ್ತು ಡಿನೋ ಮೋರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಸಂಗೀತ ನಿರ್ದೇಶಕ ಹಿಪಾಪ್ ತಮಿಜಾ ಟ್ಯೂನ್ ಹಾಕಿದ್ದಾರೆ. 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಸಿನಿಮಾ ಹಿಟ್ ಆಗಿತ್ತು ಈಗ ಅಖಿಲ್ ಅಕ್ಕಿನೇನಿಯ 'ಏಜೆಂಟ್' ದೊಡ್ಡ ಹಿಟ್ ಆಗುತ್ತಾ ಅಂತ ಎದುರು ನೋಡುತ್ತಿದ್ದಾರೆ.


Click it and Unblock the Notifications











