ದಕ್ಷಿಣ ಭಾರತದ ಟಾಪ್ 5 ಶ್ರೀಮಂತ ನಟಿಯರು ಇವರೇ: ಒಬ್ಬೊಬ್ಬ ನಟಿಯ ಆಸ್ತಿ ಮೌಲ್ಯ ಎಷ್ಟು ಗೊತ್ತಾ?

ಸಂಭಾವನೆ ವಿಚಾರಕ್ಕೆ ಹಿಂದಿನಿಂದಲೂ ಹೀರೊಯಿನ್ಸ್ ಅಸಮಧಾನ ಹೊರ ಹಾಕುತ್ತಲೇ ಬಂದಿದ್ದಾರೆ. ಹೀರೊಗಳಿಗೆ ಹೋಲಿಕೆ ಮಾಡಿದರೆ ತಮಗೆ ತೀರಾ ಕಡಿಮೆ ಸಂಭಾವನೆ ಎಂದು ಹೇಳುತ್ತಲೇ ಇದ್ದಾರೆ. ಆದ್ರೀಗ ಚಿತ್ರರಂಗ ಕೊಂಚ ಮಟ್ಟಿಗೆ ಬದಲಾಗಿದೆ. ನಾಯಕಿಯರ ಸಂಭಾವನೆ ಕೂಡ ಕೋಟಿ ದಾಟುತ್ತಿದೆ.

ಬಾಲಿವುಡ್‌ಗಿಂತ ದಕ್ಷಿಣ ಭಾರತದ ನಟಿಯರ ಸಂಭಾವನೆ ಕಡಿಮೆ ಇತ್ತು. ಇವರ ಸಂಭಾವನೆ ಇತ್ತೀಚೆಗಷ್ಟೇ ಕೋಟಿ ದಾಟಿದೆ. ಅದರಲ್ಲೂ ನಯನತಾರಾ, ಅನುಷ್ಕಾ ಶೆಟ್ಟಿ, ಸಮಂತಾ, ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ಒಂದೆರಡು ಕೋಟಿ ಸಂಭಾವನೆ ಅಂದರೆ ಮುಟ್ಟೋದಿಲ್ಲ. ಹೀಗಂತ ಸಿನಿಮಾ ಮಂದಿ, ಟ್ರೇಡ್ ಅನಲಿಸ್ಟ್‌ಗಳು ಆಗಾಗ ಹೇಳಿದ್ದುಂಟು.

TOp 5 South Actress Net Worth Nayanthara, Tamannah, Anushka Shetty, Samantha, Pooja Hegde

ಅದಕ್ಕೆ ಸರಿಯಾಗಿ ದಕ್ಷಿಣ ಭಾರತದ ಟಾಪ್ 5 ಶ್ರೀಮಂತ ನಟಿಯರ ಪಟ್ಟಿ ಹೊರಬಿದ್ದಿದೆ. ಯಾರ ಬಳಿ ಎಷ್ಟು ಕೋಟಿ ಮೌಲ್ಯದ ಆಸ್ತಿಯಿದೆ ಅನ್ನೋದು ರಿವೀಲ್ ಆಗಿದೆ. ಹಾಗಿದ್ರೆ, ದಕ್ಷಿಣದ ಆ ಟಾಪ್ 5 ನಟಿಯರು ಯಾರು? ನಂಬರ್ ಒನ್ ಸ್ಥಾನದಲ್ಲಿ ಇರೋರು ಯಾರು? ಇವೆಲ್ಲದರ ಬಗ್ಗೆ ತಿಳಿಯಲು ಮುಂದೆ ಓದಿ.

ನಯನತಾರಾ ಒಟ್ಟು ಆಸ್ತಿ ಮೌಲ್ಯವೆಷ್ಟು?

ಹೀರೊಗಳು ಒಂದು ಸಿನಿಮಾಗೆ 100 ಕೋಟಿ ರೂ. ಸಂಭಾವನೆ ಪಡೆಯೋದು ಕಾಮನ್. ಆದರೆ,ಹೀರೊಯಿನ್‌ ಕೋಟಿ ಸಂಭಾವನೆ ಪಡೆಯೋಕೆ ಹರಸಾಹಸ ಪಟ್ಟಿದ್ದಾರೆ. 'ಜವಾನ್' ಸಿನಿಮಾಗೆ ನಯನತಾರಾ ಬರೋಬ್ಬರಿ 10 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. 'ಜವಾನ್' ರಿಲೀಸ್ ಬಳಿಕ ಮತ್ತೆ ಸಂಭಾವನೆ ಹೆಚ್ಚಾಗಬಹುದು ಎನ್ನಲಾಗಿದೆ. ಅಲ್ಲದೆ ಸೌತ್ ಲೇಡಿ ಸೂಪರ್‌ಸ್ಟಾರ್ ಬೇರೆ ಬೇರೆ ಕಡೆ ಹೂಡಿಕೆ ಮಾಡಿದ್ದು, ಅಪಾರ್ಟ್‌ಮೆಂಟ್‌ಗಳನ್ನು ಕಟ್ಟುತ್ತಿದ್ದಾರೆಂದು ಸುದ್ದಿಯಾಗಿತ್ತು. ಸದ್ಯ ನಯನತಾರಾ ಬಳಿಕ 165 ಕೋಟಿ ರೂ. ಮೌಲ್ಯದ ಆಸ್ತಿಯಿದೆ ಎನ್ನಲಾಗಿದೆ. ದಕ್ಷಿಣ ಭಾರತದ ಶ್ರೀಮಂತ ನಾಯಕಿಯರಲ್ಲಿ ಇವರೇ ನಂಬರ್ ಒನ್.

TOp 5 South Actress Net Worth Nayanthara, Tamannah, Anushka Shetty, Samantha, Pooja Hegde

ಮಿಲ್ಕಿ ಬ್ಯೂಟಿ ತಮನ್ನಾ ಬಳಿ ಎಷ್ಟಿದೆ?

ನಯನತಾರಾ ಬಳಿಕ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಎರಡನೇ ಸ್ಥಾನದಲ್ಲಿದ್ದಾರೆ ಎಂದು ವರದಿಯಾಗಿದೆ. ಬಾಲಿವುಡ್‌ನಲ್ಲಿ ಆಕ್ಟೀವ್ ಆಗುವುದಕ್ಕೂ ಮುನ್ನ ತಮನ್ನಾ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದರು. ಇವರ ಬಳಿಕ 110 ಕೋಟಿ ರೂ. ಆಸ್ತಿಯಿದೆ ಎಂದು ಹೇಳಲಾಗುತ್ತಿದೆ. ಈಕೆ ಕೂಡ ದುಡಿದ ಹಣವನ್ನು ಬೇರೆ ಬೇರೆ ಕಡೆ ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ.

TOp 5 South Actress Net Worth Nayanthara, Tamannah, Anushka Shetty, Samantha, Pooja Hegde

ಮೂರನೇ ಸ್ಥಾನದಲ್ಲಿ ಅನುಷ್ಕಾ ಶೆಟ್ಟಿ

ಕರುನಾಡಿನ ಕರಾವಳಿ ನಟಿ ಅನುಷ್ಕಾ ಶೆಟ್ಟಿ ಮೂರನೇ ಸ್ಥಾನದಲ್ಲಿದ್ದಾರೆ. ಹೆಚ್ಚು ಕಡಿಮೆ ಎರಡು ದಶಕಗಳಿಂದ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗ ಹೆಚ್ಚು ಸಿನಿಮಾಗಳಲ್ಲಿ ನಟಿಸದೇ ಹೋದರೂ, ಹಿಂದೆ ದುಡಿದ ಹಣವನ್ನು ವ್ಯಾಪಾರ ವಹಿವಾಟಿನಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇವರ ಬಳಿಕ ಸುಮಾರು 100 ಕೋಟಿ ರೂ. ಮೌಲ್ಯದ ಆಸ್ತಿಯಿದೆ ಎನ್ನಲಾಗಿದೆ.

TOp 5 South Actress Net Worth Nayanthara, Tamannah, Anushka Shetty, Samantha, Pooja Hegde

4 ಮತ್ತು 5ನೇ ಸ್ಥಾನದಲ್ಲಿ ಇರೋದ್ಯಾರು?

ನಯನತಾರಾ, ಅನುಷ್ಕಾ ಶೆಟ್ಟಿಯಂತೆಯೇ ದಕ್ಷಿಣ ಭಾರತದ ಜನಪ್ರಿಯರ ನಟಿಯರಲ್ಲಿ ಸಮಂತಾ ಕೂಡ ಒಬ್ಬರು. ವಿಚ್ಛೇದನದ ಬಳಿಕವೂ ಸಮಂತಾ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಇವರ ಬಳಿಕ ಸುಮಾರು 89 ಕೋಟಿ ರೂ. ಮೌಲ್ಯದ ಆಸ್ತಿಯಿದೆ ಎನ್ನಲಾಗಿದೆ. ಹಾಗೇ ನಟಿ ಪೂಜಾ ಹೆಗ್ಡೆ 50 ಕೋಟಿ ರೂ. ಆಸ್ತಿ ಹೊಂದಿದ್ದಾರೆ ಎಂದು ವರದಿಗಳಾಗಿವೆ.

More from Filmibeat

English summary
TOp 5 South Actress Net Worth Nayanthara, Tamannah, Anushka Shetty, Samantha, Pooja Hegde.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X