'ಸೆಕೆಂಡ್ ಹ್ಯಾಂಡ್ ಐಟಂ 'ಎಂದು ಅವಮಾನ ಮಾಡಿದವರಿಗೆ ಖಡಕ್ ಉತ್ತರ ಕೊಟ್ಟ ನಟಿ ಸಮಂತಾ

ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡುತ್ತಿದೆ. ಇನ್ನೊಂದು ಕಡೆ ಸಮಂತಾ ಐಟಂ ಸಾಂಗ್ ಕೂಡ ಅಷ್ಟೇ ಚರ್ಚೆಯಲ್ಲಿದೆ. ಸಮಂತಾ ಇಷ್ಟ ಪಡುವವರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅದೇ ಸಮಂತಾ ವಿರೋಧಿಸುವವರು ಕಾಲೆಳೆಯುತ್ತಿದ್ದಾರೆ. ವಿಚ್ಚೇದನದ ಬಳಿಕ ಪುಷ್ಪ' ಸಿನಿಮಾದಲ್ಲಿ ಸಮಂತಾ ಬೋಲ್ಡ್ ಅವತಾರವೆತ್ತಿ ಕುಣಿದಿರುವುದನ್ನು ಕೆಲವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಸಮಂತಾ ವೃತ್ತಿ ಬದುಕಿನಲ್ಲಿಯೇ ಇದು ಮೊದಲ ಐಟಂ ಸಾಂಗ್. ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ಬೋಲ್ಡ್ ಅವತಾರಗಳಲ್ಲಿ ನಟಿಸಿದ್ದರೂ, ಐಟಂ ಸಾಂಗ್‌ನಲ್ಲಿ ಮಾತ್ರ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಸ್ವತಃ ಸಮಂತಾಗೆ ಈ ಹಾಡಿನ ಬಗ್ಗೆ ವಿಶೇಷವಾದ ಅಭಿಮಾನವಿದೆ. ಆದರೆ, ಕಿಡಿಗೇಡಿಗಳು ಮಾತ್ರ ಸಮಂತಾಳನ್ನು ಟೀಕೆ ಮಾಡುವುದನ್ನು ನಿಲ್ಲಿಸಿಲ್ಲ. ವ್ಯಕ್ತಿಯೊಬ್ಬ ಟ್ವಿಟರ್‌ನಲ್ಲಿ ಸಮಂತಾಗೆ ಟೀಕೆ ಮಾಡಿದ್ದಾನೆ. ಆ ಟೀಕೆಗೆ ಕ್ಯೂಟ್ ನಟಿ ಸರಿಯಾಗೇ ಉತ್ತರ ನೀಡಿದ್ದಾರೆ.

ಸಮಂತಾ 'ಸೆಕೆಂಡ್ ಹ್ಯಾಂಡ್ ಐಟಂ'

ಸಮಂತಾ 'ಸೆಕೆಂಡ್ ಹ್ಯಾಂಡ್ ಐಟಂ'

ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸಮಂತಾ ಐಟಂ ಸಾಂಗ್​ ಅಭಿಮಾನಿಗಳಿಗೆ ಕಿಕ್ ಮೇಲೆ ಕಿಕ್ ಕೊಟ್ಟಿದೆ. ಥಿಯೇಟರ್‌ನಲ್ಲಿ ಈ ಸಾಂಗ್​ ಬಂದ ಕೂಡಲೇ ಫ್ಯಾನ್ಸ್​ ಹುಚ್ಚಿದ್ದು ಕುಣಿಯುತ್ತಿದ್ದಾರೆ. ಹೀಗಿರುವಾಗಲೇ ಇಲ್ಲೊಬ್ಬ ವ್ಯಕ್ತಿ ಸಮಂತಾರನ್ನು ಅವಮಾನ ಮಾಡುವಂತೆ ಟ್ವೀಟ್ ಮಾಡಿದ್ದಾನೆ. ಸಮಂತಾಗೆ 'ಸೆಕೆಂಡ್ ಹ್ಯಾಂಡ್ ಐಟಂ' ಎಂದು ಕರೆದಿದ್ದಾನೆ. ಇದು ಸಮಂತಾ ಅಭಿಮಾನಿಗಳನ್ನು ಕೆರಳಿಸಿದೆ.

ಅವಮಾನ ಮಾಡಿದ ವ್ಯಕ್ತಿಗೆ ಸಮಂತಾ ರಿಪ್ಲೈ

ಅವಮಾನ ಮಾಡಿದ ವ್ಯಕ್ತಿಗೆ ಸಮಂತಾ ರಿಪ್ಲೈ

ಟ್ವಿಟರ್‌ನಲ್ಲಿ ಕಮರಲ್ಲಿ ದುಕಾನ್ದಾರ್ ಎಂಬ ವ್ಯಕ್ತಿ " ಸಮಂತಾ ಪಾಳುಬಿದ್ದ ವಿಚ್ಛೇದಿತ ಸೆಕೆಂಡ್ ಹ್ಯಾಂಡ್ ಐಟಂ. ಸಂಭಾವಿತ ವ್ಯಕ್ತಿಯಿಂದ ತೆರಿಗೆ ಮುಕ್ತ 50 ಕೋಟಿ ಹಣವನ್ನು ಲೂಟಿ ಮಾಡಿರುವವಳು." ಎಂದು ಕಮೆಂಟ್ ಮಾಡಿದ್ದನು. ಸಾಲದ್ದಕ್ಕೆ ಸಮಂತಾಗೆ ಟ್ಯಾಗ್ ಕೂಡ ಮಾಡಿದ್ದನು. ಇದಕ್ಕೆ ಸಮಂತಾ ಕೂಡ ಸುಮ್ಮನೆ ಕೂತಿಲ್ಲ. ಅವಮಾನ ಮಾಡಿದ ವ್ಯಕ್ತಿಗೆ ಸರಿಯಾದ ಪ್ರತಿಕ್ರಿಯೆ ನೀಡಿದ್ದು, "ನಿಮ್ಮ ಆತ್ಮಕ್ಕೆ ಆ ದೇವರು ಒಳ್ಳೆಯದು ಮಾಡಲಿ" ಎಂದು ಕಮೆಂಟ್ ಮಾಡಿದ್ದಾರೆ.

ಐಟಂ ಸಾಂಗಿಗೆ ನೋ ಎಂದ ಸಮಂತಾ

ಐಟಂ ಸಾಂಗಿಗೆ ನೋ ಎಂದ ಸಮಂತಾ

ನಟಿ ಸಮಂತಾ 'ಪುಷ್ಪ' ಸಿನಿಮಾದಲ್ಲಿ ಐಟಂ ಸಾಂಗ್ ಒಂದರಲ್ಲಿ ನಟಿಸುತ್ತಿದ್ದಂತೆ, ಇಂತಹದ್ದೇ ಹಾಡುಗಳಲ್ಲಿ ನಟಿಸುವಂತೆ ಹೆಚ್ಚು ಆಫರ್ ಬರುತ್ತಿದೆ. Oo antava mama ಹಾಡು ಅಲ್ಲು ಅರ್ಜುನ್ ಹಾಗೂ ಸಮಂತಾ ಅಭಿಮಾನಿಗಳನ್ನು ರಂಜಿಸಿದೆ. ಥಿಯೇಟರ್‌ನಲ್ಲಿ ಪ್ರೇಕ್ಷಕರು ಒನ್ ಮೋರ್ ಅಂತ ಕೇಕೆ ಹಾಕುತ್ತಿದ್ದಾರೆ. ಇದನ್ನು ಅರಿತಿರುವ ನಿರ್ಮಾಪಕರು ತಮ್ಮ ಸಿನಿಮಾಗೂ ಐಟಂ ಸಾಂಗಿನಲ್ಲಿ ನಟಿಸಿ ಎಂದು ದುಂಬಾಲು ಬೀಳುತ್ತಿದ್ದಾರಂತೆ. ಆದರೆ ಸಮಂತಾ ಐಟಂ ಸಾಂಗ್‌ಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರಂತೆ.

ಐಟಂ ಸಾಂಗಿಗೆ 70 ಮಿಲಿಯನ್ ವೀವ್ಸ್

ಐಟಂ ಸಾಂಗಿಗೆ 70 ಮಿಲಿಯನ್ ವೀವ್ಸ್

ಸಮಂತಾ ನಟಿಸಿದ 'ಪುಷ್ಪ' ಸಿನಿಮಾದ Oo antava mama ಐಟಂ ಸಾಂಗ್ ಯೂಟ್ಯೂಬ್‌ನಲ್ಲಿಯೂ ಬೇಜಾನ್ ಸದ್ದು ಮಾಡುತ್ತಿದೆ. 'ಪುಷ್ಪ' ತಂಡ ರಿಲೀಸ್ ಮಾಡಿರುವ ಕೇವಲ ಲಿರಿಕಲ್ ಸಾಂಗಿಗೆ ಸುಮಾರು 70 ಮಿಲಿಯನ್‌ ವೀವ್ಸ್ ಸಿಕ್ಕಿದೆ. ಇದೇ ಹಾಡು ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲೂ ರಿಲೀಸ್ ಮಾಡಲಾಗಿದೆ. ಈ ಹಾಡಿಗೂ ಕೂಡ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಹೀಗಾಗಿ ಸಮಂತಾಗೆ ಅದೆಷ್ಟೆ ಕಮೆಂಟ್ ಮಾಡಿದರೂ ಬೇಡಿಕೆ ಮತ್ತಷ್ಟು ಹೆಚ್ಚಾಗುತ್ತಲೇ ಇದೆ.

More from Filmibeat

English summary
Twitter followers called Samantha a divorced ruined second-hand item she gave a befitting reply. Samantha is still facing the trolling after separation with Naga Chaitanya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X