"ಮಹೇಶ್ ಬಾಬು ಇನ್ನೂ ಯುವಕನಂತಿರಲು ವಿದೇಶಿ ಮಹಿಳೆಯರೇ ಕಾರಣ": ಉಮೈರ್ ಸಂಧು ಟ್ವೀಟ್‌ಗೆ ಫ್ಯಾನ್ಸ್ ಕಿಡಿ

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಹ್ಯಾಂಡ್ಸಮ್ ಹೀರೊ ಅನ್ನೋದರಲ್ಲಿ ಡೌಟೇ ಇಲ್ಲ. ಭಾರತದ ಹ್ಯಾಂಡ್ಸಮ್ ಸೂಪರ್‌ಸ್ಟಾರ್‌ಗಳ ಪೈಕಿ ಇವರೂ ಒಬ್ಬರು. ಮಹೇಶ್ ಬಾಬು ಲುಕ್‌ಗೆ ಫಿದಾ ಆಗಿರೋ ಭಾರತೀಯರು ವಿಶ್ವದ ಮೂಲೆ ಮೂಲೆಯಲ್ಲೂ ಸಿಗುತ್ತಾರೆ.

ಲುಕ್ ಜೊತೆ ತಮ್ಮ ಸಿನಿಮಾಗಳಿಂದಲೂ ಮಹೇಶ್ ಬಾಬು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ನಟನ ವಿರುದ್ಧ ವಿವಾದಾತ್ಮಕ ಫಿಲ್ಮ್ ಕ್ರಿಟಿಕ್ ಉಮೈರ್ ಸಂಧು ಗಂಭೀರ ಆರೋಪ ಮಾಡಿದ್ದಾರೆ. ಈ ಟ್ವೀಟ್ ವಿರುದ್ಧ ಪ್ರಿನ್ಸ್ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.

Umair Sandhu controversial comment on Mahesh Babu and foreign women fans got angry

ಉಮೈರ್ ಸಂಧು ಇಷ್ಟು ದಿನ ಬಾಲಿವುಡ್ ಮಂದಿಯನ್ನು ಕಾಡುತ್ತಿದ್ದ. ಮನಸ್ಸಿಗೆ ಬಂದಂತೆ ಟ್ವೀಟ್‌ಗಳನ್ನು ಮಾಡಿ, ನಟನಟಿಯರ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾನೆ. ಈತ ಟ್ವೀಟ್ ವಿರುದ್ಧ ದೂರುಗಳು ದಾಖಲಾಗಿವೆ. ತಮ್ಮನ್ನು ತಾವು ಮೊದಲ ಗಾಸಿಪ್ ಪತ್ರಕರ್ತ ಎಂದು ಬಿಂಬಿಸಿಕೊಂಡಿದ್ದಾರೆ. ಅಸಲಿಗೀಗ ಬಾಲಿವುಡ್‌ ಮಂದಿಯನ್ನು ಬಿಟ್ಟು ಟಾಲಿವುಡ್‌ ಸೂಪರ್‌ಸ್ಟಾರ್ ಹಿಂದೆ ಬಿದ್ದಿದ್ದಾರೆ. ಮಹೇಶ್ ಬಾಬು ಲುಕ್ ಬಗ್ಗೆ ಕಮೆಂಟ್ ಮಾಡಿದ್ದಾರೆ.

ಪ್ರಿನ್ಸ್ ಯುವಕನಂತೆ ಕಾಣಲು ಯಾರು ಕಾರಣ?

ಉಮೈರ್ ಸಂಧು ವಿರುದ್ಧ ಬಾಲಿವುಡ್ ತಾರೆಯರು ದೂರು ದಾಖಲಿಸಿದ್ದಾರೆ. ಅಲ್ಲದೆ, ಈತನ ಖಾತೆಯನ್ನು ಸಸ್ಪೆಂಡ್ ಮಾಡುವಂತೆ ಟ್ವಿಟರ್‌ಗೆ ಮನವಿ ಕೂಡ ಮಾಡಿಕೊಂಡಿದ್ದಾರೆ. ಇಂತಹ ವಿವಾದಾತ್ಮಕ ಟ್ವೀಟ್ ಮಾಡಿದಾಗ ಪ್ರತಿಬಾರಿ ಹಲವರ ಕಂಗಣ್ಣಿಗೆ ಗುರಿಯಾಗುತ್ತಾರೆ. ಈಗ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ವಿರುದ್ಧ ಕಮೆಂಟ್ ಮಾಡಿ ಅವರ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದ್ದಾರೆ.

ಉಮೈರ್ ಸಂಧು ನಿನ್ನೆ (ಮೇ 26) ಒಂದು ಟ್ವೀಟ್ ಮಾಡಿದ್ದರು. ಇದರಲ್ಲಿ, "ಮಹೇಶ್ ಬಾಬು ಯುವಕನಂತೆ ಕಾಣುವುದಕ್ಕೆ ವಿದೇಶಿ ಮಹಿಳೆಯರೊಂದಿಗೆ ಸಂಬಂಧವೇ ಕಾರಣ" ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಮಾಡುತ್ತಿದ್ದಂತೆ ಮಹೇಶ್ ಬಾಬು ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.

ಓದೋಕೆ ಆಗದಂತೆ ಖರಾಬ್ ಕಮೆಂಟ್

ಉಮೈರ್ ಸಂಧು ವಿರುದ್ಧ ಮಹೇಶ್ ಬಾಬು ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ಓದೋಕೂ ಆಗದಂತೆ ಖರಾಬ್ ಆಗಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಪೋಸ್ಟ್ ಅನ್ನು ಡಿಲೀಟ್ ಮಾಡುವಂತೆ ಉಮೈರ್ ಸಂಧುಗೆ ಸೂಚನೆಯನ್ನೂ ಕೊಟ್ಟಿದ್ದಾರೆ.

ಮಹೇಶ್ ಬಾಬು ಒಬ್ಬರೇ ಅಲ್ಲ. ಈ ಹಿಂದೆ ತೆಲುಗು ದಿಗ್ಗಜರ ವಿರುದ್ಧವೂ ಕಮೆಂಟ್ ಮಾಡಿದ್ದ. ಆಗಲೂ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಕೆಲವು ದಿನಗಳ ಹಿಂದೆ ಮೆಗಾಸ್ಟಾರ್ ಚಿರಂಜೀವಿ ವಿರುದ್ಧವೂ ಟ್ವೀಟ್ ಮಾಡಿದ್ದ. "ಚಿರಂಜೀವಿ ಅಂಕಲ್, ಯುವಕನಂತೆ ಕಾಣುವುದನ್ನು ನಿಲ್ಲಿಸು. ನಿನಗೆ ವಯಸ್ಸೀಗ 70 ಅನ್ನೋದನ್ನು ಮರೆಯಬೇಡ" ಎಂದು ಟ್ವೀಟ್ ಮಾಡಿದ್ದ. ಆಗಲೂ ಮೆಗಾ ಫ್ಯಾನ್ಸ್ ಉಗಿದಿದ್ದರು.

ಪವನ್ ಕಲ್ಯಾಣ್ ಅನ್ನೂ ಬಿಟ್ಟಿಲ್ಲ

ಟಾಲಿವುಡ್ ಪವರ್‌ಸ್ಟಾರ್ ಪವನ್‌ ಕಲ್ಯಾಣ್ ಅಭಿಮಾನಿಗಳನ್ನು ಎದುರು ಹಾಕಿಕೊಳ್ಳುವ ಗೋಜಿಗೆ ಯಾರೂ ಹೋಗುವುದಿಲ್ಲ. ಅಂತಹದ್ರಲ್ಲಿ ಉಮೈರ್ ಸಂಧು, ಪವನ್ ಕಲ್ಯಾಣ್ ವಿರುದ್ಧವೂ ಕಮೆಂಟ್ ಮಾಡಿದ್ದ. "ಪವನ್ ಕಲ್ಯಾಣ್ ಒಬ್ಬ ಡೈ ಹಾರ್ಡ್ ವುಮೆನ್‌ಲೈಸರ್. ಈಗಾಗಲೇ ಮೂರು ಬಾರಿ ವಿಚ್ಛೇದನ ನೀಡಿದ್ದಾರೆ. ಅಲ್ಲದೆ ಹಲವು ಬಾರಿ ನಾಯಕಿಯೊಂದಿಗೆ ರೊಮ್ಯಾನ್ಸ್" ಮಾಡಿದ್ದಾರೆಂದು ಟ್ವೀಟ್ ಮಾಡಿದ್ದ.

ಈಗ ಮಹೇಶ್ ಬಾಬು ವಿರುದ್ಧ ಟ್ವೀಟ್ ಮಾಡಿ ತೆಲುಗು ಸಿನಿಪ್ರಿಯರ ಕಣ್ಣು ಕೆಂಪಗಾಗಿಸಿದ್ದಾರೆ. ಹೊಸ ಅಕೌಂಟ್ ಮೂಲಕ ಟ್ವೀಟ್ ಮಾಡಿದ್ದು, ಬಾಲಿವುಡ್ ಹಾಗೂ ಟಾಲಿವುಡ್ ಮಂದಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದಾನೆ.

More from Filmibeat

English summary
Umair Sandhu controversial comment on Mahesh Babu and foreign women fans got angry, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X