Upendra-Chiranjeevi: ಮೆಗಾಸ್ಟಾರ್ ಚಿರಂಜೀವಿಗೆ ಉಪ್ಪಿ ಡೈರೆಕ್ಟ್ ಮಾಡಲಿಲ್ಲ ಯಾಕೆ? ಆ ಪ್ರಾಜೆಕ್ಟ್ ಏನಾಯ್ತು?
ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ವಿಭಿನ್ನವಾಗಿ ಇರುತ್ತೆ. ಅದಕ್ಕೆ ಉಪ್ಪಿ ಡೈರೆಕ್ಟ್ ಮಾಡಿದ ಸಿನಿಮಾ ಎಲ್ಲಾ ಕಡೆ ಸದ್ದು ಮಾಡುತ್ತವೆ. ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲೂ ಉಪ್ರೇಂದ್ರ ನಿರ್ದೇಶನದ ಸಿನಿಮಾ ಬೇಜಾನ್ ಸೌಂಡ್ ಮಾಡುತ್ತೆ. ಈಗ ಉಪ್ಪಿ ಮತ್ತೊಂದು ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಅದು ಕೂಡ ಶುರುವಾಗುವ ಮುನ್ನವೇ ಸದ್ದು ಮಾಡುತ್ತಿದೆ.
ಉಪೇಂದ್ರ ಸಿನಿಮಾ ನಿರ್ದೇಶನ ಮಾಡುತ್ತಾರೆ ಅಂದರೆ ಕನ್ನಡಿಗರು ಅದನ್ನು ನೋಡಲು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ, ಇನ್ನೂ ಶೂಟಿಂಗ್ ಯಾವಾಗ ಶುರುವಾಗಬೇಕು. ಅದು ಮುಗಿದು ಪ್ರಚಾರ ಮಾಡಿ, ಬಿಡುಗಡೆ ಮಾಡುವುದಕ್ಕೆ ಇನ್ನೂ ಸಾಕಷ್ಟು ಸಮಯ ಹಿಡಿಯಲಿದೆ.
ಉಪೇಂದ್ರ ಹೊಸ ಸಿನಿಮಾ ಅನೌನ್ಸ್ ಮಾಡುತ್ತಿದ್ದಂತೆ, ಮತ್ತೊಂದು ಸುದ್ದಿ ಟಾಲಿವುಡ್‌ನಲ್ಲಿ ಬೇಜಾನ್ ಸೌಂಡ್ ಮಾಡುತ್ತಿದೆ. ಉಪ್ಪಿ ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿಗೆ ಒಂದು ಸಿನಿಮಾ ನಿರ್ದೇಶನ ಮಾಡಬೇಕಿತ್ತು. ಅದರೆ ಆ ಪ್ರಾಜೆಕ್ಟ್ ಯಾಕೆ ಸೆಟ್ಟೇರಿಲ್ಲ? ಅನ್ನೋದು ತಿಳಿಯಲು ಮುಂದೆ ಓದಿ.

ಚಿರಂಜೀವಿ-ಉಪ್ಪಿ ಸಿನಿಮಾ ಸೆಟ್ಟೇರಿಲ್ಲ ಯಾಕೆ?
ಮೆಗಾಸ್ಟಾರ್ ಚಿರಂಜೀವಿಗೆ ರಿಯಲ್‌ಸ್ಟಾರ್ ಉಪೇಂದ್ರ ಒಂದು ಸಿನಿಮಾ ಮಾಡಬೇಕಿತ್ತು. ಉಪ್ಪಿನೇ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕಿತ್ತು. ಈ ಮಾತನ್ನು ಸ್ವತ: ಉಪೇಂದ್ರ ತೆಲುಗು ಮಾಧ್ಯಮಗಳ ಮುಂದೆ ರಿವೀಲ್ ಮಾಡಿದ್ದಾರೆ. ಆದರೆ, ಆ ಪ್ರಾಜೆಕ್ಟ್ ಯಾಕೋ ಸೆಟ್ಟೇರಲಿಲ್ಲ. ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಶುರುವಾಗುವ ಮುನ್ನವೇ ನಿಂತು ಹೋಗಿತ್ತು. ಅಶ್ವಿನಿ ದತ್ ಪ್ರೊಡಕ್ಷನ್ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡಬೇಕಿತ್ತು. ಈ ವಿಷಯವನ್ನು ಸ್ವತ: ಉಪೇಂದ್ರ ಅವರೇ ಹೇಳಿದ್ದಾರೆ.

ಸಿನಿಮಾ ಕೈತಪ್ಪಿದ್ದಕ್ಕೆ ಉಪ್ಪಿ ಬೇಸರ
ಮೆಗಾಸ್ಟಾರ್ ಚಿರಂಜೀವಿ ಜೊತೆ ಸಿನಿಮಾ ಮಾಡದೆ ಇದ್ದಿದ್ದಕ್ಕೆ ಉಪೇಂದ್ರಗೆ ಈಗಲೂ ಬೇಸರವಿದೆ. " ಚಿರಂಜೀವಿಯವರಿಗೆ ಸಿನಿಮಾ ಮಾಡಲಾಗದೆ ಇದ್ದಿದ್ದಕ್ಕೆ ನನಗೆ ಇಂದಿಗೂ ವಿಷಾದವಿದೆ. ಆ ಸಿನಿಮಾ ಬಳಿಕ ನನಗೆ ಮತ್ತೆ ಚಿರಂಜೀವಿಯ ಸಿನಿಮಾ ಮಾಡುವುದಕ್ಕೆ ಅವಕಾಶವೇ ಸಿಕ್ಕಿಲ್ಲ." ಎಂದು ಉಪೇಂದ್ರ ತೆಲುಗು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

'ಘನಿ' ಪ್ರಚಾರದಲ್ಲಿ ಉಪ್ಪಿ ನಟನೆ
ಉಪೇಂದ್ರ ಅಭಿನಯದ ಮತ್ತೊಂದು ಸಿನಿಮಾ 'ಘನಿ' ಬಿಡುಗಡೆಯಾಗಿದೆ. ಟಾಲಿವುಡ್ ಕುಟುಂಬದ ಮೆಗಾ ಹೀರೊ ವರುಣ್ ತೇಜ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಸಿನಿಮಾದಲ್ಲಿ ಉಪೇಂದ್ರ ಹೀರೊಗೆ ಬಾಕ್ಸಿಂಗ್ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಉಪ್ಪಿ ಅಭಿನಯವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಆದ್ರೀಗ ಮೆಗಾ ಕುಟುಂಬಕ್ಕೆ ತೀರಾ ಹತ್ತಿರವಾಗಿರುವುದಕ್ಕೆ ಉಪೇಂದ್ರ ಖುಷಿಯಾಗಿದ್ದಾರೆ.
Recommended Video


ಉಪ್ಪಿ ಹೊಸ ಸಿನಿಮಾ ಶೂಟಿಂಗ್ ಯಾವಾಗ?
ಉಪೇಂದ್ರ ತಮ್ಮದೇ ನಿರ್ದೇಶನದ ಸಿನಿಮಾದ ಶೂಟಿಂಗ್‌ಗೆ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಲಾಕ್ ಆಗಿದ್ದು, ಪ್ರಿ-ಪ್ರೊಡಕ್ಷನ್ ಕೆಲಸ ಆರಂಭ ಆಗಿದೆ. ಇದೇ ವೇಳೆ ಬೇರೆ ಬೇರೆ ಸಿನಿಮಾಗಳಲ್ಲೂ ನಟಿಸುತ್ತಿರುವುದರಿಂದ ಉಪೇಂದ್ರ ಜೂನ್ ತಿಂಗಳಲ್ಲಿ ತಾವೇ ನಿರ್ದೇಶಿಸುತ್ತಿರುವ ಚಿತ್ರ ಆರಂಭ ಮಾಡಲಿದೆ ಎನ್ನಲಾಗಿದೆ. ಹೀಗಾಗಿ ಉಪ್ಪಿ ಸಿನಿಮಾ ನೋಡಲು ಪ್ರೇಕ್ಷಕರು ಕಾದು ಕೂತಿದ್ದಾರೆ.


Click it and Unblock the Notifications











