For Quick Alerts
  ALLOW NOTIFICATIONS  
  For Daily Alerts

  'ಗೋಲ್ಡನ್ ಲೆಗ್' ಅಂದೋರೇ ಹಿಂಗಂದ್ರೆ ಹೇಗೆ? ಕೃತಿ ಶೆಟ್ಟಿಗೆ ಸೋಲಿನ ಕಹಿ!

  |

  ಕರಾವಳಿ ಬೆಡಗಿ ಕೃತಿ ಶೆಟ್ಟಿ ಟಾಲಿವುಡ್‌ಗೆ ಕಾಲಿಟ್ಟ ಕೂಡಲೇ ಸೂಪರ್‌ ಸಕ್ಸಸ್ ಸಿಕ್ಕಿತ್ತು. ಮೊದಲ ಸಿನಿಮಾವೇ 100 ಕೋಟಿ ಕ್ಲಬ್ ಸೇರಿತ್ತು. ಇಲ್ಲಿಂದ ಕೃತಿ ಶೆಟ್ಟಿ ಮತ್ತೆಂದೂ ಹಿಂದೆ ತಿರುಗಿ ನೋಡುವ ಗೋಜಿಗೆ ಹೋಗಲೇ ಇಲ್ಲ. ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡುತ್ತಲೇ ಇದ್ದರು.

  ಕೃತಿ ಶೆಟ್ಟಿ ಜಬರ್ದಸ್ತ್ ಎಂಟ್ರಿ ನೋಡಿ ಟಾಲಿವುಡ್ ಸ್ಟಾರ್ ನಟಿಯರು ಶಾಕ್ ಆಗಿದ್ದು ನಿಜ. ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿದ್ದಂತೆ ಹ್ಯಾಟ್ರಿಕ್ ಬಾರಿದ ಕೃತಿ ಶೆಟ್ಟಿ ತೆಲುಗು ಮಂದಿಗೆ ಲಕ್ಕಿ ಗರ್ಲ್ ಆಗಿದ್ದರು. ಆದರೆ, ಇತ್ತೀಚೆಗೆ ಕರಾವಳಿ ಸುಂದರಿಯ ಸಿನಿಮಾಗಳ್ಯಾಕೋ ಬಾಕ್ಸಾಫೀಸ್‌ನಲ್ಲಿ ಉಲ್ಟಾ ಹೊಡೆಯುತ್ತಿವೆ.

  ಅಂದ ಹೆಚ್ಚಿಸಿಕೊಳ್ಳಲು ಪ್ಲಾಸಿಕ್ ಸರ್ಜರಿಗೆ ಮುಂದಾದ್ರಾ ಕೃತಿ ಶೆಟ್ಟಿ?ಅಂದ ಹೆಚ್ಚಿಸಿಕೊಳ್ಳಲು ಪ್ಲಾಸಿಕ್ ಸರ್ಜರಿಗೆ ಮುಂದಾದ್ರಾ ಕೃತಿ ಶೆಟ್ಟಿ?

  ಗೆದ್ದಗಾ ಹೋಗಳೋದು ಕಾಮನ್. ಚಿತ್ರರಂಗದಲ್ಲಿ ಪ್ರತಿದಿನ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೃತಿ ಶೆಟ್ಟಿ ಮೂರು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಾಗಲೂ ಟಾಲಿವುಡ್ ಮಂದಿ ಹಾಡಿ ಹೊಗಳಿದ್ದರು. ದಿಢೀರನೇ ಎರಡು ಸಿನಿಮಾ ಸೋಲುತ್ತಿದ್ದಂತೆ ವರಸೆನೇ ಬದಲಾಗಿದೆ. ಅಸಲಿಗೆ ಟಾಲಿವುಡ್‌ ಮಂದಿ ಕೃತಿ ಶೆಟ್ಟಿ ಬಗ್ಗೆ ಏನಂತಿದ್ದಾರೆ? ಈ ಹಿಂದೆ ಏನಂದಿದ್ರು? ಅನ್ನೋದನ್ನು ತಿಳಿಯಲು ಮುಂದೆ ಓದಿ.

  'ಗೋಲ್ಡನ್ ಲೆಗ್' ಆಗಿದ್ದ ಕೃತಿ ಶೆಟ್ಟಿ ಈಗೇನು?

  'ಗೋಲ್ಡನ್ ಲೆಗ್' ಆಗಿದ್ದ ಕೃತಿ ಶೆಟ್ಟಿ ಈಗೇನು?

  ಕೃತಿ ಶೆಟ್ಟಿ 'ಉಪ್ಪೇನಾ' ಸಿನಿಮಾ ಸೂಪರ್‌ ಸಕ್ಸಸ್ ಆಗುತ್ತಿದ್ದಂತೆ ಕೃತಿ ಶೆಟ್ಟಿಗೆ ಬೇಡಿಕೆ ಹೆಚ್ಚಾಗಿತ್ತು. ಇದೊಂದೇ ಸಿನಿಮಾದಿಂದ ಬ್ಯಾಕ್ ಟು ಬ್ಯಾಕ್ ಆಫರ್‌ಗಳು ಹುಡುಕೊಂಡು ಬಂದಿದ್ದವು. ಹಾಗೇ ಕೃತಿ ಶೆಟ್ಟಿ ಆಯ್ಕೆ ಮಾಡಿಕೊಂಡ ಮುಂದಿನ ಎರಡೂ ಸಿನಿಮಾಗಳೂ ಕೂಡ ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗಿದ್ದವು. ನಾನಿ ಜೊತೆ ನಟಿಸಿದ್ದ 'ಶ್ಯಾಮ್ ಸಿಂಘ ರಾಯ್' ಹಾಗೂ ಅಕ್ಕಿನೇನಿ ಹೀರೊಗಳೊಂದಿಗೆ ನಟಿಸಿದ್ದ 'ಬಂಗಾರ್‌ರಾಜು' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಯಶಸ್ಸು ಕಂಡಿತ್ತು. ಇಲ್ಲಿಂದ ಕೃತಿ ಶೆಟ್ಟಿಗೆ ಟಾಲಿವುಡ್‌ನ 'ಗೋಲ್ಡನ್ ಲೆಗ್'ಬ್ಯೂಟಿ ಅಂತಲೇ ಜನಪ್ರಿಯರಾಗಿದ್ದರು.

  ಶ್ರೀವಲ್ಲಿ ಹಾಡಲ್ಲಿ ಅಲ್ಲು ಅರ್ಜುನ್ ಚಪ್ಪಲಿ ಜಾರಿದ ರಹಸ್ಯ ಹೇಳಿದ ಬಿಗ್ ಬಿ!ಶ್ರೀವಲ್ಲಿ ಹಾಡಲ್ಲಿ ಅಲ್ಲು ಅರ್ಜುನ್ ಚಪ್ಪಲಿ ಜಾರಿದ ರಹಸ್ಯ ಹೇಳಿದ ಬಿಗ್ ಬಿ!

  ಕೃತಿ ಶೆಟ್ಟಿ ಸೋಲಿನ ಬಗ್ಗೆ ಟೀಕೆ

  ಕೃತಿ ಶೆಟ್ಟಿ ಸೋಲಿನ ಬಗ್ಗೆ ಟೀಕೆ

  ಕೃತಿ ಶೆಟ್ಟಿ ಮೂರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನೀಡುತ್ತಲೇ 'ಗೋಲ್ಡನ್ ಲೆಗ್' ಅನ್ನೋ ಪಟ್ಟ ಕೊಟ್ಟಿದ್ದರು. ಆದ್ರೀಗ ಈ ನಟಿ 'ಗೋಲ್ಡನ್ ಲೆಗ್' ಅನ್ನೋ ಚಾರ್ಮ್ ಅನ್ನು ಕಳೆದುಕೊಳ್ಳುತ್ತಿದ್ದಾರೆ ಅಂತ ಮಾತಾಡುತ್ತಿದ್ದಾರೆ. ಅದಕ್ಕೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಎರಡು ಸಿನಿಮಾಗಳು. ರಾಮ್ ಪೋತಿನೇನಿ ಅಭಿನಯದ 'ದಿ ವಾರಿಯರ್' ಹಾಗೂ ನಿತಿನ್ ಜೊತೆ ನಟಿಸಿದ್ದ 'ಮಾಚೆರ್ಲಾ ನಿಯೊಜಕವರ್ಗಂ' ಸಿನಿಮಾಗಳು ಬಾಕ್ಸಾಫೀಸ್‌ ಮೋಡಿ ಮಾಡಲು ಸೋತಿವೆ. ಈ ಕಾರಣಕ್ಕೆ ಕೃತಿ ಶೆಟ್ಟಿಯನ್ನು ಟೀಕೆ ಮಾಡಲು ಆರಂಭಿಸಿದ್ದಾರೆ.

  ಸಿನಿಮಾ ಆಯ್ಕೆ ಮಾಡುವಲ್ಲ ವಿಫಲ

  ಸಿನಿಮಾ ಆಯ್ಕೆ ಮಾಡುವಲ್ಲ ವಿಫಲ

  ಕೃತಿ ಶೆಟ್ಟಿ ಒಳ್ಳೆ ಸ್ಕ್ರಿಪ್ಟ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲ ಅನ್ನೋ ಆರೋಪ ಕೇಳಿ ಬರುತ್ತಿದೆ. 'ದಿ ವಾರಿಯರ್' ಹಾಗೂ 'ಮಾಚೆರ್ಲಾ ನಿಯೊಜಕವರ್ಗಂ' ಅಂತಹ ಸಿನಿಮಾಗಳು ಕೃತಿ ಶೆಟ್ಟಿಗೆ ಯೋಗ್ಯವಾದ ಸಿನಿಮಾ ಅಲ್ಲ ಅಂತ ಚರ್ಚೆ ಆಗುತ್ತಿದೆ. 'ಬೇಬಮ್ಮ' ಅಂತಹ ಪಾತ್ರ ಮಾಡಿದ ನಟಿಗೆ ಸಿನಿಮಾ ಆಯ್ಕೆ ಮಾಡಿಕೊಳ್ಳೋದೇ ಅಂತ ಟೀಕೆ ಮಾಡಲು ಶುರು ಮಾಡಿದ್ದಾರೆ.

  ರೀ-ರಿಲೀಸ್ ಆಗಿದ್ದ ಮಹೇಶ್ ಬಾಬು ಸಿನಿಮಾ ಮಸ್ತ್ ರೆಸ್ಪಾನ್ಸ್: 'ಪೋಕಿರಿ' ಕಲೆಕ್ಷನ್ ಸೂಪರ್!ರೀ-ರಿಲೀಸ್ ಆಗಿದ್ದ ಮಹೇಶ್ ಬಾಬು ಸಿನಿಮಾ ಮಸ್ತ್ ರೆಸ್ಪಾನ್ಸ್: 'ಪೋಕಿರಿ' ಕಲೆಕ್ಷನ್ ಸೂಪರ್!

  ಹ್ಯಾಟ್ರಿಕ್ ಫ್ಲಾಪ್ ಬೇಡ

  ಹ್ಯಾಟ್ರಿಕ್ ಫ್ಲಾಪ್ ಬೇಡ

  ಕೃತಿ ಮುಂದಿನ ಸಿನಿಮಾ 'ಆ ಅಮ್ಮಾ ಗುರಿಂಚಿ ಮೀಕು ಚೆಪ್ಪಾಲಿ'. ಈ ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಸುಧೀರ್ ಬಾಬು ಈ ಸಿನಿಮಾದಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಟಾಲಿವುಡ್ ಮಂದಿಗೆ ಈ ಸಿನಿಮಾ ಮೇಲೂ ನಂಬಿಕೆ ಇಲ್ಲ. ಹೀಗಾಗಿ ಹ್ರ್ಯಾಟ್ರಿಕ್ ಫ್ಲಾಪ್ ಕೊಡದೆ ಇರಲಿ ಅಂತ ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ.

  Recommended Video

  Gaalipata 2 1st day Collection | ಮತ್ತೊಂಮ್ಮೆ 'ಗಾಳಿಪಟ 2' ಗಣಿ-ಭಟ್ರಿಗೆ ತಂದು ಕೊಡ್ತು ಸಕ್ಸಸ್ | Filmibeat
  English summary
  Uppena Fame Golden Leg Of Tollywood Kriti Shetty Movies Back to Back Flops, Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X