ವರುಣ್ ತೇಜ್-ಲಾವಣ್ಯ ನಿಶ್ವಿತಾರ್ಥ: ಚಿರಂಜೀವಿ, ರಾಮ್ ಚರಣ್, ಅಲ್ಲು ಅರ್ಜುನ್ ಭಾಗಿ
ಮೆಗಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಮತ್ತೊಬ್ಬ ಮೆಗಾ ಹೀರೊ ಎಂಗೇಜ್ ಆಗುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥದ ಬಗ್ಗೆ ಗುಸುಗುಸು ಎದ್ದಿತ್ತು. ಅದು ಇಂದು (ಜೂನ್ 9) ನಿಜವಾಗುತ್ತಿದೆ.
ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಡೇಟಿಂಗ್ ಮಾಡುತ್ತಿರುವ ವಿಷಯ ಹೊರಬಿದ್ದಿತ್ತು. ಆದರೆ, ಇಬ್ಬರೂ ಆ ವಿಷಯವನ್ನು ಅಲ್ಲಗೆಳೆದಿದ್ದರು. ಕೊನೆಗೂ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಹಿರಿಯರ ಸಮ್ಮುಖದಲ್ಲಿ ಎಂಗೇಜ್ ಆಗುತ್ತಿದ್ದಾರೆ.

ವರುಣ್ ತೇಜ್ ಮನೆಯಲ್ಲಿ ಈ ನಿಶ್ಚಿತಾರ್ಥ ಸಮಾರಂಭ ನೆರವೇರಲಿದೆ. ಈಗಾಗಲೇ ಮೆಗಾ ಕುಟುಂಬದ ಸ್ಟಾರ್‌ಗಳು ಸ್ಥಳಕ್ಕೆ ಆಗಮಿಸಿದ್ದು ಸಂಭ್ರಮ ಮನೆ ಮಾಡಿದೆ. ವರುಣ್ ಹಾಗೂ ಲಾವಣ್ಯ ನಿಶ್ಚಿತಾರ್ಥದ ಬಗ್ಗೆ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.
ಅಲ್ಲು ಅರ್ಜುನ್, ರಾಮ್ ಚರಣ್, ಚಿರು ಉಪಸ್ಥಿತಿ
ವರುಣ್ ತೇಜ್ ಹೈದರಾಬಾದ್ ಮನೆಗೆ ವಧು ಲಾವಣ್ಯ ತ್ರಿಪಾಠಿ ಆಗಮಿಸಿದ್ದಾರೆ. ಟಾಲಿವುಡ್ ಬ್ಯೂಟಿ ಸೀರೆಯುಟ್ಟು ಕಂಗೊಳಿಸುತ್ತಿದ್ದರು. ಇದೇ ವೇಳೆ ಮೆಗಾಸ್ಟಾರ್ ಚಿರಂಜೀವಿ, ಮೆಗಾ ಪವರ್‌ಸ್ಟಾರ್ ರಾಮ್ ಚರಣ್, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕುಟುಂಬ ಸಮೇತ ಆಗಮಿಸಿದ್ದರು.

ರಾಮ್ ಚರಣ್ ಪತ್ನಿ ಉಪಾಸನಾ ಜೊತೆ ಆಗಮಿಸಿದ್ದರು. ಇತ್ತ ಅಲ್ಲು ಅರ್ಜುನ್ ಕೂಡ ಪತ್ನಿಯೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇವರೊಂದಿಗೆ ಸಾಯಿ ಧರಂ ತೇಜ್ ಹಾಗೂ ವೈಷ್ಣವ್ ತೇಜ್ ಭಾಗವಹಿಸಿದ್ದಾರೆ. ಅಲ್ಲದೆ ಚಿತ್ರರಂಗ ಇನ್ನೂ ಆತ್ಮೀಯರು ಭಾಗವಹಿಸಿದ್ದಾರೆ.
ವರುಣ್ ತೇಜ್ ಲಾವಣ್ಯ ಲವ್ ಸ್ಟೋರಿ
2017ರಲ್ಲಿ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಮೊದಲ ಬಾರಿ 'ಮಿಸ್ಟರ್' ಸಿನಿಮಾ ಸೆಟ್ಟಿನಲ್ಲಿ ಮುಖಾ ಮುಖಿಯಾಗಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಇಬ್ಬರೂ ಕ್ಲೋಸ್ ಆಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದವರು ಬರಬರುತ್ತಾ ಪ್ರೀತಿಯಲ್ಲಿ ಬಿದ್ದಿದ್ದರು.
ಇಬ್ಬರೂ ಡೇಟಿಂಗ್ ಮಾಡುತ್ತಿದ್ದರೂ, ಅದು ಪಬ್ಲಿಕ್ ಆಗದಂತೆ ನೋಡಿಕೊಂಡಿದ್ದಾರೆ. ಹಲವು ವರ್ಷಗಳವರೆಗೂ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯ ಗೊತ್ತೇ ಇರಲಿಲ್ಲ. ಆದರೆ,'ಅಂತರಿಕ್ಷಂ' ಸಿನಿಮಾದ ವೇಳೆ ಇಬ್ಬರ ಬಗ್ಗೆ ಮೊದಲ ಬಾರಿಗೆ ಗಾಳಿಸುದ್ದಿ ಹಬ್ಬಿತ್ತು.
ಹುಟ್ಟುಹಬ್ಬದಂದೇ ಲಾವಣ್ಯಾಗೆ ಪ್ರಪೋಸ್
ಆಗಾಗ ವರುಣ್ ತೇಜ್ ಹಾಗೂ ಲಾವಣ್ಯ ಇಬ್ಬರೂ ಕಾರ್ಯಕ್ರಮಗಳು ಹಾಗೂ ಪಾರ್ಟಿಗಳಲ್ಲಿ ಭೇಟಿಯಾಗುತ್ತಿದ್ದರು. ಇದು ಗಾಳಿಸುದ್ದಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು. ವರುಣ್ ತೇಜ್ ತಮ್ಮ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಬಯಸಿದ್ದರು. ಹೀಗಾಗಿ ಡಿಸೆಂಬರ್ 15 ಲಾವಣ್ಯ ಬರ್ತ್‌ಡೇಯಂದು ಮದುವೆಗೆ ಪ್ರಪೋಸ್ ಮಾಡಿದ್ದರು. ಎರಡೂ ಮನೆಯವರು ಒಪ್ಪಿದರೂ, ಈ ಜೋಡಿ ಮದುವೆ ಬಗ್ಗೆ ಬಾಯ್ಬಿಟ್ಟಿರಲಿಲ್ಲ.


Click it and Unblock the Notifications











