ಪ್ರಭಾಸ್ ಗೆಳೆಯನಿಗೆ ಆಕ್ಷನ್ ಕಟ್ ಹೇಳಲು ಟಾಲಿವುಡ್‌ಗೆ ಹೊರಟ ಹರ್ಷ: ಇದು ಪಕ್ಕಾ ಆಕ್ಷನ್ ಸಿನಿಮಾ!

ಸ್ಯಾಂಡಲ್‌ವುಡ್‌ನಲ್ಲಿ ನಟನಾಗಿ, ನೃತ್ಯ ನಿರ್ದೇಶಕನಾಗಿ ವೃತ್ತಿ ಬದುಕು ಆರಂಭಿಸಿದ್ದ ಎ ಹರ್ಷ ನಿರ್ದೇಶಕನಾಗಿಯೂ ಯಶಸ್ಸು ಕಂಡಿದ್ದಾರೆ. ಶಿವಣ್ಣ ಹಾಗೂ ಹರ್ಷ ಕಾಂಬಿನೇಷನ್‌ನಲ್ಲಿ ಬಂದ ನಾಲ್ಕು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿವೆ. ಇತ್ತೀಚೆಗೆ ಶಿವಣ್ಣನ 125ನೇ ಸಿನಿಮಾ 'ವೇದ'ಗೂ ಹರ್ಷ ಆಕ್ಷನ್ ಕಟ್ ಹೇಳಿ ಗೆದ್ದಿದ್ದಾರೆ. ಈ ಸಿನಿಮಾ ಥಿಯೇಟರ್ ಹಾಗೂ ಓಟಿಟಿ ಎರಡರಲ್ಲೂ ಗೆಲ್ಲುತ್ತಿದ್ದಂತೆ ಟಾಲಿವುಡ್‌ಗೆ ಹಾರಿದ್ದಾರೆ.

'ಭಜರಂಗಿ', 'ವಜ್ರಕಾಯ', 'ವೇದ'ದಂತಹ ಹಿಟ್ ಸಿನಿಮಾಗಳನ್ನು ನೀಡಿರುವ ಎ ಹರ್ಷ ಟಾಲಿವುಡ್‌ಗೆ ಜಂಪ್ ಮಾಡಿದ್ದಾರೆ. ಟಾಲಿವುಡ್ ಸ್ಟಾರ್ ನಟ ಹಾಗೂ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಆತ್ಮೀಯ ಗೆಳೆಯನೂ ಆಗಿರೋ ಗೋಪಿಚಂದ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಂದ್ಹಾಗೆ, ಇದು ಗೋಪಿಚಂದ್ ಅವರ 31ನೇ ಸಿನಿಮಾ. ಇದನ್ನು ಕೆ.ಕೆ. ರಾಧಾ ಮೋಹನ್ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

Vedha Fame A Harsha Debut telugu Movie With Actor Gopichand Has Launched In Hyderabad

ಟಾಲಿವುಡ್‌ನ ಆಕ್ಷನ್ ಹೀರೊ ಗೋಪಿಚಂದ್ ಸದ್ಯ ತಮ್ಮ 30ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ 'ರಾಮ ಬಾಣಂ' ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾವನ್ನು ನಿರ್ದೇಶಕ ಶ್ರೀವಾಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಈ ಸಿನಿಮಾವೀಗ ಚಿತ್ರೀಕರಣದ ಕೊನೆಯ ಹಂತದಲ್ಲಿದೆ. ವಿಶ್ವ ಪ್ರಸಾದ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮಹಾಶಿವರಾತ್ರಿ ಹಬ್ಬದಂದು ಈ ಸಿನಿಮಾದ ಫಸ್ಟ್ ಲುಕ್ ಅನ್ನು ಚಿತ್ರತಂಡ ರಿಲೀಸ್ ಮಾಡಿತ್ತು.

ಈಗ ಎ ಹರ್ಷ ಟಾಲಿವುಡ್ ಆಕ್ಷನ್ ಹೀರೊ ಅಭಿನಯದ 31ನೇ ಸಿನಿಮಾಗೆ ಆಕ್ಷನ್ ಕಟ್ ಹೇಳುವುದಕ್ಕೆ ರೆಡಿಯಾಗಿದ್ದಾರೆ. ಟಾಲಿವುಡ್ ಮೂಲಗಳ ಪ್ರಕಾರ, ಈ ಸಿನಿಮಾ ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾ. ಹರ್ಷ ಕಲ್ಪನೆಯಲ್ಲಿ ಹೊಸ ಅವತಾರವೆತ್ತಿ ಗೋಪಿಚಂದ್ ತೆರೆಮೇಲೆ ಬರುತ್ತಿದ್ದಾರೆ. ಅಂದ್ಹಾಗೆ, ಸಾಯಿ ಆರ್ಟ್ಸ್ ಬ್ಯಾನರ್‌ನಲ್ಲಿ ಕೆ.ರಾಧಾಮೋಹನ್ ನಿರ್ಮಾಣ ಮಾಡುತ್ತಿರುವ 14ನೇ ಸಿನಿಮಾ ಇದಾಗಿದೆ.

Vedha Fame A Harsha Debut telugu Movie With Actor Gopichand Has Launched In Hyderabad

"ಗೋಪಿಚಂದ್ ಹಾಗೂ ಎ.ಹರ್ಷ ಜೊತೆ ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರೋದಕ್ಕೆ ತುಂಬಾ ಖುಷಿಯಿದೆ.ಇದು ನಮ್ಮ ನಿರ್ಮಾಣ ಸಂಸ್ಥೆಯ 14ನೇ ಸಿನಿಮಾ. ನಿರ್ದೇಶಕ ಹರ್ಷ ಪವರ್ ಫುಲ್ ಸಬ್ಜೆಕ್ಟ್ ಸ್ಕ್ರಿಪ್ಟ್ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಗೋಪಿಚಂದ್ ಹೊಸ ಅವತಾರದಲ್ಲಿ ತೆರೆ ಮೇಲೆ ನೋಡುವದಕ್ಕೆ ಸಿಗುತ್ತಾರೆ. ಇದೇ ಮಾರ್ಚ್ ತಿಂಗಳಿನಿಂದ ಈ ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ಆರಂಭವಾಗಲಿದೆ" ಎಂದು ಕೆ.ರಾಧಾಮೋಹನ್ ಸಂತಸ ಹಂಚಿಕೊಂಡಿದ್ದಾರೆ.

ಗೋಪಿಚಂದ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಆತ್ಮೀಯ ಗೆಳೆಯ. ಕನ್ನಡದ ಮತ್ತೊಬ್ಬ ನಿರ್ದೇಶಕ ಪ್ರಶಾಂತ್ ನೀಲ್ ಪ್ರಭಾಸ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನೊಂದು ಕಡೆ ಗೆಳೆಯನ ಚಿತ್ರಕ್ಕೆ ಕನ್ನಡದ ಮತ್ತೊಬ್ಬ ನಿರ್ದೇಶಕ ಹರ್ಷ ಡೈರೆಕ್ಷನ್ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ 'ಕೆಜಿಎಫ್' ಮೂಲಕ ಸದ್ದು ಮಾಡಿರೋ ರವಿ ಬಸ್ರೂರ್ ಎರಡೂ ಸಿನಿಮಾಗಳಿಗೂ ಸಂಗೀತ ನೀಡುತ್ತಿದ್ದಾರೆ.

ವಿಲನ್ ಆಗಿ ಟಾಲಿವುಡ್‌ಗೆ ಎಂಟ್ರಿಕೊಟ್ಟಿದ್ದ ಗೋಪಿಚಂದ್ ಹೀರೊ ಆಗಿಯೂ ಯಶಸ್ಸು ಕಂಡಿದ್ದರು. ಇತ್ತ ಹರ್ಷ ಕೂಡ ಚಿತ್ರದಲ್ಲಿ ಹಲವು ಹಂತಗಳನ್ನು ದಾಟಿಕೊಂಡು ಬಂದಿದ್ದಾರೆ. ಅಲ್ಲದೆ ಹರ್ಷ ಫ್ಯಾಂಟಸಿ, ರಗಡ್ ಸಿನಿಮಾಗಳನ್ನು ಕಟ್ಟಿಕೊಡುವುದರಲ್ಲಿ ಎತ್ತಿದ ಕೈ. ಬಹಳ ದಿನಗಳ ಬಳಿಕ ಶಿವಣ್ಣನ ಬಿಟ್ಟು ಹರ್ಷ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಗೋಪಿಚಂದ್ ಹಾಗೂ ಹರ್ಷ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಹೇಗಿರುತ್ತೆ? ಅನ್ನೋದನ್ನು ನೋಡುವುದಕ್ಕೆ ಸಿನಿಪ್ರಿಯರು ಕಾದು ಕೂತಿದ್ದಾರೆ.

More from Filmibeat

English summary
Vedha Fame A Harsha Debut telugu Movie With Actor Gopichand Has Launched In Hyderabad, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X