"ಊ ಅಂಟಾವಾ.. ಅದೊಂದು ಹಾಡೇ ಅಲ್ಲ.. ನಾನಾಗಿದ್ರೆ ಇನ್ನೊಂದು ಲೆವೆಲ್‌ಗೆ ಹಾಡ್ತಿದ್ದೆ" ಹಿರಿಯ ಗಾಯಕಿ ಎಲ್‌ ಆರ್ ಈಶ್ವರಿ

ಹಿರಿಯ ಗಾಯಕಿ ಎಲ್‌ ಆರ್‌ ಈಶ್ವರಿ ಬಗ್ಗೆ ದಕ್ಷಿಣ ಭಾರತೀಯರಿಗೆ ಇಂಟ್ರುಡಕ್ಷನ್‌ ಬೇಕಾಗೇ ಇಲ್ಲ. ಅವರ ವಿಶಿಷ್ಠ ಶೈಲಿಯ ಧ್ವನಿಯಿಂದ ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಪ್ರೇಮಿಗಳಿಗೂ ಚಿರಪರಿಚಿತ. ಅದರಲ್ಲೂ ಕನ್ನಡದಲ್ಲಿ ಬಂದಿದ್ದ "ಜೋಕೆ ನಾನು ಬಳ್ಳಿಯ ಮಿಂಚು" ಹಾಡು ಇಂದಿಗೂ ಸಖತ್ ಫೇಮಸ್. ಸಂಗೀತ ಪ್ರಿಯರು ಇಂದಿಗೂ ಈ ಹಾಡನ್ನು ಗುನುಗುತ್ತಲೇ ಇರುತ್ತಾರೆ. ಇದೇ ಹಾಡನ್ನು ಹಾಡಿದ ಗಾಯಕಿ ಎಲ್ ಆರ್ ಈಶ್ವರಿ.

ಕನ್ನಡ ಅಷ್ಟೇ ಅಲ್ಲದೆ,ತೆಲುಗು, ತಮಿಳು ಭಾಷೆಗಳಲ್ಲೂ ಸೂಪರ್ ಹಿಟ್ ಸಾಂಗ್‌ಗಳನ್ನು ಹಾಡಿದ್ದಾರೆ. ಇದೇ ಗಾಯಕಿ ಎಲ್‌ ಆರ್ ಈಶ್ವರಿ 'ಪುಷ್ಪ' ಸಿನಿಮಾದ ಸೂಪರ್‌ ಹಿಟ್ ಸಾಂಗ್ ಬಗ್ಗೆ ಕಮೆಂಟ್ ಮಾಡಿದ್ದಾರೆ. ಅಲ್ಲು ಅರ್ಜುನ್ ಹಾಗೂ ಸಮಂತಾ ಹೆಜ್ಜೆ ಹಾಕಿದ್ದ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ'ದ "ಊ ಅಂಟಾವಾ.. ಊಹು ಅಂಟಾವಾ..." ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

Veteran Singer LR Eswari Says She Didnt consider Oo Antava as a song from Pushpa

ಇತ್ತೀಚೆಗೆ ಹಿರಿಯ ಗಾಯಕಿ ಎಲ್ ಆರ್ ಈಶ್ವರಿ ಸಂದರ್ಶನವೊಂದು 'ಪುಷ್ಪ' ಸಿನಿಮಾದ ಹಾಡು ಅದೊಂದು ಹಾಡೇ ಅಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಈಗಿನ ಜನರೇಷನ್ ಹಾಡುಗಳ ಅಭಿಮಾನಿ ಅಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಗಾಯಕಿ ಎಲ್ ಆರ್ ಈಶ್ವರಿ ಪ್ರಕಾರ, 'ಪುಷ್ಪ'ದ ಸೂಪರ್ ಹಿಟ್ ಹಾಡು "ಊ ಅಂಟಾವಾ ಊಹುಂ ಅಂಟಾವಾ.." ಹಾಡೇ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ.

"ಇದೂ ಒಂದು ಹಾಡಾ? ಕಂಪೋಸ್ ಮಾಡಿದ್ದು ಹಾಗೂ ಹಾಡಿದ್ದು ಆರಂಭದಿಂದ ಅಂತ್ಯದವರೆಗೂ ಎಲ್ಲವೂ ಒಂದೇ ಪಿಚ್‌ನಲ್ಲಿ ಇದೆ. ಹಾಡುಗಾರ ಅವರು ಸೂಚಿಸಿದಂತೆ ಹಾಡುತ್ತಾರೆ. ಅವರ ಮೇಲೆ ನಿಗಾ ಇಡೋದು ಸಂಗೀತ ನಿರ್ದೇಶಕರ ಜವಾಬ್ದಾರಿ. ಅದೇ ಹಾಡನ್ನು ನನಗೆ ಹಾಡಲು ಬಿಟ್ಟಿದ್ದರೆ, ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತಿದ್ದೆ." ಎಂದು ಸಂದರ್ಶನವೊಂದರಲ್ಲಿ ಹಿರಿಯ ಗಾಯಕಿ ಎಲ್‌ ಆರ್ ಈಶ್ವರಿ ಹೇಳಿಕೆ ಕೊಟ್ಟಿದ್ದಾರೆ.

ಇಷ್ಟೇ ಅಲ್ಲದೆ ಎಲ್ ಆರ್ ಈಶ್ವರಿ ಈಗಿನ ಜನರೇಷನ್ ಫಿಲ್ಮ್ ಮೇಕರ್ಸ್ ಬಗ್ಗೆ ಹಾಗೂ ತಂತ್ರಜ್ಞರ ಬಗ್ಗೆನೂ ಗಂಭೀರ ಆರೋಪ ಮಾಡಿದ್ದಾರೆ. " ನಾವು ಹಿರಿಯರು ಏನಿದ್ದೇವೆ. ನಮ್ಮ ಹಿರಿಯರೊಂದಿಗೆ ಕೆಲಸ ಮಾಡಿದ್ದೇವೆ. ಆ ಹಾಡುಗಳು ಇಂದಿಗೂ ಎಲ್ಲರಿಗೂ ಮನರಂಜನೆಯನ್ನು ನೀಡುತ್ತಿವೆ. ಆಗಿನ ಕಾಲದಲ್ಲಿ ಸಿನಿಮಾಗಳು 100 ಅಥವಾ 200 ದಿನಗಳು ಓಡುತ್ತಿದ್ದವು. ಈಗಿನ ಸಿನಿಮಾ ಕೇವಲ 10 ದಿನಗಳು ಓಡುತ್ತಿವೆ." ಎಂದು ಹಿರಿಯ ಗಾಯಕಿ ಎಲ್ ಆರ ಈಶ್ವರಿ ಆರೋಪ ಮಾಡಿದ್ದಾರೆ.

Veteran Singer LR Eswari Says She Didnt consider Oo Antava as a song from Pushpa

ಅಂದ್ಹಾಗೆ, 'ಪುಷ್ಪ' ಸಿನಿಮಾದ ಈ ಡ್ಯಾನ್ಸಿಂಗ್ ನಂಬರ್ ಅನ್ನು ಒರಿಜಿನಲ್ ಆಗಿ ಹಾಡಿದ್ದು ಇಂದ್ರಾವತಿ ಚೌಹಾಣ್. ಟಾಲಿವುಡ್‌ನ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಈ ಹಾಡನ್ನು ಕಂಪೋಸ್ ಮಾಡಿದ್ದರು. ಸಮಂತಾ ಈ ಹಾಡಿನಲ್ಲಿ ಮಾದಕ ಹೆಜ್ಜೆ ಹಾಕಿದ್ದರು. ಇವರೊಂದಿಗೆ ಅಲ್ಲು ಅರ್ಜುನ್ ರಗಡ್ ಲುಕ್ ಕೊಟ್ಟಿದ್ದರು. ಅದೇ ಹಾಡಿನ ಬಗ್ಗೆ ಈಗ ಹಿರಿಯ ಗಾಯಕಿ ಎಲ್ ಆರ್ ಈಶ್ವರಿ ಗಂಭೀರ ಆರೋಪ ಮಾಡಿದ್ದಾರೆ. ಅದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

More from Filmibeat

English summary
Veteran Singer LR Eswari Says She Didn't consider Oo Antava as a song from Pushpa, Know More.
Read more about: pushpa tollywood samantha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X