'ಅನಕೊಂಡ' ಎಂದಿದ್ದ ಥಿಯೇಟರ್ ಮಾಲೀಕರನ್ನು ಭೇಟಿಯಾದ ವಿಜಯ್ ದೇವರಕೊಂಡ!

ಟಾಲಿವುಡ್ ರೌಡಿ ವಿಜಯ್ ದೇವರಕೊಂಡ ಮತ್ತು ಟಾಲಿವುಡ್ ಡೇರಿಂಗ್ ಡೈರೆಕ್ಟರ್ ಪೂರಿ ಜಗನ್ನಾಥ್ ಕಾಂಬಿನೇಷನ್ ಸಿನಿಮಾ 'ಲೈಗರ್'. ಸಾಕಷ್ಟು ನಿರೀಕ್ಷೆಗಳೊಂದಿಗೆ ಆಗಸ್ಟ್ 25ಕ್ಕೆ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಿತ್ತು. ರಿಲೀಸ್ ಆದ ಮೊದಲ ದಿನವೇ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ 'ಲೈಗರ್' ಮೊದಲ ದಿನದಿಂದ ಸೋಲಿನ ಸುಳಿಗೆ ಸಿಲುಕಿ ಒದ್ದಾಡುತ್ತಿದೆ. ಅಲ್ಲದೆ ಹೀರೊ ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ವಿರುದ್ಧವೂ ವ್ಯಾಪಕ ಟೀಕೆ ವ್ಯಕ್ತವಾಗಿದ್ದವು.

ಇದೇ ವೇಳೆ ಮುಂಬೈನ ಮರಾಠಾ ಮಂದಿರ ಥಿಯೇಟರ್‌ನ ಮಾಲೀಕ ಮನೋಜ್ ದೇಸಾಯಿ ಕೂಡ ಕಮೆಂಟ್ ಮಾಡಿದ್ದರು. ವಿಜಯ್ ದೇವರಕೊಂಡ ವಿರುದ್ಧ ಅವರು ಮಾಡಿದ ಗಂಭೀರ ಆರೋಪ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ಬಳಿಕ ವಿಜಯ್ ದೇವರಕೊಂಡ ಥಿಯೇಟರ್ ಮಾಲೀಕ ಮನೋಜ್ ದೇಸಾಯಿಯವರನ್ನು ಭೇಟಿ ಮಾಡಿ ಶಾಕ್ ಕೊಟ್ಟಿದ್ದಾರೆ.

ಮಾರ್ಷಲ್ ಆರ್ಟ್ಸ್ ಹಿನ್ನೆಲೆ

ಮಾರ್ಷಲ್ ಆರ್ಟ್ಸ್ ಹಿನ್ನೆಲೆ

ಪುರಿ ಜಗನ್ನಾಥ್ ಟಾಲಿವುಡ್‌ನಲ್ಲಿ ಡೇರಿಂಗ್ ಡೈರೆಕ್ಟರ್. ಅಲ್ಲದೆ ವಿಜಯ್ ದೇವರಕೊಂಡ ಮಾಸ್ ಹೀರೋ. ಇಬ್ಬರ ಸಿನಿಮಾಗಳಿಗೂ ಸಾಕಷ್ಟು ಕ್ರೇಜ್ ಇದೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಮೊದಲ ಸಿನಿಮಾವೇ 'ಲೈಗರ್'. ಮಿಕ್ಸ್ಡ್‌ ಮಾರ್ಷಲ್ ಆರ್ಟ್ಸ್ ಹಿನ್ನೆಲೆಯಲ್ಲಿ ಕಥೆಯನ್ನು ಹೆಣೆದು ಸಿನಿಮಾ ಮಾಡಲಾಗಿತ್ತು. ಆದರೂ ಸಿನಿಮಾ ಗೆಲ್ಲಲಿಲ್ಲ. ಇದಕ್ಕೆ ಕಾರಣ ಹೇಳುವಾಗ ಮನೋಜ್ ದೇಸಾಯಿ ಕೊಂಡ ಕೊಂಡ ಅಲ್ಲ ಅನಕೊಂಡ ಎಂದು ಆಕ್ರೋಶ ಹೊರಹಾಕಿದ್ದರು.

ದೇಸಾಯಿ ಬೇಟಿ ಮಾಡಿದ ವಿಜಯ್

ದೇಸಾಯಿ ಬೇಟಿ ಮಾಡಿದ ವಿಜಯ್

ಮುಂಬೈ ಮರಾಠಾ ಮಂದಿರ ಥಿಯೇಟರ್‌ನ ಮಾಲೀಕ ಮನೋಜ್ ದೇಸಾಯಿ ಮೊದಲ ದಿನವೇ ಕಿಡಿ ಕಾರಿದ್ದರು. ಸಿನಿಮಾ ಪ್ರಚಾರದ ವೇಳೆ ವಿಜಯ್ ದೇವರಕೊಂಡ ನಡೆದುಕೊಂಡ ರೀತಿಯನ್ನು ಟೀಕೆ ಮಾಡಿದ್ದರು. ಈ ವಿಷಯ ತಿಳಿದ ವಿಜಯ್ ದೇವರಕೊಂಡ ಹೈದರಾಬಾದ್‌ನಿಂದ ನೇರವಾಗಿ ಮನೋಜ್ ದೇಸಾಯಿ ಭೇಟಿ ಮಾಡಲು ತೆರಳಿದ್ದರು.

ಒಳ್ಳೆ ಸಿನಿಮಾ ಮಾಡುವ ಭರವಸೆ

ಒಳ್ಳೆ ಸಿನಿಮಾ ಮಾಡುವ ಭರವಸೆ

ಹೈದರಾಬಾದ್‌ನಿಂದ ವಿಜಯ್ ದೇವರಕೊಂಡ ಥಿಯೇಟರ್ ಮಾಲೀಕ ಮನೋಜ್ ದೇಸಾಯಿ ಅವರನ್ನು ಭೇಟಿ ಮಾಡಲು ಬಂದಿದ್ದರು. ಮನೋಜ್ ದೇಸಾಯಿ ಅವರನ್ನು ವಿಜಯ್ ಭೇಟಿ ಮಾಡಿದ ಬಳಿಕ ಕಮೆಂಟ್ ಮಾಡಿದ್ದಾರೆ. "ನನ್ನ ತಿಳುವಳಿಕೆಯನ್ನು ನಿವಾರಿಸಲು ವಿಜಯ್ ಮುಂಬೈಗೆ ಬಂದಿದ್ದಾರೆ. ಒಬ್ಬ ಸ್ಟಾರ್ ನಟನಾಗಿ ಅವರು ಉತ್ತಮ ನಡವಳಿಕೆ ತೋರಿಸಿದ್ದಾರೆ. ಮುಂದೆ ಒಳ್ಳೆಯ ಚಿತ್ರಗಳನ್ನು ಮಾಡುತ್ತೇನೆ." ಎಂದು ಮನೋಜ್ ದೇಸಾಯಿ ಭರವಸೆ ನೀಡಿದ್ದಾರೆ ಎಂದಿದ್ದಾರೆ.

ಕೊಂಡ ಅಲ್ಲ ಅನಕೊಂಡ

ಕೊಂಡ ಅಲ್ಲ ಅನಕೊಂಡ

ವಿಜಯ್ ದೇವರಕೊಂಡ ಅಲ್ಲ ಅನಕೊಂಡ ಅಂತ ಮನೋಜ್ ದೇಸಾಯಿ ಕಿಡಿಕಾರಿದ್ದರು. "ವಿಜಯ್ ದೇವರಕೊಂಡ ಆಡಿದ ಮಾತುಗಳು ಹಾಗೂ ಅವರ ವರ್ತನೆ ಚಿತ್ರಮಂದಿರಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಮೇಲೆ ತೀವ್ರ ಪರಿಣಾಮ ಬೀರಿದೆ." ಎಂದು ಥಿಯೇಟರ್ ಮಾಲೀಕ ಮನೋಜ್ ದೇಸಾಯಿ ತೀವ್ರ ಆಕ್ರೋಶ ಹೊರಹಾಕಿದ್ದರು.

More from Filmibeat

English summary
Vijay Devarakonda Met Maratha Mumbai Theatre Owner Manoj Desai, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X