'ಲೈಗರ್' ಆ ಸಿನಿಮಾದ ರಿಮೇಕ್ ಅಲ್ವೇ ಅಲ್ಲ: ವಿಜಯ್ ದೇವರಕೊಂಡ ಖಡಕ್ ರೆಸ್ಪಾನ್ಸ್!
ಟಾಲಿವುಡ್‌ನ ಹ್ಯಾಂಡ್‌ಸಮ್ ಹೀರೊ ವಿಜಯ್ ದೇವರಕೊಂಡ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರೋದು ಗೊತ್ತೇ ಇದೆ. ಪುರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್‌ನ 'ಲೈಗರ್' ಸಿನಿಮಾ ಕಳೆದ ಹಲವು ದಿನಗಳಿಂದ ಈ ಬೇಜಾನ್ ಸದ್ದು ಮಾಡುತ್ತಿದೆ. ಅದರಲ್ಲೂ ವಿಜಯ್ ರಗಡ್ ಲುಕ್ ನೋಡಿ ಫ್ಯಾನ್ಸ್ ಅಂತೂ ಕಳೆದು ಹೋಗಿದ್ದಾರೆ.
'ಲೈಗರ್' ವಿಜಯ್ ದೇವರಕೊಂಡ ಅಭಿನಯದ ಪ್ಯಾನ್ ಇಂಡಿಯಾದ ಸಿನಿಮಾ. ಈಗಾಗಲೇ ವಿಜಯ್ ಹಲವು ಭಾಷೆಗಳಲ್ಲಿ ತಮ್ಮ ಸಿನಿಮಾ ರಿಲೀಸ್ ಮಾಡಿ, ಗೆಲ್ಲುವ ಸಾಹಸಕ್ಕೆ ಕೈ ಹಾಕಿದ್ದರು. ಆದರೆ, ಆ ಪ್ರಯತ್ನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಿರಲಿಲ್ಲ. ಈಗ 'ಲೈಗರ್' ಮೂಲಕ ಮತ್ತೊಮ್ಮೆ ಆ ಪ್ರಯತ್ನಕ್ಕೆ ವಿಜಯ್ ದೇವರಕೊಂಡ ಮುಂದಾಗಿದ್ದಾರೆ. ಕೆಲವು ದಿನಗಳ ಹಿಂದೆ ಈ ಸಿನಿಮಾ ರಿಮೇಕ್ ಎಂಬ ಸುದ್ದಿ ಹಬ್ಬಿತ್ತು. ಅದಕ್ಕೀಗ ವಿಜಯ್ ದೇವರಕೊಂಡ ಪ್ರತಿಕ್ರಿಯೆ ನೀಡಿದ್ದಾರೆ.
ಪುರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ ಇಬ್ಬರ ಕಾಂಬಿನೇಷನ್ ಮೇಲೆ ಇಡೀ ದೇಶವೇ ಕಣ್ಣಿಟ್ಟಿದೆ. ಅದರಲ್ಲೂ ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾ ನೋಡಲು ಇಡೀ ದೇಶವೇ ಕಾದು ಕೂತಿರೋದಂತೂ ಪಕ್ಕಾ. ಆದರೆ, ಹಲವು ದಿನಗಳಿಂದ ಓಡಾಡುತ್ತಿದ್ದ 'ಲೈಗರ್' ಸುದ್ದಿಗೆ ವಿಜಯ್ ಪ್ರತಿಕ್ರಿಯೆ ನೀಡಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ 'ಲೈಗರ್'
'ಲೈಗರ್' ಪ್ಯಾನ್ ಇಂಡಿಯಾ ಸಿನಿಮಾ. ವಿಜಯ್ ದೇವರಕೊಂಡ ಸಿನಿಮಾ ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಆದರೆ, ಮೂರು ಭಾಷೆಗಳಿಗೆ ಡಬ್ ಮಾಡಿದ್ದು, ಉಳಿದ ತೆಲುಗು ಹಾಗೂ ತಮಿಳಿನಲ್ಲಿ ಈ ಸಿನಿಮಾವನ್ನು ಏಕಕಾಲಕ್ಕೆ ಶೂಟ್ ಮಾಡಲಾಗಿದೆ. ಈ ಕಾರಣಕ್ಕೆ ಉತ್ತರ ಭಾರತದ ಬಾಕ್ಸಾಫೀಸ್ ಮೇಲೆ ವಿಜಯ್ ದೇವರಕೊಂಡ ಎಂಬ ಟೀಮ್ ಕಣ್ಣಿಟ್ಟಿದೆ. 'ಲೈಗರ್' ಟ್ರೈಲರ್ ರಿಲೀಸ್ ಆದಾಗ, ಇದು ಪುರಿ ಜಗನ್ನಾಥ್ ಅವರದ್ದೇ ಸಿನಿಮಾದ ರಿಮೇಕ್ ಎಂಬ ಸುದ್ದಿ ಹಬ್ಬಿತ್ತು. ಅದಕ್ಕೀಗ ವಿಜಯ್ ದೇವರಕೊಂಡ ಪ್ರತಿಕ್ರಿಯೆ ನೀಡಿದ್ದಾರೆ.

'ಲೈಗರ್' ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಸಿನಿಮಾ
ಕೆಲವು ದಿನಗಳ ಹಿಂದೆ 'ಲೈಗರ್' ಪುರಿ ಜಗನ್ನಾಥ್ ನಿರ್ದೇಶಿಸಿದ ಬ್ಲಾಕ್‌ಬಸ್ಟರ್ ಸಿನಿಮಾ 'ಅಮ್ಮ ನಾನ್ನ ಓ ತಮಿಳ ಅಮ್ಮಾಯಿ' ರಿಮೇಕ್ ಎಂಬ ಸುದ್ದಿ ಹಬ್ಬಿತ್ತು. ಆದ್ರೀಗ ವಿಜಯ್ ದೇವರಕೊಂಡ ರಿಮೇಕ್ ಎನ್ನುವ ಸುದ್ದಿಗೆ ಪ್ರತಿಕ್ರಿಯೆ ನೀಡಿದ್ದಾರೆ. " ಮೊದಲಿಗೆ ಅಮ್ಮ ನಾನ್ನ ಓ ತಮಿಳ ಅಮ್ಮಾಯಿ' ಸಿನಿಮಾ ನನ್ನ ಫೇವರಿಟ್ ಸಿನಿಮಾ. ಈ ಸಿನಿಮಾವನ್ನು ರಿಮೇಕ್ ಮಾಡಬೇಕು ಅಂದರೆ, ಪರ್ಫೆಕ್ಟ್ ಆಗಿ ಮಾಡಬೇಕು. ನಾನು ರಿಮೇಕ್ ಸಿನಿಮಾ ಮಾಡುವುದಿಲ್ಲ." ಎಂದು ಪತ್ರಿಕಾಗೋಷ್ಠಿಯಲ್ಲಿ ವಿಜಯ್ ದೇವರಕೊಂಡ ಹೇಳಿದ್ದಾರೆ.

ರಿಮೇಕ್ ಸಿನಿಮಾ ಮಾಡೋದಿಲ್ಲ ಎಂದ ವಿಜಯ್
ವಿಜಯ್ ದೇವರಕೊಂಡ ಇದೇ ಪ್ರತಿಕಾಗೋಷ್ಠಿಯಲ್ಲಿ ಕೊಟ್ಟ ಮತ್ತೊಂದು ಹೇಳಿಕೆ ಕೂಡ ಸಂಚಲ ಸೃಷ್ಟಿಸಿದೆ. "ನಾನು ರಿಮೇಕ್ ಸಿನಿಮಾ ಮಾಡುವುದಿಲ್ಲ ಎಂದು ನಿಮಗೆ ಭರವಸೆ ನೀಡುತ್ತೇನೆ. ಅಲ್ಲದೆ ರಿಮೇಕ್ ಸಿನಿಮಾಗೆ ಹತ್ತಿರ ಎನ್ನಿಸುವಂತಹ ಸಿನಿಮಾವನ್ನು ಕೂಡ ನಾನು ಮಾಡುವುದಿಲ್ಲ." ಎಂದು ವಿಜಯ್ ದೇವರಕೊಂಡ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ವಿಜಯ್ ದೇವರಕೊಂಡ ಮುಂದೆ ನಟಿಸುವ ಎಲ್ಲಾ ಸಿನಿಮಾಗಳೂ ಕೂಡ ಸ್ವಮೇಕ್ ಆಗಿರುತ್ತೆ ಅನ್ನೋದಂತೂ ಪಕ್ಕಾ.

ರೌಡಿ ಭಂಗಿ ಬಗ್ಗೆನೂ ಚರ್ಚೆ
ವಿಜಯ್ ದೇವರಕೊಂಡ ಪ್ರೆಸ್‌ಮೀಟ್‌ನಲ್ಲಿ ಕೂತ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಲವರು ಈ ಫೋಟೊ ಬಗ್ಗೆ ಪಾಸಿಟಿವ್ ಆಗಿ ಮಾತಾಡುತ್ತಿದ್ದರೆ. ಮತ್ತೆ ಕೆಲವರು ಈ ಭಂಗಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಹಳ ದಿನಗಳ ಬಳಿಕ ವಿಜಯ್ ದೇವರಕೊಂಡ ಪ್ರತಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಪತ್ರಕರ್ತರು ಪ್ಯಾನ್ ಇಂಡಿಯಾ ಸ್ಟಾರ್ ಆದ್ಮೇಲೆ ಮಾತಿಗೆ ಸಿಗುವುದಿಲ್ಲ ಎಂದು ಪ್ರಶ್ನೆ ಮಾಡಿದ್ದರು. ಆಗ ವಿಜಯ್ ಟೇಬಲ್ ಮೇಲೆ ಕಾಲಿಟ್ಟು ಕಂಫರ್ಟಬಲ್ ಆಗಿ ಪ್ರಶ್ನೆ ಎಂದು ಹೇಳಿದ್ದರು. ಅದೇ ಫೋಟೊ ಈಗ ವೈರಲ್ ಆಗುತ್ತಿದೆ.


Click it and Unblock the Notifications