ದಿ ಫ್ಯಾಮಿಲಿ ಸ್ಟಾರ್ ಗಳಿಕೆ ಕುಸಿಯಲು ಆ ಗುಂಪು ಕಾರಣ ; ಪೊಲೀಸರಿಗೆ ದೂರು ನೀಡಿದ ವಿಜಯ್ ದೇವರಕೊಂಡ ಟೀಮ್..!
ಪತ್ರಿಕಾ, ಟಿವಿ ಮಾಧ್ಯಮಗಳಿಗೆ ಸೋಶಿಯಲ್ ಮೀಡಿಯಾ ಕಾಂಪಿಟೇಷನ್ ಕೊಡಲು ಶುರುವಾದ ಮೇಲಂತೂ ಫೇಸ್ ಬುಕ್, ಎಕ್ಸ್, ಯೂಟ್ಯೂಬ್, ಇನ್ ಸ್ಟಾಗ್ರಾಂ ಇತ್ಯಾದಿ ಜಾಲ ತಾಣಗಳ ಅಬ್ಬರ ಅಷ್ಟಿಷ್ಟಲ್ಲ. ವ್ಯೂವರ್ ಶಿಪ್ ಹಾಗೂ ಲೈಕ್ ಗಳಿಗಾಗಿ ''ಫೇಕ್ ನ್ಯೂಸ್'' ಗಳನ್ನು ಹರಡಿ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನ ಅನೇಕರು ಮಾಡುತ್ತಿದ್ದಾರೆ. ಇನ್ನೂ ಕೆಲವರು ''ಟ್ರೋಲ್'' ಹೆಸರಿನಲ್ಲಿ ಸಭ್ಯತೆಯ ಗಡಿಯನ್ನ ದಾಟುತ್ತಿದ್ದಾರೆ. ನಮ್ಮನ್ನ ಯಾರು ಕೇಳುವವರು ಎಂಬ ಮನೋಭಾವದಲ್ಲಿಯೇ, ತೀರಾ ಕೀಳು ಮಟ್ಟದಲ್ಲಿ ಟ್ರೋಲ್ ಮಾಡಿ ತಮ್ಮ ವಿಕೃತಿಯನ್ನ ಮೆರೆಯುತ್ತಿದ್ದಾರೆ. ಸದ್ಯಕ್ಕೆ ''ದಿ ಫ್ಯಾಮಿಲಿ ಸ್ಟಾರ್'' ಇಂತಹವರ ವಿರುದ್ಧ ಸಮರ ಸಾರಿದ್ದಾನೆ.
ಹೌದು, ''ದಿ ಫ್ಯಾಮಿಲಿ ಸ್ಟಾರ್''. ''ವಿಜಯ್ ದೇವರಕೊಂಡ'' ಅಭಿನಯದ ಸಿನಿಮಾ. ಮೊನ್ನೆಯಷ್ಟೇ ತೆರೆಗೆ ಬಂದ ಈ ಚಿತ್ರ ಬೇರೆ ಚಿತ್ರಗಳಿಗೆ ಪೈಪೋಟಿ ನೀಡುವುದು ಇರಲಿ, ಉತ್ತಮ ಆರಂಭವನ್ನೂ ಪಡೆಯಲಿಲ್ಲ. ಚಿತ್ರದ ಗಳಿಕೆ ಅಂದುಕೊಂಡತೆ ಆಗಲಿಲ್ಲ. ಈ ಕಾರಣಕ್ಕೆ ಹೈರಾಣಾಗಿರುವ ವಿಜಯ್ ದೇವರಕೊಂಡ ಹಾಗೂ ದಿ ಫ್ಯಾಮಿಲಿ ಸ್ಟಾರ್ ಚಿತ್ರತಂಡ ''ಸಾಮಾಜಿಕ ಜಾಲತಾಣ''ದ ವಿರುದ್ಧ ತಿರುಗಿ ಬಿದ್ದಿದೆ. ತಮ್ಮ ಚಿತ್ರವನ್ನ ಹಾಗೂ ವಿಜಯ್ ದೇವರಕೊಂಡ ಅವರನ್ನ ''ಟ್ರೋಲ್'' ಮಾಡಿದವರನ್ನ ಹುಡಕಿ, ಸರಿಯಾದ ಬುದ್ದಿ ಕಲಿಸಿ ಎಂದು ''ಸೈಬರ್ ಕ್ರೈಂ ಪೊಲೀಸ್ ಠಾಣೆ''ಯ ಮೆಟ್ಟಿಲನ್ನೇರಿದೆ.

ವಿಜಯ್ ದೇವರಕೊಂಡ ಅವರನ್ನ ಮೊದಲಿಂದ ''ದ್ವೇಷ'' ಮಾಡುವ ನಿರ್ದಿಷ್ಟ ''ಗುಂಪು'', ದಿ ಫ್ಯಾಮಿಲಿ ಸ್ಟಾರ್ ಚಿತ್ರಕ್ಕೆ ಅಡ್ಡಗಾಲು ಹಾಕುತ್ತಿದೆ. ಚಿತ್ರ ಚೆನ್ನಾಗಿದ್ದರು, ಚೆನ್ನಾಗಿಲ್ಲ ಎಂದು ''ತಪ್ಪು ಮಾಹಿತಿ''ಯನ್ನ ಇದೇ ಗುಂಪು ಹರಡುತ್ತಿದೆ. ಟ್ರೋಲ್ ಗಳನ್ನ ಮಾಡುತ್ತಿದೆ. ಇದೆಲ್ಲದರಿಂದಾಗಿ ದಿ ಫ್ಯಾಮಿಲಿ ಸ್ಟಾರ್ ಚಿತ್ರದ ''ಗಳಿಕೆ''ಗೆ ಪೆಟ್ಟು ಬಿದ್ದಿದೆ. ದಯವಿಟ್ಟು ಕ್ರಮ ಕೈಗೊಳ್ಳಿ ಎಂದು ವಿಜಯ್ ದೇವರಕೊಂಡ ಅವರ ಮ್ಯಾನೇಜರ್ ಹಾಗೂ ಅಭಿಮಾನಿ ಸಂಘದ ಅಧ್ಯಕ್ಷರು ''ಸ್ಕ್ರೀನ್ ಶಾಟ್'' ಗಳ ಸಮೇತ ''ಮಾಧಾಪುರ್ ಪೊಲೀಸ್ ಠಾಣೆ''ಯಲ್ಲಿ ದೂರನ್ನ ನೀಡಿದ್ದಾರೆ.

ಸದ್ಯ ದೂರನ್ನ ಸ್ವೀಕರಿಸಿರುವ ಪೊಲೀಸರು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಟ್ರೋಲ್ ಮಾಡಿದವರ ''ಐಡಿ''ಗಳನ್ನ ಟ್ರ್ಯಾಕ್ ಮಾಡಿ ಸೆರೆಹಿಡಿಯುವ ಭರವಸೆಯನ್ನೂ ನೀಡಿ ಚಿತ್ರತಂಡಕ್ಕೆ ಕಳಿಸಿದ್ದಾರೆ ಅನ್ನುವ ಸುದ್ದಿ ಸದ್ಯಕ್ಕೆ ಆಂಧ್ರದಲ್ಲಿ ಕೇಳಿ ಬರುತ್ತಿದೆ.
ಅಂದ್ಹಾಗೇ ಮೊದಲ ದಿನ 05 ಕೋಟಿ 75 ಲಕ್ಷವನ್ನ ಗಳಿಸಿದ್ದ ದಿ ಫ್ಯಾಮಿಲಿ ಸ್ಟಾರ್ ಎರಡನೇ ದಿನ ಗಳಿಸಿದ್ದು ಕೇವಲ 03 ಕೋಟಿ 02 ಲಕ್ಷ ಮಾತ್ರ. ಇನ್ನೂ ನಿನ್ನೆ ಭಾನುವಾರ ಚಿತ್ರದ ಗಳಿಕೆ ಹೆಚ್ಚಾಗಬಹುದು ಅನ್ನುವ ಭರವಸೆ ಚಿತ್ರತಂಡಕ್ಕೆ ಇತ್ತು. ಆದರೆ ಪ್ರೇಕ್ಷಕರು ಬರಲಿಲ್ಲ. 03 ಕೋಟಿಯ ಮೇಲೆ ಒಂದು ರೂಪಾಯಿಯನ್ನೂ ಕೂಡ ಚಿತ್ರ ಗಳಿಸಲಿಲ್ಲ.
ಹೀಗಾಗಿ ಸದ್ಯಕ್ಕೆ ಕೆಂಗೆಟ್ಟಿರುವ ವಿಜಯ್ ದೇವರಕೊಂಡ ಹಾಗೂ ದಿ ಫ್ಯಾಮಿಲಿ ಸ್ಟಾರ್ ಚಿತ್ರತಂಡ, ಸೈಬರ್ ಕೈಮ್ ಪೊಲೀಸ್ ಠಾಣೆಯ ಸಹಾಯವನ್ನ ಬೇಡಿದೆ. ದೂರನ್ನ ನೀಡಿದೆ. ಪೊಲೀಸರ ಬಲೆಗೆ ವಿಜಯ್ ದೇವರಕೊಂಡ ಅವರನ್ನ ಟ್ರೋಲ್ ಮಾಡಿದ ಗುಂಪು ಸಿಲುಕಿಕೊಳ್ಳುತ್ತಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ


Click it and Unblock the Notifications












