ವಿಜಯ್ ದೇವರಕೊಂಡ-ರಶ್ಮಿಕಾ ಇಬ್ಬರಲ್ಲಿ ಯಾರ ಶ್ರೀಮಂತರು? ಇಬ್ಬರ ಒಟ್ಟು ಆಸ್ತಿ ಎಷ್ಟು?
ಭಾರತೀಯ ಚಿತ್ರರಂಗದ ಬಹುಬೇಡಿಕೆಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಈ ಜೋಡಿ ಕುಟುಂಬಸ್ಥರು, ಆತ್ಮೀಯರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ನಾಳೆ (ಫೆಬ್ರವರಿ 26) ಸಪ್ತಪದಿ ತುಳಿಯಲಿದ್ದಾರೆ. ಈಗಾಗಲೇ ರಾಜಸ್ಥಾನದ ಉದಯಪುರ ಮದುವೆ ಸಂಭ್ರಮದಲ್ಲಿ ಮುಳುಗಿ ಹೋಗಿದೆ.
ಈಗಾಗಳೇ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದುವೆಯ ಶಾಸ್ತ್ರಗಳು ಆರಂಭ ಆಗಿವೆ. ಹಳದಿ, ಮೆಹಂದಿ ಸೇರಿದಂತೆ ಸಂಪ್ರದಾಯದಂತೆ ಇಬ್ಬರ ಮದುವೆ ಶಾಸ್ತ್ರಗಳು ಗ್ರ್ಯಾಂಡ್ ಆಗಿ ನಡೆಯುತ್ತಿವೆ. ಮದುವೆ ಶಾಸ್ತ್ರಗಳ ಜೊತೆಗೆ ರಾಜಸ್ಥಾನದ ಉದಯಪುರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗಣ್ಯರು ಕೂಡ ಆಗಮಿಸುತ್ತಿದ್ದಾರೆ. ನಟಿ ಆಶಿಕಾ ರಂಗನಾಥ್ ಕೂಡ ಈಗಾಗಲೇ ಉದಯಪುರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಬಗ್ಗೆನೇ ಚರ್ಚೆಯಾಗುತ್ತಿದೆ. ಈ ಜೋಡಿ ವಿವಾಹಕ್ಕೆ ದಿಗ್ಗಜರು ಆಗಮಿಸುತ್ತಿದ್ದಾರೆ. ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕೂಡ ಈಗಾಗಲೇ ಉದಯಪುರಕ್ಕೆ ಆಗಮಿಸಿದ್ದಾರೆ. ದಿನದಿಂದ ದಿನಕ್ಕೆ ಈ ಜೋಡಿಯ ವಿವಾಹ ಸಂಭ್ರಮ ಹೆಚ್ಚಾಗುತ್ತಲೇ ಇದೆ. ಹಾಗಿದ್ದರೆ, ಇಬ್ಬರಲ್ಲಿರುವ ಆಸ್ತಿ ಎಷ್ಟು? ಯಾರ ಬಳಿ ಹೆಚ್ಚು ಹಣವಿದೆ? ಒಬ್ಬರ ಆಸ್ತಿಯನ್ನು ಸೇರಿಸಿದರೆ ಎಷ್ಟಾಗುತ್ತೆ? ಇಲ್ಲಿದೆ ಒಂದು ರಿಪೋರ್ಟ್.
ವಿಜಯ್-ರಶ್ಮಿಕಾ ಲೈಫ್ ಸ್ಟೈಲ್
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಯಶಸ್ಸನ್ನು ನೋಡಿದವರು. ಇಬ್ಬರಿಗೂ ನೇಮ್-ಫೇಮ್ ಕೂಡ ಸಿಕ್ಕಿದ್ದು ಹೆಚ್ಚು ಕಡಿಮೆ ಒಂದೇ ಸಮಯಕ್ಕೆ. ಅಲ್ಲದೇ ಈ ಜೋಡಿ ನಟಿಸಿದ ಮೊದಲ ಸಿನಿಮಾ ಕೂಡ ಮೆಗಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 'ಗೀತಾ ಗೋವಿಂದಂ' ಸಿನಿಮಾ ಬ್ಲಾಕ್ಸ್ ಆಫೀಸ್‌ನಲ್ಲಿ ₹100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಅಲ್ಲಿಂದ ಇವರ ಕರಿಯರ್ ಬದಲಾಯ್ತು. ರಶ್ಮಿಕಾ ತೆಲುಗು, ತಮಿಳು ಅಷ್ಟೇ ಅಲ್ಲದೆ, ಬಾಲಿವುಡ್ ಕಡೆಗೂ ಪಯಣ ಬೆಳೆಸಿದ್ಮೇಲೆ ಒಟ್ಟು ಆಸ್ತಿಯಲ್ಲಿ ಮತ್ತಷ್ಟು ಹೆಚ್ಚಾಯ್ತು.
ರಶ್ಮಿಕಾ ಬಳಿ ಇರುವ ಆಸ್ತಿ ಎಷ್ಟು?
ರಶ್ಮಿಕಾ ಮಂದಣ್ಣ ಅತೀ ಹೆಚ್ಚು ಬ್ಯುಸಿಯಾಗಿರುವ ಭಾರತದ ನಟಿ. ಕನ್ನಡದಿಂದ ಶುರುವಾಗಿದ್ದ ನಟಿಯ ಸಿನಿಮಾ ಜರ್ನಿ ಬಾಲಿವುಡ್‌ವರೆಗೂ ಬಂದು ನಿಂತಿದೆ. ಫೋರ್ಬ್ಸ್ ವರದಿ ಮಾಡಿರುವಂತೆ 2026ರ ಆರಂಭದ ಹೊತ್ತಿಗೆ ರಶ್ಮಿಕಾ ಮಂದಣ್ಣ ಅವರ ಒಟ್ಟು ಆಸ್ತಿಯ ಮೌಲ್ಯ ₹66 ಕೋಟಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಬಹುಪಾಲು ಸಿನಿಮಾದ ಸಂಭಾವನೆಯಿಂದಲೇ ಬಂದಿದೆ.

ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಸಂಭಾವನೆಯಲ್ಲಿ ಏರಿಕೆಯಾಗಿದೆ. ಒಂದು ಸಿನಿಮಾಗೆ ₹4 ಕೋಟಿಯಿಂದ ₹8 ಕೋಟಿವರೆಗೂ ಸಂಭಾವನೆ ಪಡೆಯುತ್ತಾರೆಂದು ವರದಿಯಾಗಿದೆ. ಅಲ್ಲು ಅರ್ಜುನ್ ಜೊತೆ ನಟಿಸಿದ 'ಪುಷ್ಟ 2' ಸಿನಿಮಾಗೆ ರಶ್ಮಿಕಾ ಮಂದಣ್ಣ ₹10 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಸಿನಿಮಾದ ಜೊತೆ ಜಾಹೀರಾತುಗಳಿಂದಲೂ ಹಣ ಗಳಿಸುತ್ತಿದ್ದಾರೆ. ಇವರ ಬಳಿ ಕಲ್ಯಾಣ ಜ್ಯುವೆಲರ್ಸ್, 7ಅಪ್, ಮೀಶೋ ಸೇರಿದಂತೆ ಹಲವು ಬ್ರ್ಯಾಂಡ್‌ಗಳು ಇವರ ಕೈಯಲ್ಲಿವೆ. ಹೈದರಾಬಾದ್, ಬೆಂಗಳೂರು ಹಾಗೂ ಕೊಡಗಿನಲ್ಲಿ ಪ್ರಾಪರ್ಟಿಯಿದೆ. ಹಾಗೇ ಔಡಿ 3, ರೇಂಜ್ ರೋವರ್ ಸ್ಪೋರ್ಟ್, ಮರ್ಸಿಡೀಸ್ ಬೆಂಜ್ ಸಿ-ಕ್ಲಾಸ್ ಅಂತಹ ದುಬಾರಿ ಕಾರುಗಳಿವೆ ಎಂದು ಲೈವ್ ಮಿಂಟ್ ವರದಿ ಮಾಡಿದೆ.
ವಿಜಯ್ ದೇವರಕೊಂಡ ಆಸ್ತಿ ಎಷ್ಟು?
ಇನ್ನು ವಿಜಯ್ ದೇವರಕೊಂಡ ಏನೂ ಕಮ್ಮಿಯಿಲ್ಲ. ಲೈಫ್ ಸ್ಟೈಲ್ ಏಷ್ಯಾ ವರದಿ ಮಾಡಿದಂತೆ ವಿಜಯ್ ದೇವರಕೊಂಡ ಬಳಿಕ ₹66 ಕೋಟಿಯಿಂದ ₹70 ಕೋಟಿ ಆಸ್ತಿಯಿದೆ ಎಂದು ಹೇಳಲಾಗುತ್ತಿದೆ. ವಿಜಯ್ ದೇವರಕೊಂಡ ಒಂದು ಸಿನಿಮಾಗೆ ₹12 ಕೋಟಿಯಿಂದ ₹15 ಕೋಟಿ ಚಾರ್ಜ್ ಮಾಡುತ್ತಾರೆಂದು ಹೇಳಲಾಗಿದೆ. ಇನ್ನು ವಿಜಯ್ 'ರೌಡಿ' ಅನ್ನೋ ತನ್ನದೇ ಸ್ವಂತ ಬ್ರ್ಯಾಂಡ್ ಹೊಂದಿದ್ದಾರೆ. ಇದರಿಂದ ವರ್ಷಕ್ಕೆ ₹8 ಕೋಟಿ ಗಳಿಸುತ್ತಾರೆ. ಬ್ರ್ಯಾಂಡ್ ಪ್ರಚಾರಕ್ಕೆ ₹1 ರಿಂದ ₹2 ಕೋಟಿ, ಹಾಗೇ ಒಂದು ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ₹40 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ. ಹೀಗಾಗಿ ಇಬ್ಬರೂ ಸಮನಾದ ಆಸ್ತಿ ಹೊಂದಿದ್ದು, ಒಟ್ಟು ಸೇರಿಸಿದರೆ ₹132 ಕೋಟಿಯಿಂದ ₹136 ಕೋಟಿ ಆಗಬಹುದೆಂದು ಲೈವ್ ಮಿಂಟ್ ವರದಿ ಮಾಡಿದೆ.


Click it and Unblock the Notifications











