ಸಾಯಿ ಪಲ್ಲವಿ ಬಳಿಕ ಸಮಂತಾ ಕನ್ನಡಕ್ಕೆ ಎಂಟ್ರಿ : ಇದು ಕಾಮನ್ ಲವ್ ಸ್ಟೋರಿ ಅಲ್ಲ

ಟಾಲಿವುಡ್‌ ಮಂದಿ ಡಿಫ್ರೆಂಟ್ ಕಾಂಬಿನೇಷನ್‌ ಮೇಲೆ ವರ್ಕ್ ಮಾಡುತ್ತಿದ್ದಾರೆ. ಜನರು ನೋಡಿದ ಜೋಡಿಯನ್ನೇ ತೆರೆಮೇಲೆ ನೋಡುವುದು ಬೇಡ. ಅದರಲ್ಲೂ ರೊಮ್ಯಾಂಟಿಕ್ ಸಿನಿಮಾ ಅಂದ್ಮೇಲೆ ತೆರೆಮೇಲೆ ಹೊಸ ಜೋಡಿಯ ಕೆಮಿಸ್ಟ್ರಿಯನ್ನು ತೋರಿಸಲು ಸಜ್ಜಾಗಿದ್ದಾರೆ. ಇದಕ್ಕೊಂದು ಅತ್ಯುತ್ತಮ ಉದಾಹರಣೆ ಎಂದರೆ, ಸಮಂತಾ ಹಾಗೂ ವಿಜಯ್ ದೇವರಕೊಂಡ ಅಭಿನಯದ ಈ ಹೊಸ ಸಿನಿಮಾ.

ಸಮಂತಾ ಹಾಗೂ ವಿಜಯ್ ದೇವರಕೊಂಡ ಇದೇ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಇಬ್ಬರು ತೆರೆಮೇಲೆ ಹೇಗೆ ಕಾಣಿಸಿಕೊಳ್ಳಬಹುದು ಎಂಬ ಕುತೂಹಲವಂತೂ ಇದ್ದೇ ಇದೆ. ಈ ಕಾರಣಕ್ಕೆ ಚಿತ್ರತಂಡ ಚಿಕ್ಕದೊಂದು ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. ಈ ಲುಕ್ ಕೂಡ ಪ್ರೇಕ್ಷಕರ ಎದೆ ಬಡಿತವನ್ನು ಹೆಚ್ಚಿಸಿದೆ.

ವಿಚ್ಛೇದನದ ಬಳಿಕ ಸಮಂತಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಇತ್ತ ವಿಜಯ್ ದೇವರಕೊಂಡ ಕೂಡ 'ಲೈಗರ್' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಸಿನಿಮಾ ಇನ್ನೂ ಬಿಡುಗಡೆಯಾಗಬೇಕಿದ್ದರೂ, ಈಗಾಗಲೇ ಗ್ಲಿಂಮ್ಸ್ ಹಾಗೂ ಫಸ್ಟ್ ಲುಕ್‌ನಿಂದ ಗಮನ ಸೆಳೆದಿದ್ದಾರೆ. ಈಗ ಇವರಿಬ್ಬರೂ ಪಕ್ಕಾ ರೊಮ್ಯಾಂಟಿಕ್ ಜೋಡಿಯಾಗಿ ತೆರೆಮೇಲೆ ಬರಲು ಸಜ್ಜಾಗಿ ನಿಂತಿದೆ.

 'ಖುಷಿ' ಮೂಲಕ ಸಮಂತಾ ಕನ್ನಡಕ್ಕೆ ಎಂಟ್ರಿ

'ಖುಷಿ' ಮೂಲಕ ಸಮಂತಾ ಕನ್ನಡಕ್ಕೆ ಎಂಟ್ರಿ

ಟಾಲಿವುಡ್‌ನ ಹೊಚ್ಚ ಹೊಸ ಸಿನಿಮಾ 'ಖುಷಿ' ಅದ್ಧೂರಿಯಾಗಿ ಶೂಟಿಂಗ್ ಮಾಡುತ್ತಿದೆ. ಸಮಂತಾ ಹಾಗೂ ವಿಜಯ್ ದೇವರಕೊಂಡು ಈಗಾಗಲೇ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಶುರುವಾದ ವೇಳೆ ಇದು ಕನ್ನಡದಲ್ಲಿ ಬಿಡುಗಡೆಯಾಗುತ್ತಾ? ಅನ್ನೋದು ಸುಳಿವನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಆದ್ರೀಗ ಚಿತ್ರತಂಡ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು, ಕನ್ನಡದಲ್ಲೂ ಸಿನಿಮಾ ರಿಲೀಸ್ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಈ ಮೂಲಕ ಸಮಂತಾ ಕನ್ನಡಕ್ಕೆ ಎಂಟ್ರಿ ಕೊಟ್ಟಂತಾಗಿದೆ.

 ಕಾಮನ್ ಲವ್ ಸ್ಟೋರಿ ಅಲ್ಲ

ಕಾಮನ್ ಲವ್ ಸ್ಟೋರಿ ಅಲ್ಲ

ರಿಯಲ್ ಲೈಫ್‌ನಲ್ಲಿ ಕಾಂಪ್ಲಿಕೇಟೆಡ್ ರಿಲೇಷನ್‌ಶಿಪ್‌ನಿಂದ ಹೊರಬಂದಿರೋ ಸಮಂತಾಗೆ ತೆರೆಮೇಲೂ ಕಾಂಪ್ಲಿಕೇಟೆಡ್ ಲವ್‌ ಸ್ಟೋರಿ ಸಿಕ್ಕಿದೆ. ಮೋಷನ್ ಪೋಸ್ಟರ್‌ನಲ್ಲಿಯೇ ಇದೊಂದು ಕಾಮನ್ ಲವ್ ಸ್ಟೋರಿ ಅಲ್ಲ. ಕಾಂಪ್ಲಿಕೇಟೆಡ್ ಲವ್ ಸ್ಟೋರಿ ಎಂಬುದನ್ನು ಟೀಮ್ ರಿವೀಲ್ ಮಾಡಿದೆ. ಶಿವ ನಿರ್ವಾಣ ನಿರ್ದೇಶನದ ಈ ಸಿನಿಮಾ ಬಗ್ಗೆ ಈಗಾಗಲೇ ಕುತೂಹಲ ದುಪ್ಪಟ್ಟಾಗಿದೆ. ಇದೇ ನಿರ್ದೇಶಕ ಈ ಹಿಂದೆ ಸಮಂತಾ ನಟಿಸಿದ್ದ 'ಮಜಿಲಿ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಅದೂ ಕೂಡ ಕಾಂಪ್ಲಿಕೇಟೆಡ್ ಲವ್ ಸ್ಟೋರಿನೇ ಆಗಿತ್ತು. ಈಗ ಮತ್ತೊಂದು ಕ್ಲಿಷ್ಟಕರವಾದ ಪ್ರೇಮ್ ಕಹಾನಿಯನ್ನು ತೆರೆಮೇಲೆ ತರೋಕೆ ಮುಂದಾಗಿದ್ದಾರೆ.

 ಕಾಶ್ಮೀರದಲ್ಲಿ 'ಖುಷಿ' ಶೂಟಿಂಗ್

ಕಾಶ್ಮೀರದಲ್ಲಿ 'ಖುಷಿ' ಶೂಟಿಂಗ್

ಸಮಂತಾ ಹಾಗೂ ವಿಜಯ್ ದೇವರಕೊಂಡ ಇಬ್ಬರ ದೃಶ್ಯಗಳನ್ನು ಕಾಶ್ಮೀರದಲ್ಲಿ ಸೆರೆ ಹಿಡಿಯಲಾಗುತ್ತಿದೆ. ಈಗಾಗಲೇ ಕಾಶ್ಮೀರದಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ. ಫಸ್ಟ್‌ ಲುಕ್ ನೋಡಿದರೆ, ಇದು ಕಾಶ್ಮೀರದ ಕಥೆಯೇ ಇರಬೇಕು ಎಂದೆನಿಸುತ್ತೆ. ವಿಜಯ್ ದೇವರಕೊಂಡ ಕಾಶ್ಮೀರದ ನಿವಾಸಿ ಇರಬಹುದೆಂದು ಅನಿಸುತ್ತದೆ. ಈ ಕಾರಣಕ್ಕೆ ಕಾಶ್ಮೀರದಲ್ಲಿಯೇ ಶೂಟಿಂಗ್ ನಡೆಯುತ್ತಿದೆ ಎನ್ನಲಾಗಿದೆ.

 'ಖುಷಿ' ಹೆಸರಿನ ಸಿನಿಮಾ ಸೋತಿಲ್ಲ

'ಖುಷಿ' ಹೆಸರಿನ ಸಿನಿಮಾ ಸೋತಿಲ್ಲ

2000ದಲ್ಲಿ ವಿಜಯ್ ಹಾಗೂ ಜ್ಯೋತಿಕಾ ಅಭಿನಯದ ಸಿನಿಮಾ 'ಖುಷಿ' ತಮಿಳುನಾಡಿನಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು. ಅದೇ 2001ರಲ್ಲಿ ತೆಲುಗಿಗೆ ರಿಮೇಕ್ ಆಗಿತ್ತು. ತೆಲುಗಿನಲ್ಲೂ 'ಖುಷಿ' ಹೆಸರಿನಲ್ಲೇ ರಿಲೀಸ್ ಆಗಿತ್ತು. ಪವನ್ ಕಲ್ಯಾಣ್ ಹಾಗೂ ಭೂಮಿಕಾ ಈ ಸಿನಿಮಾದಲ್ಲಿ ನಟಿಸಿದ್ದರು. ಅದೂ ಕೂಡ ಸೂಪರ್ ಹಿಟ್ ಆಗಿತ್ತು. ಈಗ ಅದೇ ಹೆಸರಿಟ್ಟುಕೊಂಡು ಸಿನಿಮಾ ಶುರುವಾಗಿದೆ. ಸಮಂತಾ ಹಾಗೂ ವಿಜಯ್ ದೇವರಕೊಂಡ ಜೋಡಿ ಕ್ರೇಜ್ ಹುಟ್ಟಾಕುತ್ತಾ? ಅನ್ನುವ ಕುತೂಹಲವಿದೆ.

More from Filmibeat

English summary
Vijay Deverakonda and Samantha Movie Kushi First Look Out December 23 Release, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X