ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಆಪ್‌ಗಳ ಪ್ರಚಾರ: ವಿಜಯ್ ದೇವರಕೊಂಡಗೆ ಇಡಿ ವಿಚಾರಣೆ

ಅಕ್ರಮ ಬೆಟ್ಟಿಂಗ್ ಆಪ್ ಪ್ರಕರಣ ಟಾಲಿವುಡ್‌ ಸೆಲೆಬ್ರೆಟಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಇತ್ತೀಚೆಗೆ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಆಪ್‌ಗಳನ್ನು ಪ್ರಚಾರ ಮಾಡಿದ್ದಕ್ಕೆ ವಿಜಯ್ ದೇವರಕೊಂಡ ಸೇರಿದಂತೆ ಹಲವು ತೆಲುಗು ಸೆಲೆಬ್ರೆಟಿಗಳಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮಸ್ಸ್ ಜಾರಿ ಅನ್ನು ಜಾರಿ ಮಾಡಿತ್ತು. ಈ ಸಂಬಂಧ ಇಂದು (ಆಗಸ್ಟ್ 6) ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಇಡಿ ವಿಚಾರಣೆಗೆ ಹಾಜರಾಗಿದ್ದಾರೆ.

ಹೈದರಾಬಾದ್‌ನ ಬಶೀರ್‌ಬಾಗ್‌ಲ್ಲಿರುವ ಇಡಿ ಕಚೇರಿಗೆ ಬರುವಂತೆ ಟಾಲಿವುಡ್‌ನ ಸ್ಟಾರ್ ನಟ ವಿಜಯ್ ದೇವರಕೊಂಡಗೆ ಇಡಿ ನೋಟೀಸ್ ನೀಡಿತ್ತು. ಈ ಬೆನ್ನಲ್ಲೇ ಇಂದು ವಿಜಯ್ ಇಡಿ ಕಚೇರಿಗೆ ತೆರಳಿ ವಿಚಾರಣೆಯನ್ನು ಎದುರಿಸಿದ್ದಾರೆ. ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಆಪ್‌ ಪ್ರಕರಣದ ವಿಚಾರಣೆಗಾಗಿ ಇಡಿ ಕಚೇರಿಗೆ ವಿಜಯ್ ದೇವರಕೊಂಡ ಎಂಟ್ರಿ ಕೊಟ್ಟಿರುವ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಿವೆ.

Vijay Deverakonda appears for questioning at the ED office in Basheerbagh Hyderabad

ಆನ್‌ಲೈನ್ ಬೆಟ್ಟಿಂಗ್ ಆಪ್‌ಗಳು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದರ ಕುರಿತು ಇಡಿ ತನಿಖೆ ನಡೆಸುತ್ತಿದೆ. ಈ ವೇಳೆ ಅಂತಹ ಬೆಟ್ಟಿಂಗ್ ಆಪ್‌ಗಳ ಪ್ರಚಾರದಲ್ಲಿ ಭಾಗವಹಿಸಿದ್ದ ತೆಲುಗು ಸೆಲೆಬ್ರೆಟಿಗಳನ್ನೂ ವಿಚಾರಣೆ ಮಾಡಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಇಡಿ ನಡೆದ ವಿಚಾರಣೆಯಲ್ಲಿ ಒಟ್ಟು 29 ಮಂದಿ ಇದ್ದಾರೆ. ಅವರಲ್ಲಿ ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಕೂಡ ಒಬ್ಬರು.

ಅಕ್ರಮ ಆನ್‌ಲೈನ್ ಜೂಜು ಅಪ್ಲಿಕೇಶನ್‌ಗಳನ್ನು ಮನರಂಜನೆ ಹಾಗೂ ಚಾರಿಟಿಗಾಗಿ ಮಾಡುತ್ತಿರುವುದೆಂದು ಬಿಂಬಿಸಿ, ತಪ್ಪು ಮಾಹಿತಿ ನೀಡುವ ಮೂಲಕ ಪ್ರಚಾರ ಮಾಡಿ ಜನರನ್ನು ದಾರಿ ತಪ್ಪಿಸಿದ ಆರೋಪವನ್ನು ಈ ಬೆಟ್ಟಿಂಗ್ ಆಪ್‌ಗಳು ಎದುರಿಸುತ್ತಿವೆ. ಟಾಲಿವುಡ್‌ನ ಕೆಲವು ಸ್ಟಾರ್‌ಗಳು ಹಾಗೂ ಪ್ರಭಾವಿಗಳು ಹಣ ಪಡೆದು ಬೆಟ್ಟಿಂಗ್ ಆಪ್‌ಗಳ ದಂಧೆಯನ್ನು ಪರೋಕ್ಷವಾಗಿ ಪ್ರಚಾರ ಮಾಡಿ, ಬೆಂಬಲಿಸಿರುವ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ವೇಳೆ ಅನುಮಾನ ಪಟ್ಟಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಕೆಲವು ತಾರೆಯರನ್ನು ವಿಚಾರಣೆ ಮಾಡಲಾಗಿದ್ದು, ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಹಾಗೇ ತನಿಖೆ ವೇಳೆ ಸಿಕ್ಕಿರುವ ದಾಖಲೆಗಳೊಂದಿಗೆ ಪರಿಶೀಲನೆ ಮಾಡುವುದಾಗಿ ಇಡಿ ಮೂಲಗಳು ಹೇಳಿವೆ.

Vijay Deverakonda appears for questioning at the ED office in Basheerbagh Hyderabad

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಹುಭಾಷಾ ನಟ ಪ್ರಕಾಶ್ ರಾಜ್ ಇಡಿ ವಿಚಾರಣೆಗೆ ಹಾಜರಾಗಿದ್ದಾರೆ. ಜುಲೈ 30ರಂದು ಇಡಿ ಅಧಿಕಾರಿಗಳ ವಿಚಾರಣೆ ಎದುರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. "ಈ ಪ್ರಕರಣವು 2016 ರಿಂದ ನಡೆಯುತ್ತಿದ್ದು, ಅಧಿಕಾರಿಗಳು ಅವರ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ನಾನು ಒಬ್ಬ ಪ್ರಜೆಯಾಗಿ ಸಹಕರಿಸಬೇಕು. ಇದರಲ್ಲಿ ಯಾವುದೇ ರಾಜಕೀಯ ಪಿತೂರಿ ಇಲ್ಲವೆಂದು" ಪ್ರಕಾಶ್ ರಾಜ್ ಸ್ಪಷ್ಟಪಡಿಸಿದ್ದರು.

ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಆಪ್‌ಗಳನ್ನು ಪ್ರಚಾರ ಮಾಡಿದ್ದಕ್ಕೆ ಟಾಲಿವುಡ್‌ ಸೆಲೆಬ್ರೆಟಿಗಳು ವಿಚಾರಣೆ ಎದುರಿಸಬೇಕಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸೆಲೆಬ್ರಿಟಿಗಳು ಇಡಿ ವಿಚಾರಣಗೆ ಸಹಕಾರ ನೀಡುತ್ತಿದ್ದಾರೆ. ಮತ್ತೆ ಕೆಲವರು ವಿಚಾರಣೆಗೆ ಹಾಜರಾಗುವುದಕ್ಕೆ ಸಮಯಾವಕಾಶ ಕೇಳಿದ್ದಾರೆ. ಇನ್ನು ಈಗಾಗಲೇ ವರದಿಯಾಗಿರುವ ಪ್ರಕಾರ, ವಿಜಯ್ ದೇವರಕೊಂಡು ಇಂದು ಇಡಿ ಮುಂದೆ ಹಾಜರಾಗಿದ್ದರೆ, ಜುಲೈ 23ಕ್ಕೆ ಹಾಜರಾಗಬೇಕಿದ್ದ ರಾಣಾ ದಗ್ಗುಬಾಟಿ ದಿನ ಬದಲಾವಣೆಗೆ ಮನವಿ ಮಾಡಿಕೊಂಡಿದ್ದರು.

ಇನ್ನು ಟಾಲಿವುಡ್ ನಟಿ ಮಂಚು ಲಕ್ಷ್ಮಿ ಇದೇ ತಿಂಗಳು 13ರಂದು ವಿಚಾರಣೆಗೆ ಹಾಜರಾಗಬೇಕಾಗಿ ಸೂಚನೆಯನ್ನು ನೀಡಲಾಗಿದೆ. ಅಕ್ರಮ ಬೆಟ್ಟಿಂಗ್ ಆಪ್‌ಗಳ ವಿಚಾರವಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಈಗಾಗಲೇ ದಾಖಲಾಗಿರುವ ಎಫ್‌ಐಆರ್‌ಗಳನ್ನು ಆಧಾರಿಸಿ ಈ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಕೇವಲ ನಟರಷ್ಟೇ ಅಲ್ಲದೆ, ಜನಪ್ರಿಯ ಯೂಟ್ಯೂಬರ್‌ಗಳು ಮತ್ತು ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್‌ಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಆಪ್‌ಗಳ ಪ್ರಚಾರ ಪ್ರತ್ಯೇಕವಾಗಿ ನಡೆದಿದ್ದೇ? ಇಲ್ಲ ಒಂದು ದೊಡ್ಡ ಸಂಘಟಿತ ಜಾಲದ ಭಾಗವಾಗಿವೇ ಎಂಬುದನ್ನು ಇಡಿ ತನಿಖೆ ಮಾಡುತ್ತಿದೆ.

More from Filmibeat

English summary
Vijay Deverakonda was questioned by the Enforcement Directorate in Hyderabad regarding allegations linked to betting applications;
Read more about: vijay deverakonda case betting
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X