ಪಕ್ಕದಲ್ಲಿ ಕುಳಿತು ಫೋಟೊ ಹಂಚಿಕೊಂಡ ಸ್ಯಾಮ್: "ಸಮಂತಾನೇ ನನ್ನ ಫೇವರಿಟ್ ಹುಡುಗಿ" ಎಂದ ವಿಜಯ್ ದೇವರಕೊಂಡ

ಸಮಂತಾ ರುತ್ ಪ್ರಭು ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸುತ್ತಿರೋದು ಗೊತ್ತೇ ಇದೆ. ಈ ಜೋಡಿ ಟಾಲಿವುಡ್‌ನ ಫೇವರಿಟ್ ಜೋಡಿ ಆಗುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ. ಒಂದೇ ಸಿನಿಮಾದಲ್ಲಿ ನಟಿಸುತ್ತಿರೋದ್ರಿಂದ ಇಬ್ಬರಲ್ಲೂ ಆತ್ಮೀಯತೆ ಹೆಚ್ಚಾಗುತ್ತಿದೆ.

ಸಮಂತಾ ಅನಾರೋಗ್ಯದ ಹಿನ್ನೆಲೆಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ 'ಖುಷಿ' ಅರ್ಧಕ್ಕೆ ನಿಂತಿತ್ತು. ಈಗ ಸಮಂತಾ ಗುಣಮುಖರಾಗಿ ಮತ್ತೆ ನಟನೆಗೆ ಮರಳಿದ್ದಾರೆ. ಈ ಬೆನ್ನಲ್ಲೇ ಮತ್ತೆ ಶೂಟಿಂಗ್ ಶುರುವಾಗಿದೆ. ವಿಜಯ್ ದೇವರಕೊಂಡ ಹಾಗೂ ಸಮಂತಾ ಇಬ್ಬರೂ ಎಂಜಾಯ್ ಮಾಡಿಕೊಂಡು ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ.

Vijay Deverakonda says your my favorite girl in response to Kushi actress Samantha

ಸದ್ಯ 'ಖುಷಿ' ಸಿನಿಮಾದ ಶೂಟಿಂಗ್‌ಗಾಗಿ ಟರ್ಕಿಗೆ ತೆರಳಿದ್ದಾರೆ. ಈ ವೇಳೆ ರೆಸ್ಟೊರೆಂಟ್ ಒಂದರಲ್ಲಿ ಇಬ್ಬರೂ ಜೊತೆಯಲ್ಲಿ ಕೂತಿರೋ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸಮಂತಾ ಹಂಚಿಕೊಂಡಿದ್ದರು. ಆ ಫೋಟೊ ವೈರಲ್ ಆಗುತ್ತಿದ್ದಂತೆ ವಿಜಯ್ ದೇವರಕೊಂಡ ಪ್ರತಿಕ್ರಿಯೆ ನೀಡಿದ್ದಾರೆ. ಆ ರಿಪ್ಲೈ ಬಗ್ಗೆ ಇಬ್ಬರ ಅಭಿಮಾನಿಗಳು ಚರ್ಚೆ ಶುರು ಮಾಡಿದ್ದಾರೆ.

ಸಮಂತಾ-ವಿಜಯ್ ನಡುವೆ ಹೆಚ್ಚಿದ ಆತ್ಮೀಯತೆ

'ಖುಷಿ' ಸಿನಿಮಾ ಆರಂಭ ಆದಲ್ಲಿಂದ ಸಮಂತಾ ಹಾಗೂ ವಿಜಯ್ ದೇವರಕೊಂಡ ನಡುವೆ ಆತ್ಮೀಯತೆ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ಸಿನಿಮಾದ ರೊಮ್ಯಾಂಟಿಕ್ ಹಾಡೊಂದನ್ನು ರಿಲೀಸ್ ಮಾಡಲಾಗಿತ್ತು. ಇದರಲ್ಲಿ ಮೇಕಿಂಗ್ ತುಣುಕುಗಳನ್ನೂ ರಿಲೀಸ್ ಮಾಡಲಾಗಿತ್ತು. ಅದರಲ್ಲೂ ಇಬ್ಬರ ಕ್ಲೋಸ್‌ನೆಸ್ ಎದ್ದು ಕಾಣುತ್ತಿತ್ತು.

ಸಮಂತಾ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಆತ್ಮೀಯರಾಗಿರುವುದು ಸಿನಿಮಾ ದೃಷ್ಟಿಯಿಂದ ಒಳ್ಳೆಯದೇ.. ರಿಲೀಸ್ ಆಗಿರೋ ರೊಮ್ಯಾಂಟಿಕ್ ಹಾಡಿನಲ್ಲೂ ಇದು ಎದ್ದು ಕಾಣುತ್ತಿದೆ. ಹೀಗಾಗಿ 'ಖುಷಿ' ಸಿನಿಮಾ ಮೂಲಕ ಟಾಲಿವುಡ್‌ಗೆ ಹೊಸ ಜೋಡಿ ಸಿಗಬಹುದು ಅನ್ನೋ ನಿರೀಕ್ಷೆ ಹೆಚ್ಚಾಗಿದೆ.

"ಸಮಂತಾನೇ ನನ್ನ ಫೇವರಿಟ್ ಹುಡುಗಿ"

ಸಮಂತಾ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಟರ್ಕಿಯಲ್ಲಿದ್ದಾರೆ. 'ಖುಷಿ' ಸಿನಿಮಾದ ಶೂಟಿಂಗ್‌ಗಾಗಿ ಅಲ್ಲಿಗೆ ಹೋಗಿದ್ದು, ಇಬ್ಬರೂ ಅಲ್ಲಿನ ರೆಸ್ಟೊರೆಂಟ್‌ನಲ್ಲಿ ಊಟ ಮಾಡಿದ್ದಾರೆ. ಈ ವೇಳೆ ಸಮಂತಾ ಇಬ್ಬರೂ ಜೊತೆಗಿದ್ದ ಒಂದು ಫೋಟೊವನ್ನು ಶೇರ್ ಮಾಡಿದ್ದರು. ಅಲ್ಲದೆ " ಸ್ನೇಹಿತರು ನಿಮ್ಮ ಕೆಟ್ಟ ಗಳಿಗೆಯನ್ನು ಕಂಡಿದ್ದಾರೆ. ಒಳ್ಳೆಯ ಗಳಿಗೆಯನ್ನೂ ಕಂಡಿದ್ದಾರೆ. ನಿಮ್ಮ ಜೀವನದ ಏಳು-ಬೀಳುಗಳನ್ನು ಗಮನಿಸಿದ್ದಾರೆ. ನೀವು ಮುಂದೆ ಬರುವುದನ್ನು ನೋಡಿದ್ದಾರೆ. ನೀವು ಹಿಂದದೆ ಇರುವುದನ್ನೂ ಗಮನಿಸಿದ್ದಾರೆ. ಸ್ನೇಹಿತರು ಸದಾ ನಿಮ್ಮ ಜೊತೆಗೆ ಇರುತ್ತಾರೆ. ಇದು ಎಂತಹ ಅದ್ಭುತ ವರ್ಷ." ಎಂದು ಬರೆದು ಪೋಸ್ಟ್ ಮಾಡಿದ್ದರು.

ಸಮಂತಾ ಹೀಗೆ ಬರೆದು ಪೋಸ್ಟ್ ಮಾಡುತ್ತಿದ್ದಂತೆ ವಿಜಯ್ ದೇವರಕೊಂಡ ತಮ್ಮ ರೀಲ್ಸ್‌ ಮೂಲಕ ಪ್ರತಿಕ್ರಿಯೆ ನೀಡಿದ್ದರು."ನನ್ನ ಫೇವರಿಟ್ ಹುಡುಗಿ" ಎಂದು ಬರೆದುಕೊಂಡಿದ್ದರು. ಇವರಿಬ್ಬರನ್ನು ನೋಡಿ ಅಭಿಮಾನಿಗಳು ಕ್ಯೂಟ್ ಜೋಡಿ ಎಂದು ಬರೆದುಕೊಂಡಿದ್ದಾರೆ.

ಸಮಂತಾ ಫುಲ್ ಬ್ಯುಸಿ

ಸಮಂತಾ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್‌ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ಸಮಂತಾ ಹಾಗೂ ನಾಗಚೈತನ್ಯ ನಟಿಸಿದ್ದ 'ಮಜಿಲಿ' ಸಿನಿಮಾದ ನಿರ್ದೇಶಕರೇ ಈ ಸಿನಿಮಾವನ್ನು ನಿರ್ದೇಶಿಸುತ್ತಿರೋದ್ರಿಂದ 'ಖುಷಿ' ಬಗ್ಗೆ ಟಾಲಿವುಡ್‌ನಲ್ಲಿ ನಿರೀಕ್ಷೆ ಹೆಚ್ಚಾಗಿದೆ. 'ಶಾಕುಂತಲಂ' ಹಾಗೂ 'ಲೈಗರ್' ಹೀನಾಯ ಸೋಲಿನ ಬಳಿಕ ಇಬ್ಬರಿಗೂ ಸೂಪರ್ ಸಕ್ಸಸ್ ಸಿಗುತ್ತೆ ಎಂದು ಹೇಳಲಾಗುತ್ತಿದೆ.

ಸದ್ಯ ಸಮಂತಾ 'ಸಿಟಾಡೆಲ್' ವೆಬ್ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ. ಜೊತೆ ಹಾಲಿವುಡ್ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಸಮಂತಾ ಟಾಲಿವುಡ್ ಹಾಗೂ ಬಾಲಿವುಡ್‌ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದು, 'ಖುಷಿ' ಗೆದ್ದರೆ ಇನ್ನೊಂದಿಷ್ಟು ಸಿನಿಮಾಗಳಲ್ಲಿ ಖುಷಿಯಾಗಿ ನಟಿಸೋದು ಪಕ್ಕಾ.

More from Filmibeat

English summary
Vijay Deverakonda says your my favorite girl in response to Kushi actress Samantha, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X