ಮುಂಬೈನ 'ಸ್ಲಮ್‌ಡಾಗ್' 'ಚಾಯ್‌ವಾಲಾ' ವಿಜಯ್ ದೇವರಕೊಂಡ: 'ಲೈಗರ್' ತುಣುಕು ಖಡಕ್

ವಿಜಯ್ ದೇವರಕೊಂಡ ಮಾಸ್ ಸಿನಿಮಾ 'ಲೈಗರ್'ಗಾಗಿ ಅದೆಷ್ಟು ಮಂದಿ ಕಾದು ಕೂತಿದ್ದರೋ. ಇದೊಂದು ತುಣುಕುಗಳನ್ನು ನೋಡಲು ವಿಜಯ್ ದೇವರಕೊಂಡ ಅಭಿಮಾನಿಗಳು ಕಾದು ಕೂತಿದ್ದರು. ದೇವರಕೊಂಡ 'ಲೈಗರ್' ಲುಕ್ ನೋಡುವುದಕ್ಕೆ ಥ್ರಿಲ್ ಆಗಿದ್ದರು. ಕೊನೆಗೂ ಎರಡು ವರ್ಷಗಳ ಬಳಿಕ ವಿಜಯ್ ದೇವರಕೊಂಡ ನಟಿಸಿದ 'ಲೈಗರ್' ಗ್ಲಿಮ್ಸ್ ರಿಲೀಸ್ ಆಗಿದೆ. ವರ್ಷದ ಕೊನೆಯಲ್ಲಿ ಅಭಿಮಾನಿಗಳಿಗೆ ರೌಡಿ ನಟ ಲುಕ್ ಕೊಟ್ಟು ಸಖತ್ ಕಿಕ್ ಕೊಟ್ಟಿದ್ದಾರೆ.

ಸಾಲಾ ಕ್ರಾಸ್‌ಬ್ರೀಡ್ ಅನ್ನುವ ಟ್ಯಾಗ್ ಲೈನ್ ಕೊಟ್ಟು ಕುತೂಹಲ ಕೆರಳಿಸಿರುವ 'ಲೈಗರ್' ವರ್ಷದ ಕೊನೆಯ ದಿನ ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದೆ. 53 ಸೆಕೆಂಡ್‌ಗಳ ಒಂದು ಸಣ್ಣ ತುಣುಕು ಸಿನಿಪ್ರಿಯರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಎಲ್ಲಕ್ಕಿಂತ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್‌ನ ಮೊದಲ ಸಿನಿಮಾ ಇದಾಗಿದ್ದು, ಸಿನಿಪ್ರಿಯರ ಗಮನ ಸಳೆಯುವಲ್ಲಿ ಯಶಸ್ವಿಯಾಗಿದೆ. ಹಾಗಿದ್ದರೆ, ಲೈಗರ್ ಗ್ಲಿಮ್ಸ್‌ನ ವಿಶೇತೆಯೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

'ಸ್ಲಮ್‌ಡಾಗ್' 'ಚಾಯ್‌ವಾಲ' ದೇವರಕೊಂಡ

'ಸ್ಲಮ್‌ಡಾಗ್' 'ಚಾಯ್‌ವಾಲ' ದೇವರಕೊಂಡ

'ಲೈಗರ್' ಗ್ಲಿಮ್ಸ್ ವಿಜಯ್ ದೇವರಕೊಂಡ ಜರ್ನಿಯನ್ನು ಅನಾವರಣ ಮಾಡಿದೆ. ಮುಂಬೈನ ಚಾಯ್‌ವಾಲಾ ಅಮೆರಿಕಾದ ಲಾಸ್‌ವೆಗಾಸ್‌ನ ಮಿಕ್ಸ್ ಮಾರ್ಷಲ್ ಆರ್ಟ್ಸ್ ವರೆಗೂ ಬೆಳಕು ಚೆಲ್ಲಿದೆ. ಮಾರ್ಷಲ್ ವೇದಿಕೆ ಮೇಲೆ ವಿಜಯ್ ದೇವರಕೊಂಡನನ್ನು 'ಸ್ಲಮ್‌ಡಾಗ್' ಎಂದು ಪರಿಚಯ ಮಾಡಿಸಲಾಗಿದೆ. ಮಿಕ್ಸ್ ಮಾರ್ಷಿಯಲ್ ಆರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ವಿಜಯ್ ರಿಯಲ್ ಫೈಟರ್ ಲುಕ್ ಕೊಟ್ಟಿದ್ದಾರೆ. ಟಾಲಿವುಡ್ ರೌಡಿಯ ಹೊಸ ಅವತಾರ ಅಭಿಮಾನಿಗಳಿಗೆ ಕಿಕ್ ಕೊಡುತ್ತಿದೆ.

ಪುರಿ- ದೇವರಕೊಂಡ ಫಸ್ಟ್ ಕಾಂಬಿನೇಷನ್

ಪುರಿ- ದೇವರಕೊಂಡ ಫಸ್ಟ್ ಕಾಂಬಿನೇಷನ್

'ಲೈಗರ್' ಸಿನಿಮಾ ಪುರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಮೊದಲ ಸಿನಿಮಾ. ಮಾಸ್ ಸಿನಿಮಾಗಳನ್ನೇ ನಿರ್ದೇಶಿಸೋ ಪುರಿ ಜಗನ್ನಾಥ್ ಈ ಬಾರಿ ಮಾಸ್ ಜೊತೆ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ 'ಲೈಗರ್' ಗ್ಲಿಮ್ಸ್‌ನಲ್ಲಿ ದೇವರಕೊಂಡ ಹೊಸ ಪೀಳಿಗೆಯ ಆಟಿಟ್ಯೂಡ್ ಅನ್ನು ತೋರಿಸಿದ್ದಾರೆ. ವಿಜಯ್ ಜೊತೆ ಬಾಲಿವುಡ್ ನಟ ರೊನಿತ್ ರಾಯ್ ಟ್ರೈನರ್ ಆಗಿ ಕಾಣಿಸಿಕೊಂಡಿದ್ದಾರೆ. ಇದು ಹೊಸ ಪೀಳಿಗೆಯ ಸಿನಿಮಾ ಎಂದು ಸಿನಿಮಾ ತಂಡ ಸಾಭೀತು ಮಾಡಿದೆ.

'ಲೈಗರ್' ಪ್ಯಾನ್ ಇಂಡಿಯಾ ಸಿನಿಮಾ

'ಲೈಗರ್' ಪ್ಯಾನ್ ಇಂಡಿಯಾ ಸಿನಿಮಾ

'ಲೈಗರ್' ಪ್ಯಾನ್ ಇಂಡಿಯಾ ಸಿನಿಮಾ. ಐದು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಇದು ಇತ್ತೀಚೆಗಿನ ದಿನಗಳಲ್ಲಿ ಪುರಿ ಜಗನ್ನಾಥ್ ನಿರ್ದೇಶಿಸಿರುವ ದುಬಾರಿ ಸಿನಿಮಾ. ಸಿನಿಮಾದ ಟೀಸರ್‌ನಲ್ಲಿ ವಿಜಯ್ ದೇವರಕೊಂಡನನ್ನು ನಿರ್ದೇಶಕ ರಾಕ್ಷಸನಂತೆ ಬಿಂಬಿಸಿದ್ದಾರೆ. ಫೈಟರ್ ಆಗಿ ಲುಕ್ ಕೊಟ್ಟಿರುವ ದೇವರಕೊಂಡ ಜಿಮ್‌ನಲ್ಲಿ ಕಸರತ್ತು ಮಾಡಿರುವುದು 'ಲೈಗರ್' ತುಣುಕುಗಳಲ್ಲಿ ಎದ್ದು ಕಾಣುತ್ತೆ. ಪುರಿ ಜಗನ್ನಾಥ್ ನಿರ್ದೇಶಿಸಿದ ಈ ಸಿನಿಮಾ ವಿಜಯ್ ದೇವರಕೊಂಡ ವೃತ್ತಿ ಬದುಕನ್ನೇ ಬದಲಿಸಲಿದೆ ಎಂದು ಟಾಲಿವುಡ್ ಮಾತಾಡುತ್ತಿದೆ.

ಲೈಗರ್ ಹೈಲೈಟ್ ಮೈಕ್ ಟೈಸನ್

ಲೈಗರ್ ಹೈಲೈಟ್ ಮೈಕ್ ಟೈಸನ್

'ಲೈಗರ್' ಸಿನಿಮಾದಲ್ಲಿ ಅಂತರರಾಷ್ಟ್ರೀಯ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ನಟಿಸಿದ್ದಾರೆ. ಇದು ಮೈಕ್ ಟೈಸನ್ ನಟಿಸಿದ ಮೊದಲ ಬಾಲಿವುಡ್ ಸಿನಿಮಾ. ವಿಜಯ್ ದೇವರಕೊಂಡ ಹಾಗೂ ಮೈಕ್ ಟೈಸನ್ ಜೊತೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕರಣ್ ಜೊಹರ್ ಹಾಗೂ ಪುರಿ ಜಗನ್ನಾಥ್ ಹಾಗೂ ನಟಿ ಚಾರ್ಮಿ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. 2022 ಆಗಸ್ಟ್ 25ರಂದು ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

More from Filmibeat

English summary
Vijay Deverakonda starrer Puri Jagannadh directed Liger movie teaser released. The teaser showcases Vijay Deverakonda journey from Mumbai tea seller to Las Vegas MMA scene.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X