"ನನಗೂ ಮದುವೆ ಆಗೋ ಆಸೆ.. ಮಕ್ಕಳು ಬೇಕು.. ಆದರೆ..": ವಿಜಯ್ ದೇವರಕೊಂಡ
ಟಾಲಿವುಡ್ ನಟ ವಿಜಯ್ ದೇವರಕೊಂಡು ನಟನೆಯ ಹೊಸ ಸಿನಿಮಾ 'ಫ್ಯಾಮಿಲಿ ಸ್ಟಾರ್'. ಈ ಬಿಡುಗಡೆಗೆ ರೆಡಿಯಾಗಿದ್ದು, ಟಾಲಿವುಡ್ ಸಿನಿಪ್ರಿಯರು ಹೊಸ ಕಾಂಬಿನೇಷನ್ ಅನ್ನು ತೆರೆಮೇಲೆ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೇನು ಈ ಸಿನಿಮಾ ಬಿಡುಗಡೆ ಕೆಲವೇ ದಿನಗಳು ಬಾಕಿ ಉಳಿದಿದೆ. ಹೀಗಾಗಿ ಬಿಡುವಿಲ್ಲದೆ ಪ್ರಚಾರ ಮಾಡುವುದಕ್ಕೆ ಇಡೀ ತಂಡ ಅಖಾಡಕ್ಕೆ ಇಳಿದಿದೆ.
ಈಗಾಗಲೇ 'ಫ್ಯಾಮಿಲಿ ಸ್ಟಾರ್' ಸಿನಿಮಾದ ಹಾಡುಗಳು ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಇಷ್ಟ ಆಗಿದೆ. ಇದಕ್ಕೆ ಮತ್ತೊಂದು ಕಿಕ್ ಕೊಡ್ತಿರೋದು 'ಸೀತಾರಾಮಂ' ನಟಿ ಮೃಣಾಲ್ ಠಾಕೂರ್. ಹಾಗೇ ವಿಜಯ್‌ಗೆ 'ಗೀತಾ ಗೋವಿಂದಂ' ಅಂತಹ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟಿದ್ದ ಪರಶುರಾಮ್ ಆಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ ಈ ಮೂವರ ಕಾಂಬಿನೇಷನ್ ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತೆ ಅನ್ನೋ ನಿರೀಕ್ಷೆಯಲ್ಲಿ ಫ್ಯಾನ್ ಇದ್ದಾರೆ.

ಆದ್ರೀಗ ಮ್ಯಾಟರ್ ಸಿನಿಮಾದಲ್ಲ. 'ಫ್ಯಾಮಿಲಿ ಸ್ಟಾರ್' ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದಾಗ ವಿಜಯ್ ದೇವರಕೊಂಡ ಪತ್ರಕರ್ತರು ಕೇಳಿದ ಪ್ರಶ್ನೆಗಳು. ಆ ಎಲ್ಲಾ ಪ್ರಶ್ನೆಗಳಿಗೆ ವಿಜಯ್ ದೇವರಕೊಂಡ ಕೊಟ್ಟ ಉತ್ತರ. ಅದರಲ್ಲಿ ಮೊದಲನೆಯದ್ದು ಇದೇ ವರ್ಷ ವಿಜಯ್ ದೇವರಕೊಂಡ 'ಫ್ಯಾಮಿಲಿ ಸ್ಟಾರ್' ಆಗುತ್ತಾರಾ? ಅನ್ನೋ ಪ್ರಶ್ನೆ.
ಈ ವರ್ಷ 'ಫ್ಯಾಮಿಲಿ ಸ್ಟಾರ್' ಆಗ್ತಾರಾ?
ವಿಜಯ್ ದೇವರಕೊಂಡ 'ಫ್ಯಾಮಿಲಿ ಸ್ಟಾರ್' ಸಿನಿಮಾದಲ್ಲಿ ನಟಿಸಿದ್ದೇನೋ ನಿಜ. ಹಾಗೇ ಇದೇ ವರ್ಷ ರಿಯಲ್ ಲೈಫ್‌ನಲ್ಲೂ 'ಫ್ಯಾಮಿಲಿ ಸ್ಟಾರ್' ಆಗುವ ಸಾಧ್ಯತೆ ಇದೆಯೇ ಎಂದು ಪ್ರಶ್ನೆ ಮಾಡಲಾಗಿತ್ತು. ಆ ಪ್ರಶ್ನೆಗೆ ವಿಜಯ್ ದೇವರಕೊಂಡು ಓಪನ್ ಆಗಿ ಉತ್ತರ ಕೊಟ್ಟಿದ್ದಾರೆ. " ನಾನು ಖಂಡಿತವಾಗಿಯೂ ಮದುವೆ ಆಗುತ್ತೇನೆ. ನನಗೂ ಮದುವೆ ಆಗಬೇಕೆಂಬ ಆಸೆ ಇದೆ. ನನಗೂ ಮಕ್ಕಳು ಬೇಕು. ಆದರೆ, ಈ ವರ್ಷ ಖಂಡಿತಾ ಅಲ್ಲ" ಎಂದು ಹಲವು ದಿನಗಳಿಂದ ಹಬ್ಬಿದ್ದ ಸುದ್ದಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಆಗೋದು ಲವ್ ಮ್ಯಾರೇಜ್
ಇಲ್ಲಿಗೆ ಸುಮ್ಮನಾದ ಪತ್ರಕರ್ತರು ಲವ್ ಮ್ಯಾರೇಜ್ ಆಗುತ್ತೀರಾ? ಅರೇಂಜ್ಡ್ ಮ್ಯಾರೇಜ್ ಆಗುತ್ತೀರಾ? ಎಂದು ಮರು ಪ್ರಶ್ನೆ ಮಾಡಿದ್ದರು. ಅದಕ್ಕೆ ವಿಜಯ್ ದೇವರಕೊಂಡು ಅದೊಂದು ಪ್ರೇಮ ವಿವಾಹ ಆಗಿರುತ್ತೆ ಎಂದು ಹೇಳಿದ್ದಾರೆ. ಆದರೂ, ಆ ಹುಡುಗಿಯನ್ನು ಅಪ್ಪ, ಅಮ್ಮ ಇಬ್ಬರೂ ಮೆಚ್ಚಬೇಕು. ಅವರಿಗೆ ಆ ಹುಡುಗಿ ಇಷ್ಟ ಆಗಬೇಕು ಎಂದು ಹೇಳಿಕೊಂಡಿದ್ದಾರೆ. ಗ್ಯಾಪ್‌ನಲ್ಲಿ ಒಬ್ಬರು ಹುಡುಗಿ ಯಾರು? ಎಂದಾಗ, ವಿಜಯ್ 'ಡಾರ್ಲಿಂಗ್ ಐ ಲವ್ ಯೂ' ಎಂದು ಎಸ್ಕೇಪ್ ಆಗಿದ್ದರು.

ರಶ್ಮಿಕಾ ಹೆಸರು ಬಂದಿದ್ದೇಗೆ?
ವಿಜಯ್ ದೇವರಕೊಂಡ ಸಿನಿಮಾ ಪ್ರಚಾರ ಮಾಡುತ್ತಿದ್ದರೂ ರಶ್ಮಿಕಾ ಮಂದಣ್ಣ ಹೆಸರು ಬಾರದೆ ಇರುವುದಿಲ್ಲ. ವಿಜಯ್ ಜೊತೆ ರಶ್ಮಿಕಾ ಮಂದಣ್ಣರನ್ನು ತಳುಕು ಹಾಕುವುದಕ್ಕೆ ಪ್ರಯತ್ನ ಪಡುತ್ತಲೇ ಇರುತ್ತಾರೆ. ಇದೇ ಕಾರ್ಯಕ್ರಮದಲ್ಲಿ ಒಂದ್ಮೇಳೆ ತಮಿಳಿನಲ್ಲಿ ನಟಿಸುವ ಸಿನಿಮಾ ಬಂದರೆ ಯಾವ ನಾಯಕಿ ಜೊತೆ ನಟಿಸುತ್ತೀರಿ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ವಿಜಯ್ ಮರು ಪ್ರಶ್ನೆ ಹಾಕಿದ್ದರು. "ನಿನ್ನ ಫೇವರಿಟ್ ಹೀರೋಯಿನ್ ಯಾರು?" ಎಂದು ಕೇಳಿದ್ದರು. ಅದಕ್ಕೆ ರಶ್ಮಿಕಾ ಮಂದಣ್ಣ ಅನ್ನೋ ಉತ್ತರ ಬಂದಿತ್ತು. ಆಗ ಸರಿ "ರಶ್ಮಿಕಾ ಜೊತೆ ಸಿನಿಮಾ ಮಾಡೋಣ" ಎಂದು ಮಾತು ಕೊಟ್ಟರು.
ಫ್ಯಾಮಿಲಿ ಸ್ಟಾರ್ ರಿಲೀಸ್ ಯಾವಾಗ?
'ಫ್ಯಾಮಿಲಿ ಸ್ಟಾರ್' ಸಿನಿಮಾ ಬಿಡುಗಡೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಏಪ್ರಿಲ್ 5 ರಂದು ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದೆ. ಮೇಲ್ನೋಟಕ್ಕೆ ಇದೊಂದು ಲವ್ ಸ್ಟೋರಿ ಕಮ್ ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾ ಎಂದು ಕಾಣುತ್ತಿದೆ. ಅಲ್ಲದೆ ವಿಜಯ್ ದೇವರಕೊಂಡ ಹಾಗೂ ಮೃಣಾಲ್ ಠಾಕೂರ್ ಜೋಡಿಯನ್ನು ತೆರೆ ಮೇಲೆ ನೋಡುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ.


Click it and Unblock the Notifications











