ಮಾಜಿ ಗೆಳತಿ ಜೊತೆ ವಿಜಯ್ ದೇವರಕೊಂಡ ರೊಮ್ಯಾನ್ಸ್; ಫೋಟೊ ದಿಢೀರನೇ ವೈರಲ್ ಆಗಿದ್ದೇಕೆ?

ಟಾಲಿವುಡ್ ಹೀರೋ ವಿಜಯ್ ದೇವರಕೊಂಡ ಸಿನಿಮಾಗಳಿಗಿಂತ ಅವರ ವೈಯಕ್ತಿಕ ವಿಚಾರಗಳು ಸದ್ದು ಮಾಡಿದ್ದೇ ಹೆಚ್ಚು. ರಶ್ಮಿಕಾ ಮಂದಣ್ಣ ಜೊತೆಗೆ ವಿಜಯ್ ದೇವರಕೊಂಡ ಹೆಸರು ತಳುಕು ಹಾಕಿಕೊಂಡ ದಿನದಿಂದ ಆಗಾಗ ಇವರ ಡೇಟಿಂಗ್ ಮ್ಯಾಟರ್ ಚರ್ಚೆ ಆಗುತ್ತಲೇ ಇರುತ್ತೆ. ಆದ್ರೀಗ ದಿಢೀರನೇ ಮಾಜಿ ಪ್ರೇಯಸಿಯೊಂದಿನ ಫೋಟೊಗಳು ವೈರಲ್ ಆಗುತ್ತಿದೆ.

ತೆಲುಗು ಚಿತ್ರರಂಗಕ್ಕೆ ವಿಜಯ್ ದೇವರಕೊಂಡ ಕಾಲಿಡುವುದಕ್ಕೂ ಮುನ್ನ ಯುರೋಪಿನ ಮೂಲದ ಯುವತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಆಕೆಯ ಹೆಸರು ವರ್ಜಿನ್. ಬೆಲ್ಜಿಯಂ ಮೂಲದ ವರ್ಜಿನ್ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಕೆಲವು ವರ್ಷ ಡೇಟಿಂಗ್ ಮಾಡುತ್ತಿದ್ದರು ಅನ್ನುವ ವಿಷಯ ಈ ಹಿಂದೇನೆ ಸದ್ದು ಮಾಡಿತ್ತು.

Vijay Deverakonda with ex-girlfriend Virgine in intimate photos Go Viral

ಈಗ ವಿಜಯ್ ದೇವರಕೊಂಡ ತನ್ನ ಮಾಜಿ ಪ್ರೇಯಸಿ ಜೊತೆಗಿದ್ದ ಕೆಲವು ಫೋಟೊಗಳು ರೆಡ್ಡಿಟ್ ಪ್ಲಾಟ್‌ಫಾರ್ಮ್‌ನಲ್ಲಿ ಹರಿದಾಡುತ್ತಿದೆ. ವರ್ಜಿನ್ ಜೊತೆ ವಿಜಯ್ ದೇವರಕೊಂಡ ಬ್ರೇಕಪ್ ಮಾಡಿಕೊಂಡು ವರ್ಷಗಳೇ ಕಳೆದಿವೆ. ಆದರೂ ಈಗ ಹಳೆಯ ಫೋಟೊಗಳು ಮತ್ತೆ ಹರಿದಾಡುವುದಕ್ಕೆ ಶುರು ಮಾಡಿವೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ಫೋಟೊಗಳು ಚರ್ಚೆಯಾಗುತ್ತಿವೆ.

ಒಂದಿಷ್ಟು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಜಯ್ ದೇವರಕೊಂಡ ಹಾಗೂ ವರ್ಜಿನ್ ಇಬ್ಬರೂ ಖುಷಿಯಲ್ಲಿ ಕ್ಯಾಮರಾಗೆ ಫೋಸ್ ಕೊಟ್ಟಿದ್ದಾರೆ. ಮತ್ತೊಂದು ಫೋಟೊದಲ್ಲಿ ವಿಜಯ್ ದೇವರಕೊಂಡಗೆ ಮಾಜಿ ವರ್ಜಿನ್ ಚುಂಬಿಸುತ್ತಿರುವ ಫೋಟೊ ಇದೆ. ಇಂತಹ ಫೋಟೊಗಳು ಈಗ ಮತ್ತೆ ಯಾಕೆ ವೈರಲ್ ಆಗುತ್ತಿದೆ? ಅನ್ನೋ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ.

ಟಾಲಿವುಡ್ ಮೂಲಕ ಪ್ರಕಾರ ವಿಜಯ್ ದೇವರಕೊಂಡ 'ನೋಟ' ಸಿನಿಮಾ ಬಿಡುಗಡೆಗೂ ಮುನ್ನವೇ ಬ್ರೇಕಪ್ ಮಾಡಿಕೊಂಡಿದ್ದಾರೆ. ಈ ಸಿನಿಮಾ 2018ರಲ್ಲಿ ತೆರೆಕಂಡಿತ್ತು. ಆ ಸಿನಿಮಾ ಬಿಡುಗಡೆ ವೇಳೆ ವಿಜಯ್ ದೇವರಕೊಂಡಗೆ ಮಾಧ್ಯಮದವರು ಡೇಟಿಂಗ್ ಸ್ಟೇಟಸ್ ಬಗ್ಗೆ ಪ್ರಶ್ನೆಯನ್ನು ಮಾಡಿದ್ದರು. ಆ ವೇಳೆ ವಿಜಯ್ ದೇವರಕೊಂಡ "ನಾನಿನ್ನು ಸಿಂಗಲ್" ಎಂದು ಹೇಳಿಕೊಂಡಿದ್ದರು. ಹಾಗೇ ತಮ್ಮ ಅಭಿಮಾನಿಗಳಿಗೆ ತನ್ನ ಹಿಂದಿನ ಸಂಗತಿಗಳನ್ನೆಲ್ಲ ಮರೆಯುವಂತೆಯೂ ಕೇಳಿಕೊಂಡಿದ್ದರು ಎನ್ನಲಾಗಿದೆ.

Vijay Deverakonda with ex-girlfriend Virgine in intimate photos Go Viral

ಆದರೆ, 'ನೋಟಾ' ಸಿನಿಮಾ ರಿಲೀಸ್‌ ವೇಳೆ ವಿಜಯ್ ದೇವರಕೊಂಡ ಹೆಸರು ರಶ್ಮಿಕಾ ಮಂದಣ್ಣ ಜೊತೆ ತಳುಕು ಹಾಕಿಕೊಂಡಿತ್ತು. ಯಾಕಂದ್ರೆ, ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ನಟಿಸಿದ್ದ "ಗೀತಾ ಗೋವಿಂದಂ" ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಈ ಜೋಡಿಗೆ ತೆಲುಗು ಮಂದಿ ಫಿದಾ ಆಗಿದ್ದರು. ಅಲ್ಲಿಂದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇಬ್ಬರ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿಗಳು ಹರಿದಾಡುತ್ತಿವೆ.

ಡೇಟಿಂಗ್ ರೂಮರ್ ಬಗ್ಗೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಇದೂವರೆಗೂ ಎಲ್ಲೂ ಹೇಳಿಕೊಂಡಿಲ್ಲ. ತಾವಿಬ್ಬರೂ ಉತ್ತಮ ಗೆಳೆಯರು ಎಂದೇ ಹೇಳಿಕೊಳ್ಳುತ್ತಾ ಬರುತ್ತಿದ್ದಾರೆ. ಕೆಲವು ಬಾರಿಯಂತೂ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ಇನ್ನೇನು ಮದುವೆ ಆಗೇಬಿಟ್ಟರು ಎನ್ನುವ ಮಟ್ಟಿಗೆ ಸುದ್ದಿಯಾಗಿತ್ತು. ಸದ್ಯಕ್ಕೆ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಹಾಗೂ ಮಾಜಿ ಗೆಳತಿ ವರ್ಜಿನ್ ಇಬ್ಬರೂ ತಮ್ಮ ದಾರಿಯಲ್ಲಿ ಸಾಗುತ್ತಿದ್ದಾರೆ.

More from Filmibeat

English summary
Vijay Deverakonda and ex-girlfriend Virgine intimate photos went viral:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X