'ಕಲ್ಕಿ 2808 AD'ಯಲ್ಲಿ ಪ್ರಭಾಸ್ ಜೊತೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡವರ್‍ಯಾರು? ಏನಿದೆ ಸುದ್ದಿ?

ಭಾರತದ ಅತೀ ದುಬಾರಿ ಸಿನಿಮಾ 'ಕಲ್ಕಿ 2808 AD'ಇಂದು (ಜೂನ್ 27) ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಅಂತಹ ದಿಗ್ಗಜರು ಇರುವ ಈ ಸಿನಿಮಾವನ್ನು ನೋಡುವುದಕ್ಕೆ ಸಿನಿಪ್ರಿಯರು ತುದಿಗಾಲಲ್ಲಿ ನಿಂತಿದ್ದರು. ಹಲವು ತಿಂಗಳಿಂದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ನಿರ್ದೇಶಕ ನಾಗ ಅಶ್ವಿನ್ ಸಿನಿಪ್ರಿಯರಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.

'ಕಲ್ಕಿ 2808 AD'ನೋಡಿದ ಪ್ರೇಕ್ಷಕರು ಹಾಲಿವುಡ್ ಸಿನಿಮಾವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಕೆಲವರಿಗೆ ಈ ಸಿನಿಮಾ ಇಷ್ಟ ಆಗಿದ್ದರೆ, ಮತ್ತೆ ಕೆಲವರಿಗೆ ಈ ಸಿನಿಮಾ ಚೆನ್ನಾಗಿಲ್ಲ ಅಂತಾನೂ ಅನಿಸಿದೆ. ಆದರೆ, ನಿರ್ದೇಶಕ ನಾಗ ಅಶ್ವಿನ್ ಸಿನಿಪ್ರಿಯರಲ್ಲಿ ಅಚ್ಚರಿ ಮೂಡಿಸುವುದರಲ್ಲಿ ಹಿಂದೆ ಬಿದ್ದಿಲ್ಲ.

Vijay Deverkonda to RGV List of Guest Appearances in Prabhas Deepika Movie Kalki 2898AD

ಈ ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದಿಶಾ ಪಠಾಣಿ ಅಂತ ಸ್ಟಾರ್‌ಗಳ ಸಮಾಗಮವೇ ಆಗಿದೆ. ಇದರ ಮಧ್ಯೆನೂ ಚಿತ್ರರಂಗದ ಗಣ್ಯರು ಅತಿಥಿಗಳಾಗಿ ಎಂಟ್ರಿ ಕೊಟ್ಟು ಪ್ರೇಕ್ಷಕರಿಗೆ ಸಖತ್ ಕಿಕ್ ಕೊಟ್ಟಿದ್ದಾರೆ. ಹಾಗಿದ್ದರೆ, ಕಲ್ಕಿಯಲ್ಲಿ ಕಾಣಿಸಿಕೊಂಡ ಅತಿಥಿಗಳ್ಯಾರು? ತಿಳಿಯುವುದಕ್ಕೆ ಮುಂದೆ ಓದಿ.

'ಕಲ್ಕಿ 2808 AD'ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡವರ ದೊಡ್ಡ ಪಟ್ಟಿನೇ ಇದೆ. ಅದರಲ್ಲಿ ಮೊದಲನೆಯವರು ಟಾಲಿವುಡ್ ರೌಡಿ ವಿಜಯ್ ದೇವರಕೊಂಡ. ಸಿನಿಮಾ ರಿಲೀಸ್‌ಗೂ ಮುನ್ನವೇ ವಿಜಯ್ ದೇವರಕೊಂಡ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆಂಬ ಸುದ್ದಿ ಹರಿದಾಡಿತ್ತು. ನಿರೀಕ್ಷೆಯಂತೆ ವಿಜಯ್ ದೇವರಕೊಂಡ ಗೆಸ್ಟ್ ಅಪಿಯರೆನ್ಸ್ ಕೊಟ್ಟಿದ್ದಾರೆ. ನೆಟ್ಟಿಗರು ವಿಜಯ್ ದೇವರಕೊಂಡ ಫೋಟೊ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

Vijay Deverkonda to RGV List of Guest Appearances in Prabhas Deepika Movie Kalki 2898AD

ವಿಜಯ್ ದೇವರಕೊಂಡಗೆ ಥಿಯೇಟರ್‌ಗಳಲ್ಲಿ ಹಿಂದೆಂದೂ ಬೀಳದಷ್ಟು ಶಿಳ್ಳೆ ಬಿದ್ದಿವೆ. ಇದೇ ಗ್ಯಾಪ್‌ನಲ್ಲಿ ಮತ್ತೊಬ್ಬ ಸ್ಟಾರ್ ನಟನ ಹೆಸರು ಕೇಳಿ ಬರುತ್ತಿದೆ. ಅದುವೇ ದುಲ್ಖರ್ ಸಲ್ಮಾನ್. ಈ ಸಿನಿಮಾದಲ್ಲಿ ಭೈರವನಾಗಿ ಕಾಣಿಸಿಕೊಳ್ಳುತ್ತಿರುವ ಪ್ರಭಾಸ್ ತಂದೆಯ ಪಾತ್ರದಲ್ಲಿ ದುಲ್ಖರ್ ಸಲ್ಮಾನ್ ಕಾಣಿಸಿಕೊಂಡಿದ್ದಾರೆ.

ಹಾಗೇ, 'ಸೀತಾರಾಮಂ' ಸಿನಿಮಾದ ನಟಿ ಮೃಣಾಲ್ ಠಾಕೂರ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ಮತ್ತೆ ಸೀತಾರಾಮಂ ಜೋಡಿ ಒಂದು ಸಿನಿಮಾದಲ್ಲಿ ನಟಿಸಿದಂತೆ ಆಗಿದೆ.

ಇನ್ನು ಪ್ರಭಾಸ್‌ಗೆ ಪ್ಯಾನ್ ಇಂಡಿಯಾ ಇಮೇಜ್ ಕೊಟ್ಟಿರುವ ರಾಜಮೌಳಿ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಜಮೌಳಿ ವಿಶಿಷ್ಟ ಕಾರುಗಳನ್ನು ಚಾಲಿಸುವ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಮುಂದಿನ 10 ವರ್ಷ ನಿನ್ನನ್ನು ಬ್ಯುಸಿಯಾಗಿ ಇಡುತ್ತೇನೆ ಎಂದು ಪ್ರಭಾಸ್‌ಗೆ ರಾಜಮೌಳಿ ಹೇಳುವ ಡೈಲಾಗ್ ಇದೆ.

ಮತ್ತೊಂದು ಕಡೆ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಾಮ್ ಗೋಪಾಲ್ ವರ್ಮಾ ಭೈರವನ ಪಾತ್ರದಲ್ಲಿ ನಟಿಸುತ್ತಿರುವ ಪ್ರಭಾಸ್‌ಗೆ ಏನೋ ಹೇಳುತ್ತಿರುವ ದೃಶ್ಯವಿದೆ. ಹಾಗೇ ಸಿನಿಮಾದಲ್ಲಿ ಅಚ್ಚರಿಯ ಟ್ವಿಸ್ಟ್ ಕೊಟ್ಟಿದ್ದಾರೆ. 'ಕಲ್ಕಿ 2808 AD'ಯ ಸ್ಟೋರಿ, ಸ್ಟಾರ್ ಕಾಸ್ಟ್ ಹಾಗೂ ಅತಿಥಿ ಪಾತ್ರಗಳಿಂದ ಗಮನ ಸೆಳೆಯುತ್ತಿದೆ. ಆದರೆ, ಡೈಲಾಗ್ ಒಂದನ್ನು ಬಿಟ್ಟು ಉಳಿದೆಲ್ಲವೂ ಪ್ರೇಕ್ಷಕರಿಗೆ ಇಷ್ಟ ಆಗಿದೆ.

More from Filmibeat

English summary
List of Guest Appearances in Kalki 2898AD:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X