ವಿಷ್ಣು ಮಂಚು ನಟನೆಯ 'ಕಣ್ಣಪ್ಪ' ಸಿನಿಮಾದಲ್ಲಿ ಮಧುಬಾಲಾ: ಫಸ್ಟ್ ಲುಕ್ ರಿಲೀಸ್
ಟಾಲಿವುಡ್‌ನ ಮತ್ತೊಂದು ಮೆಗಾ ಬಜೆಟ್ ಸಿನಿಮಾ 'ಕಣ್ಣಪ್ಪ'. ವಿಷ್ಣು ಮಂಚು ನಟಿಸಿ, ನಿರ್ಮಿಸುತ್ತಿರುವ ಈ ಸಿನಿಮಾ ಈಗಾಗಲೇ ಚಿತ್ರೀಕರಣದ ಹಂತದಲ್ಲಿದೆ. ಸಿನಿಮಾ ಆರಂಭ ಆದ ದಿನದಿಂದಲೂ ಒಬ್ಬೊಬ್ಬರೇ ತಾರೆಯರನ್ನು ಪರಿಚಯಿಸುತ್ತಲೇ ಇದ್ದಾರೆ. ಈಗಾಗಲೇ ಸಿನಿಮಾ ಟೀಸರ್ ಕೂಡ ರಿಲೀಸ್ ಆಗಿದ್ದು, ಅದನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
'ಕಣ್ಣಪ್ಪ' ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಬಜೆಟ್ ದೊಡ್ಡದಿದೆ. ವಿಷ್ಣು ಮಂಚು ಕಣ್ಣಪ್ಪನಾಗಿ ಕಾಣಿಸಿಕೊಳ್ಳಲಿದ್ದು, ದುಬಾರಿ ಆಕ್ಷನ್ ಹಾಗೂ ಅದ್ಧೂರಿ ವಿಎಫ್‌ಎಕ್ಸ್ ಅನ್ನು ಬಳಸಲಾಗಿದೆ. ಇದೇ ವೇಳೆ ಸಿನಿಮಾದ ಮತ್ತೊಂದು ಪಾತ್ರವನ್ನು ರಿವೀಲ್ ಮಾಡಲಾಗಿದೆ. ಹಿರಿಯ ಬಹುಭಾಷಾ ನಟಿ ಮಧುಬಾಲಾ ಅವರ ಪಾತ್ರ ಫಸ್ಟ್ ಲುಕ್ ರಿಲೀಸ್ ಆಗಿದೆ.

ಈ ಸಿನಿಮಾದಲ್ಲಿ ದೊಡ್ಡ ದೊಡ್ಡ ಸ್ಟಾರ್‌ಗಳ ದಂಡೇ ಇದೆ ಅನ್ನೋದು ಗೊತ್ತಿತ್ತು. ಅದರಲ್ಲೂ ಮಧುಬಾಲಾ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿರುವುದು ಈ ಹಿಂದೇನೆ ಸುದ್ದಿಯಾಗಿತ್ತು. ಆದರೆ, ಈ ಹಿರಿಯ ನಟಿಯ ಲುಕ್ ಹೇಗಿರುತ್ತೆ ಅನ್ನೋದನ್ನು ರಿವೀಲ್ ಮಾಡಿರಲಿಲ್ಲ. ಆದ್ರೀಗ ಮಧುಬಾಲಾ ಸಿನಿಮಾ ಫಸ್ಟ್ ಲುಕ್ ರಿವೀಲ್ ಆಗಿದೆ. 'ಕಣ್ಣಪ್ಪ' ಸಿನಿಮಾದಲ್ಲಿ ಪನ್ನಗ ಅನ್ನುವ ಪಾತ್ರದಲ್ಲಿ ಕೈಯಲ್ಲಿ ಕತ್ತಿಹಿಡಿದು ಶತ್ರುಗಳ ಸಂಹಾರ ಮಾಡುವ ಲುಕ್‌ನಲ್ಲಿ ಮಧುಬಾಲಾ ನಟಿಸುತ್ತಿದ್ದಾರೆ.
ಕಣ್ಣಪ್ಪ ಸಿನಿಮಾದಲ್ಲಿ ಮಧುಬಾಲಾ ಬೇಡ ಕುಲದ ನಾಯಕಿಯಾಗಿ ನಟಿಸಿದ್ದಾರೆ. ಹೋರಾಟಗಾರ್ತಿಯ ಲುಕ್ ಕೊಟ್ಟಿದ್ದು ಸದ್ಯ ಈ ಪಾತ್ರ ಸಿನಿಪ್ರಿಯರಲ್ಲಿ ಕುತೂಹಲವನ್ನು ಕೆರಳಿಸಿದೆ. ಹಿರಿಯ ನಟಿಯ ಈ ಪಾತ್ರ ಪ್ರೇಕ್ಷಕರನ್ನು ಸೆಳೆಯಲಿದೆ. ಸದ್ಯ 'ಕಣ್ಣಪ್ಪ' ಸಿನಿಮಾ ಗ್ಲೋಬಲ್ ಲೆವೆಲ್‌ನಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಇನ್ನು "ತೆಲುಗಿನ ಕಣ್ಣಪ್ಪ ಕೇವಲ ಸಿನಿಮಾ ಅಷ್ಟೇ ಅಲ್ಲ. ಎರಡನೇ ಶತಮಾನದ ಚೋಳರ ಕಾಲದ ಕಥೆ ಎಂದು ಹೇಳಲಾಗಿದೆ. 14 ನೇ ಶತಮಾನದಲ್ಲಿ ಕವಿ ಧೂರ್ಜಟಿ ಕೂಡ ಕಣ್ಣಪ್ಪ ಬಗ್ಗೆ ಬರೆದಿದ್ದಾರೆ. 18ನೇ ಶತಮಾನದಲ್ಲಿದ್ದ ಬ್ರಿಟಿಷರೂ ಕೂಡ ಇಂಗ್ಲಿಷ್‌ನಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಹೀಗಾಗಿ ಇದೆಲ್ಲವನ್ನೂ ಅಧ್ಯಯನ ಮಾಡಿದ ಬಳಿಕ ಈ ಸಿನಿಮಾ ಮಾಡಲಾಗಿದೆ" ಎಂದು ಟೀಸರ್ ಬಿಡುಗಡೆ ಸಂದರ್ಭದಲ್ಲಿ ವಿಷ್ಣು ಮಂಚು ಹೇಳಿಕೊಂಡಿದ್ದು ಕುತೂಹಲ ಹುಟ್ಟಿಸಿದೆ.
ಈ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದೆ. ವಿಷ್ಣು ಮಂಚು ತಂದೆ ಹಾಗೂ ಹಿರಿಯ ನಟ ಮೋಹನ್ ಬಾಬು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್, ಶರತ್‌ಕುಮಾರ್, ಮಧುಬಾಲಾ, ಕಾಜಲ್ ಅಗರ್‌ವಾಲ್ ಸೇರಿದಂತೆ ದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿ ಇದೆ. ಇನ್ನು ಮಗನ ಸಿನಿಮಾವನ್ನು ತಂದೆ ಮೋಹನ್ ಬಾಬು ಅವರೇ ನಿರ್ಮಾಣ ಮಾಡುತ್ತಿದ್ದಾರೆ. ತೆಲುಗು ಜೊತೆಗೆ ಕನ್ನಡ, ತಮಿಳು, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಭಾಷೆಗಳಿಗೆ ಡಬ್ ಮಾಡಿ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ. ಮುಖೇಶ್ ಕುಮಾರ್ ಸಿಂಗ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.


Click it and Unblock the Notifications











