ಒಂದೇ ಒಂದು ವಿಡಿಯೋದಿಂದ ಬೀದಿಗೆ ಬಂತು ಟಾಲಿವುಡ್ ದಿಗ್ಗಜ ಮೋಹನ್ ಬಾಬು ಮಕ್ಕಳ ಕಿತ್ತಾಟ: ವಿಡಿಯೋ ವೈರಲ್!

ಅದೇನು ಸುಳ್ಳಾದರೂ, ಗಾಧೆ ಮಾತು ಮಾತ್ರ ಸುಳ್ಳಾಗಲ್ಲ ಅನ್ನೋದು ಹಿರಿಯರ ನಂಬಿಕೆ. "ಹುಟ್ಟುತ್ತಾ ಅಣ್ಣ-ತಮ್ಮಂದಿರು, ಬೆಳೆ ಬೆಳೆಯುತ್ತಾ ದಾಯಾದಿಗಳು" ಅನ್ನೋ ಗಾದೆ ಮಾತಿದೆ. ಇದು ಸಾಮಾನ್ಯರಿಗಷ್ಟೇ ಅಲ್ಲ. ದಿಗ್ಗಜರ ಕುಟುಂಬಗಳಿಗೂ ಅನ್ವಯಿಸುತ್ತೆ ಅನ್ನೋದಕ್ಕೆ ಟಾಲಿವುಡ್‌ನ ಹಿರಿಯ ನಟ ಮೋಹನ್ ಬಾಬು ಮಕ್ಕಳೇ ಸಾಕ್ಷಿ.

ನಟ ಮೋಹನ್ ಬಾಬು ಇಬ್ಬರು ಗಂಡು ಮಕ್ಕಳ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರ ನಡುವೆ ಭಿನ್ನಾಭಿಪ್ರಾಯವಿದೆ ಅನ್ನೋ ಮಾತು ಕೇಳಿ ಬರುತ್ತಲೇ ಇತ್ತು. ವಿಷ್ಣು ಮಂಚು ಹಾಗೂ ಮನೋಜ್ ಮಂಚು ಇಬ್ಬರು ಕಿತ್ತಾಡಿಕೊಂಡಿದ್ದಾರೆ ಅನ್ನೋ ಮಾತು ಟಾಲಿವುಡ್‌ನಲ್ಲಿ ಓಡಾಡುತ್ತಲೇ ಇತ್ತು. ಅದೀಗ ಒಂದೇ ಒಂದು ವಿಡಿಯೋದಿಂದ ಜಗತ್‌ಜಾಹೀರಾಗಿದೆ.

Vishnu Vs Manoj: Not Well Between Manchu Brothers Sensational Video Goes Viral

ಮನೋಜ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಕ್ಲಿಪ್ ಅನ್ನು ಶೇರ್ ಮಾಡಿದ್ದರು. ವಿಷ್ಣು ಮಂಚು ಇಬ್ಬರು ವ್ಯಕ್ತಿಯೊಂದಿಗೆ ಕಿತ್ತಾಡುವ ದೃಶ್ಯವದು. ಇದೇ ವಿಡಿಯೋವನ್ನು ಮನೋಜ್ ಶೇರ್ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

ಮೋಹನ್ ಬಾಬು ಪುತ್ರರ ಕಿತ್ತಾಟ

ಅಂದ್ಹಾಗೆ, ಮೋಹನ್ ಬಾಬು ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಇಬ್ಬರೂ ಆತ್ಮೀಯ ಗೆಳೆಯರು. ಅಂಬಿ ಗೆಳೆಯ ಮೋಹನ್ ಬಾಬುವಿನ ಇಬ್ಬರು ಮಕ್ಕಳು ವಿಷ್ಣು ಮಂಚು ಹಾಗೂ ಮನೋಜ್ ಮಂಚು ಕಿತ್ತಾಟ ಬೀದಿಗೆ ಬಂದಿದೆ. ವಿಷ್ಣು ಜೊತೆಗಿನ ಮೈಮನಸ್ಸಿನಿಂದ ಸಹೋದರ ಮನೋಜ್ ಮನೆಬಿಟ್ಟು ಹೊರಬಂದಿದ್ದಾರೆ ಅನ್ನೋ ಮಾತು ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಆ ಗಾಳಿ ಸುದ್ದಿಗೆ ಮನೋಜ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ವಿಡಿಯೋ ಮತ್ತಷ್ಟು ಪುರಾವೆ ಕೊಟ್ಟಿದೆ.

Vishnu Vs Manoj: Not Well Between Manchu Brothers Sensational Video Goes Viral

ಮನೋಜ್ ಶೇರ್ ಮಾಡಿದ ವಿಡಿಯೋದಲ್ಲಿ ವಿಷ್ಣು ಮಂಚು ಇಬ್ಬರು ವ್ಯಕ್ತಿಗಳೊಂದಿಗೆ ಕಿತ್ತಾಡುವ ದೃಶ್ಯವಿದೆ. ಇದು ಮಂಚು ಮನೋಜ್ ಬಳಿಕ ಕೆಲಸ ಮಾಡುವ ಸಾರಥಿ ಎಂಬ ವ್ಯಕ್ತಿಯ ಮನೆ ಎಂದು ಹೇಳಲಾಗುತ್ತಿದೆ. ಇಲ್ಲಿ ವಿಷ್ಣು ಮಂಚು ಕಿತ್ತಾಡುತ್ತಾರೆ. ಇದೇ ವೇಳೆ ಹಲ್ಲೆಗೆ ಯತ್ಬಿಸಿದ್ದಾರೆ ಎಂದು ವರದಿಯಾಗಿದೆ. ಸಾರಥಿ ಮಂಚು ಕುಟುಂಬಕ್ಕೆ ಬಹಳ ದಿನಗಳಿಂದ ಆತ್ಮೀಯರು ಅನ್ನೋ ಮಾತು ಕೇಳಿ ಬರುತ್ತಿದೆ.

ಮನೋಜ್ ಮೇಲೆ ವಿಷ್ಣುಗೆ ಕೋಪ

ಸಹೋದರ ಮನೋಜ್ ಮಂಚು ಮೇಲೆ ವಿಷ್ಣುಗೆ ಕೋಪವಿದೆ. ಇದೇ ಕಾರಣಕ್ಕೆ ಮನೋಜ್ ಆತ್ಮೀಯ ಸಾರಥಿ ಮನೆಗೆ ಹೋಗಿ ವಿಷ್ಣು ದೊಡ್ಡ ಜಗಳ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಅಸಲಿ ಕಾರಣವೇನು ಅನ್ನೋದು ಇನ್ನೂ ಬಹಿರಂಗಗೊಂಡಿಲ್ಲ.

ಮಂಚು ಸಹೋದರರ ನಡುವೆ ವೈಮನಸ್ಸಿದೆ ಅನ್ನೋದಕ್ಕೆ ಹಲವು ಸಾಕ್ಷಿಗಳನ್ನು ಟಾಲಿವುಡ್ ಒದಗಿಸುತ್ತಿದೆ. ಮೂರು ವರ್ಷಗಳಿಂದ ವಿಷ್ಣು ಹಾಗೂ ಮನೋಜ್ ನಡುವೆ ಮಾತುಕತೆ ನಡೆದಿಲ್ಲ. ಮೂರು ವರ್ಷದಿಂದ ವಿಷ್ಣು ಹುಟ್ಟುಹಬ್ಬಕ್ಕೆ ವಿಶ್ ಕೂಡ ಮಾಡಿಲ್ಲ. ಅಲ್ಲದೆ ಇತ್ತೀಚೆಗೆ ನಡೆದ ಮನೋಜ್ ಮದುವೆಯಲ್ಲಿ ವಿಷ್ಣು ಆಸಕ್ತಿನೂ ತೋರಿರಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ವಿಷ್ಣು ಪದೇ ಪದೆ ಜಗಳ

ಮನೋಜ್ ರಿಲೀಸ್ ಮಾಡಿದ್ದ ವಿಡಿಯೋದಲ್ಲಿ ವಿಷ್ಣು ಪದೇ ಪದೆ ಮನೆಗೆ ಬಂದು ಜಗಳ ಮಾಡುತ್ತಿದ್ದಾನೆ ಎಂದು ಆರೋಪ ಮಾಡಲಾಗಿದೆ. ಆದರೆ, ಕಾರಣವೇನು? ಇಬ್ಬರ ನಡುವಿನ ಕಿತ್ತಾಟ ಏನಕ್ಕೆ ಆಗುತ್ತಿದೆ? ಅನ್ನೋ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

ಮನೋಜ್ ಫೇಸ್ ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ಈ ಬಗ್ಗೆ ಗಂಭೀರ ಪರ-ವಿರೋಧ ಚರ್ಚೆಗಳಾಗುತ್ತಿವೆ. ಇತ್ತ ತೆಲುಗಿನ ಹಿರಿಯ ಮೋಹನ್ ಬಾಬು ಮಕ್ಕಳಿಬ್ಬರ ವಿವಾದವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ. ಸದ್ಯಕ್ಕೀಗ ಮನೋಜ್ ಮಂಚು ಫೇಸ್ ಬುಕ್ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.

More from Filmibeat

English summary
Vishnu Vs Manoj: Manchu Brothers Fight Sensational Video Goes Viral. 17 Sce Video Creating seansation in Social Media, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X