ಮದುವೆ ಬಳಿಕ ಹನುಮೂನ್‌ಗೆ ಹೋಗಿ ಬಂದ ನರೇಶ್–ಪವಿತ್ರಾ ಲೋಕೇಶ್? ಹೋಗಿದ್ದೆಲ್ಲಿಗೆ? ವಿಡಿಯೋ ವೈರಲ್

ಟಾಲಿವುಡ್ ಹಿರಿಯ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ನಡುವಿನ ಸಂಬಂಧ ಗುಟ್ಟಾಗಿ ಉಳಿದಿಲ್ಲ. ಇಬ್ಬರ ಪ್ರಕರಣವನ್ನು ನರೇಶ್ ಮೂರನೇ ಪತ್ನಿಯೇ ಬಯಲು ಮಾಡಿದ್ದಾರೆ. ನರೇಶ್, ಪವಿತ್ರಾ ಲೋಕೇಶ್ ಹಾಗೂ ರಮ್ಯಾ ರಘುಪತಿ ಈ ಮೂವರ ಮಧ್ಯೆ ಆಗಾಗ ಕಿತ್ತಾಟಗಳೂ ಕೂಡ ನಡೆಯುತ್ತಲೇ ಇರುತ್ತೆ. ಇಂದು (ಮಾರ್ಚ್ 10) ಬೆಳಗ್ಗೆ ನರೇಶ್ ನಟಿ ಪವಿತ್ರಾ ಲೋಕೇಶ್‌ ಜೊತೆ ಮದುವೆ ಆಗುತ್ತಿರುವ ವಿಡಿಯೋ ರಿಲೀಸ್ ಮಾಡಿದ್ದೇ ತಡ ತೆಲುಗಿನ ಎರಡು ರಾಜ್ಯಗಳು ಹಾಗೂ ಕರ್ನಾಟಕದಲ್ಲಿ ಹಲ್‌ಚಲ್ ಎದ್ದಿತ್ತು.

ಹೊಸ ವರ್ಷದ ಸಂದರ್ಭದಲ್ಲಿ ನರೇಶ್ ನಟಿ ಪವಿತ್ರಾ ಲೋಕೇಶ್ ಜೊತೆಗಿನ ಚುಂಬನ ವಿಡಿಯೋ ಸಂಚಲನ ಮೂಡಿಸಿತ್ತು. ಆ ಬಳಿಕ ಇಂದು (ಮಾರ್ಚ್ 10) ಮತ್ತೆ ತಮ್ಮ ಮದುವೆಯ ವಿಡಿಯೋ ಪೋಸ್ಟ್ ಮಾಡಿ ರಮ್ಯಾ ರಘುಪತಿಗೆಸ ಶಾಕ್ ಕೊಟ್ಟಿದ್ದಾರೆ. ಅಸಲಿಗೆ ಇದು ರಿಯಲ್ ಲೈಫ್ ಮದುವೆಯೇ? ಇಲ್ಲಾ ರೀಲ್ ಲೈಫ್‌ ಮದುವೆನಾ ಅನ್ನೋದೇ ದೊಡ್ಡ ಚರ್ಚೆಯಾಗೀಡು ಮಾಡಿದೆ.

VK Naresh and Pavithra Lokesh fly to Dubai for their honeymoon after marriage

ಪವಿತ್ರಾ ಲೋಕೇಶ್, ನರೇಶ್ ಮದುವೆ ನಿಜವೇ?

ನರೇಶ್ ಹಾಗೂ ಪವಿತ್ರಾ ಲೋಕೇಶ್ ವಿವಾಹದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಹಲವು ಚರ್ಚೆಗಳು ಎದ್ದಿದ್ದವು. ನರೇಶ್ ಕೇವಲ ವಿಡಿಯೋ ಅಷ್ಟೇ ಹಂಚಿಕೊಂಡಿರಲಿಲ್ಲ. ಜೊತೆಗೆ "ಒಂದು ಪವಿತ್ರ ಬಂಧ.. ಎರಡು ಮನಸ್ಸು.. ಮೂರು ಮುಳ್ಳು.. ಏಳು ಹೆಜ್ಜೆ. ನಿಮ್ಮ ಆಶೀರ್ವಾದವಿರಲಿ" ಎಂದು ನರೇಶ್ ಟ್ವೀಟ್ ಮಾಡಿದ್ದರು.

ಬೆಳಗ್ಗೆಯಿಂದಲೂ ಈ ವಿವಾದಾತ್ಮಕ ಮದುವೆ ಬಗ್ಗೆನೇ ಚರ್ಚೆಯಾಗುತ್ತಿತ್ತು. ಅಲ್ಲದೆ, ಮೂರನೇ ಪತ್ನಿಗೆ ವಿಚ್ಛೇದನ ನೀಡದೆಯೇ ಇನ್ನೊಂದು ಮದುವೆ ಆಗಿದ್ದು ಹೇಗೆ? ಎಂಬ ಚರ್ಚೆಗಳೂ ಕೂಡ ಆರಂಭ ನಡೆಯುತ್ತಲೇ ಇದ್ದವು. ಈ ಮಧ್ಯೆ ಟಾಲಿವುಡ್ ಮಾಧ್ಯಮಗಳಲ್ಲಿ ಇಬ್ಬರು ಹನಿಮೂನ್‌ಗೆ ಹೋಗಿಬಂದಿರುವ ಸುದ್ದಿ ಕೂಡ ಪ್ರಸಾರ ಮಾಡಲಾಗುತ್ತಿದೆ.

ನರೇಶ್-ಪವಿತ್ರಾ ಹನಿಮೂನ್ ಟ್ರಿಪ್

ಟಾಲಿವುಡ್‌ನಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮದುವೆ ವಿಷಯ ಸಂಚಲನ ಸೃಷ್ಟಿಸಿದೆ. ಈ ಜೋಡಿ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದೆ. ಆ ಬಳಿಕ ಇಬ್ಬರೂ ದುಬೈಗೆ ಹನಿಮೂನ್‌ಗೂ ಹೋಗಿ ಬಂದಿದೆ ಎಂದು ತೆಲುಗಿನ ನ್ಯೂಸ್ ಚಾನೆಲ್ ಎನ್‌ಟಿ ಪ್ರಸಾರ ಮಾಡಿದೆ.

VK Naresh and Pavithra Lokesh fly to Dubai for their honeymoon after marriage

ಎನ್‌ಟಿ ಸುದ್ದಿ ವಾಹಿನಿಯಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ದುಬೈನಲ್ಲಿ ತಿರುಗಾಡುತ್ತಿರುವ ವಿಡಿಯೋವನ್ನು ಪ್ರಸಾರ ಮಾಡಿದ್ದಾರೆ. ಇಲ್ಲಿಂದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮದುವೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

ನರೇಶ್ ಮೊದಲ ಪ್ರತಿಕ್ರಿಯೆ ಏನು?

ನರೇಶ್ ಮತ್ತು ಪವಿತ್ರಾ ಲೋಕೇಶ್ ಮದುವೆ ಬಗ್ಗೆ ಚರ್ಚೆಯಾಗುತ್ತಿರುವಾಗಲೇ ಸಿನಿಮಾ ಪತ್ರಿಕಾಗೋಷ್ಠಿಗೆ ಆಗಮಿಸಿದ್ದರು. 'ಇಂತಿಂತಿ ರಾಮಾಯಣ' ಸಿನಿಮಾದ ಪ್ರೆಸ್‌ಮೀಟ್‌ನಲ್ಲಿ ನರೇಶ್‌ಗೆ ಅವರ ಮದುವೆ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಆದರೆ, ಸೂಕ್ತ ಉತ್ತರ ನೀಡದೆ ನರೇಶ್ ತಪ್ಪಿಸಿಕೊಂಡಿದ್ದಾರೆ.

ಫಿಲ್ಮಿಬೀಟ್ ಸಿನಿಮಾ ವಿಭಾಗದ ಮುಖ್ಯಸ್ಥ ರಾಜಾ ಬಾಬು ಈ ಬಗ್ಗೆ ಪ್ರಶ್ನೆ ಹಾಕಿದ್ದರು. ಆಗ ನರೇಶ್ " ಈ ಟಾಪಿಕ್ ಅನ್ನು ಬೇರೆ ಕಡೆಗೆ ತೆಗೆದುಕೊಂಡು ಹೋಗುವುದಕ್ಕೆ ನನಗೆ ಇಷ್ಟವಿಲ್ಲ. ಈ ಬಗ್ಗೆ ಆದಷ್ಟು ಬೇಗ ಪತ್ರಿಕಾಗೋಷ್ಠಿ ಮಾಡುತ್ತೇನೆ. ನಾನು ಯಾವಾಗಲೂ ಮಾಧ್ಯಮ ಸ್ನೇಹಿ. ಪ್ರತಿಯೊಬ್ಬರಿಗೂ ರೀಲ್ ಲೈಫ್, ರಿಯಲ್ ಲೈಫ್ ಅನ್ನೋದು ಇದೆ. ನಾನು ನನ್ನ ಬದುಕನ್ನು ಜೀವಿಸುವುದರಲ್ಲಿ ನಂಬಿಕೆ ಇಟ್ಟುಕೊಂಡಿದ್ದೇನೆ." ಎಂದು ಹೇಳಿ ತಪ್ಪಿಸಿಕೊಂಡಿದ್ದಾರೆ.

ಇನ್ನೊಂದು ಕಡೆ ನರೇಶ್ ಪೋಸ್ಟ್ ಮಾಡಿರುವ ವಿಡಿಯೋ ರಿಯಲ್ ಲೈಫ್ ಮದುವೆ ಅಲ್ಲ. ಅದು ರೀಲ್ ಲೈಫ್ ಮ್ಯಾರೇಜ್ ಎಂದು ಹೇಳಲಾಗುತ್ತಿದೆ. ತೆಲುಗಿನ ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಎಂ.ಎಸ್. ರಾಜು ನಿರ್ದೇಶನದ ಸಿನಿಮಾದಲ್ಲಿ ಈ ಜೋಡಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಆ ಸಿನಿಮಾದ ದೃಶ್ಯವನ್ನೇ ನರೇಶ್ ಶೇರ್ ಮಾಡಿದ್ದಾರೆ ಅನ್ನೋ ಮಾತೂ ಇದೆ.

More from Filmibeat

English summary
VK Naresh and Pavithra Lokesh fly to Dubai for their honeymoon after marriage, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X