Naresh–Pavithra Lokesh: ತೆಲುಗು ನಟ ನರೇಶ್ ಮನೆ ಮೇಲೆ ದಾಳಿ.. 3ನೇ ಪತ್ನಿ ರಮ್ಯಾನೇ ಕಾರಣ ಎಂದ ನಟ!
ತೆಲುಗು ನಟ ನರೇಶ್, ಪವಿತ್ರಾ ಲೋಕೇಶ್ ಹಾಗೂ ರಮ್ಯಾ ರಘುಪತಿ ನಡುವಿನ ಸಮರ ಯಾಕೋ ನಿಲ್ಲುವಂತೆ ಕಾಣುತ್ತಿಲ್ಲ. ಆಗಾಗ ಈ ಮೂವರಿಗೆ ಸಂಬಂಧಿಸಿದ ಒಂದಲ್ಲ ಒಂದು ಕಿತ್ತಾಟದ ಸುದ್ದಿ ಸುದ್ದು ಮಾಡುತ್ತಲೇ ಇರುತ್ತೆ. ಈಗ ನರೇಶ್ ತಮ್ಮ ಮನೆ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ನರೇಶ್ ಹಾಗೂ ಪವಿತ್ರಾ ಲೋಕೇಶ್ ಮ್ಯಾಟರ್ ಈಗ ರಹಸ್ಯವಾಗೇನೂ ಉಳಿದಿಲ್ಲ. ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಮಾಧ್ಯಮಗಳ ಮುಂದೆ ಗಂಭೀರ ಆರೋಪ ಮಾಡಿದ ಮೇಲೆ ಜಗತ್‌ಜಾಹೀರಾಗಿದೆ. ಈ ಬೆನ್ನಲ್ಲೇ ಈ ಮೂವರ ನಡುವಿನ ಜಗಳ ಬೀದಿಗೆ ಬಿದ್ದಿದ್ದು, ಆಗಾಗ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದೆ. ಈಗ ಮನೆ ಮೇಲಾದ ಅಟ್ಯಾಕ್ ಅನ್ನು ಮುಂದಿಟ್ಟುಕೊಂಡು ನರೇಶ್ ದೂರನ್ನು ದಾಖಲಿಸಿದ್ದಾರೆ.

ನರೇಶ್ ಮನೆ ಮೇಲೆ ಅಟ್ಯಾಕ್
ನರೇಶ್ ಹಾಗೂ ಮೂರನೇ ಪತ್ನಿ ರಮ್ಯಾ ರಘುಪತಿ ನಡುವಿನ ಜಗಳ ಹಲ್ಲೆಯ ಹಂತಕ್ಕೆ ಬಂದು ನಿಂತಿದೆ. ನಿನ್ನೆ (ಫೆಬ್ರವರಿ 18) ರಾತ್ರಿ ಗಚ್ಚಿಬೌಲಿಯಲ್ಲಿರುವ ನರೇಶ್ ಮನೆ ಮೇಲೆ ದಾಳಿ ಮಾಡಿದ್ದಾಗಿ ದೂರು ದಾಖಲಾಗಿದೆ. ನರೇಶ್ ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ. ಹೀಗಾಗಿ ನರೇಶ್ ಗಚ್ಚಿಬೌಲಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದಾರೆ.

ರಮ್ಯಾ ರಘುಪತಿ ವಿರುದ್ಧ ದೂರು
ನರೇಶ್ ನೀಡಿದ ದೂರಿನ ಆಧಾರದ ಮೇಲೆ ಗಚ್ಚಿಬೌಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ನರೇಶ್ ಮನೆಯ ಮುಂದಿನ ಸಿಸಿಟಿವಿ ದೃಶ್ಯಾವಳಿವನ್ನು ಪರಿಶೀಲಿಸುತ್ತಿದ್ದಾರೆ. ಈ ಸಂಬಂಧ ತನ್ನ ಮೂರನೇ ಪತ್ನಿ ರಮ್ಯಾ ರಘುಪತಿಯಿಂದಲೇ ಈ ಕೃತ್ಯ ನಡೆದಿದೆ ಎಂದು ನರೇಶ್ ಆರೋಪ ಮಾಡಿದ್ದಾರೆ. ಆದರೆ, ಪೊಲೀಸರ ತನಿಖೆಯಿಂದಲೇ ಈ ದಾಳಿ ಯಾರಿಂದ ಆಗಿದೆ ಎಂದು ಹೊರಬೀಳಬೇಕಿದೆ.

ರಮ್ಯಾ ವಿರುದ್ಧ ಜೀವ ಬೆದರಿಕೆ ಆರೋಪ
ನರೇಶ್ ಹಾಗೂ ರಮ್ಯಾ ರಘುಪತಿ ಇಬ್ಬರೂ ಕಳೆದ ಹಲವು ದಿನಗಳಿಂದ ಆರೋಪ ಪ್ರತ್ಯಾರೋಪ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ತನ್ನ ಮೂರನೇ ಪತ್ನಿ ರಮ್ಯಾ ತನ್ನ ಮೇಲೆ ಜೀವ ಬೆದರಿಕೆ ಹಾಕುತ್ತಿದ್ದಾರೆಂದೂ, ತನ್ನ ಆಸ್ತಿಯನ್ನು ಕಬಳಿಸಲು ಯತ್ನಿಸುತ್ತಿದ್ದಾರೆಂದೂ ನರೇಶ್ ಆರೋಪ ಮಾಡಿದ್ದರು. ಈ ಸಂಬಂಧ ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದರು.

ಮಾಧ್ಯಮದ ಮೇಲೆ ನರೇಶ್ ಗರಂ
ಮನೆ ಮೇಲೆ ದಾಳಿ ನಡೆಯುವ ಕೆಲವೇ ದಿನಗಳ ಹಿಂದಷ್ಟೇ ನರೇಶ್ ಮಾಧ್ಯಮದವರ ಮೇಲೆ ಕಿಡಿಕಾರಿದ್ದರು. ಕೆಲವು ಪತ್ರಕರ್ತರು ತಮಗೆ ಗೌರವ ನೀಡುತ್ತಿಲ್ಲ. ತಮ್ಮ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಶ್ನೆ ಮಾಡುತ್ತಿದ್ದಾರೆಂದು ಆರೋಪ ಮಾಡಿದ್ದರು. ಅಲ್ಲದೆ ನಮ್ಮ ಮನೆಯ ಬೆಡ್ ರೂಮ್ ಹಾಗೂ ಬಾತ್ ರೂಮ್ ವಿಚಾರ ನಿಮಗೇಕೆ ಎಂದು ಪ್ರಶ್ನೆ ಮಾಡಿದ್ದರು.


Click it and Unblock the Notifications











