ನರೇಶ್-ಪವಿತ್ರಾ ಖರ್ಚಿಗೂ ಲಾಭ ಬಂದಿಲ್ಲ:'ಮಳ್ಳಿ ಪೆಳ್ಳಿ'ಗೆ ಭಾರೀ ನಷ್ಟ..'ಮತ್ತೆ ಮದುವೆ' ಕಥೆಯೇನು?
ತೆಲುಗು ಹಿರಿಯ ನಟ ಪವಿತ್ರಾ ಲೋಕೇಶ್ ಹಾಗೂ ಕನ್ನಡ ನಟಿ ಪವಿತ್ರಾ ಲೋಕೇಶ್ ಮದುವೆ ಮ್ಯಾಟರ್ ಗೊತ್ತೇ ಇದೆ. ಇಬ್ಬರೂ ಹಲವು ದಿನಗಳಿಂದ ಲಿವಿಂಗ್ ರಿಲೇಷನ್ ಶಿಪ್‌ನಲ್ಲಿ ಇರೋದು ಹಳೇ ವಿಷಯ. ಇನ್ನು ಇವರ ಸಂಬಂಧವನ್ನು ರಮ್ಯಾ ರಘುಪತಿ ವಿರೋಧಿ ರಂಪಾಟ ಮಾಡಿದ್ದು ಹೊಸದೇನಲ್ಲ.
ವಿಕೆ ನರೇಶ್ ಇದೇ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ. ಈಗಾಗಲೇ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಂಬಂಧ ರಿವೀಲ್ ಆಗಿದ್ದರಿಂದ ಪುಕ್ಕಟೆ ಪ್ರಚಾರ ಸಿಕ್ಕಿತ್ತು. ಹೀಗಿದ್ದರೂ ಸಿನಿಮಾ ಮಾಡಿದ ಬಳಿಕ ಭರ್ಜರಿಯಾಗಿಯೇ ಪ್ರಚಾರ ಮಾಡಿದ್ದರು.

ಈ ಕಾರಣಕ್ಕೆ ಹುಟ್ಟಿಕೊಂಡ ಸಿನಿಮಾವೇ 'ಮಳ್ಳಿ ಪೆಳ್ಳಿ'. ಎಂ ಎಸ್ ರಾಜು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲೂ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಜೋಡಿಯಾಗಿ ನಟಿಸಿದ್ದಾರೆ. ಇಷ್ಟೊಂದು ಪ್ರಚಾರ ಸಿಕ್ಕಿರಬೇಕಾದರೆ, ಸಿನಿಮಾ ಗೆದ್ದೇ ಗೆಲ್ಲುತ್ತೆ ಅನ್ನೋ ನಿರೀಕ್ಷೆಯಿತ್ತು. ಆದರೆ, ನರೇಶ್ ಹಾಗೂ ಪವಿತ್ರಾ ಲೋಕೇಶ್ ಲೆಕ್ಕಾಚಾರ ತಲೆ ಕೆಳಗಾಗಿದೆ.
'ಮಳ್ಳಿ ಪೆಳ್ಳಿ'ಗೆ ಭಾರೀ ನಷ್ಟ
'ಮಳ್ಳಿ ಪೆಳ್ಳಿ' ಸಿನಿಮಾವನ್ನು ವಿಕೆ ನರೇಶ್ ಸುಮಾರು 15 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದರು. ಈ ಸಿನಿಮಾ ಥಿಯೇಟರ್‌ನಲ್ಲಿ ಅಂದಾಜು ಅಸಲನ್ನು ಕಲೆಕ್ಷನ್ ಮಾಡುತ್ತೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ನರೇಶ್ ಹಾಗೂ ಪವಿತ್ರಾ ಲೋಕೇಶ್ ಲೆಕ್ಕಾಚಾರ ತಲೆ ಕೆಳಗಾಗಿದೆ.
ಮೇ 26ರಂದು ಕೇವಲ ತೆಲುಗು ಭಾಷೆಯಲ್ಲಿ ಮಾತ್ರ ಕಂಡಿದ್ದ ಸಿನಿಮಾ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ, ಬಾಕ್ಸಾಫೀಸ್‌ನಲ್ಲಿ ಅಂದುಕೊಂಡಷ್ಟು ಗಳಿಕೆ ಕಾಣಲಿಲ್ಲ. ಮೂಲಗಳ ಪ್ರಕಾರ, ಥಿಯೇಟರ್‌ನಲ್ಲಿ 'ಮಳ್ಳಿ ಪೆಳ್ಳಿ' ಸಿನಿಮಾ ಕೇವಲ 30 ಲಕ್ಷ ರೂ. ಶೇರ್ ಬಂದಿದೆ ಎನ್ನಲಾಗಿದೆ. ಈ ಮೂಲಕ ನರೇಶ್ ದೊಡ್ಡ ನಿರಾಸೆಯೇ ಆಗಿದೆ.

ಕನಿಷ್ಠ ಖರ್ಚೂ ಬಂದಿಲ್ಲ
ನರೇಶ್ ಹಾಗೂ ಪವಿತ್ರಾ ಲೋಕೇಶ್ ಮ್ಯಾಟರ್ ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಪಸರಿಸಿತ್ತು. ಹೀಗಾಗಿ ಪೋಷಕ ಕಲಾವಿದರಾಗಿ ನಟಿಸುತ್ತಿದ್ದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಪ್ರಮುಖ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದರು. ಹೀಗಿದ್ದರೂ, ಈ ಸಂಸಾರದ ಗಲಾಟೆಯನ್ನು ನೋಡಲು ತೆಲುಗು ಮಂದಿ ಇಷ್ಟ ಪಟ್ಟಿಲ್ಲ
ಆದರೆ, 'ಮಳ್ಳಿ ಪೆಳ್ಳಿ' ಸಿನಿಮಾವನ್ನು ಈಗಾಗಲೇ ಓಟಿಟಿಗೆ ಉತ್ತಮ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ನರೇಶ್ ಕೊಂಚ ನಿಟ್ಟುಸಿರು ಬಿಡುವಂತಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಸಿನಿಮಾದ ಕಲೆಕ್ಷನ್‌ನಿಂದ ಪ್ರಚಾರ ಮಾಡಿದ ಖರ್ಚೂ ರಿಕವರಿಯಾಗಿಲ್ಲ ಎನ್ನಲಾಗಿದೆ. ಸದ್ಯ ನರೇಶ್ 1.3 ಕೋಟಿ ರೂ.ನಷ್ಟದಲ್ಲಿದ್ದಾರೆ ಎನ್ನಲಾಗಿದೆ.
ಮತ್ತೆ ಮದುವೆ ರಿಲೀಸ್‌ಗೆ ಪ್ಲ್ಯಾನ್
'ಮಳ್ಳಿ ಪೆಳ್ಳಿ' ಸಿನಿಮಾ ಕನ್ನಡಕ್ಕೂ ಡಬ್ ಮಾಡಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ರಿಲೀಸ್ ಮಾಡಲಿಲ್ಲ. ತೆಲುಗುನಲ್ಲಿ ಹೇಗೆ ರೆಸ್ಪಾನ್ಸ್ ಸಿಗುತ್ತೋ ಅದನ್ನು ನೋಡಿಕೊಂಡು ಸಿನಿಮಾ ಮಾಡಲು ನಿರ್ಧರಿಸಿದ್ದರು. ಕೊನೆಗೂ ಧೈರ್ಯ ಮಾಡಿ 'ಮತ್ತೆ ಮದುವೆ ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದಾರೆ.
ಜೂನ್ 9ರಂದು ಕರ್ನಾಟಕದಲ್ಲಿ 'ಮತ್ತೆ ಮದುವೆ' ಸಿನಿಮಾ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲಿ ಈ ಸಿನಿಮಾಗೆ ರೆಸ್ಪಾನ್ಸ್ ಹೇಗೆ ಸಿಗುತ್ತೆ? ನಷ್ಟ ಅನುಭವಿಸಿದ ನರೇಶ್‌ಗೆ ಲಾಭ ಇಲ್ಲಾದರೂ ಸಿಗುತ್ತಾ? ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











